Kodagu Tourism: ಕೊಡಗಿನ ಪ್ರವಾಸೋದ್ಯಮ ಬಗ್ಗೆ ನಿಖರ ಮಾಹಿತಿ ಬೇಕೆ, ಬಂತು ಸರ್ಕಾರದ ಎಕ್ಸ್‌ಪ್ಲೋರ್‌ ಕೊಡಗು ವೆಬ್‌ಸೈಟ್‌
ಕನ್ನಡ ಸುದ್ದಿ  /  ಕರ್ನಾಟಕ  /  Kodagu Tourism: ಕೊಡಗಿನ ಪ್ರವಾಸೋದ್ಯಮ ಬಗ್ಗೆ ನಿಖರ ಮಾಹಿತಿ ಬೇಕೆ, ಬಂತು ಸರ್ಕಾರದ ಎಕ್ಸ್‌ಪ್ಲೋರ್‌ ಕೊಡಗು ವೆಬ್‌ಸೈಟ್‌

Kodagu Tourism: ಕೊಡಗಿನ ಪ್ರವಾಸೋದ್ಯಮ ಬಗ್ಗೆ ನಿಖರ ಮಾಹಿತಿ ಬೇಕೆ, ಬಂತು ಸರ್ಕಾರದ ಎಕ್ಸ್‌ಪ್ಲೋರ್‌ ಕೊಡಗು ವೆಬ್‌ಸೈಟ್‌

Kodagu Tourism website: ಕೊಡಗಿನ ಪ್ರವಾಸೋದ್ಯಮದ ಕುರಿತಾಗಿ ನಿಖರ ಮಾಹಿತಿ ನೀಡುವ ಎಕ್ಸ್‌ಪ್ಲೋರ್‌ ಕೊಡಗು ವೆಬ್‌ಸೈಟ್‌ ಅನ್ನು ಪ್ರವಾಸೋದ್ಯಮ ಇಲಾಖೆ ರೂಪಿಸಿ ಲೋಕಾರ್ಪಣೆಗೊಳಿಸಿದೆ.

ಕೊಡಗಿನ ಪ್ರವಾಸೋದ್ಯಮದ ಮಾಹಿತಿ ಕೊಡುವ  ಎಕ್ಸ್‌ಪ್ಲೋರ್‌ ಕೊಡಗು ಈಗ ಲಭ್ಯ.
ಕೊಡಗಿನ ಪ್ರವಾಸೋದ್ಯಮದ ಮಾಹಿತಿ ಕೊಡುವ ಎಕ್ಸ್‌ಪ್ಲೋರ್‌ ಕೊಡಗು ಈಗ ಲಭ್ಯ.

Kodagu Tourism website: ಕರ್ನಾಟಕದ ಕಾಶ್ಮೀರ ಕೊಡಗಿಗೆ ಪ್ರವಾಸಕ್ಕೆ ಬರುವವ್ ಸಂಖ್ಯೆ ಕಡಿಮೆ ಏನಿಲ್ಲ. ಕರ್ನಾಟಕ ಮಾತ್ರವಲ್ಲದೇ ದಕ್ಷಿಣ ಹಾಗೂ ಉತ್ತರಭಾರತದ ರಾಜ್ಯಗಳಿಂದಲೂ ವರ್ಷವಿಡೀ ಪ್ರವಾಸಿಗರು ಕೊಡಗಿಗೆ ಬರುವುದುಂಟು. ಇಲ್ಲಿನ ಹವಾಮಾನ, ಬೆಟ್ಟಗುಡ್ಡಗಳು, ಅರಣ್ಯ, ಹಸಿರು ವಾತಾವರಣ ಇದಕ್ಕೆ ಕಾರಣ. ಪ್ರವಾಸಿಗರು ಕೊಡಗಿಗೆ ಬಂದರೆ ನಿಖರ ಮಾಹಿತಿಯನ್ನು ನೀಡುವ ಪ್ರವಾಸೋದ್ಯಮ ವೆಬ್‌ಸೈಟ್‌ ಇರಲಿಲ್ಲ. ಇದರಿಂದ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯೇ ಸಮಗ್ರ ಮಾಹಿತಿ ನೀಡುವ ವೆಬ್‌ಸೈಟ್‌ ರೂಪಿಸಿದೆ. ಕೊಡಗು ಪ್ರಯಾಣ ಅನುಭವಗಳಿಗಾಗಿ ವಿಶ್ವಾಸಾರ್ಹ ಮೂಲ. ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‍ಸೈಟ್ explorekodagu.com ಅನ್ನು ಜನರ ಬಳಕೆಗೆ ಸಮರ್ಪಣೆ ಮಾಡಲಾಗಿದೆ.

