ಕನ್ನಡ ಸುದ್ದಿ  /  ಕರ್ನಾಟಕ  /  Hassan Sex Scandal; ಪ್ರಜ್ವಲ್ ರೇವಣ್ಣ ಅಷ್ಟೇ ಅಲ್ಲಅವರ ಅಪ್ಪ ರೇವಣ್ಣ ಉಚ್ಚಾಟನೆಗೂ ಹೆಚ್ಚಿದ ಒತ್ತಡ

Hassan Sex Scandal; ಪ್ರಜ್ವಲ್ ರೇವಣ್ಣ ಅಷ್ಟೇ ಅಲ್ಲಅವರ ಅಪ್ಪ ರೇವಣ್ಣ ಉಚ್ಚಾಟನೆಗೂ ಹೆಚ್ಚಿದ ಒತ್ತಡ

Hassan Sex Scandal: ಲೋಕಸಭಾ ಚುನಾವಣೆ ನಡೆಯುತ್ತಿರುವಾಗಲೇ ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ಹಾಸನ ಲೈಂಗಿಕ ಹಗರಣ, ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿ ಪ್ರಜ್ವಲ್ ರೇವಣ್ಣ ಅಷ್ಟೇ ಅಲ್ಲಅವರ ಅಪ್ಪ ರೇವಣ್ಣ ಉಚ್ಚಾಟನೆಗೂ ಒತ್ತಡ ಹೆಚ್ಚಾಗಿದೆ. ಈ ಕುರಿತ ವರದಿ ಇಲ್ಲಿದೆ.

ಹಾಸನದ ಲೈಂಗಿಕ ಹಗರಣ (Hassan Sex Scandal), ಅಶ್ಲೀಲ ವಿಡಿಯೋ ಹಗರಣ ಸಂಬಂಧ  ಪ್ರಜ್ವಲ್ ರೇವಣ್ಣ (ಎಡ ಚಿತ್ರ) ಅಷ್ಟೇ ಅಲ್ಲಅವರ ಅಪ್ಪ ರೇವಣ್ಣ (ಬಲ ಚಿತ್ರ) ಅವರನ್ನು ಜೆಡಿಎಸ್‌ನಿಂದ ಉಚ್ಚಾಟಸಬೇಕು ಎಂದು ಒತ್ತಡ ಹೆಚ್ಚಾಗಿದೆ.
ಹಾಸನದ ಲೈಂಗಿಕ ಹಗರಣ (Hassan Sex Scandal), ಅಶ್ಲೀಲ ವಿಡಿಯೋ ಹಗರಣ ಸಂಬಂಧ ಪ್ರಜ್ವಲ್ ರೇವಣ್ಣ (ಎಡ ಚಿತ್ರ) ಅಷ್ಟೇ ಅಲ್ಲಅವರ ಅಪ್ಪ ರೇವಣ್ಣ (ಬಲ ಚಿತ್ರ) ಅವರನ್ನು ಜೆಡಿಎಸ್‌ನಿಂದ ಉಚ್ಚಾಟಸಬೇಕು ಎಂದು ಒತ್ತಡ ಹೆಚ್ಚಾಗಿದೆ.

ಬೆಂಗಳೂರು: ಹಾಸನ ಸೆಕ್ಸ್ ಹಗರಣ (Hassan Sex Scandal) ಭಾರತದಾದ್ಯಂತ ಸುದ್ದಿಯಾಗಿದ್ದು, ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna) ಅಷ್ಟೇ ಅಲ್ಲ, ಅವರ ಅಪ್ಪ ರೇವಣ್ಣ ಅವರನ್ನೂ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂಬ ಒತ್ತಡ, ಆಗ್ರಹ ಹೆಚ್ಚಾಗಿದೆ. ಲೋಕಸಭಾ ಚುನಾವಣೆ ನಡೆಯುತ್ತಿರುವ ಕಾರಣ ರಾಜಕೀಯವಾಗಿ ಇದು ಬಹಳ ಸಂಚಲನ ಮೂಡಿಸಿದ್ದು, ಕರ್ನಾಟಕ ಸರ್ಕಾರ ಇದರ ತನಿಖೆಗಾಗಿ ಎಸ್‌ಐಟಿ ರಚಿಸಿದೆ.

