ಕನ್ನಡ ಸುದ್ದಿ  /  Karnataka  /  Pm Narendra Modi Inaugurates The Kr Pura Whitefield Metro Line In Bengaluru, Stations And Other Details

Whitefield metro: ಪ್ರಧಾನಿ ಉದ್ಘಾಟಿಸಲಿರುವ ವೈಟ್‌ಫೀಲ್ಡ್‌- ಕೆಆರ್.ಪುರಂ ಮೆಟ್ರೋ ಮಾರ್ಗದಿಂದ ಯಾರಿಗೆ ಅನುಕೂಲ? ಎಲ್ಲೆಲ್ಲಿ ನಿಲ್ದಾಣಗಳಿವೆ?

Whitefield-KR pura metro Line: ಸುಮಾರು 13.71 ಕಿ.ಮೀ. ನಿಲ್ದಾಣದ ಈ ಮೆಟ್ರೋ ರೈಲು ಮಾರ್ಗದಿಂದಾಗಿ ಟ್ರಾಫಿಕ್‌ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದ್ದು, ಮುಖ್ಯವಾಗಿ ಐಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ವೈಟ್‌ಫೀಲ್ಡ್‌ ಮೆಟ್ರೋ ಮಾರ್ಗದಿಂದ ಯಾರಿಗೆ ಅನುಕೂಲ? ಎಲ್ಲೆಲ್ಲಿ ನಿಲ್ದಾಣಗಳಿವೆ?
ವೈಟ್‌ಫೀಲ್ಡ್‌ ಮೆಟ್ರೋ ಮಾರ್ಗದಿಂದ ಯಾರಿಗೆ ಅನುಕೂಲ? ಎಲ್ಲೆಲ್ಲಿ ನಿಲ್ದಾಣಗಳಿವೆ?

ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿಯವರು ವೈಟ್‌ಫೀಲ್ಡ್‌- ಕೆಆರ್‌ ಪುರಂ ಮೆಟ್ರೋ ಮಾರ್ಗವನ್ನು ಉದ್ಘಾಟನೆ ಮಾಡಲಿದ್ದಾರೆ. ಸುಮಾರು 13.71 ಕಿ.ಮೀ. ನಿಲ್ದಾಣದ ಈ ಮೆಟ್ರೋ ರೈಲು ಮಾರ್ಗದಿಂದಾಗಿ ಟ್ರಾಫಿಕ್‌ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದ್ದು, ಮುಖ್ಯವಾಗಿ ಐಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ವೈಟ್‌ಫೀಲ್ಡ್‌- ಕೆಆರ್‌ ಪುರಂ ಮೆಟ್ರೋದಿಂದಾಗಿ ಪ್ರಯಾಣದ ಅವಧಿ ಕಡಿಮೆಯಾಗಲಿದೆ. ಈ ಮೆಟ್ರೋ ನಿಲ್ದಾಣಗಳಲ್ಲಿ ಜನರು ಕಾರು ಅಥವಾ ಬೈಕ್‌ ಪಾರ್ಕ್‌ ಮಾಡಿ ಉದ್ಯೋಗಕ್ಕೆ ಅಥವಾ ಇತರೆ ಕೆಲಸಗಳಿಗೆ ತೆರಳಬಹುದಾಗಿದೆ. ಹದಿಮೂರು ಕಿ.ಮೀ.ಯನ್ನು ಕೇವಲ 13 ನಿಮಿಷದಲ್ಲಿ ಪ್ರಯಾಣಿಸುವ ಅವಕಾಶ ಜನರಿಗೆ ದೊರಕಲಿದೆ.

ಮುಂದಿನ ಹಂತಗಳಲ್ಲಿ ಕೆಆರ್‌ ಪುರಂ ಮೆಟ್ರೋ ನಿಲ್ದಾಣಕ್ಕೆ ಬೈಯಪ್ಪನಹಳ್ಳಿ ಮೆಟ್ರೋ ಕನೆಕ್ಟ್‌ ಆಗಲಿದೆ. ಇದು ಕೆಲವು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇಂದು ಪ್ರಧಾನಿ ನರೇಂದ್ರ ಮೋದಿಯವರು ಹೊಸ ಮೆಟ್ರೋ ಮಾರ್ಗ ಉದ್ಘಾಟಿಸಿ ವೈಟ್‌ಫೀಲ್ಡ್‌ನಿಂದ ಕೆಆರ್‌ ಪುರದವರೆಗೆ ಮೆಟ್ರೋದಲ್ಲಿಯೇ ಪ್ರಯಾಣಿಸಲಿದ್ದಾರೆ.

ವೈಟ್‌ಫೀಲ್ಡ್‌- ಕೆಆರ್‌ ಪುರ ಮೆಟ್ರೋವು ಈ ಎರಡು ಪ್ರದೇಶಗಳ ನಡುವೆ ಇರುವ ಹಲವು ಜನರಿಗೆ ಅನುಕೂಲವಾಗಲಿದೆ. ವೈಟ್‌ಫೀಲ್ಡ್‌, ಚನ್ನಸಂದ್ರ, ಕಾಡುಗೋಡಿ ಟ್ರೀಪಾರ್ಕ್‌, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯಾಸಾಯಿ ಆಸ್ಪತ್ರೆ, ನಲ್ಲೂರಹಳ್ಳಿ, ಕುಂದಹಳ್ಳಿ, ಸೀತಾರಾಮನಪಾಳ್ಯ, ಹೂಡಿ, ಗರುಡಾಚಾರ್‌ ಪಾಳ್ಯ, ಸಿಂಗಯ್ಯನಪಾಳ್ಯ, ಕೆಆರ್‌ಪುರದಲ್ಲಿ ಮೆಟ್ರೋ ನಿಲ್ದಾಣಗಳಿವೆ. ಮುಂದೆ ಈ ರೈಲು ಮಾರ್ಗವು ಬೈಯಪ್ಪನಹಳ್ಳಿಗೆ ಸಂಪರ್ಕಗೊಂಡರೆ ನಗರದ ಎಲ್ಲರಿಗೂ ಅನುಕೂಲವಾಗಲಿದೆ.

