Ola, Uber: ಆಂಡ್ರಾಯ್ಡ್‌ನವರಿಗೊಂದು ರೇಟು, ಐಫೋನ್‌ನವರಿಗೊಂದು ರೇಟು; ಓಲಾ, ಉಬರ್‌ಗೆ ಸಿಸಿಪಿಎ ನೋಟಿಸ್‌, ಹೀಗಂದ್ರು ಪ್ರಲ್ಹಾದ್ ಜೋಶಿ
ಕನ್ನಡ ಸುದ್ದಿ  /  ಕರ್ನಾಟಕ  /  Ola, Uber: ಆಂಡ್ರಾಯ್ಡ್‌ನವರಿಗೊಂದು ರೇಟು, ಐಫೋನ್‌ನವರಿಗೊಂದು ರೇಟು; ಓಲಾ, ಉಬರ್‌ಗೆ ಸಿಸಿಪಿಎ ನೋಟಿಸ್‌, ಹೀಗಂದ್ರು ಪ್ರಲ್ಹಾದ್ ಜೋಶಿ

Ola, Uber: ಆಂಡ್ರಾಯ್ಡ್‌ನವರಿಗೊಂದು ರೇಟು, ಐಫೋನ್‌ನವರಿಗೊಂದು ರೇಟು; ಓಲಾ, ಉಬರ್‌ಗೆ ಸಿಸಿಪಿಎ ನೋಟಿಸ್‌, ಹೀಗಂದ್ರು ಪ್ರಲ್ಹಾದ್ ಜೋಶಿ

Ola and Uber: ಗ್ರಾಹಕರ ಫೋನ್‌ಗೆ ತಕ್ಕಂತೆ ದರ ವಿಧಿಸುತ್ತಿದ್ದ ಓಲಾ ಮತ್ತು ಉಬರ್‌ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ವಿವರಣೆ ಕೇಳಿ ನೋಟಿಸ್‌ ಜಾರಿ ಮಾಡಿದೆ. ಈ ಕುರಿತು ಪ್ರಲ್ಹಾದ್ ಜೋಶಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದ್ದಾರೆ.

ಓಲಾ, ಉಬರ್‌ಗೆ ಸಿಸಿಪಿಎ ನೋಟಿಸ್‌
ಓಲಾ, ಉಬರ್‌ಗೆ ಸಿಸಿಪಿಎ ನೋಟಿಸ್‌ (LiveMint)

ಬೆಂಗಳೂರು: ಗ್ರಾಹಕರು ಹೊಂದಿರುವ ಮೊಬೈಲ್‌ ಫೋನ್‌ಗೆ ತಕ್ಕಂತೆ ದರ ವಿಧಿಸಲಾಗುತ್ತಿದೆ ಎಂಬ ಆರೋಪ ಹೊತ್ತಿರುವ ಓಲಾ ಮತ್ತು ಉಬರ್‌ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ) ವಿವರಣೆ ಕೇಳಿ ನೋಟಿಸ್‌ ಜಾರಿ ಮಾಡಿದೆ. ಈ ಕುರಿತು ಪ್ರಲ್ಹಾದ್ ಜೋಶಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದ್ದಾರೆ. ಈ ಟ್ಯಾಕ್ಸಿ ಅಗ್ರಿಗೇಟರ್‌ ಸಂಸ್ಥೆಗಳು ಗ್ರಾಹಕರು ಹೊಂದಿರುವ ಫೋನ್‌ಗೆ ತಕ್ಕಂತೆ ದರ ವಿಧಿಸುತ್ತಿರುವುದಾಗಿ ಹೇಳಲಾಗಿತ್ತು. ಅಂದರೆ, ಆಂಡ್ರಾಯ್ಡ್‌ನವರಿಗೊಂದು ರೇಟು, ಐಫೋನ್‌ನವರಿಗೊಂದು ರೇಟು ವಿಧಿಸುತ್ತಿತ್ತು. ಐಫೋನ್‌ ಹೊಂದಿರುವವರು ಓಲಾ, ಉಬರ್‌ನಲ್ಲಿ ಪ್ರಯಾಣಿಸಿದಾಗ ತುಸು ಹೆಚ್ಚೇ ಬಾಡಿಗೆ ಹಣ ನೀಡಬೇಕಾಗಿತ್ತು. ಈ ಆರೋಪಕ್ಕೆ ಸಂಬಂಧಪಟ್ಟಂತೆ ಸಿಸಿಪಿಎಗೆ ಓಲಾ ಮತ್ತು ಉಬರ್‌  ಉತ್ತರ ನೀಡಬೇಕಿದೆ.

"ಗ್ರಾಹಕರು ಬಳಸುವ ವಿವಿಧ ಮಾದರಿಯ ಮೊಬೈಲ್‌ಗಳ (ಐಫೋನ್‌ಗಳು/ ಆಂಡ್ರಾಯ್ಡ್) ಆಧಾರದ ಮೇಲೆ ಬೇರೆಬೇರೆ ರೀತಿ ದರ ನಿಗದಿಪಡಿಸುವ ವಿಷಯಕ್ಕೆ ಸಂಬಂಧಪಟ್ಟಂತೆ ಫಾಲೋಅಪ್‌ ಅಪ್‌ಡೇಟ್‌ ಇಲ್ಲಿದೆ. ಇದಕ್ಕೆ ಸಂಬಂಧಪಟ್ಟಂತೆ ತಮ್ಮ ಪ್ರತಿಕ್ರಿಯೆ ನೀಡುವಂತೆ ಓಲಾ ಮತ್ತು ಉಬರ್‌ಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ನೋಟಿಸ್‌ ಕಳುಹಿಸಿದೆ" ಎಂದು ಪ್ರಲ್ಹಾದ್‌ ಜೋಶಿ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

"ಗ್ರಾಹಕರನ್ನು ಶೋಷಣೆ ಮಾಡುವವರಿಗೆ ಶೂನ್ಯ ಸಹಿಷ್ಣುತೆ ತೋರಲಾಗುವುದು" ಎಂದು ಕಳೆದ ತಿಂಗಳು ಜೋಶಿ ಹೇಳಿದ್ದರು. ಓಲಾ ಮತ್ತು ಉಬರ್‌ಗಳ ಮೇಲೆ ಇರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ಸಿಸಿಪಿಎಗೆ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಓಲಾ ಮತ್ತು ಉಬರ್‌ ಮೇಲಿರುವ ಈ ಆರೋಪದ ಕುರಿತು ಪ್ರಲ್ಹಾದ್ ಜೋಶಿ ಅವರು "ಇದು ಮೊದಲ ನೋಟಕ್ಕೆ ಅನ್ಯಾಯದ ವ್ಯಾಪಾರ ಪದ್ಧತಿಯಂತೆ ಕಾಣಿಸುತ್ತದೆ. ಇಲ್ಲಿ ಗ್ರಾಹಕರಿಗೆ ತಮ್ಮ ವ್ಯವಹಾರಗ ಕುರಿತು ಪಾರದರ್ಶಕರಾಗಿರದೆ ಇರುವುದು ಸ್ಪಷ್ಟವಾಗಿ ಕಾಣಿಸಿದೆ" ಎಂದಿದ್ದರು.

Whats_app_banner