ಗ್ರಾಮ ಪಂಚಾಯಿತಿಯಲ್ಲಿ ರೈತರ ಕೆಲಸ, ಸಮಸ್ಯೆಗಳನ್ನ ಹೇಳಿಕೊಳ್ಳಲು ಪಂಚಮಿತ್ರ ವಾಟ್ಸಪ್ ಚಾಟ್ ಆರಂಭ-panchamitra whatsapp chat started for farmers to get facilities and share problems in gram panchayat rmy ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಗ್ರಾಮ ಪಂಚಾಯಿತಿಯಲ್ಲಿ ರೈತರ ಕೆಲಸ, ಸಮಸ್ಯೆಗಳನ್ನ ಹೇಳಿಕೊಳ್ಳಲು ಪಂಚಮಿತ್ರ ವಾಟ್ಸಪ್ ಚಾಟ್ ಆರಂಭ

ಗ್ರಾಮ ಪಂಚಾಯಿತಿಯಲ್ಲಿ ರೈತರ ಕೆಲಸ, ಸಮಸ್ಯೆಗಳನ್ನ ಹೇಳಿಕೊಳ್ಳಲು ಪಂಚಮಿತ್ರ ವಾಟ್ಸಪ್ ಚಾಟ್ ಆರಂಭ

Panchamitra Whatsapp Chat: ಗ್ರಾಮ ಪಂಚಾಯಿತಿಗಳಲ್ಲಿ ರೈತರು ಸೌಲಭ್ಯಗಳನ್ನು ಪಡೆಯಲು ಅಥವಾ ಸಮಸ್ಯೆಗಳನ್ನು ಹೇಳಿಕೊಳ್ಳಲು ಸರ್ಕಾರ ಪಂಚಮಿತ್ರ ವಾಟ್ಸಪ್ ಚಾಟ್ ಅನ್ನು ಆರಂಭಿಸಿದೆ. ಇದು ಹೇಗೆ ಕೆಲಸ ಮಾಡುತ್ತೆ ಅನ್ನೋದನ್ನು ತಿಳಿಯಿರಿ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರೈತರಿಗೆ ಪಂಚಮಿತ್ರ ವಾಟ್ಸಪ್ ಚಾಟ್ ಆರಂಭಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರೈತರಿಗೆ ಪಂಚಮಿತ್ರ ವಾಟ್ಸಪ್ ಚಾಟ್ ಆರಂಭಿಸಿದೆ.

ಬೆಂಗಳೂರು: ರೈತರಿಗೆ ಗ್ರಾಮ ಪಂಚಾಯತಿಯಿಂದ ಆಗಬೇಕಾದ ಬಹುತೇಕ ಕೆಲಸಗಳಿಗೆ, ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ, ಪರಿಹಾರ-ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕೆ ಇನ್ನು ಮುಂದೆ ಕಿಲೋ ಮೀಟರ್‌ಗಟ್ಟಲೆ ಸುತ್ತಿ, ನೂರಾರು ರೂಪಾಯಿ ಖರ್ಚು ಮಾಡಿ, ದಿನಗಟ್ಟಲೆ ಸಮಯ ವ್ಯಯಿಸಿ ಒದ್ದಾಡಬೇಕಿಲ್ಲ!! ಪಂಚಮಿತ್ರ ವಾಟ್ಸಪ್ ಚಾಟ್‌ನಲ್ಲಿ ನಿಮ್ಮ ಸಮಸ್ಯೆ ದೂರುಗಳನ್ನು ಮೊಬೈಲ್ ವಾಟ್ಸಪ್‌ನಲ್ಲಿ ದಾಖಲಿಸಬಹುದು. ಕುಂದು ಕೊರತೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಈ ಹೊಸ ತಂತ್ರಜ್ಞಾನ ವ್ಯವಸ್ಥೆಯನ್ನು ಕರ್ನಾಟಕದ ಎಲ್ಲ ಗ್ರಾಮ ಪಂಚಾಯತಿ ನಿವಾಸಿಗಳೂ ಬಳಸಿಕೊಳ್ಳಬಹುದು. ಇಡೀ ರಾಜ್ಯಕ್ಕೆ ಒಂದೇ ವಾಟ್ಸಪ್ ನಂಬರ್.

