New Year Goa Trip: ಹೊಸವರ್ಷಕ್ಕೆ ಗೋವಾಕ್ಕೆ ಟ್ರಿಪ್ ಹೋಗ್ತಿದ್ದೀರಾ? ಈ ಸ್ಥಳಗಳನ್ನು ಮಿಸ್​ ಮಾಡಬೇಡಿ
ಕನ್ನಡ ಸುದ್ದಿ  /  ಕರ್ನಾಟಕ  /  New Year Goa Trip: ಹೊಸವರ್ಷಕ್ಕೆ ಗೋವಾಕ್ಕೆ ಟ್ರಿಪ್ ಹೋಗ್ತಿದ್ದೀರಾ? ಈ ಸ್ಥಳಗಳನ್ನು ಮಿಸ್​ ಮಾಡಬೇಡಿ

New Year Goa Trip: ಹೊಸವರ್ಷಕ್ಕೆ ಗೋವಾಕ್ಕೆ ಟ್ರಿಪ್ ಹೋಗ್ತಿದ್ದೀರಾ? ಈ ಸ್ಥಳಗಳನ್ನು ಮಿಸ್​ ಮಾಡಬೇಡಿ

New Year Goa Trip: ಹೊಸ ವರ್ಷದ ವೇಳೆ ಗೋವಾಕ್ಕೆ ಪ್ರವಾಸ ಕೈಗೊಳ್ಳುವ ಯೋಜನೆಯಿದೆ. ಹಾಗಿದ್ದರೆ ಗೋವಾದ ರಾಜ್ಯದಲ್ಲಿನ ಬೀಚ್‌ಗಳು, ಚರ್ಚ್‌, ದೇಗುಲ, ನೈಸರ್ಗಿಕ ತಾಣ ತಪ್ಪಿಸಿಕೊಳ್ಳಬೇಡಿ.

ಗೋವಾ ಪ್ರವಾಸ ಹೊರಟಿದ್ದೀರಿ ಎಂದರೆ ಈ ಸ್ಥಳಗಳಿಗೆ ಹೋಗಿ ಬನ್ನಿ
ಗೋವಾ ಪ್ರವಾಸ ಹೊರಟಿದ್ದೀರಿ ಎಂದರೆ ಈ ಸ್ಥಳಗಳಿಗೆ ಹೋಗಿ ಬನ್ನಿ

New Year Goa Trip: ಗೋವಾ ಎಂದೊಡನೆ ಎಂಥವರ ಮೈಮನ ಪುಳಕವಾಗುತ್ತದೆ. ಅಷ್ಟರ ಮಟ್ಟಿಗೆ ಗೋವಾ ಎನ್ನುವ ಹೆಸರಿನ ಚುಂಬಕ ಶಕ್ತಿ. ಏಕೆಂದರೆ ಗೋವಾ ಭಾರತದ ಮಾತ್ರವಲ್ಲದೇ ವಿಶ್ವದ ಪ್ರಮುಖ ಪ್ರವಾಸಿ ತಾಣ. ಲಕ್ಷಾಂತರ ಪ್ರವಾಸಿಗರು ಗೋವಾದ ಸೌಂದರ್ಯವನ್ನು ಸವಿಯಲು ಬರುತ್ತಾರೆ. ಏಕೆಂದರೆ ಗೋವಾದ ಪರಿಸರವೇ ಪ್ರವಾಸಿ ಸ್ನೇಹಿಯಾಗಿದೆ. ಇಲ್ಲಿನ ಬೀಚ್‌ಗಳು, ಹಸಿರು ಪ್ರದೇಶ, ಅರಣ್ಯ, ದೇಗುಲಗಳು, ಆಹಾರ, ಸಂಸ್ಕೃತಿ ತನ್ನ ವೈವಿಧ್ಯಮಯ ಆಕರ್ಷಣೆಯನ್ನು ಈಗಲೂ ಉಳಿಸಿಕೊಂಡಿವೆ. ಗೋವಾ ಎಂದರೆ ಬೀಚ್‌ಗಳು ಎನ್ನುವುದು ಮಾತ್ರ ನಿಜ. ಏಕೆಂದರೆ ಭಾರತದ ಪುಟ್ಟ ರಾಜ್ಯದಲ್ಲಿ ಎಷ್ಟೊಂದು ನೈಸರ್ಗಿಕ ಬೀಚ್‌ಗಳಿವೆ ಎಂದರೆ ಎಲ್ಲವನ್ನು ನೋಡಲು ಕನಿಷ್ಟ ಒಂದು ವಾರವಾದರೂ ಬೇಕು. ಉತ್ತರ ಗೋವಾದಿಂದ ದಕ್ಷಿಣ ಗೋವಾವರೆಗಿನ ಸುಮಾರು ಒಂದು ನೂರು ಕಿ,ಮಿಗೂ ಉದ್ದವಿರುವ ಅರಬ್ಬಿ ಸಮುದ್ರದ ತೀರ ಇಲ್ಲಿ ಅಂತಹ ಪ್ರವಾಸಿ ತಾಣಗಳನ್ನು ಸೃಷ್ಟಿಸಿದೆ. ಪೋರ್ಚುಗೀಸರ ಕಾಲದಲ್ಲಿಯೇ ಪ್ರಮುಖ ಬಂದರು ನಗರಗಳನ್ನು ಹೊಂದಿದ್ದ ಗೋವಾ ನಂತರ ಪ್ರವಾಸಿ ತಾಣವಾಗಿ ಮತ್ತಷ್ಟು ಹೊಳಪು ಪಡೆದಿದೆ.

