ಕನ್ನಡ ಸುದ್ದಿ  /  Karnataka  /  Party And The Government Ready For Assembly Elections Says Cm Basavaraj Bommai

Basavaraj Bommai: ಚುನಾವಣೆ ಎದುರಿಸಲು ಪಕ್ಷ, ಸರ್ಕಾರ ಸಿದ್ಧವಾಗಿದೆ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಚುನಾವಣೆಗೆ ಪಕ್ಷ ಮತ್ತು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ. ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಚುನಾವಣಾ ಆಯೋಗವು ದಿನಾಂಕಗಳನ್ನು ಪ್ರಕಟಿಸಲು ನಾವು ಕಾಯುತ್ತಿದ್ದೇವೆ. ಬಹುಮತದೊಂದಿಗೆ ಮತ್ತೆ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದಯ ಭರವಸೆ ವ್ಯಕ್ತಪಡಿಸಿದರು.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (HT_PRINT)

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಇಂದು (ಮಾ.29-ಬುಧವಾರ) ದಿನಾಂಕ ಘೋಷಣೆ ಮಾಡಲಿದ್ದು, ಬೆಳಗ್ಗೆ 11.30ಕ್ಕೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಈ ಮಧ್ಯೆ ಚುನಾವಣಾ ದಿನಾಂಕ ಘೋಷಣೆಯಾಗಲಿದೆ ಎಂದು ತಿಳಿಯುತ್ತಿದ್ದಂತೇ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚುನಾವಣೆಗೆ ಪಕ್ಷ ಮತ್ತು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಚುನಾವಣೆಗೆ ಪಕ್ಷ ಮತ್ತು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ. ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಚುನಾವಣಾ ಆಯೋಗವು ದಿನಾಂಕಗಳನ್ನು ಪ್ರಕಟಿಸಲು ನಾವು ಕಾಯುತ್ತಿದ್ದೇವೆ. ಬಹುಮತದೊಂದಿಗೆ ಮತ್ತೆ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದಯ ಭರವಸೆ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಿದ್ದು, ಕರ್ನಾಟಕದ ಜನತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇರಿಸಿದ್ದಾರೆ. ಹೀಗಾಗಿ ರಾಜ್ಯದ ಜನ ಈ ಬಾರಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವುದು ಖಚಿತ ಎಂದು ಸಿಎಂ ಬೊಮ್ಮಾಯಿ ಭರವಸೆಯ ಮಾತುಗಳನ್ನಾಡಿದರು.

ಇನ್ನು ಚುನಾವಣಾ ತಯಾರಿ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಈ ವಿಚಾರವಾಗಿ ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಯಾದ ಬಳಿಕ ಮಾಹಿತಿ ನೀಡುವುದಾಗಿ ಸ್ಪಷ್ಟಪಡಿಸಿದರು.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಜನರತ್ತ 500 ರೂ. ನೋಟುಗಳನ್ನು ಎಸೆದ ಘಟನೆಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್‌ ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ಕಿಡಿಕಾರಿದರು.

ಎಲ್ಲಾ ರೀತಿಯ ಅಧಿಕಾರವನ್ನು ಅಸ್ಪಷ್ಟವಾಗಿ ಬಳಸುವ ಡಿಕೆ ಶಿವಕುಮಾರ್.‌ ಕರ್ನಾಟಕದ ಜನರನ್ನು ಭಿಕ್ಷುಕರು ಎಂದು ಭಾವಿಸದಂತಿದೆ. ಆದರೆ ಆತ್ಮಸ್ವಾಭಿಮಾನವುಳ್ಳ ರಾಜ್ಯದ ಜನ ಇಂತಹವರಿಗೆ ಖಂಡಿತ ಪಾಠ ಕಲಿಸುತ್ತಾರೆ. ಡಿಕೆ ಶಿವಕುಮಾರ್‌ ಮತ್ತು ಕಾಂಗ್ರೆಸ್‌ನ ದರ್ಪ ಈ ಬಾರಿಯ ವಿಧಾನಸಭೆ ಚುನಾವಣೆ ಬಳಿಕ ಮುರಿಯಲಿದೆ ಎಂದು ಸಿಎಂ ಬೊಮ್ಮಾಯಿ ಭವಿಷ್ಯ ನುಡಿದರು.