ಕೊಡಗು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಕೊಡಗು ಡಿಸಿ ವೆಂಕಟರಾಜಾ ಅವರು ಜಿಲ್ಲೆಯ ಮುಖಾಂತರ ಕೊಡಗು ಪ್ರವಾಸೋದ್ಯಮದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯ ಸಮಗ್ರ ಮಾಹಿತಿ ಹೊಂದಿರುವ ಅಧಿಕೃತ ವೆಬ್‍ಸೈಟ್ ರೂಪಿಸಿದ್ದು. ವೆಬ್‌ಸೈಟ್‌ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ ಬಿಡುಗಡೆ ಮಾಡಿದರು. ಅಲ್ಲದೇ ಕೊಡಗು ಜಿಲ್ಲೆಯ ಸಮಗ್ರ ಮಾಹಿತಿ ಹೊಂದಿರುವ ಅಧಿಕೃತ ಫೇಸ್‌ಬುಕ್‌ ಹಾಗೂ ಇನ್‌ಸ್ಟಾ ಖಾತೆಗಳನ್ನು ಉದ್ಘಾಟಿಸಲಾಯಿತು.

ಏನಿದೆ ವೆಬ್‌ಸೈಟ್‌ನಲ್ಲಿ

ಈ ವೆಬ್‍ಸೈಟ್‍ನಲ್ಲಿ ಕೊಡಗಿನ ಸುಂದರ ಪ್ರವಾಸಿ ತಾಣಗಳನ್ನು ಅತ್ಯುತ್ತಮವಾಗಿ ಪ್ರದರ್ಶಿಸಲು ಮೀಸಲಾಗಿರುವ ಸಮಗ್ರ ಆನ್‍ಲೈನ್ ವೇದಿಕೆಯಾಗಿದೆ ಎಂದು ಘೋಷಿಸಲು ಹೆಮ್ಮೆ ಸಂಗತಿಯಾಗಿದೆ.

ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ, ವಿಶ್ವಾಸಾರ್ಹ ಪ್ರಯಾಣ ಅನುಭವವನ್ನು ಖಚಿತಪಡಿಸಿಕೊಳ್ಳಲು ವೆಬ್‍ಸೈಟ್‍ನಲ್ಲಿ ಅಧಿಕೃತವಾಗಿ ನೋಂದಾಯಿತ ಮತ್ತು ಪ್ರಮಾಣೀಕೃತ ಹೋಂಸ್ಟೇಗಳು, ರೆಸಾರ್ಟ್‍ಗಳು, ರೆಸ್ಟೋರೆಂಟ್‍ಗಳು, ಪ್ರವಾಸಿ ಮಾರ್ಗದರ್ಶಿಗಳು, ಟ್ಯಾಕ್ಸಿ ನಿರ್ವಾಹಕರು ಮತ್ತು ಜಿಲ್ಲೆಯ ಅಧೀಕೃತ ಕಾರ್ಯ ಕ್ರಮಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ.

ಜಿಲ್ಲೆಯ ನೋಂದಾಯಿತ ಹೋಂಸ್ಟೇಗಳು ಮತ್ತು ರೆಸಾರ್ಟ್‍ಗಳು ಕೊಡಗು ಪ್ರವಾಸೋದ್ಯಮ ಕಚೇರಿಯಲ್ಲಿ ಅಧಿಕೃತವಾಗಿ ನೋಂದಾಯಿಸಲಾದ ಹೋಂ-ಸ್ಟೇಗಳ ವಿವರಗಳನ್ನು ನೀಡಲಾಗಿದೆ. ಇದು ಪ್ರವಾಸಿಗರಿಗೆ ವಿಶ್ವಾಸಾರ್ಹ ಮತ್ತು ಸುರಕ್ಷಿತ ಅನುಭವವನ್ನು ಖಾತರಿಪಡಿಸಲಿದೆ.