ಗೋವಾ ಎಂದರೆ ಥಟ್ಟನೆ ನೆನಪಿಗೆ ಬರುವ ಹೆಸರುಗಳು ವಾಸ್ಕೋ. ಅಂದರೆ ವಾಸ್ಕೋಡಿಗಾಮ ಗುರುತಿಸಿದ ನಗರ ಈಗ ವಾಸ್ಕೋವಾಗಿ ರೂಪುಕೊಂಡಿದೆ. ವಾಸ್ಕೋ ಸುತ್ತಲೂ ಬೀಚ್‌ಗಳಿವೆ. ಮತ್ತೊಂದು ನಗರಿ ಮಡಗಾಂವ್‌. ಇದು ದಕ್ಷಿಣ ಭಾಗದಲ್ಲಿದ್ದು ಪ್ರಖ್ಯಾತ ಹಾಗೂ ದೇಶಿ, ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಬೀಚ್‌ಗಳಿವೆ. ಗೋವಾದ ರಾಜಧಾನಿ ಪಣಜಿ. ಇಲ್ಲಿಯೂ ಬೀಚ್‌ಗಳು, ದೇಗುಲಗಳು ಇವೆ. ಮನರಂಜನೆಗೆ ಬೀಚ್‌ಗಳ ಕತೆಗೆ ಕ್ಯಾಸಿನೋಗಳು ಇಲ್ಲ ಸಿಗುತ್ತವೆ.

ಗೋವಾವನ್ನು ಎರಡು ರೀತಿ ನೋಡುವುದು ಮೊದಲಿನಿಂದಲೂ ನಡೆದಿದೆ. ಅದು ಸ್ನೇಹಿತರ ಜತೆಗೆ ಬರುವಾಗಿನ ಗೋವಾವೇ ಬೇರೆ, ಅದು ಮೋಜು ಮಸ್ತಿ ಹಾಗೂ ಸ್ನೇಹಿತರೊಂದಿಗೆ ಚಡ್ಡಿಧಾರಿಗಳಾಗಿ ಗೋವಾದ ಬೀಚ್‌ಗಳಲ್ಲಿ ಸುತ್ತುವುದು. ಅಲ್ಲಿನ ಅಲೆಗಳಲ್ಲಿ ತೇಲುತ್ತಾ ಖುಷಿಯ ಉತ್ತುಂಗಕ್ಕೆ ಏರಿವುದು

ಇನ್ನೊಂದು ಕುಟುಂಬ ಭೇಟಿ. ಇಲ್ಲಿಗೆ ಕುಟುಂಬಗಳ ಸಮೇತ ಬರುವವರ ಸಂಖ್ಯೆಯೂ ಅಧಿಕ. ಈಗಲೂ ಬೀಚ್‌ಗಳಲ್ಲಿ ಮಸ್ತಿ ಇದ್ದರೂ ಕುಟುಂಬದ ಸದಸ್ಯರೊಂದಿಗೆ ಕಳೆಯುವ ಸಂತಸವೇ ಬೇರೆ. ಬೀಚ್‌ನ ಆಲೆಗಳಲ್ಲಿ ಕುಟುಂಬದೊಂದಿಗೆ ಕಳೆದು ದೇಹವನ್ನು ನಿರಾಳಗೊಳಿಸಿಕೊಳ್ಳುವುದಕ್ಕೆ ಗೋವಾ ನೈಜ ಪ್ರವಾಸಿ ತಾಣ.

