New Year 2025: ಹೊಸ ವರ್ಷಾಚರಣೆ ಸಿದ್ಧತೆ, ಕರ್ನಾಟಕದಲ್ಲಿ ಒಂದೇ ದಿನ 409 ಕೋಟಿ ರೂಪಾಯಿ ಮದ್ಯ ಮಾರಾಟದ ದಾಖಲೆ
New Year 2025 Bengaluru: ಹೊಸ ವರ್ಷಾಚರಣೆಗೆ ಸಿದ್ಧತೆ ಭಾರಿ ಜೋರಾಗಿದ್ದು, ಮದ್ಯಪ್ರಿಯರು ಈಗಾಗಲೇ ಮದ್ಯ ದಾಸ್ತಾನು ಮಾಡಿಕೊಳ್ಳಲಾರಂಭಿಸಿದ್ದಾರೆ. ನಿನ್ನೆ (ಡಿಸೆಂಬರ್ 28) ಒಂದೇ ದಿನ ಕರ್ನಾಟಕದಲ್ಲಿ ಒಂದೇ ದಿನ 409 ಕೋಟಿ ರೂಪಾಯಿ ಮದ್ಯ ಮಾರಾಟದ ದಾಖಲೆ ನಿರ್ಮಾಣವಾಗಿದೆ. ವಿವರ ಈ ವರದಿಯಲ್ಲಿದೆ.
New Year 2025 Bengaluru: ಹೊಸ ವರ್ಷಾಚರಣೆಗೆ ನಾಡಿಗೆ ನಾಡೇ ಸಜ್ಜಾಗುತ್ತಿರುವ ಹೊತ್ತು. ಕರ್ನಾಟಕದಲ್ಲಿ ಶನಿವಾರ (ಡಿಸೆಂಬರ್ 28) ಒಂದೇ ದಿನ 408.58 ಕೋಟಿ ರೂಪಾಯಿ ಮದ್ಯ ಮಾರಾಟ ಆಗಿದೆ. ಒಂದೇ ದಿನ ಇಷ್ಟು ಮದ್ಯ ಮಾರಾಟ ಆಗಿರುವುದು ದಾಖಲೆ ಎನ್ನಲಾಗುತ್ತಿದೆ. ತಿಂಗಳ ನಾಲ್ಕನೇ ಶನಿವಾರವಾದೂ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ (KSBCL) ಔಟ್‌ಲೆಟ್‌ಗಳು ವ್ಯವಹಾರ ನಡೆಸಿದ್ದು, ಪರವಾನಗಿ ಹೊಂದಿದ ಮದ್ಯ ಮಾರಾಟಗಾರರಿಗೆ ಕ್ರೆಡಿಟ್ ಫೆಸಿಲಿಟಿಯನ್ನೂ ಕೊಟ್ಟಿರುವುದಾಗಿ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಹೇಳಿದೆ.
ಕರ್ನಾಟಕದಲ್ಲಿ ಒಂದೇ ದಿನ 409 ಕೋಟಿ ರೂಪಾಯಿ ಮದ್ಯ ಮಾರಾಟದ ದಾಖಲೆ
ಮಾಜಿ ಪ್ರಧಾನಿ ಡಾ ಮನಮೋಹನ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಏಳು ದಿನಗಳ ಶೋಕಾಚರಣೆ ಇದ್ದರೂ ಡಿಸೆಂಬರ್ 28 ರಂದು ವ್ಯವಹಾರ ನಡೆಸುವುದಕ್ಕೆ ಕರ್ನಾಟಕ ರಾಜ್ಯ ಪಾನೀಯ ನಿಗಮಕ್ಕೆ ಸರ್ಕಾರ ಅನುಮತಿ ನೀಡಿತ್ತು. ಹೀಗಾಗಿ, ಪರವಾನಗಿ ಹೊಂದಿದ ಮದ್ಯ ಮಾರಾಟಗಾರರಿಗೆ ಎತ್ತುವಳಿಗೆ ಅವಕಾಶ ನೀಡಲಾಯಿತು. ಕರ್ನಾಟಕದ ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಮದ್ಯ ಮಾರಾಟಗಾರರಿಗೆ ಕ್ರೆಡಿಟ್ ಫೆಸಿಲಿಟಿ ಒದಗಿಸುವಂತೆ ಮನವಿ ಮಾಡಿತ್ತು ಎಂದು ಹೇಳಿಕೆಯಲ್ಲಿ ಅದು ತಿಳಿಸಿದೆ.
ಶನಿವಾರ (ಡಿಸೆಂಬರ್ 28) ಒಂದೇ ದಿನ 6.22 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಮಾರಾಟವಾಗಿದೆ. ಇದರ ಮೌಲ್ಯ 327.50 ಕೋಟಿ ರೂಪಾಯಿ. ಇನ್ನು 4.04 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದು, 88.58 ಕೋಟಿ ರೂಪಾಯಿ ಸಂಗ್ರಹವಾಗಿದೆ. ಒಟ್ಟು 10.27 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿದ್ದು 408.58 ಕೋಟಿ ರೂಪಾಯಿ ಸಂಗ್ರಹವಾಗಿದೆ. 8,341 ಇನ್‌ವಾಯ್ಸ್‌ಗಳನ್ನು ದಾಖಲಿಸಲಾಗಿದೆ ಎಂದು ಅಸೋಸಿಯೇಷನ್ ತಿಳಿಸಿದೆ.
ಶುಕ್ರವಾರ ಮದ್ಯ ವಹಿವಾಟು ನಡೆದಿರಲಿಲ್ಲ
ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಸರ್ಕಾರವು ಸಾರ್ವಜನಿಕ ರಜೆ ಘೋಷಿಸಿದ್ದರಿಂದ ಶುಕ್ರವಾರ ಮದ್ಯ ಮಾರಾಟಕ್ಕೆ ಅಡ್ಡಿಯುಂಟಾಯಿತು. ನಷ್ಟವನ್ನು ಸರಿದೂಗಿಸಲು ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಫೆಡರೇಶನ್ ಡಿಪೋಗಳನ್ನು ತೆರೆದು ಶನಿವಾರದಂದು ಸಾಲ ಸೌಲಭ್ಯ ಒದಗಿಸುವಂತೆ ಕೆಎಸ್‌ಬಿಸಿಎಲ್‌ಗೆ ಮನವಿ ಮಾಡಿತ್ತು. ರಜಾ ದಿನದಲ್ಲಿ ಕ್ರೆಡಿಟ್ ಫೆಸಿಲಿಟಿ ಕೊಟ್ಟಿರುವುದು ಇದೇ ಮೊದಲು. ಇದು ಬಹಳ ಕೆಲಸಕ್ಕೆ ಬಂತು ಎಂದು ಅಸೋಸಿಯೆಷನ್ ಪ್ರಧಾನ ಕಾರ್ಯದರ್ಶಿ ಬಿ ಗೋವಿಂದ ರಾಜ ಹೆಗ್ಡೆ ಕೆಎಸ್ಬಿಸಿಎಲ್ ಮತ್ತು ಅಬಕಾರಿ ಇಲಾಖೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
----
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope