ಹುಬ್ಬಳ್ಳಿಯಲ್ಲಿ ಸಂಸ್ಕೃತಿ ಭಾರತಿಯಿಂದ ಡಿಸೆಂಬರ್‌ 15 ರಂದು ಬೃಹತ್‌ ಗೀತಾ ಜಾತ್ರೆ; 1008 ಕಂಠಗಳಿಂದ ಭಗವದ್ಗೀತೆ ಪಠಣ
ಕನ್ನಡ ಸುದ್ದಿ  /  ಕರ್ನಾಟಕ  /  ಹುಬ್ಬಳ್ಳಿಯಲ್ಲಿ ಸಂಸ್ಕೃತಿ ಭಾರತಿಯಿಂದ ಡಿಸೆಂಬರ್‌ 15 ರಂದು ಬೃಹತ್‌ ಗೀತಾ ಜಾತ್ರೆ; 1008 ಕಂಠಗಳಿಂದ ಭಗವದ್ಗೀತೆ ಪಠಣ

ಹುಬ್ಬಳ್ಳಿಯಲ್ಲಿ ಸಂಸ್ಕೃತಿ ಭಾರತಿಯಿಂದ ಡಿಸೆಂಬರ್‌ 15 ರಂದು ಬೃಹತ್‌ ಗೀತಾ ಜಾತ್ರೆ; 1008 ಕಂಠಗಳಿಂದ ಭಗವದ್ಗೀತೆ ಪಠಣ

ಉತ್ತರ ಕರ್ನಾಟಕದ ಕೇಂದ್ರ ನಗರಿಯಾದ ಹುಬ್ಬಳ್ಳಿಯಲ್ಲಿ ಡಿಸೆಂಬರ್‌ 15 ರಂದು ಭಗವದ್ಗೀತೆ ಪಠಣೆಯ ಬೃಹತ್‌ ಗೀತಾ ಜಾತ್ರೆ ಆಯೋಜನೆಗೊಂಡಿದೆ.

ಹುಬ್ಬಳ್ಳಿಯಲ್ಲಿ ಭಗವದ್ಗೀತೆ ಪಠಣದ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಭಗವದ್ಗೀತೆ ಪಠಣದ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗಿದೆ.

ಹುಬ್ಬಳ್ಳಿ: ಭಾರತದ ಸಂಸ್ಕೃತಿಯನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸಂಸ್ಕೃತಿ ಭಾರತಿ ವತಿಯಿಂದ ಗೀತಾ ಜಾತ್ರೆಯನ್ನು ಡಿಸೆಂಬರ್‌ 15 ರಂದು ಇಲ್ಲಿನ ದೇಶಪಾಂಡೆ ನಗರದ ಕರ್ನಾಟಕ ಜಿಮಖಾನ ಅಸೋಸಿಯೇಷನ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದೆ. ಸಂಸ್ಕೃತ ಭಾರತಿ ಈಗಾಗಲೇ ಸಂಸ್ಕೃತ ಸಂಭಾಷಣ ಶಿಬಿರ, ಸಂಸ್ಕೃತ ಬಾಲಕೇಂದ್ರ, ಅಂಚೆ ಮೂಲಕ ಸಂಸ್ಕೃತ ಇತ್ಯಾದಿ ಆಯಾಮಗಳ ಮೂಲಕ ಕೋಟ್ಯಾಂತರ ಜನರಿಗೆ ಸಂಸ್ಕೃತಿಯನ್ನು ಕಲಿಸುವ ಪ್ರಯತ್ನ ಮಾಡಿದೆ. ಅದರಂತೆ ಶ್ಲೋಕಗಳ ಮೂಲಕ ಸಂಸ್ಕೃತವನ್ನು ಜನರ ಬಳಿ ತೆಗೆದುಕೊಂಡು ಹೋಗುವ ಉದ್ದೇಶದಿಂದ ಗೀತಾಮೃತಮ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ̤ಈಗಾಗಲೇ ಗೋವಾ, ಕಲ್ಕತ್ತಾ, ತಮಿಳುನಾಡಿನಲ್ಲಿ ಸಾವಿರಾರು ಜನರನ್ನು ಒಂದುಗೂಡಿಸಿ ಭಗವದ್ಗೀತೆಯನ್ನು ಪಠಿಸಲಾಗಿದೆ. ಅದರಂತೆ ಹುಬ್ಬಳ್ಳಿಯಲ್ಲಿ ಈ ಪ್ರಯತ್ನ ಮುಂದುವರೆಸಲಾಗಿದೆ ಎನ್ನುವುದು ಸಂಘಟಕರ ವಿವರಣೆ

