Power Cut: ಬೆಂಗಳೂರು ನಗರದ ಹಲವೆಡೆ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ; ಈ ಪ್ರದೇಶಗಳಲ್ಲಿ ಇರಲ್ಲ ಕರೆಂಟ್
Bengaluru Power Cut: ಸಿಲಿಕಾನ್ ಸಿಟಿ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಇಂದಿನಿಂದ ಎರಡು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ತುರ್ತು ನಿರ್ವಹಣಾ ಕಾಮಗಾರಿ ನಡೆಯುವುದರಿಂದಾಗಿ ಕರೆಂಟ್ ಸಮಸ್ಯೆ ಆಗಲಿದೆ.

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು (ಜನವರಿ 28 ಮಂಗಳವಾರ) ಹಾಗೂ ನಾಳೆ (ಜನವರಿ 29 ಬುಧವಾರ) ವಿದ್ಯುತ್ ವ್ಯತ್ಯಯವಾಗಲಿದೆ. ವಿದ್ಯುತ್ ಪೂರೈಕೆಯಲ್ಲಿ ಗಂಟೆಗಳ ಕಾಲ ವ್ಯತ್ಯಯವಾಗಲಿದ್ದು, ಅಗತ್ಯ ಕೆಲಸಗಳನ್ನು ಯೋಜಿಸಿಕೊಂಡು ಮಾಡುವುದು ಉತ್ತಮ. 66/11ಕೆವಿ ಬಿಎಂಟಿಸಿ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 3 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಜನವರಿ 28 ರಂದು ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು ಇವು
ಯುಬಿ ಸಿಟಿ, ಐಟಿಸಿ ಹೋಟೆಲ್, ಲ್ಯಾವೆಲ್ಲೆ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ಹೊಂಬೇಗೌಡ ನಗರ, ಸಂಪಗಿ ನಗರ, ಜೆಸಿ ರೋಡ್, ಶಾಂತಿನಗರ, ಬಿಟಿಎಸ್ ರೋಡ್, ರಿಚ್ಮಂಡ್ ಸರ್ಕಲ್, ರೆಸಿಡೆನೆಸ್ಸಿ ರೋಡ್, ಸುಧಾಮನಗರ, ಕೆಎಚ್ ರೋಡ್, ವಿಲ್ಸನ್ ಗಾರ್ಡನ್, ಡಬಲ್ ರೋಡ್, ಲಾಲ್‌ಬಾಗ್ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶ.
66/11ಕೆವಿ ಅರೇಹಳ್ಳಿ ಉಪಕೇಂದ್ರದ ಅರೇಹಳ್ಳಿ, ಇಟ್ಟಮಡು, ಎಜಿಎಸ್ ಲೇಔಟ್, ಚಿಕ್ಕಲಸಂದ್ರ, ಟಿಜಿ ಲೇಔಟ್, ಭುವನೇಶ್ವರಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನವರಿ 29ರ ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 3 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಜನವರಿ 29ರಂದು ಬೆಳಗ್ಗೆ 10:30ರಿಂದ ಸಂಜೆ 5:30ರವರೆಗೆ 66/11ಕೆವಿ ಬಾಣಸವಾಡಿ ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕೆಲಸ ಇರುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಜನವರಿ 29ರಂದು ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಹೊರಮಾವು ಪಿ ಆಂಡ್ ಟಿ ಲೇಔಟ್, ನಿಸರ್ಗ ಕಾಲೊನಿ, ನಂದನ ಕಾಲೊನಿ, ಆಶೀರ್ವಾದ್ ಕಾಲೊನಿ, ಜ್ಯೋತಿನಗರ, ಆಗರ, ಬಾಲಾಜಿ ಲೇಔಟ್, ಚಿನ್ನಸ್ವಾಮಪ್ಪ ಲೇಔಟ್, ಕೋಕೋನಟ್‌ಗ್ರೋವ್, ದೇವಮತ ಶಾಲೆ, ಅಮರ್‌ರೀಜೆನ್ಸಿ, ವಿಜಯ ಬ್ಯಾಂಕ್ ಕಾಲೊನಿ ಎಚ್.ಆರ್.ಬಿ.ಆರ್. ಲೇಔಟ್, 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, ಕಮ್ಮನಹಳ್ಳಿ ಮುಖ್ಯರಸ್ತೆ, ಕಲ್ಯಾಣನಗರ, ಬಿ.ಡಬ್ಲ್ಯು.ಎಸ್. ಎಸ್.ಬಿ ವಾಟರ್‌ಟ್ಯಾಂಕ್, ಹೆಣ್ಣೂರು ಗ್ರಾಮ, ಚೆಳ್ಳಿಕೆರೆ, ಮೇಘನ ಪಾಳ್ಯ, ಗೆದ್ದಲಹಳ್ಳಿ, ಕೊತ್ತನೂರು, ವಡ್ಡರ ಪಾಳ್ಯ, ಜಾನಕೀರಾಮ್ ಲೇಔಟ್, ಬಿ.ಡಿ.ಎಸ್. ಗಾರ್ಡನ್, ಸತ್ಯ ಎನ್‌ಕ್ಲೇವ್, ಪ್ರಕೃತಿ ಲೇಔಟ್ ಹೊಯ್ಸಳನಗರ, ಬೃಂದಾವನ ಲೇಔಟ್.
