New Year Resolutions: ಹೊಸ ವರ್ಷ 2025 ರಲ್ಲಿ ಸರಳವಾಗಿ ನಾವು ಅನುಸರಿಸಬಹುದಾದ ಪರಿಸರ ಸ್ನೇಹಿ 10 ಸೂತ್ರಗಳು
ಕನ್ನಡ ಸುದ್ದಿ  /  ಕರ್ನಾಟಕ  /  New Year Resolutions: ಹೊಸ ವರ್ಷ 2025 ರಲ್ಲಿ ಸರಳವಾಗಿ ನಾವು ಅನುಸರಿಸಬಹುದಾದ ಪರಿಸರ ಸ್ನೇಹಿ 10 ಸೂತ್ರಗಳು

New Year Resolutions: ಹೊಸ ವರ್ಷ 2025 ರಲ್ಲಿ ಸರಳವಾಗಿ ನಾವು ಅನುಸರಿಸಬಹುದಾದ ಪರಿಸರ ಸ್ನೇಹಿ 10 ಸೂತ್ರಗಳು

ಹೊಸ ವರ್ಷ 2025 ನಮ್ಮ ಬದುಕು ಹೇಗೆ ಪರಿಸರ ಸ್ನೇಹಿಯಾಗಿರಬೇಕು.ನಮ್ಮ ಮನೆ, ಮನೆಯ ಆವರಣದೊಳಗೆ ಇದನ್ನು ಜಾರಿಗೊಳಿಸುವುದು ಹೇಗೆ ಎನ್ನುವುದಕ್ಕೆ ಇಲ್ಲಿವೆ ಸರಳ ಸೂತ್ರಗಳು.

ಹೊಸ ವರ್ಷದಲ್ಲಿ ಪರಿಸರ ಸ್ನೇಹಿ, ಸರಳ ಬದುಕಿನ ಸೂತ್ರಗಳು ಹೀಗಿರಲಿ
ಹೊಸ ವರ್ಷದಲ್ಲಿ ಪರಿಸರ ಸ್ನೇಹಿ, ಸರಳ ಬದುಕಿನ ಸೂತ್ರಗಳು ಹೀಗಿರಲಿ

ಪರಿಸರ, ಸ್ವಚ್ಚತೆ, ಶುದ್ದತೆ, ಗಾಳಿ, ನೀರು ಎನ್ನುವುದು ನಮ್ಮ ಬದುಕಷ್ಟೇ ಅಲ್ಲ.ಬದುಕಿನ ನಡವಳಿಕೆಯೂ ಆಗಬೇಕು ಎಂದು ಹಲವರು ಯೋಚಿಸುತ್ತಾರೆ. ಕೆಲವರು ಅದನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಾರೆ, ಇನ್ನು ಕೆಲವರಿಗೆ ಇಂತಹ ಯೋಚನೆ ಬಂದರೂ ಜಾರಿಗೊಳಿಸುವಲ್ಲಿ ತೊಡಕುಗಳು ಆಗುವುದು ಸಹಜ. ಏಕೆಂದರೆ ಅದು ಒಂದೇ ದಿನದಲ್ಲಿ ಬರುವಂತಹದ್ದಲ್ಲವೇ ಅಲ್ಲ. ನಿಧಾನವಾಗಿ ಅದನ್ನು ಅನುಷ್ಠಾನಗೊಳಿಸುತ್ತಾ ಬಂದಂತೆ ಅದೊಂದು ಜೀವನ ಕ್ರಮವೂ ಆಗಬಲ್ಲ. ಏಕೆಂದರೆ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಸಮಾಜದ ಕರ್ತವ್ಯ. ನಮ್ಮ ಮನೆ ಒಳಗಿನ ಜತೆಗೆ ಹೊರಾವಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ. ಪರಿಸರದ ನೆಲೆಯಲ್ಲಿ ಒಂದಷ್ಟು ಮಾದರಿ ಎನ್ನಬಹುದಾದ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಹೊಸ ವರ್ಷ 2025 ಅನ್ನ ಅರ್ಥಪೂರ್ಣವಾಗಿಸೋಣ. ಇತರರಿಗೂ ಈ ನಡೆ ಮಾದರಿಯಾಗಿ ಇತರರಿಗೂ ಪ್ರೇರಣದಾಯಕವಾಗಿಯೇ ಬದುಕೋಣ. ಅಂತಹ 10 ಸರಳ ಸೂತ್ರಗಳ ಪಟ್ಟಿ ಇಲ್ಲಿದೆ

