ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ಎನ್‌ಕೌಂಟರ್ ಆಗಿದ್ರೆ ಏನಾಗ್ತಿತ್ತು? ಹುಬ್ಬಳ್ಳಿ ಎನ್‌ಕೌಂಟರ್ ಕುರಿತು ಕಾವೇರಿದ ಚರ್ಚೆ
Hubli Encounter: ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ಬಾಲಕಿ ಅತ್ಯಾಚಾರ ಜನಾಕ್ರೋಶಕ್ಕೆ ಕಾರಣವಾಗಿದೆ. ಇದೇ ಸಮಯದಲ್ಲಿ ಆರೋಪಿಯನ್ನು ಪಿಎಸ್‌ಐ ಅನ್ನಪೂರ್ಣ ಅವರು ಎನ್‌ಕೌಂಟರ್ ಮಾಡಿರುವ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಪರವಿರೋಧ ಚರ್ಚೆ ನಡೆಯುತ್ತಿದೆ.

ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ಬಾಲಕಿ ಅತ್ಯಾಚಾರ ಜನಾಕ್ರೋಶಕ್ಕೆ ಕಾರಣವಾಗಿದೆ. ಇದೇ ಸಮಯದಲ್ಲಿ ಆರೋಪಿಯನ್ನು ಪಿಎಸ್‌ಐ ಅನ್ನಪೂರ್ಣ ಅವರು ಎನ್‌ಕೌಂಟರ್ ಮಾಡಿರುವ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಪರವಿರೋಧ ಚರ್ಚೆ ನಡೆಯುತ್ತಿದೆ. ಈ ರೀತಿ ಎನ್‌ಕೌಂಟರ್ ಮಾಡುವುದು ಸರಿಯೇ? ಇಂತಹ ಘಟನೆಗಳಲ್ಲಿ ಎಲ್ಲಾದರೂ ಎನ್‌ಕೌಂಟರ್‌ಗೆ ಒಳಗಾದವರು ನಿರಾಪರಾಧಿಗಳಾಗಿದ್ದರೆ ಏನಾಗಬಹುದು? ಎಂದೆಲ್ಲ ಜನರು ಚರ್ಚಿಸುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಇದೇ ರೀತಿಯ ಅಭಿಪ್ರಾಯವನ್ನು ಅಂಬಿಕಾ ವಿ. ಪ್ರಭು ವ್ಯಕ್ತಪಡಿಸಿದ್ದಾರೆ.
ಅಂಬಿಕಾ ವಿ ಪ್ರಭು ಬರಹ: ಎನ್‌ಕೌಂಟರ್ ಡ್ರಾಮಾವನ್ನು ಸಮರ್ಥಿಸುವವರಿಗೆ. ನಮ್ಮ ದೇಶ ಪೊಲೀಸ್ ಸ್ಟೇಟ್ ಅಲ್ಲ ವೆಲ್‌ಫೇರ್ ಸ್ಟೇಟ್ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. "ಸೌಜನ್ಯ ಕೇಸ್‌ನಲ್ಲಿ ಸಂತೋಷ ರಾವ್‌ನನ್ನು ಎನ್‌ಕೌಂಟರ್ ಮಾಡಿದ್ದರೆ ಏನಾಗುತ್ತಿತ್ತು?" ಅವಳ ನಿಜವಾದ ಆರೋಪಿಗಳು ಯಾರು ಅಂತ ಜನರಿಗೆ ತಿಳಿಯುತ್ತಾ ಇತ್ತ. ಕೂಲಿ ಕಾರ್ಮಿಕ ಅಂತ ಶೂಟ್ ಮಾಡಿದ್ದಾರೆ. ಕೆಲಸ ಸುಲಭ ಆಯಿತು. ಭರ್ಜರಿ ಪ್ರಚಾರ ಕೂಡ ಸಿಕ್ಕಿತು. ಇವನ ತಪ್ಪು ಸಾಬೀತು ಪಡಿಸುವುದು ಕಷ್ಟ ಇರಲಿಲ್ಲ. ಜೈಲಿನಲ್ಲಿ ಕಳೆಯುವ ಹಾಗೆ ಮಾಡಬೇಕಿತ್ತು.
