ಕನ್ನಡ ಸುದ್ದಿ  /  Karnataka  /  Paura Karmika: 11,133 Civil Servants Of The State Are Now Government Employees; Govt Told Karnataka Legilsative Assembly

Paura Karmika: ರಾಜ್ಯದ 11,133 ಪೌರಕಾರ್ಮಿಕರು ಇನ್ನು ಸರ್ಕಾರಿ ನೌಕರರು; ಸದನಕ್ಕೆ ಸರ್ಕಾರ

Karnataka Assembly Session 2022: ರಾಜ್ಯದ 11,133 ಪೌರಕಾರ್ಮಿಕರು (Paura Karmika) ಇನ್ನು ಸರ್ಕಾರಿ ನೌಕರರು. ಸಚಿವ ಸಂಪುಟ ಈ ಕುರಿತ ಪ್ರಸ್ತಾವನೆಗೆ ನಿನ್ನೆ ಒಪ್ಪಿಗೆ ನೀಡಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದು, ಮುಖ್ಯಮಂತ್ರಿಗೆ ಧನ್ಯವಾದ ಹೇಳಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ

ಬೆಂಗಳೂರು: ರಾಜ್ಯದ 11,133 ಮಂದಿ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸಂಪುಟಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಭಿನಂದನೆ ಸಲ್ಲಿಸಿದರು.

ವಿಧಾನಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಅವರು, ಇಡೀ ರಾಜ್ಯದಲ್ಲಿರುವ 11,133 ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿಲಾಗಿದೆ. 11,133ರಲ್ಲಿ ನಗರಸಭೆ, ಪುರಸಭೆ, ಮತ್ತು ಪಟ್ಟಣ ಪಂಚಾಯತಿಯಲ್ಲಿ 5,533 ಪೌರ ಕಾರ್ಮಿಕರು ಮತ್ತು ಕಾರ್ಪೊರೇಷನ್‌ಗಳಿಂದ 1927 ಪೌರ ಕಾರ್ಮಿಕರು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ 3670 ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಚಿವ ಸಂಪುಟ ಸೋಮವಾರ ಒಪ್ಪಿಗೆ ಕೊಟ್ಟಿದೆ ಎಂದರು.

ರಾಜ್ಯದಲ್ಲಿ ಪೌರ ಕಾರ್ಮಿಕರ ಹೋರಾಟದ ಹಿಂದೆ ಪೌರ ಕಾರ್ಮಿಕರ ಕುಟುಂಬದಲ್ಲಿ ಜನಿಸಿದ ಬೆಂಗಳೂರಿನಲ್ಲಿ ಶಾಸಕರಾಗಿದ್ದ ಐಪಿಡಿ ಸಾಲಪ್ಪನವರು ಇದ್ದರು. ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಹೋರಾಟ ಮಾಡಿದ್ದರು. ಆದರೆ, ಇದುವರೆಗೂ ಆಗಿರಲಿಲ್ಲ. ಅವರನ್ನು ಮುಖ್ಯಮಂತ್ರಿಗಳ ಬಳಿ ಪೌರ ಕಾರ್ಮಿಕರನ್ನು ಕರೆದುಕೊಂಡು ಹೋಗಿ ವಿನಂತಿ ಮಾಡಿದಾಗ ಪರಿಶೀಲನೆ ಮಾಡ್ತಿವಿ ಎಂದು ಸಕಾರಾತ್ಮಕವಾಗಿ ಸ್ಪಂದಿಸಿದ್ದರು ಎಂದರು.

ಸೋಮವಾರ 11,133 ಮಂದಿ ಪೌರ ಕಾರ್ಮಿಕರನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿದ್ದೇವೆ. ಬೆಂಗಳೂರಿಗೆ ಸೀಮಿತವಾಗಿ ಹೋರಾಟಗಳು ಆಗಬಾರದು. ನಾನು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವ ಸಂಪುಟ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕಾರಜೋಳ ಹೇಳಿದರು.

