ಕನ್ನಡ ಸುದ್ದಿ  /  ಕರ್ನಾಟಕ  /  Raichur Result: ರಾಯಚೂರಿನಲ್ಲಿ ಕಾಂಗ್ರೆಸ್‌ನ ಕುಮಾರ್‌ ನಾಯ್ಕಗೆ ಗೆಲುವು, ಬಿಜೆಪಿ ಅಭ್ಯರ್ಥಿ ರಾಜ ಅಮರೇಶ್ವರ ನಾಯ್ಕಗೆ ಸೋಲು

Raichur Result: ರಾಯಚೂರಿನಲ್ಲಿ ಕಾಂಗ್ರೆಸ್‌ನ ಕುಮಾರ್‌ ನಾಯ್ಕಗೆ ಗೆಲುವು, ಬಿಜೆಪಿ ಅಭ್ಯರ್ಥಿ ರಾಜ ಅಮರೇಶ್ವರ ನಾಯ್ಕಗೆ ಸೋಲು

ರಾಯಚೂರು ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್‌ನ ಜಿ. ಕುಮಾರ್‌ ನಾಯ್ಕ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಜ ಅಮರೇಶ್ವರ ನಾಯ್ಕ ಪರಾಭವಗೊಂಡಿದ್ದಾರೆ. ಕುಮಾರ್‌ ನಾಯ್ಕ ಅವರು ಅಮರೇಶ್ವರ ಅವರನ್ನ 79781 ಮತಗಳ ಅಂತರದಿಂದ ಸೋಲಿಸಿದ್ದಾರೆ.

ರಾಯಚೂರಿನಲ್ಲಿ ಕಾಂಗ್ರೆಸ್‌ನ ಕುಮಾರ್‌ ನಾಯ್ಕಗೆ ಗೆಲುವು, ಬಿಜೆಪಿ ಅಭ್ಯರ್ಥಿ ರಾಜ ಅಮರೇಶ್ವರ ನಾಯ್ಕಗೆ ಸೋಲು
ರಾಯಚೂರಿನಲ್ಲಿ ಕಾಂಗ್ರೆಸ್‌ನ ಕುಮಾರ್‌ ನಾಯ್ಕಗೆ ಗೆಲುವು, ಬಿಜೆಪಿ ಅಭ್ಯರ್ಥಿ ರಾಜ ಅಮರೇಶ್ವರ ನಾಯ್ಕಗೆ ಸೋಲು

ರಾಯಚೂರು: ಲೋಕಸಭಾ ಚುನಾವಣೆ 2024ರ ಮತಎಣಿಕೆ ಭರದಿಂದ ಸಾಗುತ್ತಿದೆ. ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ (Raichuru Lok Sabha MP Election 2024 Result) ಹೊರಬಿದ್ದಿದೆ. ರಾಯಚೂರು ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಬಿಜೆಪಿ ಅಭ್ಯರ್ಥಿ ರಾಜ ಅಮರೇಶ್ವರ ನಾಯ್ಕ (raja amareshwara naik) ಸೋಲು ಕಂಡಿದ್ದಾರೆ. ಇವರಿಗೆ ಎದುರಾಳಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಜಿ. ಕುಮಾರ ನಾಯ್ಕ (G Kumar Nayak) ಅಭೂತಪೂರ್ವ ಯಶಸ್ಸು ಸಿಕ್ಕಿದೆ. ರಾಯಚೂರು ಕ್ಷೇತ್ರದಲ್ಲಿ ಮಾಜಿ ಅಧಿಕಾರಿ ಹಾಗೂ ಹಾಲಿ ಸಂಸದರ ನಡುವೆ ಪೈಪೋಟಿ ಏರ್ಪಟ್ಟಿತ್ತು. ರಾಯಚೂರು ಕ್ಷೇತ್ರದಲ್ಲಿ ರಾಮ ಅಮರೇಶ್ವರ ನಾಯ್ಕ್‌ ಅವರದ್ದೇ ಅಬ್ಬರ ಎಂದರೂ ತಪ್ಪಾಗಲಿಕ್ಕಿಲ್ಲ. ಮೋದಿ ಹೆಸರಿನಲ್ಲಿ ಗೆದ್ದವರು ಎಂಬ ಕುಖ್ಯಾತಿಯೂ ಇವರಿಗಿದೆ. ಆದರೆ ಈ ಬಾರಿ ಅವರಿಗೆ ಸೋಲಾಗಿದೆ. ಒಟ್ಟು 6 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಲೋಕಸಭಾ ಕ್ಷೇತ್ರ ರಾಯಚೂರು. ಅಮರೇಶ್, ಬಸವ ಪ್ರಭು ಮೇದಾ, ಮೇಧಾರ್ ಶಾಮರಾವ್, ರಾಮಲಿಂಗಪ್ಪ ಮೊದಲಾದವರು ಇತರ ಪಕ್ಷಗಳಿಂದ ಲೋಕಸಭೆಗೆ ಸ್ಪರ್ಧಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ರಾಯಚೂರು ಲೋಕಸಭೆ ಎಲೆಕ್ಷನ್ ಕ್ವಿಕ್‌ ಲುಕ್‌

ಲೋಕಸಭಾ ಕ್ಷೇತ್ರದ ಹೆಸರು: ರಾಯಚೂರು

ಅಭ್ಯರ್ಥಿಯ ಹೆಸರು ಮತ್ತು ಪಡೆದ ಮತಗಳು

ರಾಮ ಅಮರೇಶ್ವರ ನಾಯ್ಕ (ಬಿಜೆಪಿ): 591185 ಮತಗಳು

ಜಿ ಕುಮಾರ್‌ ನಾಯಕ್‌ (ಕಾಂಗ್ರೆಸ್‌): 670966 ಮತಗಳು

ಚುನಾವಣಾ ಕಣ: ರಾಯಚೂರು ಲೋಕಸಭಾ ಕ್ಷೇತ್ರ

ರಾಯಚೂರು ಲೋಕಸಭಾ ಕ್ಷೇತ್ರವು ಎಸ್‌ಟಿ ಮೀಸಲು ಕ್ಷೇತ್ರ. ಈ ಕ್ಷೇತ್ರದಲ್ಲಿ ಕಳೆದ ಒಂದಿಷ್ಟು ವರ್ಷಗಳಿಂದ ಬಿಜೆಪಿಯದ್ದೇ ಪಾರುಪತ್ಯ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸಮಬಲ ಸಾಧಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಹಾಲಿ ಬಿಜೆಪಿ ಅಭ್ಯರ್ಥಿ ಅಮರೇಶ್ವರ ನಾಯ್ಕ ಅವರು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

 

ಟಿ20 ವರ್ಲ್ಡ್‌ಕಪ್ 2024