ಕನ್ನಡ ಸುದ್ದಿ  /  Karnataka  /  Pramod Muthalik: Sri Ram Sene Chief To Contest Karnataka Assembly Poll As Independent Candidate

Pramod Muthalik: ಹಿಂದುತ್ವ ಪ್ರತಿಪಾದನೆ, ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಕಾರ್ಕಳವೇ ಯಾಕೆ? ಮುತಾಲಿಕ್‌ ಚುನಾವಣಾ ಲೆಕ್ಕಾಚಾರ ಏನು?

Pramod Muthalik: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅವರು ಚುನಾವಣೆಗೆ ಸ್ಪರ್ಧಿಸುವುದಕ್ಕೆ ಕಾರ್ಕಳವನ್ನೇ ಯಾಕೆ ಆಯ್ಕೆ ಮಾಡಿಕೊಂಡರು? ಹಿಂದುತ್ವದ ಪ್ರತಿಪಾದನೆ, ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಬೇರಾವ ಕ್ಷೇತ್ರವನ್ನೂ ಯಾಕೆ ಆಯ್ಕೆ ಮಾಡಲಿಲ್ಲ? ಇಲ್ಲಿದೆ ಅವರ ರಾಜಕೀಯ ಲೆಕ್ಕಾಚಾರ

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ (PTI File Photo)

ಹಿಂದುತ್ವ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟದ ಕಾರಣ ಈ ಸಲದ ವಿಧಾನಸಭಾ ಚುನಾವಣೆಗೆ ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್.‌ ಈ ವಿಚಾರವನ್ನು ಮುತಾಲಿಕ್‌ ಅವರೇ ಸೋಮವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವನೇ ಮೇ ತಿಂಗಳಲ್ಲಿ ನಡೆಯುವ ನಿರೀಕ್ಷೆ ಇದೆ.

ಕಾರ್ಯಕರ್ತರ ಒತ್ತಡದ ಮೇರೆಗೆ ಕಾರ್ಕಳ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ನಾನು ನಿರ್ಧರಿಸಿದೆ. ಈಗಾಗಲೇ ಏಳು ಅಥವಾ ಎಂಟು ಸಲ ಪ್ರವಾಸ ಕ್ಷೇತ್ರದ ಉದ್ದಗಲಕ್ಕೂ ಪ್ರವಾಸ ಮಾಡಿದ್ದೇನೆ. ಅಲ್ಲಿ ಹಿಂದುಗಳಿಗೆ ಅನ್ಯಾಯ ಆಗಿದೆ, ಭ್ರಷ್ಟಾಚಾರ ಮಿತಿ ಮೀರಿದೆ. ಅಲ್ಲಿಂದಲೇ ಸ್ಪರ್ಧಿಸಬೇಕು ಎಂಬುದು ಎಲ್ಲರ ಅಭಿಪ್ರಾಯ. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ತೀರ್ಮಾನ ಮಾಡಿದ್ದೇನೆ ಎಂದು ಪ್ರಮೋದ್‌ ಮುತಾಲಿಕ್‌ ಸುದ್ದಿಗಾರರ ಜತೆಗೆ ಮಾತನಾಡುತ್ತ ಹೇಳಿದ್ದಾರೆ.

ಹಿಂದುತ್ವಕ್ಕಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕವಾಗಿ ಕೆಲಸ ಮಾಡುವುದಕ್ಕಾಗಿ ಚುನಾವಣೆಗೆ ಸ್ಪರ್ಧಿಸುವ ತೀರ್ಮಾನ ತೆಗೆದುಕೊಂಡೆ. ನನ್ನ ಸ್ಪರ್ಧೆಯು ಹಿಂದುಗಳಿಗೆ ನ್ಯಾಯ ಮತ್ತು ಗೌರವವನ್ನು ನೀಡುವ ಉದ್ದೇಶದಿಂದ ಕೂಡಿರುತ್ತದೆ ಎಂದು ಅವರು ಹೇಳಿದರು.

ಕಳೆದ ನವೆಂಬರ್‌ನಲ್ಲಿ, ಹಿಂದುಗಳನ್ನು ರಕ್ಷಿಸಲು 2023 ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ತಾವು ಸೇರಿ 25 ಹಿಂದುವಾದಿಗಳು ಸ್ಪರ್ಧಿಸಲಿದ್ದಾರೆ ಎಂದು ಮುತಾಲಿಕ್‌ ಹೇಳಿದ್ದರು. ಆದರೆ, ಹಿಂದುಗಳ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಅವರನ್ನು ಮತ್ತು ಹಿಂದುತ್ವವನ್ನು ರಕ್ಷಿಸಲು ವಿಫಲವಾಗಿದೆ ಎಂದು ಆರೋಪಿಸಿದ್ದರು.