ಹೇಗಿರಲಿದೆ ಕಾರ್ಯಕ್ರಮ
ಅಂದು 1008 ಕಂಠಗಳಿಂದ ಭಗವದ್ಗೀತೆಯ 12 ಮತ್ತು 15 ನೇ ಅಧ್ಯಾಯಗಳ ಸಾಮೂಹಿಕ ಪಠಣ, ವಿವಿಧ ಗೀತಾ ಸ್ಪರ್ಧೆಗಳು, ಉಪನ್ಯಾಸಗಳು, ವಸ್ತು ಪ್ರದರ್ಶಿನಿ, ಪುಸ್ತಕ ಪ್ರದರ್ಶಿನಿ ಹಾಗೂ ಮಾರಾಟ, ರೂಪಕಗಳು, ಸಂಪೂರ್ಣ 18 ಅಧ್ಯಾಯಗಳನ್ನು ಕಂಠಸ್ಥ ಮಾಡಿರುವವರಿಗೆ ಸನ್ಮಾನ ನಡೆಯಲಿದೆ.

ಪ್ರದರ್ಶನಿಯ ಉದ್ಘಾಟನೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಮಜೇಥಿಯಾ ಫೌಂಡೇಶನ್ ಪ್ರಮುಖರಾದ ಜಿತೇಂದ್ರ ಮಜೇಥಿಯಾ, ಶಾಸಕ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ ಸೇರಿದಂತೆ ಮುಂತಾದ ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ. ಸಾನಿಧ್ಯವನ್ನು ಮೂರುಸಾವಿರಮಠದ ಡಾ.ಗುರುಸಿದ್ದರಾಜಯೋಗಿಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ ಎನ್ನುವುದು ಆಯೋಜಕರಾದ ಮಹದೇವ ಕರಮರಿ ಅವರ ವಿವರಣೆ.

ಪ್ರಥಮ ಪಲ್ಲವ ನೃತ್ಯ ಪ್ರದರ್ಶನ

ಹುಬ್ಬಳ್ಳಿಯ ಕಲಾಸುಜಯ ದಶಮಾನೋತ್ಸವ ಅಂಗವಾಗಿ ಡಿಸೆಂಬರ್‌ 15 ರಂದು ಪ್ರಥಮ ಪಲ್ಲವ ನೃತ್ಯ ಪ್ರದರ್ಶನವನ್ನು ಹುಬ್ಬಳ್ಳಿ ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾ ಸುಜಯ್ ವ್ಯವಸ್ಥಾಪಕ ಧರ್ಮದರ್ಶಿ ಸುಜಯ ಶಾನಬಾಗ ಹೇಳಿದ್ದಾರೆ.

ಪ್ರತಿ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ನಾಡಿದ್ದು,ಕು.ಗಂಗಾ ಇಬ್ರಾಹಿಂಪುರ ಮತ್ತು ಕು.ವೃಷಿತಾ ದೇಶಪಾಂಡೆ ಅವರು ಭರತನಾಟ್ಯಂ ಮಾರ್ಗಂ ಪದ್ಧತಿಯಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎನ್ನುವುದು ಅವರ ವಿವರಣೆ.

ಅಂದಿನ ಕಾರ್ಯಕ್ರಮಕ್ಕೆ ನೃತ್ಯಪಟು ಡಾ.ಸಂಜಯ ಶಾಂತರಾಜ್, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಮಲ್ಲಿಕಾರ್ಜುನ ಬಾಳಿಕಾಯಿ, ಗಾನ ಸುಧಾ ಸಂಸ್ಥೆಯ ಕಾರ್ಯದರ್ಶಿ ಲತಾ ಜಮಖಂಡಿ ಸೇರಿದಂತೆ ಮುಂತಾದ ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Whats_app_banner