ಈ ತಾಣಗಳನ್ನು ವೀಕ್ಷಿಸಲು ಇಲ್ಲಿ ಪಟ್ಟಿ ಮಾಡಲಾಗಿದೆ.

1. ಬಾಗಾ ಬೀಚ್

ಗೋವಾದಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳ ಪಟ್ಟಿಯಲ್ಲಿ ಬಾಗಾ ಬೀಚ್ ಮೊದಲ ಸ್ಥಾನದಲ್ಲಿದೆ. ಬಹಳಷ್ಟು ಪ್ರವಾಸಿಗರು ಮತ್ತು ಜಲ ಕ್ರೀಡೆಗಳನ್ನು ಇಷ್ಟಪಡುವ ಜನರು ಉತ್ತರ ಗೋವಾದ ಪ್ರಸಿದ್ಧ ಬೀಚ್ ಬಾಗಾಗೆ ಹೋಗುತ್ತಾರೆ. ಉತ್ತರ ಗೋವಾದ ಬಾರ್ಡೋಜ್‌ ಪಟ್ಟಣದ ಸಮೀಪದಲ್ಲಿದೆ ಬಾಗಾ. ಇದು ಕುಟುಂಬ ಭೇಟಿಗೆ ಹೇಳಿ ಮಾಡಿಸಿದ ತಾಣ. ಬೆಳಗ್ಗೆ, ಸಂಜೆಯೂ ಇಲ್ಲಿ ಪ್ರವಾಸಿಗರು ಹೆಚ್ಚು ಇರುತ್ತಾರೆ. ವೆಲ್ಸಾವೊ ಬೀಚ್ , ಕ್ಯಾಲಂಗುಟ್ ಬೀಚ್, ಅಗೋಂಡಾ ಬೀಚ್, ಅಶ್ವೆಮ್ ಬೀಚ್ ಕೂಡ ಇದೆ.

2. ಅರಂಬೋಲ್/ಹಾಲಂಟ್ ಬೀಚ್

ಗೋವಾದಲ್ಲಿ ನಾವು ಭೇಟಿ ನೀಡಬೇಕಾದ ಸ್ಥಳಗಳ ಪಟ್ಟಿಯಲ್ಲಿ ಅರಾಂಬೋಲ್‌ ಬೀಚ್ ಕೂಡ ಒಂದು. ಇದು ಉತ್ತರ ಗೋವಾದ ಪೆರ್ನೆಮ್ ಪ್ರದೇಶದಲ್ಲಿದೆ. ಭೇಟಿ ನೀಡಲು ಉತ್ತಮ ಸಮಯವೆಂದರೆ ನವೆಂಬರ್ ನಿಂದ ಮಾರ್ಚ್. ಗೋವಾದ ಅತ್ಯಂತ ಸುಂದರವಾದ ಮತ್ತು ಶುದ್ದ ಪರಿಸರದ ಕಡಲತೀರಗಳಲ್ಲಿ ಒಂದಾದ ಅರಂಬೋಲ್ ಬೀಚ್‌ಗೆ ಇತರ ದೇಶಗಳಿಂದ ಅನೇಕ ಜನರು ಬರುತ್ತಾರೆ. ಇದರೊಟ್ಟಿಗೆ ಗೋವಾದ ದಕ್ಷಿಣ ಭಾಗದಲ್ಲಿ ವಾಸ್ಕೋ ನಗರದಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿ ಹಾಲಂಟ್ ಬೀಚ್ ಇದೆ. ಗೋವಾಕ್ಕೆ ಭೇಟಿ ನೀಡುವ ಕುಟುಂಬಗಳಿಗೆ ಇದು ಅತ್ಯಂತ ನೆಚ್ಚಿನ ಬೀಚ್ ತಾಣಗಳಲ್ಲಿ ಒಂದಾಗಿದೆ ಉಳಿದಂತೆ ಬಗೆಬಗೆಯ ಬೀಚ್‌ಗಳನ್ನು ನೀವು ಆಸ್ವಾದಿಸಲು ಅವಕಾಶವಿದೆ.