ಟ್ರೆಂಡಿಂಗ್​ ಸುದ್ದಿ

ಈ ನಡುವೆ, ಪ್ರಜ್ವಲ್ ರೇವಣ್ಣ ಈ ಪ್ರಕರಣ ದಾಖಲಾಗುವುದಕ್ಕೂ ಮೊದಲೇ ವಿದೇಶಕ್ಕೆ (ಜರ್ಮನಿ) ತೆರಳಿದ್ದಾರೆ ಎಂಬ ವದಂತಿ ಹರಡಿದಿದೆ. ಇದನ್ನು ಜೆಡಿಎಸ್ ವರಿಷ್ಠರು, ಪ್ರಜ್ವಲ್ ರೇವಣ್ಣ ಅವರ ತಂದೆ ನಿರಾಕರಿಸಿಲ್ಲ ಅಥವಾ ಸ್ಪಷ್ಟೀಕರಣವನ್ನೂ ನೀಡಿಲ್ಲ. ಇನ್ನೊಂದೆಡೆ ಹೆಚ್‌ ಡಿ ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗಿದೆ. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೇ ದೂರು ದಾಖಲಿಸಿದ್ದಾರೆ.

ಈ ವಿದ್ಯಮಾನ ಸಾಮಾಜಿಕವಾಗಿ ಕೂಡ ಅಸಹ್ಯ, ಆಕ್ರೋಶ ಭಾವವನ್ನು ಉಂಟುಮಾಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಅನೇಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇವುಗಳನ್ನು ಗಮನಿಸಿದರೆ, ಪ್ರಜ್ವಲ್ ರೇವಣ್ಣ ಅವರನ್ನಷ್ಟೇ ಅಲ್ಲ, ಹೆಚ್‌ ಡಿ ರೇವಣ್ಣ ಅವರನ್ನೂ ಪಕ್ಷದಿಂದ ಉಚ್ಚಾಟಿಸಬೇಕು ಎಂಬ ಆಗ್ರಹ ಕಂಡುಬಂದಿದೆ.

ರೇವಣ್ಣ ಉಚ್ಚಾಟನೆಗೂ ಹೆಚ್ಚಿದ ಒತ್ತಡ

ಮಾಜಿ ಬ್ಯಾಂಕ್ ಉದ್ಯೋಗಿ ರೇಣುಕಾ ಮಂಜುನಾಥ್ ಅವರು, “ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆಂದರೆ, ಎಸ್ಐಟಿ ವಿಚಾರಣೆಗೆ ಮುನ್ನವೇ ಜೆಡಿಎಸ್ ಪ್ರಜ್ವಲ್‌ನನ್ನು ಆರೋಪಿಯಾಗಿ ಒಪ್ಪಿಕೊಂಡಂತಾಯ್ತು. ರೇವಣ್ಣನನ್ನೂ ಪಕ್ಷದಿಂದ ಹೊರಹಾಕಬೇಕಿತ್ತು. ಒಂದು ಹೆಜ್ಹೆ ಮುಂದೆಹೋಗಿ, ದೊಡ್ಡಗೌಡ್ರು ಹಾಸನದ ಸಂತ್ರಸ್ತ ಮಹಿಖೆಯರಿಗೆ ಕರೆಕೊಟ್ಟು, ಖಾಸಗಿಯಾಗಿ ಕರೆಸಿಕೊಂಡು , ಮಗ ಮೊಮ್ಮಗನಿಂದಾದ ಅನ್ಯಾಯಕ್ಜೆ ಪರಿಹಾರ, ಸಾಂತ್ವನ ಮತ್ತು ಭರವಸೆ ನೀಡಬೇಕು.” ಎಂದು ಆಗ್ರಹಿಸಿ ಪೋಸ್ಟ್ ಮಾಡಿದ್ದಾರೆ.

ಇಂತಹ ಅನೇಕ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿವೆ.