ರೈಲ್ವೆ ನಿಲ್ದಾಣಗಳ ಸುತ್ತಾ ಇರುವ ಸರ್ವೀಸ್‌ ರಸ್ತೆಗಳ ಎರಡು ಬದಿಗಳಲ್ಲಿ ಬಿಎಂಟಿಸಿ ಬಸ್‌ ಹತ್ತಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿಲ್ದಾಣದಲ್ಲಿಯೂ ಎಂಟು ಎಸ್ಕಲೇಟರ್‌ಗಳು, ನಾಲ್ಕು ಎಲಿವೇಟರ್‌ಗಳು, ಎಂಟು ಮೆಟ್ಟಿಲು ದಾರಿಗಳು ಇವೆ.

ಎಲ್ಲಾ ನಿಲ್ದಾಣಗಳಲ್ಲಿಯೂ ಕ್ಯೂಆರ್‌ ಕೋಡ್‌ ವ್ಯಸ್ಥೆ ಮಾಡಲಾಗಿದೆ. ವಿಶೇಷ ಚೇತನರಿಗೆ ಎಲ್ಲಾ ನಿಲ್ದಾಣಗಳಲ್ಲಿಯೂ ಪ್ರಯಾಣಕ್ಕೆ ಸೂಕ್ತವಾಗುವಂತಹ ವ್ಯವಸ್ಥೆ ಮಾಡಲಾಗಿದೆ. ಕೆಆರ್‌ಪುರ, ವೈಟ್‌ಫೀಲ್ಡ್‌ ನಿಲ್ದಾಣಳಿಂದ ನೇರವಾಗಿ ರೈಲ್ವೆ ನಿಲ್ದಾಣಗಳಿಗೆ ಸಂಪರ್ಕಿಸಲು ಮೇಲ್ಸೇತುವೆ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಮೆಟ್ರೋ ರೈಲ್ವೆ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್‌ಗೆ ಸೀಮಿತ ವ್ಯವಸ್ಥೆ ಇದೆ. ಆದರೆ, ಕೆಆರ್‌ಪುರ ಮತ್ತು ವೈಟ್‌ಫೀಲ್ಡ್‌ ನಿಲ್ದಾಣಗಳಲ್ಲಿ ಕಾರು ಮತ್ತು ಬೈಕ್‌ ಪಾರ್ಕಿಂಗ್‌ಗೆ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ.

ವೈಟ್ ಫೀಲ್ಡ್ – ಕೆ.ಆರ್.ಪುರಂ ನಡುವಿನ ವೈಟ್‌ಫೀಲ್ಡ್‌ ಕಾಡುಗೋಡಿ ಮೆಟ್ರೋ ನಿಲ್ದಾಣಕ್ಕೆ ಚಾಲನೆ ನೀಡಲು ಮೋದಿ ಆಗಮಿಸುವುದರಿಂದ ಇಂದು ಹನ್ನೊಂದು ಗಂಟೆಯಿಂದಲೇ ಬೆಂಗಳೂರಿನ ವಿವಿಧೆಡೆ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ.

ವರ್ತೂರು ಕೋಡಿಯಿಂದ ಹೋಫ್ ಫಾರಂ ಜಂಕ್ಷನ್ ಮೂಲಕ ಕನ್ನಮಂಗಲ ಗೇಟ್ ವರೆಗೆ, ಚನ್ನಸಂದ್ರದಿಂದ ಹೋಫ್ ಫಾರಂ ಮೂಲಕ ಹೂಡಿ ಸರ್ಕಲ್ ವರೆಗೆ ಹಾಗೂ ಕುಂದಲಹಳ್ಳಿ ರಸ್ತೆಯಿಂದ ವೈದೇಹಿ ಅಸ್ಪತ್ರೆ ಮೂಲಕ ಹೋಫ್ ಫಾರಂ ಜಂಕ್ಷನ್ ವರೆಗೆ ಸಂಚಾರ ನಿರ್ಬಂಧಿಸಲಾಗಿದೆ.

ಬೆಂಗಳೂರಿನಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ ವೈಟ್‌ಫೀಲ್ಡ್‌ನ ನಮ್ಮ ಮೆಟ್ರೋ ರೈಲು ಮಾರ್ಗ ಉದ್ಘಾಟನೆ ಮಾಡಲಿದ್ದಾರೆ. ಮೊದಲಿಗೆ ವೈಟ್‌ಫೀಲ್ಡ್‌ ಮೆಟ್ರೋ ರೈಲು ಮಾರ್ಗವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ನಂತರ ದಾವಣಗೆರೆಯಲ್ಲಿ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

IPL_Entry_Point