ಪುತ್ತೂರು: ಸಂಕೋಲೆ ಕುತ್ತಿಗೆಗೆ ಸಿಲುಕಿ ಯುವಕ ಸಾವು, ಆತ್ಮಹತ್ಯೆ ಎಂದ ತಾಯಿ, ನಡೆದದ್ದೇನು; ಇಲ್ಲಿದೆ ಪೂರ್ಣ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಪುತ್ತೂರು: ಸಂಕೋಲೆ ಕುತ್ತಿಗೆಗೆ ಸಿಲುಕಿ ಯುವಕ ಸಾವು, ಆತ್ಮಹತ್ಯೆ ಎಂದ ತಾಯಿ, ನಡೆದದ್ದೇನು; ಇಲ್ಲಿದೆ ಪೂರ್ಣ ವಿವರ

ಪುತ್ತೂರು: ಸಂಕೋಲೆ ಕುತ್ತಿಗೆಗೆ ಸಿಲುಕಿ ಯುವಕ ಸಾವು, ಆತ್ಮಹತ್ಯೆ ಎಂದ ತಾಯಿ, ನಡೆದದ್ದೇನು; ಇಲ್ಲಿದೆ ಪೂರ್ಣ ವಿವರ

ಪುತ್ತೂರಿನಲ್ಲಿ ಸಂಕೋಲೆ ಕುತ್ತಿಗೆಗೆ ಸಿಲುಕಿ ಯುವಕ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆ ಎಂದ ತಾಯಿ ಹೇಳಿದ್ದು, ಪೊಲೀಸರು ತನಿಖೆ ನಡೆಸಿದಾಗ ಬಯಲಾದ ವಿಚಾರವೇ ಬೇರೆ. ಹಾಗಾದರೆ ನಡೆದದ್ದೇನು, ಇಲ್ಲಿದೆ ಪೂರ್ಣ ವಿವರ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಪುತ್ತೂರಿನಲ್ಲಿ ಸಂಕೋಲೆ ಕುತ್ತಿಗೆಗೆ ಸಿಲುಕಿ ಯುವಕ ಸಾವು ಪ್ರಕರಣದ ಅನೇಕ ಅನುಮಾನಕ್ಕೆ ಕಾರಣವಾಗಿತ್ತು. ಆತ್ಮಹತ್ಯೆ ಎಂದ ತಾಯಿಯ ನಡೆಯನ್ನು ಶಂಕಿಸಿದ ಪೊಲೀಸರು ತನಿಖೆ ನಡೆಸಿ ಮೂವರನ್ನು ವಶಕ್ಕೆ ತೆಗೆದುಕೊಂಡರು. (ಸಾಂಕೇತಿಕ ಚಿತ್ರ)
ಪುತ್ತೂರಿನಲ್ಲಿ ಸಂಕೋಲೆ ಕುತ್ತಿಗೆಗೆ ಸಿಲುಕಿ ಯುವಕ ಸಾವು ಪ್ರಕರಣದ ಅನೇಕ ಅನುಮಾನಕ್ಕೆ ಕಾರಣವಾಗಿತ್ತು. ಆತ್ಮಹತ್ಯೆ ಎಂದ ತಾಯಿಯ ನಡೆಯನ್ನು ಶಂಕಿಸಿದ ಪೊಲೀಸರು ತನಿಖೆ ನಡೆಸಿ ಮೂವರನ್ನು ವಶಕ್ಕೆ ತೆಗೆದುಕೊಂಡರು. (ಸಾಂಕೇತಿಕ ಚಿತ್ರ)

ಮಂಗಳೂರು: ಬೆಟ್ಟಂಪಾಡಿ ಕಾಣುಮೂಲೆ ನಿವಾಸಿ ದಿ.ಕೊರಗಪ್ಪ ಶೆಟ್ಟಿ ಅವರ ಪುತ್ರ ಚೇತನ್ (33) ಸಂಕೋಲೆ ಕುತ್ತಿಗೆಗೆ ಸಿಲುಕಿ, ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಆತನ ಮನೆಮಂದಿ (ತಾಯಿ ಸಹಿತ) ಆತ್ಮಹತ್ಯೆ ಎಂದು ಹೇಳಿದರೆ, ಸುಮೋಟೊ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರಿಗೆ ಆಘಾತಕಾರಿ ವಿಚಾರ ಗೊತ್ತಾಗಿದೆ.

