ಕನ್ನಡ ಸುದ್ದಿ  /  ಕರ್ನಾಟಕ  /  Hassan Sex Scandal: ಪ್ರಜ್ವಲ್ ರೇವಣ್ಣ, ಹೆಚ್ ಡಿ ರೇವಣ್ಣಗೆ ಎಸ್‌ಐಟಿ ನೋಟಿಸ್‌, ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಪ್ರಕರಣ

Hassan Sex Scandal: ಪ್ರಜ್ವಲ್ ರೇವಣ್ಣ, ಹೆಚ್ ಡಿ ರೇವಣ್ಣಗೆ ಎಸ್‌ಐಟಿ ನೋಟಿಸ್‌, ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಪ್ರಕರಣ

ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಅವರ ಅಪ್ಪ ಎಚ್‌ ಡಿ ರೇವಣ್ಣ ಅವರಿಗೆ ಎಸ್‌ಐಟಿ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಎಡಿಜಿಪಿ ಬಿಕೆ ಸಿಂಗ್ ನೇತೃತ್ವದ ಎಸ್‌ಐಟಿ, ಮಹಿಳೆ ನೀಡಿದ ಲೈಂಗಿಕ ದೌರ್ಜನ್ಯ ಕೇಸ್ ಮತ್ತು ಆಶ್ಲೀಲ ವಿಡಿಯೋಗಳ ಕುರಿತು ತನಿಖೆ ನಡೆಸಲಿದ್ದು, ವಿವರ ಇಲ್ಲಿದೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ (ಬಲ ಚಿತ್ರ), ಅವರ ತಂದೆ ಹೆಚ್ ಡಿ ರೇವಣ್ಣ (ಎಡ ಚಿತ್ರ)ಗೆ ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಎದಿರುಸುವುದಕ್ಕೆ ಎಸ್‌ಐಟಿ ನೋಟಿಸ್‌ ನೀಡಿದೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ (ಬಲ ಚಿತ್ರ), ಅವರ ತಂದೆ ಹೆಚ್ ಡಿ ರೇವಣ್ಣ (ಎಡ ಚಿತ್ರ)ಗೆ ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಎದಿರುಸುವುದಕ್ಕೆ ಎಸ್‌ಐಟಿ ನೋಟಿಸ್‌ ನೀಡಿದೆ.

ಬೆಂಗಳೂರು: ಭಾರತದ ಗಮನಸೆಳೆದಿರುವ ಹಾಸನ ಸೆಕ್ಸ್ ಹಗರಣ (Hassan Sex Scandal)ದಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಅವರ ಅಪ್ಪ ಹೆಚ್ ಡಿ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಈ ವಿಚಾರವನ್ನು ಹೆಸರು ಹೇಳಲು ಇಚ್ಛಿಸದ ಎಸ್‌ಐಟಿ ತಂಡದ ಸದಸ್ಯರೊಬ್ಬರು ಹಿಂದೂಸ್ತಾನ್ ಟೈಮ್ಸ್‌ ಜೊತೆ ಮಾತನಾಡುತ್ತ ದೃಢೀಕರಿಸಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ, ಎಚ್‌ ಡಿ ರೇವಣ್ಣ ಅವರು ಯಾವ ದಿನ ಎಷ್ಟು ಹೊತ್ತಿಗೆ ತನಿಖೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ ಎಂಬ ವಿವರವನ್ನು ಅವರು ಬಹಿರಂಗಪಡಿಸಿಲ್ಲ.

ಆದಾಗ್ಯೂ, ಎಚ್ ಡಿ ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವುದಕ್ಕೆ ಒಂದು ದಿನದ ಕಾಲಾವಕಾಶ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಚ್‌ ಡಿ ರೇವಣ್ಣ ಕರ್ನಾಟಕದಲ್ಲೇ ಇದ್ದು, ಅವರ ಪುತ್ರ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ.

ಅಪ್ಪ-ಮಗನ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್

ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ 2019 ರಿಂದ 2022 ರ ನಡುವೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಮನೆಗೆಲಸದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ಮಾಡಲಾಗಿದೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಜ್ವಲ್ ರೇವಣ್ಣ ಮತ್ತು ಹೆಚ್ ಡಿ ರೇವಣ್ಣ ವಿರುದ್ಧ ಸೆಕ್ಷನ್ 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವಿಕೆ) ಭಾರತೀಯ ದಂಡ ಸಂಹಿತೆಯ 506 (ಅಪರಾಧ ಬೆದರಿಕೆ), ಮತ್ತು 509 (ಮಹಿಳೆಯರ ಅತಿರೇಕದ ವರ್ತನೆ) ಮುಂತಾದ ಆರೋಪಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ನಡುವೆ, ಅಶ್ಲೀಲ ವಿಡಿಯೋ, ಫೋಟೋಗಳು ಬಹಿರಂಗಗೊಂಡ ಬಳಿಕ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡಿದ್ದಾರೆ. ಅವರು ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ತೆರಳಿದ್ದಾರೆ ಎಂಬ ವದಂತಿ ಹರಡಿತ್ತು. ಪ್ರಜ್ವಲ್ ರೇವಣ್ಣ ಕರ್ನಾಟಕದಲ್ಲಿ ಇಲ್ಲ ಎಂಬ ಅಂಶ ನಿನ್ನೆ (ಏಪ್ರಿಲ್ 30) ಅವರ ತಂದೆ ಎಚ್ ಡಿ ರೇವಣ್ಣ ಅವರು ಮಾಧ್ಯಮ ಪ್ರತಿನಿಧಿಗಳ ಹೇಳಿಕೆಯಲ್ಲಿ ವ್ಯಕ್ತವಾಗಿದೆ.

