ಒಂದೇ ದಿನದಲ್ಲಿ ಮೂರು ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿ ಬಂಧನ: ಇಂಜಿನಿಯರ್ ಪದವೀಧರನ ಮೇಲಿದೆ 90ಕ್ಕೂ ಹೆಚ್ಚು ಕೇಸ್
ಕನ್ನಡ ಸುದ್ದಿ  /  ಕರ್ನಾಟಕ  /  ಒಂದೇ ದಿನದಲ್ಲಿ ಮೂರು ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿ ಬಂಧನ: ಇಂಜಿನಿಯರ್ ಪದವೀಧರನ ಮೇಲಿದೆ 90ಕ್ಕೂ ಹೆಚ್ಚು ಕೇಸ್

ಒಂದೇ ದಿನದಲ್ಲಿ ಮೂರು ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿ ಬಂಧನ: ಇಂಜಿನಿಯರ್ ಪದವೀಧರನ ಮೇಲಿದೆ 90ಕ್ಕೂ ಹೆಚ್ಚು ಕೇಸ್

ಆನ್‌ಲೈನ್ ಗೇಮ್ ಹುಚ್ಚಿಗಾಗಿ ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಮೂರು ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂಜಿನಿಯರ್ ಪದವೀಧರನಾಗಿರುವ ಈತನ ಮೇಲೆ ಈವರೆಗೂ 90ಕ್ಕೂ ಹೆಚ್ಚು ಕೇಸ್ ದಾಖಲಾಗಿದೆ.

ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಮೂರು ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ
ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಮೂರು ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ (Canva)

ಬೆಂಗಳೂರು: ಒಂದೇ ದಿನದಲ್ಲಿ ಮೂರು ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂಜಿನಿಯರ್ ಪದವೀಧರನಾಗಿರುವ ಆಂಧ್ರಪ್ರದೇಶ ಕೆಂಪಲ್ಲಿ ಮೂಲದ ಶ್ರೀನಿವಾಸ್(35) ಬಂಧಿತ ಆರೋಪಿಯಾಗಿದ್ದು, ಈತನ ಮೇಲೆ ಈವರೆಗೂ 90ಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಮೈಸೂರಿನಲ್ಲಿ ವಾಸ ಮಾಡ್ತಿದ್ದ ಬಂಧಿತ ಆರೋಪಿ ಶ್ರೀನಿವಾಸ್, ವಿವಿಧ ಊರುಗಳಲ್ಲಿ ಕಳ್ಳತನ ಮಾಡಿ ಮೈಸೂರಿಗೆ ವಾಪಾಸ್ ಆಗ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆನ್ಲೈನ್ ಗೇಮ್ ಹುಚ್ಚಿಗಾಗಿ ಕಳ್ಳತನಕ್ಕೆ ಇಳಿದಿದ್ಧ ಆರೋಪಿ ಶ್ರೀನಿವಾಸ್, ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರನಾಗಿರನಾಗಿದ್ದಾನೆ. ಈತ ಆಂಧ್ರದಲ್ಲಿ ಸಿನೆಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡ್ತಿದ್ದ. 2008 ರಲ್ಲಿ ಸಿನೆಮಾ ಸೆಟ್‌ನಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡಿ ಮೊದಲು ಜೈಲು ಸೇರಿದ್ದ. ಈವರೆಗೆ ಆಂಧ್ರದಲ್ಲಿ ಇವನ ಮೇಲೆ 87 ಪ್ರಕರಣಗಳು ದಾಖಲಾಗಿವೆ. ಕಳ್ಳತನ, ಸೈಬರ್ ವಂಚನೆ ಸೇರಿದಂತೆ 87 ಪ್ರಕರಣಗಳು ದಾಖಲಾಗಿದ್ದು, ಕರ್ನಾಟಕದಲ್ಲಿ ಧಾರವಾಡ,ಬೀದರ್, ಜೆ ಬಿ ನಗರ ಸೇರಿದಂತೆ 4 ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಒಂದೇ ದಿನ ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ 3 ಮನೆಗಳಲ್ಲಿ ಕಳ್ಳತನ ಮಾಡಿದ್ದು, ಬಾಲಾಜಿ ಲೇ ಔಟ್‌ನಲ್ಲಿ 2 ಮನೆ,ಪಾರ್ವತಮ್ಮ ಲೇಔಟ್‌ನಲ್ಲಿ 1 ಮನೆಗಳ್ಳತನ ಮಾಡಿ ಪರಾರಿಯಾಗಿದ್ದ. ನಂತರ ಮೈಸೂರಿಗೆ ತೆರಳಿ ಖಾಸಗಿ ಪಿಜಿಯಲ್ಲಿ ತಂಗಿದ್ದ ಆರೋಪಿ ಶ್ರೀನಿವಾಸ್ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನವಾಗಿದೆ. ಬಂಧಿತನಿಂದ 9 ಲಕ್ಷ ಮೌಲ್ಯದ 145 ಗ್ರಾಂ ಚಿನ್ನಾಭರಣಗಳು ವಶಪಡಿಸಿಕೊಳ್ಳಲಾಗಿದೆ. ಈತನ ಸಹೋದರರು ಆಸ್ಟ್ರೇಲಿಯಾ, ಅಮೆರಿಕದಲ್ಲಿ ಇಂಜಿನಿಯರ್ಸ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in