ಸಂಕೋಲೆ ಕುತ್ತಿಗೆಗೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟ ಯುವಕ ಸುದ್ದಿ ಬಳಿಕ, ಆ ಸಾವು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಆದರೆ ಅದು ಕೊಲೆ ಎಂಬ ಅಂಶ ಬೆಳಕಿಗೆ ಬಂದಿದೆ. ಆದರೆ ಉದ್ದೇಶ ಪೂರ್ವಕ ನಡೆಸಿದ ಹತ್ಯೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಪ್ರಕರಣ ಸಂಬಂಧ ಮೃತ ಯುವಕನ ತಾಯಿ, ಅಕ್ಕ ಗಂಡ ಮತ್ತು ಪಕ್ಕದ ಮನೆಯ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಸಂಕೋಲೆ ಕುತ್ತಿಗೆಗೆ ಸಿಲುಕಿ ಯುವಕ ಮೃತಪಟ್ಟ ಪ್ರಕರಣ; ನಡೆದದ್ದೇನು?

ಮೇ.9ರಂದು ರಾತ್ರಿ ಕುಡಿದು ಮನೆಯಲ್ಲಿ ಚೇತನ್ ಗಲಾಟೆ ಮಾಡಿದ್ದಾನೆ. ಬಳಿಕ ತಡರಾತ್ರಿ ನೆರೆಮನೆಯ ಯೂಸುಫ್ ಅವರ ಮನೆಗೆ ಹೋಗಿ, ಅಲ್ಲಿ ಕಿಟಕಿ ಗಾಜನ್ನು ಪುಡಿ ಮಾಡಿದ್ದಾನೆ. ಈ ಕುರಿತು ಯೂಸುಫ್ ಚೇತನ್ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕುಡಿದ ಮತ್ತಿನಲ್ಲಿ ನೆರೆಮನೆಗೆ ಹೋಗಿ ಗಲಾಟೆ ಮಾಡುತ್ತಿದ್ದ ಪುತ್ರನ ಕಿರಿಕಿರಿಯಿಂದ ಬೇಸತ್ತ ಚೇತನ್ ತಾಯಿ ಉಮಾವತಿ, ತನ್ನ ಮಗಳ ಗಂಡನೊಂದಿಗೆ ಯೂಸುಫ್ ಮನೆಗೆ ತೆರಳಿದ್ದಾರೆ. ಚೇತನ್ ನನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಎಷ್ಟು ಮಾತ್ರಕ್ಕೂ ಬರಲು ಆತ ಒಪ್ಪಲಿಲ್ಲ.

ಕೊನೆಗೆ ಚೇತನ್ ದೇಹಕ್ಕೆ ಸಂಕೋಲೆ ಬಿಗಿದ ಉಮಾವತಿ, ಯೂಸುಫ್ ಎಳೆದುಕೊಂಡು ಬಂದಿದ್ದಾರೆ. ಮನೆಗೆ ತಲುಪುವ ವೇಳೆ ಸಂಕೋಲೆ ಕುತ್ತಿಗೆಗೆ ಬಿಗಿದಿದೆ, ಈ ಸಂದರ್ಭ ಆತ ಮೃತಪಟ್ಟಿದ್ದಾನೆ. ಮಲಗಿದ್ದ ಸ್ಥಿತಿಯಲ್ಲಿದ್ದ ಚೇತನ್ ನನ್ನು ಮನೆಮಂದಿ ಪುತ್ತೂರಿನ ಆಸ್ಪತ್ರೆಗೆ ಕರೆತಂದಿದ್ದಾರೆ. ಆ ವೇಳೆಗಾಗಲೇ ಆತ ಮೃತಪಟ್ಟಿದ್ದ.