ಕಾರ್ಯನಿಮಿತ್ತ ಜರ್ಮನಿಗೆ ಹೋಗಿದ್ದಾನೆ. ಈ ಎಫ್‌ಐಆರ್ ದಾಖಲಾಗುವುದು, ಕೇಸ್ ದಾಖಲಾಗುವುದು ಎಲ್ಲ ಆತನಿಗೆ ಅಥವಾ ನಮಗೆ ತಿಳಿದಿರಲಿಲ್ಲ ಎಂದು ಎಚ್‌ ಡಿ ರೇವಣ್ಣ ಸಮಜಾಯಿಷಿ ನೀಡಿದ್ದರು. ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ಮುಗಿದ ಮಾರನೇ ದಿನ (ಏಪ್ರಿಲ್ 27) ಪ್ರಜ್ವಲ್‌ ರೇವಣ್ಣ ಜರ್ಮನಿಗೆ ತೆರಳಿದ್ದು, ತನಿಖೆಗೆ ಕರೆದರೆ ವಾಪಸ್ ಬರುವುದಾಗಿ ತಂದೆ ಹೆಚ್.ಡಿ.ರೇವಣ್ಣ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ಧ ಯಾವುದಕ್ಕೆ ಸಂಬಂಧಿಸಿ ಎಸ್‌ಐಟಿ ತನಿಖೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ (33) ಅನೇಕ ಮಹಿಳೆಯರ ಜತೆಗೆ ಲೈಂಗಿಕ ಸಂಪರ್ಕ ಮಾಡಿದ್ದು, ಅವುಗಳ ಅಶ್ಲೀಲ ವಿಡಿಯೋ, ಫೋಟೋಗಳಿರುವ ಪೆನ್‌ ಡ್ರೈವ್ ಬಹಿರಂಗಗೊಂಡಿರುವುದು ರಾಜಕೀಯ ಸಂಚಲನ ಮೂಡಿಸಿದೆ. ಅಲ್ಲದೆ ಪ್ರಜ್ವಲ್‌ ರೇವಣ್ಣ ಕುರಿತು ಸಾಮಾಜಿಕವಾಗಿ ಕೂಡ ಅಸಹ್ಯ, ಆಕ್ರೋಶಗಳು ವ್ಯಕ್ತವಾಗತೊಡಗಿದೆ. ಪ್ರಾಥಮಿಕ ತನಿಖೆಯಂತೆ ಪೆನ್‌ಡ್ರೈವ್‌ನಲ್ಲಿ 2,976 ವೀಡಿಯೋಗಳು ಇವೆ. ಈ ಪೈಕಿ ಹೆಚ್ಚಿನವು ಬೆಂಗಳೂರು ಮತ್ತು ಹಾಸನದ ರೇವಣ್ಣ ನಿವಾಸದಲ್ಲಿ ಮೊಬೈಲ್ ಫೋನ್‌ ಮೂಲಕ ರೆಕಾರ್ಡ್ ಮಾಡಲಾಗಿದೆ ಎಂಬುದು ಬಹಿರಂಗವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ಸರ್ಕಾರ ಎಸ್‌ಐಟಿಯನ್ನು ರಚಿಸಿದ್ದು, ಅದು ಈಗ ಅಪ್ಪ- ಮಗ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿರುವಂಥದ್ದು.

ಮಹಿಳೆ ಸಲ್ಲಿಸಿರುವ ಎಫ್‌ಐಆರ್ ಮತ್ತು ಸೋರಿಕೆಯಾಗಿರುವ ಸಾವಿರಾರು ವಿಡಿಯೋಗಳ ಕುರಿತು ಎಸ್‌ಐಟಿ ಸದ್ಯ ತನಿಖೆ ನಡೆಸುತ್ತಿದೆ. ಸಮನ್ಸ್‌ ಜಾರಿಗೊಳಿಸಿದ ನಂತರವೂ ಎಸ್‌ಐಟಿ ಮುಂದೆ ಹಾಜರಾಗಲು ಪ್ರಜ್ವಲ್ ರೇವಣ್ಣ ವಿಫಲವಾದರೆ ಅವರನ್ನು ತಲೆಮರೆಸಿಕೊಂಡಿದ್ದಾರೆ ಎಂಬ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

IPL_Entry_Point