3. ಬೊಮ್ ಜೀಸಸ್ ಚರ್ಚ್

ಬೊಮ್ ಜೀಸಸ್ ಬೆಸಿಲಿಕಾ ಪ್ರಮುಖ ಕ್ಯಾಥೊಲಿಕ್ ಸಂಪ್ರದಾಯದ ಆಕರ್ಷಣೆ. ಗೋವಾದಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಯೇ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಅವರ ದೇಹವನ್ನು 1622 ರಿಂದ ಗಾಜಿನ ಸಮಾಧಿಯಲ್ಲಿ ಇರಿಸಲಾಗಿದೆ. 1605 ರಲ್ಲಿ ನಿರ್ಮಿಸಲಾದ ಈ ಚರ್ಚ್ ಭಾರತದಲ್ಲಿ ಬರೊಕ್ ಕಲೆಯ ಅತ್ಯುತ್ತಮ ಉದಾಹರಣೆಯಾಗಿದೆ. ನೊವೆನಾ ಮತ್ತು ಕ್ರಿಸ್ಮಸ್ ಪಾರ್ಟಿಗಳನ್ನು ನೋಡಲು ಡಿಸೆಂಬರ್‌ನಲ್ಲಿ ಭೇಟಿ ನೀಡಬಹುದು ವಾರದಲ್ಲಿ ಎಲ್ಲಾ ದಿನವೂ ಚರ್ಚ್ ಬೆಳಿಗ್ಗೆ 9 ರಿಂದ ಸಂಜೆ 6:30 ರವರೆಗೆ ತೆರೆದಿರುತ್ತದೆ. ಓಲ್ಡ್ ಗೋವಾದಲ್ಲಿದೆ ಮತ್ತು ಪಣಜಿಯಿಂದ ಟ್ಯಾಕ್ಸಿ ಅಥವಾ ಬೈಕ್ ಮೂಲಕ ಸುಲಭವಾಗಿ ತಲುಪಬಹುದು.

4. ಮಸಾಲೆ ಬೆಳೆಯುವ ಕೇಂದ್ರಗಳು

ಗೋವಾ ಮಸಾಲೆ ಪದಾರ್ಥಗಳಿಗೂ ಹೆಸರುವಾಸಿ.. ಗೋವಾದಲ್ಲಿ ಭೇಟಿ ನೀಡಲು ಉತ್ತಮವಾದ ಸ್ಥಳವೆಂದರೆ ಸುಂದರವಾದ ಮಸಾಲೆ ಉತ್ಪಾದನಾ ಕೇಂದ್ರಗಳು. ಈ ಫಾರ್ಮ್‌ಗಳಲ್ಲಿ ಸಾಮಾನ್ಯವಾದವುಗಳಿಂದ ಅಪರೂಪದ ಮತ್ತು ದುಬಾರಿ ಪದಾರ್ಥಗಳವರೆಗೆ ವಿವಿಧ ರೀತಿಯ ಮಸಾಲೆ ಪದಾರ್ಥಗಳನ್ನು ನೋಡಬಹುದು. ಈ ಫಾರ್ಮ್‌ಗಳಲ್ಲಿ ಮಸಾಲೆಗಳನ್ನು ಹೇಗೆ ಬೆಳೆಯಲಾಗುತ್ತದೆ ಎಂಬುದರ ಕುರಿತು ಕಲಿಯಬಹುದು. ಪಣಜಿಯಿಂದ ಸುಮಾರು 30 ಕಿಮೀ ದೂರದಲ್ಲಿರುವ ಈ ಕೇಂದ್ರಕ್ಕೆ. ಟ್ಯಾಕ್ಸಿ ಅಥವಾ ಬಾಡಿಗೆ ಸ್ಕೂಟರ್ ಮೂಲಕ ನೀವು ಸುಲಭವಾಗಿ ಹೋಗಬಹುದು.