  1. ಸ್ವಚ್ಚತೆ ಎನ್ನುವುದು ನಮ್ಮ ಬದುಕಿನ ಭಾಗವೇ. ಮನೆಯ ಒಳಾವರಣ, ಹೊರಾವರಣ ಹಾಗೂ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳೋಣ. ಇದು ನಮ್ಮ ಪರಿಸರದ ಮೊದಲ ಪಾಠ ಎನ್ನುವ ಸಂಕಲ್ಪ ಮಾಡೋಣ.
  2. ನಮ್ಮ ಮನೆಯ ಅಕ್ಕಪಕ್ಕದಲ್ಲಿ ಅಥವಾ ಬಡಾವಣೆಯಲ್ಲಿ ಯಾವುದಾದರೂ ಸಂಘಟನೆಗಳವರು, ಇಲ್ಲವೇ ವಿದ್ಯಾರ್ಥಿಗಳು, ಯುವ ಸಮುದಾಯದವರು ಪರಿಸರ ಚಟುವಟಿಕೆ ಭಾಗವಾಗಿ ಗಿಡ ನೆಟ್ಟಿದ್ದರೆ ನಿತ್ಯ ನೀರುಣಿಸಿ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುವೆ ಎನ್ನುವ ಶಪಥ ಮಾಡಿಕೊಳ್ಳೋಣ.
  3. ಪ್ಲಾಸ್ಟಿಕ್‌ ಇಲ್ಲದೇ ಬದುಕೇ ಇಲ್ಲದ ಎನ್ನುವ ಸ್ಥಿತಿಗೆ ನಾವು ಬಂದಿದ್ದೇವೆ. ಸರ್ಕಾರವೇ ಇಂತಿಷ್ಟು ಮಿತಿಯ ಪ್ಲಾಸ್ಟಿಕ್‌ ಬಳಸಬೇಕು ಎನ್ನುವ ನೀತಿ ಮಾಡಿದೆ. ಹೀಗಿದ್ದರೂ ಬಳಕೆ ಪ್ರಮಾಣ ಎಷ್ಟಿದೆ ಎನ್ನುವುದು ಕಸದ ಗುಡ್ಡೆ ನೋಡಿದಾಗ ಅರಿವಿಗೆ ಬರುತ್ತದೆ. ಅತೀ ಅನಿವಾರ್ಯದ ಸನ್ನಿವೇಶ ಹೊರತುಪಡಿಸಿ ಪ್ಲಾಸ್ಟಿಕ್‌ ನಾನಂತೂ ಬಳಸುವುದಿಲ್ಲ ಎನ್ನುವುದನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಜೋಣ.
  4. ಮನೆಯಿಂದ ಹಾಲು- ಮೊಸರು ತರಲು ಹೋಗುವಾಗ, ತರಕಾರಿ ಇಲ್ಲವೇ ದಿನಸಿ ಸಾಮಾನು ತರಲು ಹೋಗುವಾಗಲೂ ಬಟ್ಟೆ ಬ್ಯಾಗ್‌ ಅನ್ನೇ ಬಳಸುವೆ. ಅದನ್ನು ಹಿಡಿದುಕೊಂಡು ಹೋಗಿ ಸಾಮಾನುಗಳನ್ನು ತರುವ ಪರಿಪಾಟ ಬೆಳಸಿಕೊಳ್ಳುವೆ ಎಂದು ತೀರ್ಮಾನಿಸೋಣ.
  5. ಈಗ ವಾಹನ ಎನ್ನುವುದು ಎಲ್ಲರ ಬಳಿ ಇರುವುದು ಸಾಮಾನ್ಯವಾಗಿದೆ. ಕಾರು.ಬೈಕ್‌ ಪ್ರತಿ ಮನೆಯ ಸಂಗಾತಿ. ಬೈಕ್‌ ಇಲ್ಲದೇ ಏನನ್ನೂ ಮಾಡಲಾಗದು. ಕಾರಿನಲ್ಲಿಯೇ ಎಲ್ಲೆಡೆ ಹೋಗಿಬರಬೇಕು ಎನ್ನುವ ಮನಸ್ಥಿತಿಯಿಂದ ಹೊರ ಬಂದು ನಡೆದುಕೊಂಡೇ ಸಮೀಪದ ಕೆಲಸ ಮುಗಿಸಿ ಬರುವೆ.ಅಗತ್ಯ ಇದ್ದಾಗ ಮಾತ್ರ ವಾಹನ ಬಳಸಿ ಸೈಕಲ್‌ ಬಳಕೆಗೆ ಒಗ್ಗಿಕೊಳ್ಳುವ ಮನಸು ಮಾಡೋಣ.
