ಕನ್ನಡ ಸುದ್ದಿ  /  Karnataka  /  Nia Files Charge Sheet Against Two Is Operatives In Karnataka

NIA charge sheet: ಶಿವಮೊಗ್ಗದ ಇಬ್ಬರು ಇಸ್ಲಾಮಿಕ್‌ ಸ್ಟೇಟ್‌ ಕಾರ್ಯಕರ್ತರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಎನ್‌ಐಎ

ಕರ್ನಾಟಕದಲ್ಲಿ ರಾಷ್ಟ್ರ ಧ್ವಜ ಸುಡುವುದು ಸೇರಿದಂತೆ ಎರಡು ಡಜನ್‌ಗೂ ಹೆಚ್ಚು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪದಡಿ ಇಬ್ಬರು ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಚಾರ್ಜ್ ಶೀಟ್ ಸಲ್ಲಿಸಿದೆ.

NIA charge sheet: ಶಿವಮೊಗ್ಗದ ಇಬ್ಬರು ಇಸ್ಲಾಮಿಕ್‌ ಸ್ಟೇಟ್‌ ಕಾರ್ಯಕರ್ತರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಎನ್‌ಐಎ
NIA charge sheet: ಶಿವಮೊಗ್ಗದ ಇಬ್ಬರು ಇಸ್ಲಾಮಿಕ್‌ ಸ್ಟೇಟ್‌ ಕಾರ್ಯಕರ್ತರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಎನ್‌ಐಎ

ಬೆಂಗಳೂರು: ಕರ್ನಾಟಕದಲ್ಲಿ ರಾಷ್ಟ್ರ ಧ್ವಜ ಸುಡುವುದು ಸೇರಿದಂತೆ ಎರಡು ಡಜನ್‌ಗೂ ಹೆಚ್ಚು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪದಡಿ ಇಬ್ಬರು ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಶಿವಮೊಗ್ಗದ ಮಾಜ್ ಮುನೀರ್ ಅಹ್ಮದ್ (23) ಮತ್ತು ಸೈಯದ್ ಯಾಸಿನ್ (22) ವಿರುದ್ಧ ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ಮಾಡುವುದನ್ನು ತಡೆಯುವ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವಿಶೇಷ ನ್ಯಾಯಾಲಯ ಆರೋಪಪಟ್ಟಿ ಸಲ್ಲಿಸಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ಅಂದರೆ ಇವರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 121 ಎ ಮತ್ತು 122, 1860, ಸೆಕ್ಷನ್ 18, 18 ಬಿ, 20 ಮತ್ತು 38 ರ ಅಡಿಯಲ್ಲಿ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಚಾರ್ಜ್ ಶೀಟ್ ಸಲ್ಲಿಸಿದೆ.

ಕರ್ನಾಟಕದಲ್ಲಿ ವಿವಿಧ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಮೂಲಕ ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.. ಬಂಧಿತ ಇತರ ಆರು ಆರೋಪಿಗಳ ವಿರುದ್ಧ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಈ ಆರೋಪಿಗಳಲ್ಲಿ ಒಬ್ಬನಾದ ಸೈಯದ್ ಯಾಸಿನ್ ಶಿವಮೊಗ್ಗದ ವಾರಾಹಿ ನದಿ ದಂಡೆಯಲ್ಲಿ ಸುಧಾರಿತ ಸ್ಫೋಟಕ ಸಾಧನಗಳಲ್ಲಿ ಒಂದನ್ನು (ಐಇಡಿ) ಪ್ರಾಯೋಗಿಕವಾಗಿ ಸ್ಫೋಟಿಸಿದ್ದನು. ಇಷ್ಟು ಮಾತ್ರವಲ್ಲದೆ ರಾಷ್ಟ್ರಧ್ವಜ ಸುಟ್ಟು ಹಾಕಿ ಭಾರತ ವಿರೋಧಿ ಮನಸ್ಥಿತಿಯ ವಿಡಿಯೋ ರೆಕಾರ್ಡ್‌ ಮಾಡಿದ್ದಾನೆ. ಇದಕ್ಕೆ ಪ್ರತಿಯಾಗಿ ವಿದೇಶಿ ಉಗ್ರಗಾಮಿ ಸಂಸ್ಥೆಗಳಿಂದ ಕ್ರಿಪ್ಟೋಕರೆನ್ಸಿ ಮುಖಾಂತರ ಹಣ ಪಡೆಯುತ್ತಿದ್ದರು ಎನ್ನಲಾಗಿದೆ.