ಪೊಲೀಸರಿಗೆ ಮಾಹಿತಿ ದೊರಕಿ, ಪರಿಶೀಲನೆ ನಡೆಸಿದಾಗ, ಮನೆಮಂದಿ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಅನುಮಾನಗೊಂಡು ವಿಚಾರಣೆ ನಡೆಸಿದಾಗ ಸಂಕೋಲೆ ಕಟ್ಟಿ ಎಳೆದುತಂದ ವಿಚಾರ ಬೆಳಕಿಗೆ ಬಂದಿದೆ. ಸುಮೋಟೊ ಕೇಸ್ ದಾಖಲಿಸಿ, ತಾಯಿ ಉಮಾವತಿ, ಅವರ ಅಳಿಯ ಮತ್ತು ನೆರೆಮನೆಯ ಯೂಸುಫ್ ಹೀಗೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಮಾವತಿ ಮತ್ತು ಯೂಸುಫ್ ಅವರನ್ನು ಬಂಧಿಸಲಾಗಿದೆ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಲಾಗಿದೆ. ಜಿಲ್ಲಾ ಪೊಲೀಸ್ ಎಸ್ಪಿ ರಿಷ್ಯಂತ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೊಲೀಸರು ನೀಡಿದ ಹೇಳಿಕೆ ಹೀಗಿದೆ

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ ಗ್ರಾಮದ ನಿವಾಸಿ, ಉಮಾವತಿ ಕೆ ಶೆಟ್ಟಿ (56) ಎಂಬವರು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ, ಮೇ 10ರಂದು ಬೆಳಿಗ್ಗೆ ನೀಡಿದ ದೂರಿನಂತೆ, ಮಗ ಚೇತನ್‌ ಕುಮಾರ್‌ (33) ಎಂಬಾತನು ವಿಪರೀತ ಮದ್ಯ ಸೇವನೆ ಮಾಡುತ್ತಿದ್ದು, 9ರ ರಾತ್ರಿಯಿಂದ 10ರ ಬೆಳಗ್ಗಿನ ಜಾವದ ಅವಧಿಯಲ್ಲಿ, ಜೀವನದಲ್ಲಿ ಜಿಗುಪ್ಸೆಗೊಂಡು, ಮನೆಯ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂಬುದಾಗಿ ನೀಡಿದ ದೂರು ನೀಡಿರುತ್ತಾರೆ.

ಅದರಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. ಮುಂದಿನ ಕಾನೂನುಕ್ರಮಕ್ಕಾಗಿ ಠಾಣಾ ಪಿ.ಎಸ್ ಐ ಮೃತವ್ಯಕ್ತಿಯ ಶವ ಪಂಚನಾಮೆಯನ್ನು ನಡೆಸುತ್ತಿದ್ದಾಗ, ಮೃತವ್ಯಕ್ತಿಯ ದೇಹದಲ್ಲಿರುವ ಗಾಯಗಳಿಂದ ಸದ್ರಿ ಪ್ರಕರಣದ ನೈಜತೆಯ ಬಗ್ಗೆ ಅನುಮಾನಗೊಂಡು, ಘಟಣೆಯ ಬಗ್ಗೆ ಮೃತರ ತಾಯಿ ಹಾಗೂ ಇತರರನ್ನು ಕೂಲಂಕುಷವಾಗಿ ವಿಚಾರಿಸಿದಾಗ ಪ್ರಕರಣ ನೈಜತೆ ಬೆಳಕಿಗೆ ಬಂದಿರುತ್ತದೆ.

ಪ್ರಸ್ತುತ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವಂತೆ, ಚೇತನ್‌ ಕುಮಾರ್‌ ಅಮಲು ಪದಾರ್ಥ ಸೇವಿಸಿ, ಮನೆಯ ಬಳಿ ಗಲಾಟೆ ನಡೆಸಿದ್ದು, ಆತನನ್ನು ತಡೆಯುವ ಸಲುವಾಗಿ ತಾಯಿ ಉಮಾವತಿ ರವರು, ನೆರೆಮನೆಯವರ ಸಹಾಯದಿಂದ, ಬಲವಂತವಾಗಿ ಕಟ್ಟಿಹಾಕಲು ಯತ್ನಿಸಿರುತ್ತಾರೆ. ಈ ವೇಳೆ ಚೇತನ್‌ ಕುಮಾರ್‌ ಅವರಿಗೆ ಉಸಿರಾಟಕ್ಕೆ ಅಡಚಣೆಯಾಗಿ ಅಸ್ವಸ್ಥರಾಗಿ ಬಿದ್ದಿದ್ದು, ಆವರನ್ನು ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟಿರುವುದು ತಿಳಿದುಬಂದಿರುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ಪ್ರಸ್ತುತ ತಾಯಿ ಹಾಗೂ ನೆರೆಮನೆಯ ನಿವಾಸಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Whats_app_banner