ವಾಣಿಜ್ಯ ನಗರಿ ಜನತೆಗೆ ಗುಡ್ನ್ಯೂಸ್; ಪುಣೆ-ಹುಬ್ಬಳ್ಳಿ ವಂದೇ ಭಾರತ್ ರೈಲಿಗೆ ಈ ದಿನದಂದು ಮೋದಿ ಚಾಲನೆ; ಸಮಯ ಇಲ್ಲಿದೆ
Pune-Hubli Vande Bharat Express: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 15 ರಂದು ಜಾರ್ಖಂಡ್‌ನ ಜೆಮ್‌ಶೆಡ್‌ಪುರದಿಂದ ಮಹಾರಾಷ್ಟ್ರದ ಪುಣೆಯಿಂದ ಕರ್ನಾಟಕದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಉದ್ಘಾಟಿಸಲಿದ್ದಾರೆ.
ಬೆಂಗಳೂರು: ವಾಣಿಜ್ಯ ನಗರಿ ಹುಬ್ಬಳ್ಳಿ ಜನತೆಗೆ ಸಿಹಿ ಸುದ್ದಿ ಸಿಕ್ಕಿದ್ದು, ಸೆಪ್ಟೆಂಬರ್ 15ರಂದು ಹುಬ್ಬಳ್ಳಿ ಮತ್ತು ಪುಣೆ ನಡುವೆ ವಂದೇ ಭಾರತ್ ರೈಲಿನ ಸೇವೆ ಆರಂಭಗೊಳ್ಳಲಿದೆ. ಪ್ರಧಾನಿ ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 15 ರಂದು ಜಾರ್ಖಂಡ್‌ನ ಜೆಮ್ಶೆಡ್ಪುರದಿಂದಲೇ ವರ್ಚುವಲ್ ಸಮಾರಂಭದ ಮೂಲಕ ಮಹಾರಾಷ್ಟ್ರದ ಪುಣೆಯಿಂದ ಕರ್ನಾಟಕದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಉದ್ಘಾಟಿಸಲಿದ್ದಾರೆ.
ಅಂದು ಪ್ರಧಾನಿ ಮೋದಿ ಅವರು ಕೇವಲ ಈ ರೈಲ್ವೇ ಸಂಚಾರಕ್ಕೆ ಮಾತ್ರವಲ್ಲ, ದೇಶದ ವಿವಿಧ ನಿಲ್ದಾಣಗಳಲ್ಲಿ ಸಂಚರಿಸುವ ವಂದೇ ಭಾರತ್ ರೈಲುಗಳ ಸೇವೆಗೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ. ಈ ಭಾಗದಲ್ಲಿ ಸಂಚಾರ ನಡೆಸುವ 2ನೇ ವಂದೇ ಭಾರತ್ ರೈಲ್ವೆ ಸಂಚಾರ ಇದಾಗಿದೆ. ಬೆಂಗಳೂರು-ಧಾರವಾಡ ನಡುವೆ ಮೊದಲು ಈ ರೈಲಿನ ಸೇವೆಯನ್ನು ಹೊಂದಿದೆ. ಈ ಮಹತ್ವದ ಬೆಳವಣಿಗೆ ಕುರಿತು ಕೇಂದ್ರ ರೈಲ್ವೆ ಪುಣೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಮ್ಪಾಲ್ ಬರ್ಪಗ್ಗ ಹೇಳಿದ್ದಾರೆ.
ಸಮಯದ ವಿವರ ಇಲ್ಲಿದೆ
ಇದು ಇಂದು (ಸೆಪ್ಟೆಂಬರ್ 11 ರಂದು) ಬೆಳಿಗ್ಗೆ 11 ಗಂಟೆಗೆ ಪ್ರಾಯೋಗಿಕ ಚಾಲನೆ ಪಡೆದುಕೊಂಡಿದ್ದು, ರನ್ ಆಗಿದೆ. ವಾರದಲ್ಲಿ ಸೋಮವಾರ ಹೊರತುಪಡಿಸಿ ಉಳಿದ 6 ದಿನಗಳ ಕಾಲ ಪುಣೆ-ಹುಬ್ಬಳ್ಳಿ ನಡುವೆ ಸಂಚಾರ ಆಗಲಿದೆ. ಈಗಾಗಲೇ ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಿದ ಪ್ರಸ್ತಾವನೆ ಪ್ರಕಾರ, ಈ ವಂದೇ ಭಾರತ್ ರೈಲು ಬೆಳಗಿನ ಜಾವ 5 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಮಧ್ಯಾಹ್ನ 2.10ಕ್ಕೆ ಪುಣೆ ತಲುಪಲಿದೆ. ಮರಳಿ 2.40ಕ್ಕೆ ಪುಣೆಯಿಂದ ಹೊರಟು, ರಾತ್ರಿ 11.50ಕ್ಕೆ ಮರಳಿ ಎಸ್ ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.
2 ಸುತ್ತುಗಳಲ್ಲೂ 2 ಗಂಟೆಗಳ ಪ್ರಯಾಣ
ಈ ಕುರಿತು ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದು, ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಗೊಳ್ಳಲಿದೆ ಎಂದು ತಿಳಿಸಿದ್ದಾರೆ. ರೈಲ್ವೇ ಅಧಿಕಾರಿಗಳ ಪ್ರಕಾರ, ವೇಳಾಪಟ್ಟಿಯು ಪ್ರಯಾಣಿಕರಿಗೆ ಎರಡು ಜಂಕ್ಷನ್‌ಗಳ ನಡುವೆ ಅನುಕೂಲಕರವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಈ ಉಭಯ ನಗರಗಳ ನಡುವಿನ ಸಂಚಾರ ಅವಧಿ 8.5 ಗಂಟೆ ಇರಲಿದೆ.
ಪ್ರತಿ ಮಾರ್ಗದಲ್ಲೂ ಸುಮಾರು 8.5 ಗಂಟೆಗಳ ಕಾಲ ಅವಧಿ ಇರಲಿದ್ದು, ಪ್ರಯಾಣಿಕರು ಇಳಿದುಕೊಳ್ಳಲು ಮತ್ತು ರೈಲು ಹತ್ತಲು ಪುಣೆಯಲ್ಲಿ ಸ್ವಲ್ಪ ಹೊತ್ತು ನಿಲುಗಡೆಯಾಗುತ್ತದಷ್ಟೆ. ಏಕೆಂದರೆ ಎರಡೂ ರೌಂಡ್ಗಳ ಪ್ರಯಾಣದ ಅವಧಿಯನ್ನು 17 ಗಂಟೆಗಳಲ್ಲಿ ಪೂರ್ಣಗೊಳಿಸಲು ಗುರಿ ಹೊಂದಿದ್ದೇವೆ. ಏಕೆಂದರೆ ಉಳಿದ ರೈಲುಗಳ ಸಂಚಾರಕ್ಕೆ ಸಂಬಂಧಿಸಿ ಅಡಚಣೆ ಉಂಟಾಗಬಾರದು ಎಂದು ಅವರು ಹೇಳಿದ್ದಾರೆ.