ಡಿಸೆಂಬರ್ 17, 18ರಂದು ಬೆಂಗಳೂರಲ್ಲಿ ವಿದ್ಯುತ್ ವ್ಯತ್ಯಯ; ಈ ಏರಿಯಾಗಳಲ್ಲಿ ಎರಡು ದಿನ ಇರಲ್ಲ ಕರೆಂಟ್
Bengaluru Power Cut: ಬೆಂಗಳೂರಿನ ಆರ್ಬಿಐ ವಿವಿಕೇಂದ್ರ, ನಾಗನಾಥಪುರ ಸ್ವೀಕರಣಾ ಕೇಂದ್ರ, ಶೋಭಾ ಫಾರೆಸ್ಟ್ ವ್ಯೂ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಡಿಸೆಂಬರ್ 17 ಮತ್ತು 18ರಂದು 2 ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವ ಕಾರಣ ಬೆಂಗಳೂರಿನ ಕೆಲವು ಭಾಗಗಳಲ್ಲಿ ಡಿಸೆಂಬರ್ 17 ಮತ್ತು 18 ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಹೆಚ್ಎಸ್ಆರ್ ವಿಭಾಗದ ಆರ್ಬಿಐ ವಿವಿಕೇಂದ್ರ, ನಾಗನಾಥಪುರ ಸ್ವೀಕರಣಾ ಕೇಂದ್ರ, ಶೋಭಾ ಫಾರೆಸ್ಟ್ ವ್ಯೂ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಡಿಸೆಂಬರ್ 17 (ಮಂಗಳವಾರ) ಮತ್ತು ಡಿಸೆಂಬರ್ 18 (ಬುಧವಾರ) ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಆರ್ಬಿಐ ಲೇಔಟ್, ಕೊತ್ತನೂರು, ಜೆಪಿ ನಗರ 5ನೇ ಹಂತ, ಶ್ರೇಯಸ್ ಕಾಲೋನಿ, ಗೌರವ್ ನಗರ ಅಪಾರ್ಟ್ಮೆಂಟ್, ಸಿಕೆ ನಗರ-ಹೊಸರೋಡ್, ಸಿಂಗಸಂದ್ರ, ಹೊಂಗಸಂದ್ರ, .ಇಸಿಎಸ್ ಲೇಔಟ್, ಎ ಆ್ಯಂಡ್ ಬಿ ಬ್ಲಾಕ್, ಹುಸ್ಕೂರು, ನಾಗನಾಥಪುರ, ಮೈಕೋ, ಬಾಷ್, ಕೊಡ್ಲೂ, ಮುನೇಶ್ವರ ಲೇಔಟ್, ದೊಡ್ಡನಾಗಮಂಗಲ, ಪರಪ್ಪನ ಅಗ್ರಹಾರ, ಚಿಕ್ಕತೋಗೂರು, ಬೆಳ್ಳಂದೂರು-2, ಮಹಾವೀರ ರಾಂಚಸ್ ಅಪಾರ್ಟ್ ಮೆಂಟ್ ಕ್ಲಾಸಿಕ್ ಲ್ಯಾಂಡ್ ಮಾರ್ಕ್, ಶೋಭಾ ಫಾರೆಸ್ಟ್ ಅಪಾರ್ಟ್ ಮೆಂಟ್, ತಲಘಟ್ಟಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿಜಯಪುರ ವೃಕ್ಷಥಾನ್, ಸ್ಥಳದಲ್ಲೇ ನೊಂದಣಿಗೆ ಅವಕಾಶ
ವಿಜಯಪುರ: ನಗರದಲ್ಲಿ ಈ ಬಾರಿ ನಡೆಯುತ್ತಿರುವ ವೃಕ್ಷಥಾನ್ ಹೆರಿಟೇಜ್ ರನ್ನಲ್ಲಿ ಪಾಲ್ಗೊಳ್ಳಲು ಈಗಾಗಲೇ 9113 ಜನರು ತಮ್ಮ ಹೆಸರು ನೋಂದಾಯಿಸಿದ್ದು, ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಡಿಸೆಂಬರ್ 21ರಂದು ಶನಿವಾರ ನಗರದ ಭಾರತರತ್ನ ಡಾ. ಬಿಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಪಾಟ್ ರಿಜಿಸ್ಟ್ರೇಷನ್ ಮೂಲಕ ಹೆಸರು ನೋಂದಾವಣಿಗೆ ಕೊನೆಯ ಅವಕಾಶ ಕಲ್ಪಿಸಲಾಗಿದೆ.
ಆದರೆ, ಈ ಸ್ಪಾಟ್ ರಿಜಿಸ್ಟ್ರೇಷನ್ನಲ್ಲಿ ಹೆಸರು ನೋಂದಾಯಿಸಿದವರಿಗೆ ಬಹುಮಾನ ಮತ್ತು ಇತರ ಸೌಲಭ್ಯಗಳು ಲಭ್ಯ ಇರುವುದಿಲ್ಲ. ಈ ಬಾರಿ 5 ಕಿಮೀ. ಓಟದಲ್ಲಿ 8430 ಜನ, 10 ಕಿಮೀ ಓಟದಲ್ಲಿ 388 ಮತ್ತು 21 ಕಿಮೀ ಓಟದಲ್ಲಿ 295 ಜನರು ತಮ್ಮ ಹೆಸರು ನೋಂದಾಯಿಸಿದ್ದಾರೆ. ಈಗಾಗಲೇ ಆನ್ಲೈನ್ ನೋಂದಣಿ ಮುಕ್ತಾಯಗೊಂಡಿದ್ದರೂ, ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಡಿಸೆಂಬರ್ 21 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳಲಾಗುವುದು. ಕೆಲವೇ ಪ್ರವೇಶಗಳು ಬಾಕಿ ಉಳಿದಿವೆ.
ಡಿಸೆಂಬರ್ 21 ರಂದು ಟಿ- ಶರ್ಟ್ ವಿತರಣೆ
ಈಗಾಗಲೇ ಹೆಸರು ನೋಂದಾಯಿಸಿದವರಿಗೆ ಡಿಸೆಂಬರ್ 21 ರಂದು ಟಿ- ಶರ್ಟ್ ಮತ್ತು ಬಿಬ್ಗಳನ್ನೂ ವಿತರಿಸಲಾಗುವುದು. ಈ ಹಿನ್ನೆಲೆಯಲ್ಲಿ ಹೆಸರು ನೋಂದಾಯಿಸಿದವರು ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯೊಳಗೆ ತಮ್ಮ ಬಿಬ್ ಮತ್ತು ಟಿ- ಶರ್ಟ್ ಗಳನ್ನು ಪಡೆಯಬಹುದಾಗಿದೆ ಎಂದು ವೃಕ್ಷ ಅಭಿಯಾನ ಪ್ರತಿಷ್ಠಾನದ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.