ಉಡುಪಿ ಜಿಲ್ಲೆಯ ಕಾರ್ಕಳ ವಿಧಾನ ಸಭಾ ಕ್ಷೇತ್ರವನ್ನು ಬಿಜೆಪಿ ನಾಯಕ ವಿ. ಸುನಿಲ್‌ ಕುಮಾರ್‌ ಪ್ರತಿನಿಧಿಸುತ್ತಿದ್ದಾರೆ. ಅವರು ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿಯೂ ಕೆಲಸ ಮಾಡುತ್ತಿದ್ದಾರೆ. ಕಾರ್ಕಳ ಕ್ಷೇತ್ರದಿಂದ ಸುನಿಲ್‌ ಕುಮಾರ್‌ ಅವರು 2004, 2013, 2018ರ ಚುನಾವಣೆಗಳಲ್ಲಿ ಗೆದ್ದು ಶಾಸಕರಾಗಿದ್ದಾರೆ.

ಇದಕ್ಕೂ ಮುನ್ನ ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಆರು ಸಲ (1972ರಿಂದ 1994) ಶಾಸಕರಾಗಿದ್ದರು. ಅವರ ಬಳಿಕ ಎಚ್‌.ಗೋಪಾಲ ಭಂಡಾರಿ ಎರಡು ಸಲ (1999 ಮತ್ತು2008) ಶಾಸಕರಾಗಿದ್ದರು.

ಗಮನಿಸಬಹುದಾದ ಸುದ್ದಿ

Andaman and Nicobar: ನಮ್ಮ ದೇಶದ ಮಟ್ಟಿಗೆ ಅಂಡಮಾನ್‌-ನಿಕೋಬಾರ್‌ ಆಯಕಟ್ಟಿನ ದ್ವೀಪಗಳು ಯಾಕೆ? ಏನಿದು ಲೆಕ್ಕಾಚಾರ?

ಪುಟ್ಟದಾಗಿರುವ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಸರಪಳಿಯ ದಕ್ಷಿಣದ ತುದಿಯು ಇಂಡೋನೇಷ್ಯಾದ ಬಂದಾ ಅಚೆಹ್‌ನಿಂದ ಕೇವಲ 237 ಕಿ.ಮೀ. ದೂರದಲ್ಲಿದೆ. ದಕ್ಷಿಣ ಚೀನಾ ಸಮುದ್ರಕ್ಕೆ ಎರಡು ಪ್ರವೇಶ ಮಾರ್ಗಗಳಾದ ಸುಂದಾ ಮತ್ತು ಲೊಂಭಾಕ್‌ ಜಲಸಂಧಿಗಳ ತನಕದ ಸಮುದ್ರ ಮಾರ್ಗದಲ್ಲಿ ಈ ದ್ವೀಪ ಸರಪಳಿಯದ್ದೇ ಪ್ರಾಬಲ್ಯ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Activa H-Smart: ಹೋಂಡಾ ಆಕ್ಟೀವಾ ಎಚ್‌- ಸ್ಮಾರ್ಟ್‌ ಮಾರುಕಟ್ಟೆಗೆ; ಪೇಟೆಂಟ್‌ ಹೊಂದಿದ 5 ಟೆಕ್‌ ಅಪ್ಲಿಕೇಶನ್ಸ್‌ ಪ್ರಮುಖ ಆಕರ್ಷಣೆ

ಹೋಂಡಾ ಮೋಟಾರ್‌ಸೈಕಲ್‌ ಆಂಡ್‌ ಸ್ಕೂಟರ್‌ ಇಂಡಿಯಾ ಅದರ ಹೊಸ ಆಕ್ಟಿವಾ ಎಚ್‌-ಸ್ಮಾರ್ಟ್‌ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಆರಂಭಿಕ ಬೆಲೆ 74,536 ರೂಪಾಯಿ (ಎಕ್ಸ್‌ ಶೋರೂಂ ದರ). ಆಕ್ಟಿವಾ 6ಜಿ ಸರಣಿಯ ಹೊಸ ವಾಹನ ಇದಾಗಿದ್ದು, ಎಚ್‌-ಸ್ಮಾರ್ಟ್‌ ಟೆಕ್‌ನೊಂದಿಗೆ ಬಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point