  6. ನೀರು ನಮ್ಮ ಬದುಕಿನ ಅತ್ಯಮೂಲ್ಯ ವಸ್ತು. ನೀರಿಲ್ಲದೇ ಬದುಕಲು ಸಾಧ್ಯವೇ ಎಂದು ಊಹಿಸಲಾಗದು. ಮಳೆಯಾಗದೇ ಇದ್ದರೆ ನಮಗೆ ನೀರಿನ ಕೊರತೆ ಹೇಗಾಗಲಿದೆ ಎಂದು ಕಳೆದ ವರ್ಷದ ಬೇಸಿಗೆಯಲ್ಲಿ ಅನುಭವಿಸಿದ್ದೇವೆ. ನೀರನ್ನು ಮಿತವಾಗಿ ಬಳಸುತ್ತೇನೆ. ನೀರಿನ ಮಾಲಿನ್ಯ ಮಾಡುವುದಿಲ್ಲ ಎನ್ನುವ ತೀರ್ಮಾನವೂ ನಮ್ಮದಾಗಲಿ.
  7. ಪರಿಸರ ಮಾಲಿನ್ಯ ಈಗ ಸಾಮಾನ್ಯವಾಗಿದೆ. ದೆಹಲಿ ಅಂತ ನಗರದಲ್ಲಿ ಬದುಕು ಅಸಹನೀಯವೂ ಆಗಿದೆ. ಇಂತಹ ಸನ್ನಿವೇಶ ಈಗ ನಮ್ಮೂರುಗಳಿಗೂ ಬರುತ್ತಿದೆ. ಪರಿಸರ ಮಾಲಿನ್ಯಕ್ಕೆ ಹಲವು ಕಾರಣಗಳಿದ್ದರೂ ನಮ್ಮಿಂದ ಅದಕ್ಕೆ ಕೊಡುಗೆ ನೀಡುವುದಿಲ್ಲ. ಸೀಮಿತವಾಗಿ ವಾಹನ ಬಳಸಿದರೂ ಮಾಲಿನ್ಯ ಕೆಡದಂತೆ ಚೆನ್ನಾಗಿ ಇಟ್ಟುಕೊಳ್ಳುವೆ ಎಂದು ನಿರ್ಧರಿಸೋಣ.
  8. ಈಗ ಮಳೆ ನೀರು ಸಂಗ್ರಹವೂ ಕಡ್ಡಾಯವಾಗುತ್ತಿದೆ. ಮನೆಗಳಲ್ಲಿ ಮಳೆ ನೀರು ಸಂಗ್ರಹ ಘಟಕ ಇರಬೇಕು ಎನ್ನುವ ನಿಯಮವೂ ಬಂದಿದೆ. ನಿಯಮಕ್ಕಿಂತ ನಮ್ಮ ಬಳಕೆ ಮುಖ್ಯ. ಈ ಮಳೆಗಾಲದಲ್ಲಿ ಮಳೆ ನೀರನ್ನು ಸಂಗ್ರಹಿಸಿ ಬಳಸುವೆ. ಇತರರಿಗೂ ಇಂತಹ ಮಾದರಿ ತೋರಿಸಿಕೊಡುವೆ ಎನ್ನುವ ಬದ್ದತೆ ತೋರೋಣ.
  9. ಪೆನ್ನುಗಳನ್ನು ನಾವು ಯಥೇಚ್ಚವಾಗಿ ಬಳಸುತ್ತೇವೆ. ಬರವಣಿಗೆಗೆ ಪೆನ್ನು ಬೇಕೇ ಬೇಕು. ಹಾಗೆಂದು ಬೇಕಾಬಿಟ್ಟಿಯಾಗಿ ಪೆನ್ನುಗಳನ್ನು ಬಳಸೋದು. ರೀಫಿಲ್‌ ಬಳಸಿ ಬಿಸಾಕುವ ಮುನ್ನ ಸಂಪೂರ್ಣ ಬಳಕೆ ಖಚಿತಪಡಿಸಿಕೊಳ್ಳೋಣ.
  10. ಮಕ್ಕಳಲ್ಲಿ ಕಾಡು, ಹಸಿರು, ಪರಿಸರ, ವನ್ಯಜೀವಿಗಳು, ಪಕ್ಷಿಗಳು, ನದಿ, ತೊರೆ, ಬೆಟ್ಟಗಳು, ಜೀವ ಸಂಪತ್ತಿನ ಕುರಿತು ಎಳವೆಯಿಂದಲೇ ಒಂದಷ್ಟು ತಿಳುವಳಿಕೆ ಮೂಡಿಸಲು ಆಗಾಗ ಅವರನ್ನು ಪ್ರವಾಸ ಕರೆದುಕೊಂಡು ಹೋಗುವುದು, ಅದಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪೀಸಿ ಪ್ರೋತ್ಸಾಹಿಸೋಣ.

Whats_app_banner