FSSAI ಪ್ರಮಾಣೀಕೃತ ರೆಸ್ಟೋರೆಂಟ್ಗಳು: ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪ್ರಮಾಣೀಕರಿಸಿದ ರೆಸ್ಟೋರೆಂಟ್ಗಳ ವಿವರವನ್ನು ಮಾತ್ರ ವೈಶಿಷ್ಟ್ಯಗೊಳಿಸಲಾಗುತ್ತದೆ.

ಅನುಮೋದಿತ ಪ್ರವಾಸಗಳು

ಪ್ರವಾಸೋದ್ಯಮ ನೀತಿ 2025-29 ಅಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲ್ಪಟ್ಟ 778 ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಗುರುತಿಸಿದ 23 ಪ್ರವಾಸಿ ತಾಣಗಳನ್ನು ಹಾಗೂ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಕೊಡಗು ಜಿಲ್ಲೆಯ ಮುಖಾಂತರ ಗುರುತಿಸಿರುವ ಪ್ರವಾಸಿ ತಾಣಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ.

ಪ್ರವಾಸಿ ಮಾಹಿತಿ: explorekodagu.com ಅಧಿಕೃತ ವೆಬ್‍ಸೈಟ್ ಕೊಡಗು ಜಿಲ್ಲೆಯಲ್ಲಿ ಭೇಟಿ ನೀಡಬೇಕಾದ ಪ್ರವಾಸಿ ತಾಣಗಳ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ನೀಡುತ್ತದೆ. ಪ್ರಯಾಣಿಕರು ತಮ್ಮ ಪ್ರವಾಸವನ್ನು ಆಯೋಜಿಸಲು ಅಗತ್ಯವಿರುವ ಎಲ್ಲಾ ವಿವರಗಳನ್ನು ಹೊಂದಿದೆ.

ಪ್ರವಾಸಿ ಮಾರ್ಗದರ್ಶಿಗಳು

ಪ್ರವಾಸೋದ್ಯಮವನ್ನು ಅಭಿವೃದ್ಧಿ ಹಾಗೂ ಪ್ರಚಾರ ಪಡಿಸುವ ಉದ್ದೇಶದಿಂದ ಜಿಲ್ಲೆಯ ಪ್ರವಾಸಿ ತಾಣಗಳ ಐತಿಹಾಸಿಕ, ಧಾರ್ಮಿಕ, ಸಾಹಿತ್ಯಕ, ಸಾಂಸ್ಕøತಿಕ ಹಾಗೂ ಕಲಾವೈವಿಧ್ಯತೆಗಳನ್ನು ಒಳಗೊಂಡ ಸೃಜನಶೀಲತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದೇಶ/ವಿದೇಶಿ ಪ್ರವಾಸಿಗರಿಗೆ ನೀಡಲು ಅಂದರೆ ‘ಒಂದು ರಾಜ್ಯ-ಹಲವು ವಿಸ್ಮಯಗಳು’ ಎಂಬುದನ್ನು ಪರಿಚಯಿಸುವುದರ ಮೂಲಕ ಜಿಲ್ಲೆಯ ಸಮಗ್ರತೆಯ ಬಗ್ಗೆ ವಿವಿಧ ಆಯಾಮಗಳ ಮೂಲಕ ಪ್ರವಾಸಿಗರನ್ನು ಕೊಡಗು ಜಿಲ್ಲೆಗೆ ಸೆಳೆಯಲು ಸ್ಥಳೀಯ ಪ್ರವಾಸಿ ಸಂಪನ್ಮೂಲಗಳ ಬಗ್ಗೆ ಜ್ಞಾನ ಮತ್ತು ಅನುಭವವಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ ಪ್ರವಾಸೋದ್ಯಮ ಕೇಂದ್ರ ಕಚೇರಿಯಿಂದ ತರಭೇತಿ ನೀಡಲಾದ ಪ್ರವಾಸಿ ಮಾರ್ಗದರ್ಶಿಗಳ ಪಟ್ಟಿಯನ್ನು ಮಾತ್ರ ಪ್ರಕಟಿಸಲಾಗುವುದು.

