Padma Awards 2025: ಕರ್ನಾಟಕದ ಗೊಂದಲಿ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್‌ಗೆ ಒಲಿದ ಪದ್ಮಶ್ರೀ ಪ್ರಶಸ್ತಿ
Padma Awards 2025: ಕರ್ನಾಟಕದ ಕರ್ನಾಟಕದ ಗೊಂದಲಿ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್‌ಗೆ (Venkappa Ambaji Sugatekar) ಪ್ರತಿಷ್ಠಿತ 2025ರ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಾಗಲಕೋಟೆಯ ಈ ಸಾಧಕನಿಗೆ ಪ್ರಶಸ್ತಿ ಘೋಷಣೆ ಮಾಡಿದ್ದಾರೆ.

Padma Awards 2025: ಕರ್ನಾಟಕದ ವೆಂಕಪ್ಪ ಅಂಬಾಜಿ ಸುಗತೇಕರ್ (Venkappa Ambaji Sugatekar) ಅವರಿಗೆ ಪ್ರತಿಷ್ಠಿತ 2025ರ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಾಗಲಕೋಟೆಯ ಈ ಜನಪದ ಸಾಧಕನಿಗೆ ಪ್ರಶಸ್ತಿ ಘೋಷಣೆ ಮಾಡಿದ್ದಾರೆ.
ವೆಂಕಪ್ಪ ಅಂಬಾಜಿ ಸುಗತೇಕರ್ ಅವರು ತಮ್ಮ ತಂದೆ ಮತ್ತು ಅಜ್ಜನಿಂದ ಜಾನಪದ ಪದಗಳ ಹಾಡುಗಾರಿಕೆನ್ನು ಮುಂದುವರೆಸಿದರು. ಕರ್ನಾಟಕದ ಗೊಂಧಳಿ ಕಲಾವಿದರಾಗಿ ಜನಪ್ರಿಯತೆ ಪಡೆದ ಇವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿಯೂ ನೆನಪಿಸಿಕೊಂಡಿದ್ದರು. ದಾಸರ ಪದ, ಸಂತ ಶಿಶುನಾಳ ಪದ, ವಚನ ಸಾಹಿತ್ಯ, ದೇವಿ ಪದ ಇತ್ಯಾದಿಗಳ ಮೂಲಕ ಕರ್ನಾಟಕದ ಜನಪದದ ಧ್ವನಿಯಾಗಿದ್ದಾರೆ.
ವೆಂಕಪ್ಪ ಅಂಬಾಜಿ ಸುಗತೇಕರ್ ಅವರಿಗೆ ಈಗ 81 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ ಅದ್ಭುತವಾಗಿ ಹಾಡುವ ಇವರೊಂದು ಜನಪದ ಬೆರಗು ಎಂದರೆ ತಪ್ಪಾಗದು. ದಾಸರ ಪದ, ಸಂತ ಶಿಶುನಾಳರ ಪದ, ವಚನ ಸಾಹಿತ್ಯ, ದೇವಿಯ ಪದಗಳು ಇತ್ಯಾದಿ ಹಾಡುಗಳನ್ನು ಗೊಂದಲಿ ಪದದ ಶೈಲಿಯಲ್ಲಿ ಹಾಡುತ್ತಾರೆ. ಸಮಾಜದ ಅನೇಕ ವಿಚಾರಗಳನ್ನು ತನ್ನ ಹಾಡಿನ ಮೂಲಕ ವ್ಯಕ್ತಪಡಿಸುತ್ತಾರೆ. ಇವರಿಗೆ ಈಗಾಗಲೇ ಹಲವು ಪ್ರಮುಖ ಪ್ರಶಸ್ತಿಗಳು ಬಂದಿವೆ. ಇದೀಗ ಪದ್ಮಶ್ರಿ ಪ್ರಶಸ್ತಿಗೆ ಭಾಜನರಾಗುವ ಮೂಲಕ ಕರ್ನಾಟಕದ ಕೀರ್ತಿಯನ್ನು ಇನ್ನಷ್ಟು ಎತ್ತರಿಸಿದ್ದಾರೆ.
ವೆಂಕಪ್ಪ ಅಂಬಾಜಿ ಸುಗತೇಕರ್ ಶಾಲಾ ಶಿಕ್ಷಣ ಪಡೆದವರಲ್ಲ. ತಮ್ಮ ತಂದೆ ಮತ್ತು ತಾತನಿಂದ ಬಳುವಳಿಯಾಗಿ ಬಂದ ಗೊಂದಲಿ ಪದವನ್ನೇ ಉಸಿರಾಗಿ ಜೀವಿಸಿದರು. 81 ವರ್ಷದ ವೆಂಕಪ್ಪ ಅವರು ಸುಮಾರು ಆರು ದಶಕಗಳಿಂದ ಜಾನಪದ ಸಂಗೀತ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡುತ್ತಿದ್ದಾರೆ. ವಿವಿಧ ಪುರಸ್ಕಾರಗಳು ಮತ್ತು ಮೆಚ್ಚುಗೆಯನ್ನು ಗಳಿಸಿದ್ದಾರೆ. ಅವರಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದೆ. ಇವರು ಸಲ್ಲಿಸಿದ ಸೇವೆಗಳಿಗಾಗಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಕರ್ನಾಟಕ ಸರ್ಕಾರದಿಂದ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ರಾಜ್ಯ, ಹೊರರಾಜ್ಯಗಗಳಲ್ಲಿ ಆಕಾಶವಾಣಿ, ದೂರದರ್ಶನ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ನಾಳೆ ಜನವರಿ 26ರಂದು ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ 76ನೇ ಗಣರಾಜ್ಯೋತ್ಸವ ಮೆರವಣಿಗೆಯನ್ನು ವೀಕ್ಷಿಸಲು ಬಾಗಲಕೋಟೆಯ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್‌ಗೆ ಆಹ್ವಾನ ನೀಡಲಾಗಿತ್ತು. ಅದಕ್ಕೂ ಒಂದು ದಿನ ಮೊದಲು ಪದ್ಮಶ್ರಿ ಪ್ರಶಸ್ತಿ ಘೋಷಿಸಲಾಗಿದೆ. ಫೆಬ್ರವರಿ 2024 ರಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ 110ನೇ ಮನ್ ಕಿ ಬಾತ್‌ನಲ್ಲಿ ಸುಗತೇಕರ್ ಹೆಸರನ್ನು ಉಲ್ಲೇಖಿಸಿದ್ದರು. ಇವರು ಸಾವಿರಾರು ಜನರಿಗೆ ಗೊಂದಲಿ ಪದಗಳನ್ನು ಕಲಿಸಿದ್ದಾರೆ. ಅವರ ಸೇವೆ ಅನನ್ಯ ಎಂದು ನರೇಂದ್ರ ಮೋದಿ ಆ ಸಂದರ್ಭದಲ್ಲಿ ತನ್ನ ಭಾಷಣದಲ್ಲಿ ಹೇಳಿದ್ದರು.
ಕರ್ನಾಟಕದ ವೆಂಕಪ್ಪ ಅಂಬಾಜಿ ಮಾತ್ರವಲ್ಲದೆ ಭೀಮವ್ವ ದೊಡ್ಡಬಾಳಪ್ಪ, ಹಾಗೂ ವಿಜಯಲಕ್ಷ್ಮಿ ದೇಶಮನೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