ಸಿದ್ದರಾಮಯ್ಯ ತಮ್ಮ ಬೆಂಬಲಿಗನಿಗೆ ಕಪಾಳಮೋಕ್ಷ ಮಾಡುತ್ತಾರೆ, ಡಿಕೆ ಶಿವಕುಮಾರ್‌ ನಾಚಿಕೆ ಇಲ್ಲದೇ ಜನರತ್ತ ಹಣ ಎಸೆಯುತ್ತಾರೆ. ಇಂತಹ ದರ್ಪದ ನಾಯಕರನ್ನು ರಾಜ್ಯದ ಜನ ಸಹಿಸುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಜನ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಅವರನ್ನು ಮನೆಗೆ ಕಳುಹಿಸುವುದು ನಿಶ್ಚಿತ ಎಂದು ಸಿಎಂ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದರು.

ಇಂದಿನ ಪ್ರಮುಖ ಸುದ್ದಿ:

Ananth Kumar:‌ 'ಅನಂತ' ಜಪ ಮರೆತ ಭಾಜಪ: ಪುತ್ರಿ ವಿಜೇತಾ ಅನಂತ್‌ ಕುಮಾರ್‌ ಅಸಮಾಧಾನಕ್ಕೆ ಕಾರಣಗಳು ಹಲವು

ರಾಜ್ಯ ಬಿಜೆಪಿಯಲ್ಲಿ ಅನಂತ್‌ ಕುಮಾರ್‌ ನೆನಪು ಕಡಿಮೆಯಾಗುತ್ತಿದೆಯೇ ಎಂಬ ಅನುಮಾನ ಮೂಡತೊಡಗಿದೆ. ಇದಕ್ಕೆ ಕಾರಣವಾಗಿದ್ದು ಅನಂತ್‌ ಕುಮಾರ್‌ ಅವರ ಪುತ್ರಿ ವಿಜೇತಾ ಅನಂತ್‌ಕುಮಾರ್‌ ಮಾಡಿರುವ ಟ್ವೀಟ್‌. ರಾಜ್ಯ ಸರ್ಕಾರ ಬೆಂಗಳೂರಿನ ಪ್ರಮುಖ ರಸ್ತೆಗಳು ಹಾಗೂ ಮೆಟ್ರೋ ನಿಲ್ದಾಣಕ್ಕೆ ದಿವಂಗತ ನಾಯಕ ಅನಂತ್‌ ಕುಮಾರ್‌ ಅವರ ಹೆಸರಿಡಿದಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Humza Yousaf: ಸ್ಕಾಟ್‌ಲೆಂಡ್‌ ಪ್ರಧಾನಿಯಾಗಿ ಪಾಕ್‌ ಮೂಲದ ಯುವ ನಾಯಕನ ಆಯ್ಕೆ: ಯಾರು ಹಮ್ಜಾ ಯೂಸುಫ್?

ಪಾಕಿಸ್ತಾನ ಮೂಲದ ಹಮ್ಜಾ ಯೂಸುಫ್‌ ಅವರು ಸ್ಕಾಟ್‌ಲ್ಯಾಂಡ್‌ನ ನ್ಯಾಷನಲ್‌ ಪಾರ್ಟಿ ನಾಯಕತ್ವ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಈ ಮೂಲಕ ಸ್ಕಾಟ್‌ಲ್ಯಾಂಡ್‌ನ ಅತ್ಯಂತ ಕಿರಿಯ ಫಸ್ಟ್‌ ಮಿನಿಸ್ಟರ್(ಪ್ರಧಾನಮಂತ್ರಿ)‌ ಮತ್ತು ಪಶ್ಚಿಮ ಯುರೋಪ್‌ನ ಸರ್ಕಾರವೊಂದರ ನಾಯಕತ್ವವಹಿಸಿದ ಮೊದಲ ಮುಸ್ಲಿಂ ನಾಯಕ ಎಂಬ ಹೆಗ್ಗಳಿಕೆಗೆ ಹಮ್ಜಾ ಯೂಸುಫ್ ಪಾತ್ರರಾಗಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

IPL_Entry_Point

ವಿಭಾಗ