ಅನುಮೋದಿತ ಟೂರ್ ಅಂಡ್ ಟ್ರಾವೆಲ್ ಆಪರೇಟರ್‌ಗಳು

ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಾರಿಗೆ ಆಯ್ಕೆಗಳನ್ನು ನೀಡುವ ಪ್ರಮುಖ ಪ್ರಯಾಣ ಮಾರ್ಗಸೂಚಿಗಳನ್ನು ಪಾಲಿಸುವ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿರುವ ಅನುಮೋದಿತ ಟೂರ್ ಅಂಡ್ ಟ್ರಾವೆಲ್ ಆಪರೇಟರ್‌ಗಳ ವಿವರಗಳನ್ನು ನೀಡಲಾಗಿದೆ.

ಅಧಿಕೃತ ಕಾರ್ಯಕ್ರಮಗಳು

ಕೊಡಗು ಜಿಲ್ಲಾಧಿಕಾರಿಗಳಿಂದ ಅನುಮೋದಿಸಲಾದ ಕಾರ್ಯಕ್ರಮಗಳನ್ನು ಮಾತ್ರ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗುತ್ತದೆ, ಪ್ರಚಾರ ಮಾಡಲಾದ ಕಾರ್ಯಕ್ರಮಗಳ ವಿವರವು ಗುಣಮಟ್ಟವನ್ನು ಖಾತರಿಪಡಿಸುತ್ತದೆ.

ಕಸ್ಟಮೈಸ್ ಗೊಳಿಸಬಹುದಾದ ಪಟ್ಟಿಗಳು: ಜಿಲ್ಲೆಯ ಹೋಂಸ್ಟೇಗಳು, ರೆಸಾರ್ಟ್‍ಗಳು, ರೆಸ್ಟೋರೆಂಟ್‍ಗಳು ಹಾಗೂ ಇತರೆ ಪ್ರವಾಸಿ ಉತ್ಪನ್ನಗಳನ್ನು ಮಾಲೀಕರ ನಂಬರ್ ಇತರೇ ಅಗತ್ಯ ವಿವರಗಳನ್ನು ತಮ್ಮ ಹಂತದಲ್ಲಿ ವೆಬ್‍ಸೈಟ್‍ಗೆ ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ನಂತರ, ಬದಲಾವಣೆಗಳನ್ನು ಪ್ರವಾಸೋದ್ಯಮ ಇಲಾಖೆಯು ವೆಬ್‍ಸೈಟ್‍ನಲ್ಲಿ ಪ್ರದರ್ಶಿಸುವ ಮೊದಲು ಇಲಾಖೆಯಿಂದ ಪರಿಶೀಲಿಸಿ ವಿವರಗಳನ್ನು ಅನುಮೋದಿಸಲಾಗುತ್ತದೆ.

ಕೊಡಗಿನ ಪ್ರವಾಸಿಗರು ಮತ್ತು ಸ್ಥಳೀಯ ವ್ಯವಹಾರಗಳಿಗೆ ವಿಶ್ವಾಸಾರ್ಹ, ಪಾರದರ್ಶಕ ಮತ್ತು ಸುಸಂಘಟಿತ ಸಂಪನ್ಮೂಲವನ್ನು ಒದಗಿಸುವ ಗುರಿಯನ್ನು ಕರ್ನಾಟಕ ಸರ್ಕಾರ ಹೊಂದಿದೆ, ಎಲ್ಲಾ ಪ್ರವಾಸಿಗರಿಗೆ ಆನಂದದಾಯಕ ಮತ್ತು ಸುರಕ್ಷಿತ ಭೇಟಿಯನ್ನು ಖಚಿತಪಡಿಸಿಕೊಳ್ಳುವಾಗ ಸುಸ್ಥಿರ, ಜವಾಬ್ದಾರಿಯುತ ಹಾಗೂ ಪರಿಸರ ಪ್ರವಾಸೋದ್ಯಮ ವ್ಯವಸ್ಥೆಯನ್ನು ಬೆಳೆಸಲು ವೆಬ್‌ಸೈಟ್‌ ಸಹಕಾರಿಯಾಗಿದೆ ಎನ್ನುವುದು ಕೊಡಗು ಡಿಸಿ ವೆಂಕಟರಾಜ ಅವರು ನೀಡುವ ವಿವರಣೆ.

Whats_app_banner