ಇದೆ ಪೊಲೀಸ್ ವ್ಯವಸ್ಥೆಯು ಹಣ ಇದ್ದವ ಶೂಟೌಟ್ ಮಾಡುತ್ತಾ ಇದ್ರ.ಆಸಾರಾಮ್ ಬಾಪುವನ್ನೇಕೆ ಎನ್ಕೌಂಟರ್ ಮಾಡಲಿಲ್ಲ? ಪ್ರಜ್ವಲ್ ರೇವಣ್ಣನನ್ನು ಯಾಕೆ ಮಾಡಿಲ್ಲ? POSCO ಕೇಸ್ ಅಲ್ಲಿ ಇರುವ ಯಡಿಯೂರಪ್ಪ ಅವರನ್ನು ಯಾಕೆ ಬಿಟ್ರು? ಅದು ಒಂದು ಮಗು? ಅದೇ ಹುಬ್ಬಳ್ಳಿಯಲ್ಲಿ ನೇಹಾ, ಸ್ನೇಹ, ಅಂಜಲಿ ಕೂಡ ಕೊಲೆ ಆಗಿದ್ದಾರೆ ಎನ್‌ಕೌಂಟರ್ ಆಯಿತಾ?
ಪೊಲೀಸರ ಕೈಯಿಂದ ಅಧಿಕಾರ ಕೊಟ್ಟರೆ ಅವರು ಯಾವ ಒಳ್ಳೆ ಕೆಲಸ ಮಾಡಲ್ಲ. ಹೆಚ್ಚು wah wah ಮಾಡಿದ್ರೆ, ಪ್ರಚಾರಕ್ಕೆ, ಲಂಚಕ್ಕೆ ಯಾವುದೋ ಹಣ ಇದ್ದವ ಅಪರಾಧ ಮಾಡಿದಲ್ಲಿ ಇದೆ ಪೊಲೀಸರು ಅಮಾಯಕನನ್ನು ಹೊಡೆದುಕೊಳ್ಳುತ್ತಾರೆ. ಪೊಲೀಸರನ್ನು ಹಿಡಿತದಲ್ಲಿದೆ ಇಡಲು ಸರ್ವೋಚ್ಚ ನ್ಯಾಯಾಲಯದ ಬಹಳಷ್ಟು ಜನಪರ ಆದೇಶ ಹೊರಡಿಸಿದೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ಇತ್ಯರ್ಥ ಆಗುವುದಾದರೆ, ಅವರೇ ಆದೇಶ ಹೊರಡಿಸುವುದಾದರೆ, ನ್ಯಾಯಾಲಯ, ನ್ಯಾಯವಾದಿ, ನ್ಯಾಯಾಧೀಶರ, ಸಂವಿಧಾನ, ವಿಚಾರಣೆ ಯಾಕೆ ಬೇಕು? ಅಂಬೇಡ್ಕರ್ ಅವರ ಜನ್ಮದಿನದ ಸಮಯದಲ್ಲಿ ಯೋಚಿಸಬೇಕಾದ ವಿಚಾರ. ಎನ್ಕೌಂಟರ್ ಅವರು ಬರೆದ ಸಂವಿಧಾನಕ್ಕೆ ವಿರುದ್ಧವಾದ ಕೆಲಸ.
PS : ಸೌಜನ್ಯ ಹೆಸರು ಬರೀ ಕರಾವಳಿಯಲ್ಲಿ ಅಷ್ಟೇ ಅಲ್ಲ ಹುಬ್ಬಳ್ಳಿಯ ಹೋರಾಟದಲ್ಲೂ ಇದೆ ಅಂದ್ರೆ ನ್ಯಾಯಾಂಗ ವ್ಯವಸ್ಥೆ ಮೇಲೆ ಜನರಿಗೆ ನಂಬಿಕೆ ಕಮ್ಮಿ ಆಗಿದೆ. ಅದನ್ನು ವಾಪಸ್ ತರುವ ಕೆಲಸ ಸರ್ಕಾರ, ನ್ಯಾಯಾಲಯ ಮಾಡಬೇಕು" ಎಂದು ಅಂಬಿಕಾ ವಿ ಪ್ರಭು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.