5. ಡೆಲ್ಟಿನ್ ರಾಯಲ್ ಕ್ಯಾಸಿನೋ

ಇದು ಗೋವಾದಲ್ಲಿ ನೋಡಬಹುದಾದ ಐದು ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ ನೀವು ಗೋವಾದಲ್ಲಿ ವಿಭಿನ್ನವಾಗಿ ಏನನ್ನಾದರೂ ಮಾಡಲು ಬಯಸಿದರೆ, ಡೆಲ್ಟಿನ್ ರಾಯಲ್ ಕ್ಯಾಸಿನೊ ಹೋಗಲು ಉತ್ತಮ ಸ್ಥಳವಾಗಿದೆ. ಇಲ್ಲಿನ ಐಷಾರಾಮಿ, ಆಟಗಳು ಮತ್ತು ವಿನೋದ. ಈ ತೇಲುವ ಕ್ಯಾಸಿನೊವು ಪಣಜಿಯಲ್ಲಿದೆ/ ಉತ್ತಮ ಆಹಾರ, ಉತ್ತಮವಾದ ಮದ್ಯ ಮತ್ತು ಪ್ರಕಾಶಮಾನವಾದ ನೀಲಿ ನೀರಿನ ಸುಂದರವಾದ ನೋಟ ಇಲ್ಲಿನ ಆಕರ್ಷಣೆ. ಕ್ಯಾಸಿನೊ ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತದೆ ಮತ್ತು ಕುಟುಂಬಗಳು ಮತ್ತು ಮಕ್ಕಳು ಸೇರಿದಂತೆ ಎಲ್ಲರಿಗೂ ತೆರೆದಿರುತ್ತದೆ. ಆದಾಗ್ಯೂ, ನೀವು ಆಟಗಳನ್ನು ಆಡಲು ಕನಿಷ್ಠ 21 ವರ್ಷ ವಯಸ್ಸಿನವರಾಗಿರಬೇಕು ಇಲ್ಲಿನ ನಿಯಮ. ವೀಕ್ಷಣೆಗೆ ವಯೋಮಿತಿ ಇಲ್ಲ.

6. ಚಪೋರಾ ಕೋಟೆ

ಚಪೋರಾ ಕೋಟೆಯು ಅರೇಬಿಯನ್ ಸಮುದ್ರದ ಅದ್ಭುತ ನೋಟಗಳನ್ನು ಹೊಂದಿರುವ ಐತಿಹಾಸಿಕ ತಾಣವಾಗಿದೆ. ಇದು ಗೋವಾದ ಮಾಪುಸಾದಿಂದ ಕೇವಲ 10 ಕಿ.ಮೀ ದೂರದಲ್ಲಿದೆ. "ದಿಲ್ ಚಾಹ್ತಾ ಹೈ" ಎಂಬ ಬಾಲಿವುಡ್ ಚಲನಚಿತ್ರದ ನಂತರ ಇದು ಪ್ರಸಿದ್ದಿ ಪಡೆಯಿತು. ಈ ಕೋಟೆಯನ್ನು ಮೊದಲು ನಿರ್ಮಿಸಿದ್ದು ಆದಿಲ್ ಶಾಹಿ ಕುಟುಂಬ. ಚಪೋರಾ ಕೋಟೆಯನ್ನು ಪ್ರವೇಶಿಸಲು ಯಾವುದೇ ಶುಲ್ಕವಿಲ್ಲ, ಇದು ಪ್ರತಿದಿನ 9:30 ರಿಂದ 5.30 ರವರೆಗೆ ತೆರೆದಿರುತ್ತದೆ.ಚ ಪೋರಾ ಕೋಟೆಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ನವೆಂಬರ್‌ನಿಂದ ಫೆಬ್ರವರಿ/ ಚಪೋರಾ ಕೋಟೆ ಬಳಿಯೇ ವಾಗತರ ಬೀಚ್, ಅಂಜುನಾ ಬೀಚ್ ಮತ್ತು ಓಜ್ರಾನ್ ಬೀಚ್ ಗಳೂ ಇವೆ.

7. ಅಂಜುನಾ ಫ್ಲಿಯಾ ಮಾರುಕಟ್ಟೆ

ಗೋವಾದ ಅಂಜುನಾ ಫ್ಲಿಯಾ ಮಾರುಕಟ್ಟೆ ಹಿಪ್ಪಿಗಳ ಕನಸು. ಅಗ್ಗದ ಉಡುಗೊರೆಗಳು, ಕೈಯಿಂದ ಮಾಡಿದ ವಸ್ತುಗಳು, ಹಿಪ್ಪಿ ಬಟ್ಟೆಗಳು ಮತ್ತು ಇತರ ಸಣ್ಣ ವಸ್ತುಗಳನ್ನು ಹುಡುಕಲು ಇದು ಉತ್ತಮ ಸ್ಥಳವಾಗಿದೆ. ಈ ಉತ್ಸಾಹಭರಿತ ಮಾರುಕಟ್ಟೆಯು 1960 ರ ದಶಕದಿಂದಲೂ ಪ್ರಬಲವಾಗಿದೆ ಮತ್ತು ಈಗ ಪ್ರವಾಸಿಗರು ಮತ್ತು ಸ್ಥಳೀಯರಿಗೆ ನೆಚ್ಚಿನ ತಾಣವಾಗಿದೆ.