ವಿನಾಯಕ ಲೇಔಟ್, ವಿವೇಕಾನಂದ ಲೇಔಟ್, ಮಂಜುನಾಥನಗರ ರಸ್ತೆ, ಎನ್.ಆರ್.ಐ ಲೇಔಟ್, ರಿಚಸ್‌ಗಾರ್ಡನ್, ಸುಂದರಾಂಜನೇಯ ದೇವಸ್ಥಾನ, ಡಬಲ್ ರಸ್ತೆ, ಪುಣ್ಯಭೂಮಿ ಲೇಔಟ್, ಸಮದ್ ಲೇಔಟ್, ಯಾಸಿನ್ ನಗರ, ಪಿ.ಎನ್.ಎಸ್. ಲೇಔಟ್, ಕುಳ್ಳಪ್ಪ ಸರ್ಕಲ್, 5ನೇ ಮುಖ್ಯರಸ್ತೆ, ಎಚ್.ಬಿ.ಆರ್. 2ನೇ ಬ್ಲಾಕ್, ರಾಜ್‌ಕುಮಾರ್ ಪಾರ್ಕ್, ಸಂಗೊಳ್ಳಿ ರಾಯಣ್ಣರಸ್ತೆ, ನೆಹರು ರಸ್ತೆ, 80 ಅ ಡಿರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಮರಿಯಪ್ಪ ಸರ್ಕಲ್, ಕೆ.ಕೆ.ಹಳ್ಳಿ ಡಿಪೋ, ಸಿ.ಎಂ.ಆರ್.ರಸ್ತೆ, ನಂಜುಂಡಪ್ಪ ರಸ್ತೆ, ಕರಾವಳ್ಳಿ ರಸ್ತೆ, ರಾಮಯ್ಯ ಲೇಔಟ್, ಅಜಮಲ್ಲಪ್ಪ ಲೇಔಟ್, ದೊಡ್ಡ ಬಾಣಸವಾಡಿ, ರಾಮಮೂರ್ತಿನಗರ ಮುಖ್ಯರಸ್ತೆ, ಕೃಷ್ಣರೆಡ್ಡಿ ಲೇಔಟ್, ಗೋಪಾಲರೆಡ್ಡಿ ಲೇಔಟ್, ಚಿಕ್ಕ ಬಾಣಸವಾಡಿ, ಸುಬ್ಬಯ್ಯನಪಾಳ್ಯ, ಓ.ಎಂ.ಬಿ.ಆರ್. 2ನೇ, 5ನೇ, 6ನೇ ಕ್ರಾಸ್, 100 ಅಡಿರಸ್ತೆ ಬಾಣಸವಾಡಿ, ಗ್ರೀನ್ ಪಾರ್ಕ್ ಲೇಔಟ್ ಫ್ಲವರ್‌ಗಾರ್ಡನ್, ಎಂ.ಎಂ.ಗಾರ್ಡನ್, ದಿವ್ಯಉನ್ನತಿ ಲೇಔಟ್, ಪ್ರಕೃತಿ ಟೌನ್‌ಶಿಪ್, ಮಲ್ಲಪ್ಪಲೇಔಟ್ ಮತ್ತು ಸುತ್ತಲಿನ ಪ್ರದೇಶ.
ಬೈರತಿ, ಕ್ಯಾಲಸನಹಳ್ಳಿ ಗ್ರಾಮ, ನಕ್ಷತ್ರ ಲೇಔಟ್, ಬೈರತಿ ಬಂಡೆ, ಸಂಗಂ ಎನ್‌ಕ್ಲೇವ್, ಅಥಂ ವಿದ್ಯಾನಗರ, ಬೈರತಿಹಳ್ಳಿ, ಕನಕಶ್ರೀ ಲೇಔಟ್, ಗುಬ್ಬಿಕ್ರಾಸ್, ಬಾಬೂಸಾ ಪಾಳ್ಯ, ಬ್ಯಾಂಕ್‌ಅವೆನ್ಯೂ ಲೇಔಟ್, ನಂಜಪ್ಪಗಾರ್ಡನ್, ಸಿ.ಎನ್.ಆರ್. ಲೇಔಟ್, ಆರ್.ಎಸ್.ಪಾಳ್ಯ, ಮುನಿಕಲ್ಲಪ್ಪ ಗಾರ್ಡನ್, ಹನುಮಂತಪ್ಪರಸ್ತೆ, ಮುನೆಗೌಡರಸ್ತೆ, ಸತ್ಯಮೂರ್ತಿರಸ್ತೆ, ಜೆ.ವಿ.ಶೆಟ್ಟಿ ರಸ್ತೆ, ಕುವೆಂಪು ರಸ್ತೆ, ಸದಾಶಿವ ದೇವಸ್ಥಾನದ ರಸ್ತೆ, ಗುರುಮೂರ್ತಿ ರಸ್ತೆ, ಗುಳ್ಳಪ್ಪ ರಸ್ತೆ, ಕಮ್ಮನಹಳ್ಳಿ ಸಂಪಣ್ಣ ರಸ್ತೆ, ಡಿ.ಎಂ.ಸಿ. ಮಿಲಿಟರಿ, ಬಂಜಾರ ಲೇಔಟ್, ಎನ್.ಪಿ.ಎಸ್., ಬೆಥೆಲ್‌ಲೇಔಟ್, ಸಮೃದ್ಧಿ ಲೇಔಟ್, ವಾಟರ್‌ಟ್ಯಾಂಕ್, ಕಲ್ಕೆರೆ, ಜಯಂತಿನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಬೆಂಗಳೂರು ನಗರದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
