ಕನ್ನಡ ಸುದ್ದಿ  /  Karnataka  /  New Logo For Karnataka Forest Department Know Its Speciality Indian Roller Sandalwood Tree Elephant Tiger Mgb

Karnataka Forest Dept: ಕರ್ನಾಟಕ ಅರಣ್ಯ ಇಲಾಖೆಗೆ ಹೊಸ ಲೋಗೋ; ಇದರ ವೈಶಿಷ್ಟ್ಯ ಹೀಗಿದೆ

Karnataka Forest Dept Logo: ಹೊಸ ಲಾಂಛನವನ್ನು ಬಿಡುಗಡೆ ಮಾಡಲು ಉತ್ಸುಕವಾಗಿದ್ದ ಕರ್ನಾಟಕ ಅರಣ್ಯ ಇಲಾಖೆಯು 2023ರ ಹೊಸ ವರ್ಷದ ಆರಂಭದಲ್ಲಿ ಇದಕ್ಕಾಗಿ ಸ್ಪರ್ಧೆ ಏರ್ಪಡಿಸಿತ್ತು. ಹೊಸ ಆಲೋಚನೆಗಳು, ಹೊಸ ಐಡಿಯಾ ಮತ್ತು ಹೊಸ ದೃಷ್ಟಿಕೋನಗಳಿಗಾಗಿ ಇಲಾಖೆಯು ವಿದ್ಯಾರ್ಥಿಗಳು, ಕಲಾವಿದರು ಮತ್ತು ನಾಗರಿಕರನ್ನು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿತ್ತು.

ಕರ್ನಾಟಕ ಅರಣ್ಯ ಇಲಾಖೆಯ ಹೊಸ ಲೋಗೋ
ಕರ್ನಾಟಕ ಅರಣ್ಯ ಇಲಾಖೆಯ ಹೊಸ ಲೋಗೋ

ಬೆಂಗಳೂರು: ಕರ್ನಾಟಕದಲ್ಲಿ ಅರಣ್ಯ ಇಲಾಖೆ ಅಸ್ತಿತ್ವಕ್ಕೆ ಬಂದು ಹಲವು ದಶಕಗಳು ಕಳೆದಿವೆ. ಆದರೆ ಇದೀಗ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ಕರ್ನಾಟಕ ಅರಣ್ಯ ಇಲಾಖೆಯು ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ.

ನೂತನ ಅಧಿಕೃತ ಲಾಂಛನವು ಕರ್ನಾಟಕದ ಶ್ರೀಮಂತ ಸಸ್ಯ ಮತ್ತು ಪ್ರಾಣಿಗಳನ್ನು ಒಳಗೊಂಡಿದೆ. ಇದಕ್ಕೆ ಅನುಮೋದನೆ ಪಡೆಯಲು ರಾಜ್ಯ ಸರ್ಕಾರದ ಮುಂದೆ ಇಡಲಾಗುತ್ತದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಲೋಗೋ ವೈಶಿಷ್ಟ್ಯ ಹೀಗಿದೆ

ಕರ್ನಾಟಕ ರಾಜ್ಯದ ನಕ್ಷೆಯ ಆಕಾರದಲ್ಲಿ ರಾಜ್ಯದ ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ಪ್ರತಿನಿಧಿಸುವ ರಾಜ್ಯ ಪ್ರಾಣಿ ಆನೆ, ರಾಜ್ಯ ಪಕ್ಷಿ ನೀಲಕಂಠ, ರಾಜ್ಯ ಮರವಾದ ಶ್ರೀಗಂಧ, ರಾಜ್ಯ ಚಿಟ್ಟೆ ಸ್ವರ್ಣೆ ಹಾಗೂ ರಾಷ್ಟ್ರೀಯ ಪ್ರಾಣಿ ಮಾತ್ರವಲ್ಲ ರಾಜ್ಯದ ಪ್ರಮುಖ ವನ್ಯಜೀವಿಯೂ ಆಗಿರುವ ಹುಲಿಯ ಚಿತ್ರ ಹಾಗೂ ಎಲ್ಲದಕ್ಕೂ ಮೂಲ ಆಧಾರವೆಂಬಂತೆ ನಕ್ಷಯೆ ಬುಡದಲ್ಲಿ ನೀರಿನ ಮೂಲಗಳನ್ನು ಪ್ರತಿಬಿಂಬಿಸುವ ನೀಲಿಬಣ್ಣವನ್ನು ನೂತನ ಲೋಗೋ ಒಳಗೊಂಡಿದೆ.