ಈ ಬರಹಕ್ಕೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. "ಸೌಜನ್ಯ ಕೇಸ್ ಅಲ್ಲೂ CCTV ಇತ್ತು. ಆದರು ಆರೋಪಿ ಸಿಗಲಿಲ್ಲ. ಎನ್ಕೌಟರ್ ಆಗಲಿಲ್ಲ. ನ್ಯಾಯಾಲಯಕ್ಕೂ CCTV ಬಂದಿಲ್ಲ. ಹಾಗಾದರೆ ಪ್ರಭಾವಿಗಳಿಗೆ ಬೇರೆ ಕಾನೂನು ಇದೆ" ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ನೀವು ಹೇಳುವುದು ಸರಿ ಇದೆ ಆದರೆ .. ಹಿಂದೆ ಸಿಸಿಟಿವಿಯಂಥ ಅತ್ಯಾಧುನಿಕ ತಂತ್ರಜ್ಞಾನ ಇರಲಿಲ್ಲ.. ಆಗ ಆರೋಪಿಯನ್ನು ಪತ್ತೆ ಹಚ್ಚೋದು ಸುಲಭ ಇರಲಿಲ್ಲ..ಆದರೆ ಈಗ ಕಾಲ ಬದಲಾಗಿದೆ.. ಆರೋಪಿಯ ಕೃತ್ಯದ ವೀಡಿಯೋ ಸಾಕ್ಷ್ಯ ಇದ್ದರೆ ಎನ್ ಕೌಂಟರ್ ಒಳ್ಳೆಯ ಪರಿಹಾರ" ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
"ಈ ಪ್ರಕರಣದಲ್ಲಿ ಸರಿಯಾಗಿಯೇ ಮಾಡಿದ್ದಾರೆ. ಅಷ್ಟು easy ಸಾವು ಕೊಡಬಾರದು. ಅಲ್ಲಿ PSI ಹೆಣ್ಣು. ಅವರಿಗೆ ನೆತ್ತಿಗೆ ಏರಿ ಸರಿಯಾದ ನಿರ್ಧಾರ ಮಾಡಿದ್ದಾರೆ. ಸೌಜನ್ಯ ಪ್ರಕರಣದಲ್ಲೂ ಸಿಬಿಐ ಅಲ್ಲಿ ರೇಖಾ ಅಂತ Judge ಇದ್ರು. ಆ ಮೂರು ಹೆಸರು ಸೇರಿಸಲು, further investigation ಆರ್ಡರ್ pass ಮಾಡಿದ್ದು ಅವರೇ. Psycho ಗಳಿಗೆ ಭಯ ಹುಟ್ಟಬೇಕಾದರೆ ಒಂದು ಸಲ ಜನರ ಕೈಗೆ ಕೊಡಬೇಕು. ಮಾಸ್ ತೀರ್ಮಾನಕ್ಕೆ ಕಾನೂನಲ್ಲೂ ಅವಕಾಶ ಇದೆ", "ವಿಷಯ ಏನಾಗಿದೆ ಅಂದ್ರೆ ದೊಡ್ಡವರು, ದುಡ್ಡು ಇದ್ದವರು, ಅಧಿಕಾರಸ್ಥರು ಮಾಡುವ ಅನಾಚಾರಗಳಿಗೆ ನಮ್ಮ ಕಾನೂನಿನಲ್ಲಿ ಅವರ ಪ್ರಭಾವದಿಂದಾಗಿ ಶಿಕ್ಷೆ ಆಗದೇ ಇರುವ ಕಾರಣ ನಮ್ಮ ಜನರಿಗೆ ಈ ವ್ಯವಸ್ಥೆಯ ಮೇಲೆ ರೋಷ ಇದೆ. ಹಾಗಾಗಿ ಈ ಎನ್ಕೌಂಟರ್ ಗಳಿಗೆ ಸಪೋರ್ಟ್ ಮಾಡ್ತಾ ಇದ್ದಾರೆ ನೋಡಿ" ಹೀಗೆ ಅಂಬಿಕಾ ಅವರ ಪೋಸ್ಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ.