8. ತಂಬಿಡಿ ಸುರ್ಲಾದ ಶ್ರೀ ಮಹಾದೇವ ದೇವಾಲಯ

ಗೋವಾದ ಐತಿಹಾಸಿಕ ಸ್ಥಳಗಳನ್ನು ನೋಡಬಯಸುವವರಿಗೆ ತಂಬಿಡಿ ಸುರ್ಲಾದ ಶ್ರೀ ಮಹಾದೇವ ದೇವಾಲಯವು ಹೋಗಲೇಬೇಕು. ಗೋವಾದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಇದು ಶಿವನಿಗೆ ಸಮರ್ಪಿತವಾಗಿದೆ. ಈ ದೇವಾಲಯವು ಗೋವಾ ರಾಜಧಾನಿ ಪಣಜಿ ಸುಮಾರು 65 ಕಿಮೀ ದೂರದಲ್ಲಿರುವ ತಾಂಬಡಿ ಸುರ್ಲಾ ಗ್ರಾಮದಲ್ಲಿದೆ. ಅಲ್ಲಿಗೆ ಹೋಗಲು, ನೀವು ಹಳ್ಳಿಗಾಡಿನ ಮೂಲಕ ಸುಂದರವಾದ ಡ್ರೈವ್ ಕೂಡ ಖುಷಿ ಕೊಡಲಿದೆ.

9. ಗೋವಾದ ಚಿಟ್ಟೆ ಸಂರಕ್ಷಣಾಲಯ

ಗೋವಾ-ಪೊಂಡಾದಲ್ಲಿನ ಅನೇಕ ಗುಪ್ತ ರತ್ನಗಳಲ್ಲಿ ಒಂದಾದ ಚಿಟ್ಟೆ ಸಂರಕ್ಷಣಾಲಯ ಆಕರ್ಷಕ. ಇದು 100 ಕ್ಕೂ ಹೆಚ್ಚು ಜಾತಿಯ ಮುಕ್ತ-ಹಾರುವ ಚಿಟ್ಟೆಗಳನ್ನು ಹೊಂದಿರುವ ಸಣ್ಣ ಅಭಯಾರಣ್ಯ. ಗೋವಾದಲ್ಲಿ ಭೇಟಿ ನೀಡಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.

10. ದೂಧಸಾಗರ ಜಲಪಾತ

ದೂಧಸಾಗರದ ಅರ್ಥವೆಂದರೆ 'ಹಾಲಿನ ಸಮುದ್ರ'. ಇದು ಗೋವಾದಲ್ಲಿನ ಜಲಪಾತವಾಗಿದ್ದು, ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿ ಸುಂದರವಾದ ದೃಶ್ಯದೊಂದಿಗ ಸೆಳೆಯುತ್ತದೆ. ದೂಧಸಾಗರ್ 320 ಮೀಟರ್ ಎತ್ತರದಿಂದ ನಾಲ್ಕು ಹಂತದಲ್ಲಿ ಬೀಳುವ ದೃಶ್ಯವೇ ಮನಮೋಹಕ. ಇಲ್ಲಿಗೆ ಭೇಟಿ ನೀಡಬೇಕೆಂದರೆ ಅದು ರೈಲು ಪ್ರಯಾಣ ಮಾತ್ರ. ಗೋವಾ ಹಾಗೂ ಕರ್ನಾಟಕದ ಲೋಂಡಾ ನಡುವೆ ಸಂಚರಿಸುವ ರೈಲುಗಳಲ್ಲಿ ಹೊರಟರೆ ಇದನ್ನು ವೀಕ್ಷಿಸಬಹುದು. ಅನಾಹುತಗಳ ನಂತರ ಇಲ್ಲಿ ಸಾರ್ವಜನಿಕ ನೇರ ಭೇಟಿಗೆ ಅವಕಾಶವಿಲ್ಲ.

Whats_app_banner