ಲೋಗೋಗಾಗಿ ಸ್ಪರ್ಧೆ ಏರ್ಪಡಿಸಿದ್ದ ಅರಣ್ಯ ಇಲಾಖೆ

ಹೊಸ ಲಾಂಛನವನ್ನು ಬಿಡುಗಡೆ ಮಾಡಲು ಉತ್ಸುಕವಾಗಿದ್ದ ಕರ್ನಾಟಕ ಅರಣ್ಯ ಇಲಾಖೆಯು 2023ರ ಹೊಸ ವರ್ಷದ ಆರಂಭದಲ್ಲಿ ಇದಕ್ಕಾಗಿ ಸ್ಪರ್ಧೆ ಏರ್ಪಡಿಸಿತ್ತು. ಹೊಸ ಆಲೋಚನೆಗಳು, ಹೊಸ ಐಡಿಯಾ ಮತ್ತು ಹೊಸ ದೃಷ್ಟಿಕೋನಗಳಿಗಾಗಿ ಇಲಾಖೆಯು ವಿದ್ಯಾರ್ಥಿಗಳು, ಕಲಾವಿದರು ಮತ್ತು ನಾಗರಿಕರನ್ನು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿತ್ತು. ಸೂಕ್ತವಾದ ಲೋಗೋ ಐಡಿಯಾ ನೀಡಿದವರಿಗೆ 20,000 ರೂಪಾಯಿಗಳ ನಗದು ಬಹುಮಾನವನ್ನು ಘೋಷಿಸಿತ್ತು.

ಹಲವಾರು ಸಲಹೆಗಳು ಮತ್ತು ವಿನ್ಯಾಸಗಳನ್ನು ಸ್ವೀಕರಿಸಿದ ನಂತರ, ಇಲಾಖೆಯು ಅದರ ಕರ್ನಾಟಕದ ಪ್ರಮುಖ ಸಸ್ಯ ಮತ್ತು ಪ್ರಾಣಿಗಳೊಂದಿಗೆ ರಾಜ್ಯದ ನಕ್ಷೆಯನ್ನು ಹೋಲುವ ಲೋಗೋವನ್ನು ಅಂತಿಮಗೊಳಿಸಿದೆ.

ಅರಣ್ಯಗಳ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆಯ ಮುಖ್ಯಸ್ಥ) ರಾಜ್ ಕಿಶೋರ್ ಸಿಂಗ್ ಅವರು ಹೊಸ ಲೋಗೋದ ವಿನ್ಯಾಸ ಮತ್ತು ಅಳವಡಿಕೆಯನ್ನು ದೃಢಪಡಿಸಿದ್ದಾರೆ. ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜವೈದ್ ಅಖ್ತರ್ ಅವರು ಅರಣ್ಯ ಇಲಾಖೆಯ ಹೊಸ ಲೋಗೋವನ್ನು ಅನುಮೋದನೆಗಾಗಿ ಸರ್ಕಾರದ ಮುಂದೆ ಇಡಲಾಗುವುದು ಎಂದು ತಿಳಿಸಿದ್ದಾರೆ.

ಎಲ್ಲರಿಗೂ ನೆಚ್ಚಿನ ಬಣ್ಣ ಎಂಬುದು ಇರುತ್ತದೆ. ಆದರೆ, ನಿಮ್ಮ ನೆಚ್ಚಿನ ಬಣ್ಣಕ್ಕೂ ನಿಮ್ಮ ವ್ಯಕ್ತಿತ್ವಕ್ಕೂ ಸಂಬಂಧ ಇದೆ ಎಂಬುದು ಎಲ್ಲರಿಗೂ ತಿಳಿದಿರುವುದಿಲ್ಲ. ವ್ಯಕ್ತಿಗಳ ವ್ಯಕ್ತಿತ್ವವನ್ನು ಅವರ ಫೇವರೆಟ್​ ಕಲರ್​ ಯಾವುದು ಎಂಬುದರ ಮೇಲೆ ತಿಳಿದು, ಬಳಿಕ ಅವರೊಂದಿಗೆ ಸ್ನೇಹ ಬೆಳೆಸಬಹುದು. ನಿಮ್ಮ ಫೇವರೆಟ್​ ಕಲರ್​ ನಿಮ್ಮ ಬಗ್ಗೆ ಏನು ಹೇಳುತ್ತೆ ಎಂದು ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ..

IPL_Entry_Point

ವಿಭಾಗ