ವಾಟ್ಸಾಪ್‌ಗೆ ಸಂಪರ್ಕ ಸಂಖ್ಯೆ: 8277506000

ಕುಂದು ಕೊರತೆಯ ಅರ್ಜಿ ಸಲ್ಲಿಸಿದ ನಂತರ ಒಂದು ಯುನಿಕ್ ಐಡಿ ನಂಬರ್ ಪ್ರತೀ ಅರ್ಜಿಗೂ ನೀಡಲಾಗುತ್ತದೆ. ಪಂಚಮಿತ್ರ ವಾಟ್ಸಪ್ ಚಾಟ್‌ನಲ್ಲಿ ಕುಂದುಕೊರತೆಯ ಆ ID ನಂಬರ್‌ನ್ನು ಬಳಸಿಕೊಂಡು ವಾಟ್ಸಪ್‌ನಲ್ಲಿ ಅಥವಾ iPGRS ಜಾಲತಾಣದಲ್ಲಿ ಕುಂದುಕೊರತೆಯ ಸ್ಥಿತಿಯನ್ನು ತಿಳಿಯಬಹುದು. ಅಂದರೆ ಗ್ರಾಮ ಪಂಚಾಯಿತಿಯ ಸೇವೆಗಳಿಗೆ ಸಂಬಂಧಪಟ್ಟಂತೆ ಡಿಜಿಟಲ್‌ ವೇದಿಕೆ ಮೂಲಕ ಅರ್ಜಿ ಸಲ್ಲಿಸಿದ ನಂತರ, ಅರ್ಜಿಗಳ ಸ್ಥಿತಿಗತಿ ಪರಿಶೀಲನೆಗೂ ಅವಕಾಶವಿದೆ. ನೀವು, ನಿಮ್ಮ ಸಮಸ್ಯೆಗಳನ್ನು, ಮಾಹಿತಿಗಳನ್ನು, ಕುಂದು ಕೊರತೆಯ ಅರ್ಜಿಗಳನ್ನು ಪಂಚಮಿತ್ರ ವಾಟ್ಸಪ್ ಚಾಟ್‌ನಲ್ಲಿ ಸಲ್ಲಿಸಿಬಹುದು.

ಪಂಚಮಿತ್ರ ವಾಟ್ಸಪ್ ಚಾಟ್ ಬಳಸುವುದು ಹೇಗೆ?

ಪಂಚಮಿತ್ರ ವಾಟ್ಸಪ್ ಚಾಟ್‌ ಬಳಸುವುದು ತುಂಬ ಸುಲಭ ಇದೆ. ಈ ಡಿಜಿಟಲ್‌ ಸೇವೆ ಪಡೆಯಲು ಸ್ಮಾರ್ಟ್‌ಫೋನ್‌ ಅಗತ್ಯವಾಗಿದೆ.ಿಮ್ಮ ಮೊಬೈಲ್‌ ಸಂಖ್ಯೆಯನ್ನು ನೋಂದಾಯಿಸಿಕೊಂಡು ಚಾಟ್‌ ಶುರು ಮಾಡಬಹುದು.

  • ಮೊದಲಿಗೆ 'Hi' ಎಂದು ಸಂದೇಶ ಕಳುಹಿಸಬೇಕು
  • ಆಗ ಸ್ಕ್ರೀನ್ ಮೇಲೆ ಭಾಷೆ ಆಯ್ಕೆ ಅವಕಾಶ ಸಿಗಲಿದೆ.
  • ಬಳಿಕ ಜಿಲ್ಲೆ, ತಾಲೂಕು ಹಾಗೂ ನಿರ್ದಿಷ್ಟ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಳ್ಳಬೇಕು
  • ನಂತರ ಸೇವೆ, ಮಾಹಿತಿ, ಕುಂದುಕೊರತೆ ಎಂಬ ಮೂರು ಆಯ್ಕೆ ಮೂಡಲಿದ್ದು, ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು, ಮುಂಬರುವ ಸೂಚನೆಗಳನ್ನು ಪಾಲಿಸುತ್ತ ಅರ್ಜಿ ಸಲ್ಲಿಸಬಹುದು
  • ಸದ್ಯಕ್ಕೆ 39 ರೀತಿಯ ಕುಂದುಕೊರತೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ
  • ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆ, ರಸ್ತೆ ಸಮಸ್ಯೆ, ಸೇತುವೆ ದುರಸ್ತಿ, ಮನರೇಗಾ ಯೋಜನೆ ಮತ್ತು ಪಂಚಾಯತ್‌ ರಾಜ್‌ ವಿಷಯಗಳಿಗೆ ಸಂಬಂಧಪಟ್ಟ 39 ರೀತಿಯ ಕುಂದುಕೊರತೆ ಗುರುತಿಸಲಾಗಿದೆ
  • ಈ ಸಮಸ್ಯೆಗಳ ಕುರಿತಂತೆ ಪೋರ್ಟಲ್‌ ಅಥವಾ ವಾಟ್ಸಾಪ್‌ ಮೂಲಕ ಅಹವಾಲು ಸಲ್ಲಿಸಿ ಪರಿಹಾರ ಪಡೆದುಕೊಳ್ಳಲು ಅವಕಾಶವಿರುವುದು ವಿಶೇಷ.