ವಿಧಾನಸಭೆಯಲ್ಲಿ ಪ್ರಸ್ತಾಪವಾದ ಇತರೆ ವಿಚಾರಗಳು

Karnataka Assembly Session 2022: ರಾಯಚೂರು ಭಾಗದ ಕೃಷಿಕರ ಬಹುಕಾಲದ ಬೇಡಿಕೆಯ ಎನ್‌ಆರ್‌ಬಿಸಿ -5ಎ ಕಾಲುವೆ ಯೋಜನೆ (NRBC 5-A canal project) ಅನುಷ್ಠಾನ ಸಾಧ್ಯ ಇಲ್ಲ ಎಂದು ಸರ್ಕಾರ ಇಂದು ವಿಧಾನಸಭೆಗೆ ತಿಳಿಸಿದೆ. ಯಾಕೆ ಏನು ಎಂಬ ವಿವರ ಇಲ್ಲಿದೆ ಗಮನಿಸಿ. NRBC 5-A canal project: ಎನ್‌ಆರ್‌ಬಿಸಿ-5ಎ ಕಾಲುವೆ ನಿರ್ಮಾಣ ಸಾಧ್ಯ ಇಲ್ಲ!; ಸರ್ಕಾರ ಕಡ್ಡಿಮುರಿದಂತೆ ಹೀಗೇಕೆ ಹೇಳಿತು? ವಿವರ ಇಲ್ಲಿದೆ

Karnataka Assembly Session 2022: ವಿಧಾನ ಸಭೆ ಕಲಾಪದಲ್ಲಿ ಇಂದು ದಾಸರಹಳ್ಳಿ ಪೀಣ್ಯ ಟ್ರಾಫಿಕ್‌ ಜಾಮ್‌ (Peenya Flyover Traffic Jam) ವಿಚಾರ ಪ್ರಸ್ತಾಪವಾಗಿದೆ. ಹೆದ್ದಾರಿಯಲ್ಲಿ ಟೋಲ್‌ ಶುಲ್ಕ ಸಂಗ್ರಹ ಮಾಡಿಕೊಂಡು ಸಂಚಾರ ದಟ್ಟಣೆ ನಿರ್ವಹಿಸದೇ ಇದ್ದರೆ ಹೇಗೆ ಎಂದು ಪ್ರಶ್ನಿಸಿದ ಶಾಸಕ ಮಂಜುನಾಥ್‌. ಸರ್ಕಾರದ ಉತ್ತರ ಏನಿತ್ತು ಗಮನಿಸಿ… Peenya Flyover Traffic Jam: ಟ್ರಾಫಿಕ್‌ ಜಾಮ್‌ ಆದ್ರೂ ಟೋಲ್‌ ವಸೂಲಿ ಸರಿಯಾ? ಶಾಸಕರ ಪ್ರಶ್ನೆ; ಸರ್ಕಾರದ ಉತ್ತರ ಏನಿತ್ತು ಗಮನಿಸಿ..

Karnataka Assembly Session 2022: ವಿಧಾನಸಭೆಯ ಇಂದಿನ ಕಲಾಪದ ನಡುವೆ, ಜಿಮ್‌ಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಪ್ರೊಟೀನ್‌ ಪೌಡರ್‌ (Protein Powder) ವಿಚಾರ ಗಮನಸೆಳೆದಿದೆ. ಶಾಸಕ ಸತೀಶ್‌ ರೆಡ್ಡಿ ಈ ವಿಷಯ ಪ್ರಸ್ತಾಪಿಸಿದ್ದು, ಆರು ನಿಮಿಷ ಚರ್ಚೆಗೆ ಕಾರಣವಾಯಿತು. ಅದರ ವಿವರ ಇಲ್ಲಿದೆ. Protein Powder: ದಪ್ಪ ಇರೋರು ಪ್ರೊಟೀನ್‌ ಪೌಡರ್‌ನಿಂದ 30 ದಿನದಲ್ಲಿ ಸಣ್ಣ ಆಗೋದು ಸಾಧ್ಯವಾ?

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ. ಮೀಸಲಾತಿಗೆ ಸಂಬಂಧಿಸಿದಂಯತೆ ತಾವು ಕೇಳಿದ ಪ್ರಶ್ನೆಗೆ ಸಿಎಂ ಬೊಮ್ಮಾಯಿ ನೀಡಿದ ಉತ್ತರಕ್ಕೆ ತೃಪ್ತರಾಗದ ಯತ್ನಾಳ್‌, ಪ್ರತಿಭಟನೆಗೆ ಮುಂದಾದರು. Panchamasali Reservation: ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಸದನದ ಬಾವಿಗಿಳಿದ ಯತ್ನಾಳ್‌, ಹೆಬ್ಬಾಳ್ಕರ್!‌

IPL_Entry_Point