ಕಳೆದ ತಿಂಗಳು ಬೆಂಗಳೂರಿನಲ್ಲಿ ಎನ್‌ಐಎ ಅಧಿಕಾರಿಗಳು ಉಗ್ರರಿಗೆ ಬೆಂಬಲ ನೀಡುವ ಟೆಕಿಯೊಬ್ಬನನ್ನು ಬಂಧಿಸಿದ್ದರು. ಉದ್ಯಾನನಗರಿಯ ತಣಿಸಂದ್ರದ ಮಂಜುನಾಥ್‌ ನಗರದಲ್ಲಿ ಉತ್ತರ ಪ್ರದೇಶ ಮೂಲದ ಟೆಕಿಯೊಬ್ಬನನ್ನು ಐಎಸ್‌ಡಿ ಮತ್ತು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಈತ ಟೆಲಿಗ್ರಾಂ, ಡಾರ್ಕ್‌ನೆಟ್‌ ವೆಬ್‌ ಮೂಲಕ ಆಲ್‌ ಖೈದಾ ಗ್ರೂಪ್‌ಗಳಲ್ಲಿ ಸಕ್ರಿಯನಾಗಿದ್ದ ಎನ್ನಲಾಗಿದೆ.

ಐಸಿಸ್‌ ಜತೆಗೆ ಈತ ನಂಟು ಹೊಂದಿರುವುದನ್ನು ಐಎಸ್‌ಡಿ ತಂಡವು ಪತ್ತೆಹಚ್ಚಿತ್ತು. ಈತನ ಚಲನವಲನಗಳ ಮೇಲೆ ನಿಗಾ ಇರಿಸಲಾಗಿತ್ತು. ಈತ ಐಸಿಸ್‌ಗೆ ಸೇರಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ. ಅಲ್‌ಕೈದಾ ಸಂಘಟನೆ ಜತೆಗೆ ನಿರಂತರ ಸಂಪರ್ಕ ಹೊಂದಿದ್ದ ಈತನು ಸಿರಿಯಾ ಮೂಲಕ ಇರಾಕ್‌ಗೆ ಹೋಗಲು ಯತ್ನಿಸಿದ್ದ ಎಂದು ವರದಿಗಳು ತಿಳಿಸಿವೆ. ಆದರೆ, ಆ ಎರಡು ದೇಶಗಳಿಂದ ಈತನ ಪ್ರವೇಶಕ್ಕೆ ಸಮ್ಮತಿ ಸಿಕ್ಕಿರಲಿಲ್ಲ ಎನ್ನಲಾಗಿದೆ.

ಇದರಿಂದಾಗಿ ಈತ ಮುಂದಿನ ತಿಂಗಳು ಇರಾಕ್‌ ಮೂಲಕ ಸಿರಿಯಾ, ಅಪಘಾನಿಸ್ತಾನಕ್ಕೆ ಹೋಗಲು ಪ್ಲ್ಯಾನ್‌ ಮಾಡಿದ್ದ. ಇದಕ್ಕಾಗಿ ಫ್ಲೈಟ್‌ ಟಿಕೆಟ್‌ ಸಹ ಬುಕ್ಕಿಂಗ್‌ ಮಾಡಿದ್ದ ಎನ್ನಲಾಗಿದೆ. ಈತ ವರ್ಕ್‌ ಫ್ರಮ್‌ ಹೋಮ್‌ ಟೆಕಿಯಾಗಿದ್ದು, ಮನೆಯಲ್ಲಿ ಕೆಲಸ ಮಾಡುತ್ತಲೇ ಆಲ್‌ ಖೈದಾ ಸಂಘಟನೆ ಜತೆ ಟೆಲಿಗ್ರಾಂ, ಡಾರ್ಕ್‌ ವೆಬ್‌ಗಳಲ್ಲಿ ನಂಟು ಇಟ್ಟುಕೊಂಡಿದ್ದ.ಈ ಹಿಂದೆ ಈತ ಉಗ್ರ ಸಂಘಟನೆಯ ಪರವಾಗಿ ನಕಲಿ ಟ್ವಿಟ್ಟರ್‌ ಖಾತೆ ತೆರೆದು ಪೋಸ್ಟ್‌ ಮಾಡಿತ್ತ. ಟ್ವಿಟ್ಟರ್‌ ಸಂಸ್ಥೆಯು ಆ ಖಾತೆಯನ್ನು ಡಿಲೀಟ್‌ ಮಾಡಿತ್ತು.