ಪಂಚಮಿತ್ರ' ಪೋರ್ಟಲ್‌/ ವಾಟ್ಸ್‌ಆ್ಯಪ್‌ ಚಾಟ್‌ನಲ್ಲಿ ಲಭ್ಯವಿರುವ ಸೇವೆ

  • ಕಟ್ಟಡ ನಿರ್ಮಾಣ ಪರವಾನಗಿ
  • ಹೊಸ ನೀರು ಪೂರೈಕೆ ಸಂಪರ್ಕ
  • ನೀರು ಸರಬರಾಜಿನ ಸಂಪರ್ಕ ಕಡಿತ
  • ಕುಡಿಯುವ ನೀರಿನ ನಿರ್ವಹಣೆ
  • ಬೀದಿದೀಪದ ನಿರ್ವಹಣೆ
  • ಗ್ರಾಮ ನೈರ್ಮಲ್ಯ ನಿರ್ವಹಣೆ
  • ಉದ್ದಿಮೆ ಪರವಾನಗಿ, ಸ್ವಾಧೀನ ಪ್ರಮಾಣ ಪತ್ರ
  • ನಾನಾ ಸೇವೆ ಸಂಬಂಧ ರಸ್ತೆ ಅಗೆತಕ್ಕೆ ಅನುಮತಿ
  • ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ,

ನಿರಾಕ್ಷೇಪಣಾ ಪತ್ರ,

  • ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಜಾಬ್‌ಕಾರ್ಡ್‌ ವಿತರಣೆ,

ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು,

  • ಹೊಸ ಇಲ್ಲವೇ ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ,
  • ಹೊಸ/ ಅಸ್ತಿತ್ವದಲ್ಲಿರುವ ಓವರ್‌ ಗ್ರೌಂಡ್‌ ಕೇಬಲ್‌ ಮೂಲಸೌಕರ್ಯ/ಭೂಗತ ಕೇಬಲ್‌ ಮೂಲಸೌಕರ್ಯಕ್ಕಾಗಿ ಅನುಮತಿ.
  • ಜತೆಗೆ ನಮೂನೆ 9/11ಎ, ನಮೂನೆ 11ಬಿ ಈ ಎಲ್ಲ ಮಾಹಿತಿ ಲಭ್ಯ
  • ಚುನಾಯಿತ ಪ್ರತಿನಿಧಿಗಳ ವಿವರ, ಸಿಬ್ಬಂದಿ ವಿವರ,
  • ಪೂರ್ಣಗೊಂಡ ಗ್ರಾಮ ಪಂಚಾಯಿತಿ ಸಭೆಗಳ ನಡಾವಳಿಗಳು
  • ಗ್ರಾಮ ಪಂಚಾಯಿತಿಯ ಮುಂಬರುವ ಸಭೆಗಳ ಮಾಹಿತಿ
  • ಆದಾಯ ಸಂಗ್ರಹ ಮಾಹಿತಿ, ಸೇವೆಗಳ ವಿವರ
  • ಸ್ವಸಹಾಯ ಗುಂಪಿನ ಮಾಹಿತಿ
  • ಗ್ರಾಮ ಪಂಚಾಯತ್‌ಗಳ ಕಾರ್ಯಕ್ರಮಗಳು- ಉಪಕ್ರಮಗಳು,

ಹಾಗೆಯೇ 4(1)(ಎ) ಮತ್ತು 4(1)(ಬಿ) ಆರ್‌ಟಿಐ ದಾಖಲೆಗಳು ಲಭ್ಯವಿರುತ್ತವೆ.

ರೈತರಿಗೆ ಈ ವ್ಯವಸ್ಥೆ ಬಹಳ ಅನುಕೂಲವಾಗಬಹುದು ಅಂತ ಅನಿಸ್ತಾ ಇದೆ. ರೈತರು, ಗ್ರಾಮಸ್ತರು ಪಂಚಮಿತ್ರ ವಾಟ್ಸಪ್ ಚಾಟ್ ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತಾರೆ ಮತ್ತು ವ್ಯವಸ್ಥೆಯಲ್ಲಿ ಅಧಿಕಾರಿಗಳಿಂದ ಅದಕ್ಕೆ ಪ್ರತಿಸ್ಪಂದನ ಹೇಗೆ ದೊರೆಯುತ್ತದೆ ಎಂಬುದರ ಮೇಲೆ ಈ ಹೊಸ ಪಂಚಮಿತ್ರ ವಾಟ್ಸಪ್ ಚಾಟ್‌ ನ ಯಶಸ್ಸು ನಿಂತಿದೆ. ರೈತ ಬಾಂಧವರೆಲ್ಲ ತಮ್ಮ ಕೆಲಸಗಳನ್ನು - ಕುಂದು ಕೊರತೆಗಳ ಬಗ್ಗೆ ಅರ್ಜಿ, ಮಾಹಿತಿ ಪಡೆಯುವಿಕೆ, ಗ್ರಾಮ ಪಂಚಾಯತಿಯಿಂದ ಸೇವೆ ಪಡೆಯುವುದು ಇತ್ಯಾದಿ - ಮಾಡೋಣ. (ಅರವಿಂದ ಸಿಗದಾಳ್, ಮೇಲುಕೊಪ್ಪ 9449631248)

mysore-dasara_Entry_Point