ಸಂತ್ರಸ್ತೇನೆ ಸರಿಯಿಲ್ಲ ಅಂತ ಸುದ್ದಿಗೋಷ್ಠಿ ಮಾಡಿಸ್ತಾರೆ…

ರೇಣುಕಾ ಮಂಜುನಾಥ್ ಅವರ ಪೋಸ್ಟ್‌ಗೆ ಕೆಲವು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಈ ಪೈಕಿ ಶಿವಮೊಗ್ಗ ಮೂಲದ ಪ್ರತಾಪ್ ಕೋಟೆ ಅವರು, “ಅಷ್ಟು ದೊಡ್ಡದಿಲ್ಲ...... ಇವತ್ತು ಮಗನ ಜೊತೆಗೆ ಪ್ರಕರಣದ ಪೋಸ್ಟ್ ಮಾರ್ಟಮ್ ಬಗ್ಗೆ ಚರ್ಚಿಸಿರ್ತಾರೆ..... ಸಂತ್ರಸ್ತೇನೆ ಸರಿಯಿಲ್ಲ ಅಂತ ಈಗಾಗಲೇ ಅವರ ಸಂಬಂಧಿಕರಿಂದ ಸುದ್ದಿಗೋಷ್ಠಿ ಮಾಡಿಸಿದ್ದಾರೆ.... ಹಣ.... ಅಧಿಕಾರದ ಪ್ರಭಾವಳಿಯಲ್ಲಿ ವಿಚಾರಣೆ ಮಸುಕು ಮಸುಕಾಗಿ ಮುಚ್ಚಿ ಹೋಗೋದು ಪಕ್ಕಾ.... ಇದಕ್ಕಾಗಿ ಹೆಚ್ಚೆಂದರೆ ಸ್ವಲ್ಪ ಸ್ವಾಭಿಮಾನ ಬೇಕಾದರೆ ಪಕ್ಕಕ್ಕಿಟ್ಟು... ಸಿದ್ದು- ಡಿಕೆಗೆ ಪೋನ್ ಮಾಡ್ತಾರೆ....( ಇದು ಒಂದು ಅಂದಾಜಷ್ಟೆ..... ವಾಸ್ತವವಾಗಿ ಎಲ್ಲಿಗೆ ಬೇಕಾದರೂ ಹೋಗಿ ಮುಟ್ಟಬಹುದು).... ನ್ಯಾಯ ಸಿಗಲಿ ಅಂತ ನಾವು ಬಯಸೋದ್ರಲ್ಲಿ ತಪ್ಪಿಲ್ಲ!.... ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.... ಅದೂ ಅಪ್ಪ ಆದ್ರೂ ಮಗ ಆದ್ರೂ ಅಷ್ಟೇ ತಪ್ಪು ತಪ್ಪೇ...‌‌” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ| ಲೈಂಗಿಕ ಹಗರಣ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಯಾರು?, ಶಿಕ್ಷಣ, ಆಸ್ತಿ ಮತ್ತು ಇತರೆ 5 ಅಂಶಗಳ ವಿವರ

ಇನ್ನು, ಮಂಜುನಾಥ್ ಕೊಳ್ಳೇಗಾಲ ಎಂಬುವವರು "ಅದು ಸರಿ, ಆದರೆ ಇದೆಲ್ಲಾ ಚುನಾವಣೆ ಮುಗಿದ ಮರುದಿನವೇ ಹೇಗೆ ಹೊರಬಿತ್ತು? ಕಣ್ಣೊರೆಸುವ, "ಅಯ್ಯೋ ಪಾಪದ್ದು, ಇವರು ಹೀಗೆ ಅಂತ ಗೊತ್ತಿರಲಿಲ್ಲ, ಯಾರೋ ಪಾರ್ಟಿ ಸೇರಿಸ್ಕ್ಯಂಬಿಟ್ರು" ಎಂಬ ಮಾದರಿಯ, ಕಣ್ಣಿಗೆ ಅಂಜನ ಸವರುವ ಸಮಜಾಯಿಶಿಗಳನ್ನು ಹಲವರು ಕೊಡುತ್ತಾರೆ, ಆದರೆ ನಿಜವಾದ ಕಾರಣ?" ಎಂದು ಪ್ರಶ್ನಿಸಿದ್ದಾರೆ.

IPL_Entry_Point