ರಾಯಚೂರು ಕ್ಯಾಂಪ್‌ನ 5 ಬಾಂಗ್ಲಾ ನಿರಾಶ್ರಿತರಿಗೆ ಭಾರತದ ಪೌರತ್ವ, ಸಿಎಎ ಪ್ರಕಾರ ಕರ್ನಾಟಕದಲ್ಲಿರುವವರಿಗೆ ಸಿಕ್ಕಿದ್ದು ಇದೇ ಮೊದಲು
ಕನ್ನಡ ಸುದ್ದಿ  /  ಕರ್ನಾಟಕ  /  ರಾಯಚೂರು ಕ್ಯಾಂಪ್‌ನ 5 ಬಾಂಗ್ಲಾ ನಿರಾಶ್ರಿತರಿಗೆ ಭಾರತದ ಪೌರತ್ವ, ಸಿಎಎ ಪ್ರಕಾರ ಕರ್ನಾಟಕದಲ್ಲಿರುವವರಿಗೆ ಸಿಕ್ಕಿದ್ದು ಇದೇ ಮೊದಲು

ರಾಯಚೂರು ಕ್ಯಾಂಪ್‌ನ 5 ಬಾಂಗ್ಲಾ ನಿರಾಶ್ರಿತರಿಗೆ ಭಾರತದ ಪೌರತ್ವ, ಸಿಎಎ ಪ್ರಕಾರ ಕರ್ನಾಟಕದಲ್ಲಿರುವವರಿಗೆ ಸಿಕ್ಕಿದ್ದು ಇದೇ ಮೊದಲು

Indian Citizenship; ಕರ್ನಾಟಕದ ರಾಯಚೂರು ಕ್ಯಾಂಪ್‌ನಲ್ಲಿದ್ದ 5 ಬಾಂಗ್ಲಾದೇಶಿಯರಿಗೆ ಇದೇ ಮೊದಲ ಬಾರಿಗೆ ಭಾರತದ ಪೌರತ್ವ ಲಭಿಸಿದೆ. ನಾಲ್ಕು ದಶಕಗಳಿಂದ ಈ ಕ್ಯಾಂಪ್‌ನಲ್ಲಿ 25000 ದಷ್ಟು ನಿರಾಶ್ರಿತರು ಆಶ್ರಯಪಡೆದುಕೊಂಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ರಾಯಚೂರು ಕ್ಯಾಂಪ್‌ನ 5 ಬಾಂಗ್ಲಾ ನಿರಾಶ್ರಿತರಿಗೆ ಭಾರತದ ಪೌರತ್ವ, ಸಿಎಎ ಪ್ರಕಾರ ಕರ್ನಾಟಕದಲ್ಲಿರುವವರಿಗೆ ಸಿಕ್ಕಿದ್ದು ಇದೇ ಮೊದಲು.
ರಾಯಚೂರು ಕ್ಯಾಂಪ್‌ನ 5 ಬಾಂಗ್ಲಾ ನಿರಾಶ್ರಿತರಿಗೆ ಭಾರತದ ಪೌರತ್ವ, ಸಿಎಎ ಪ್ರಕಾರ ಕರ್ನಾಟಕದಲ್ಲಿರುವವರಿಗೆ ಸಿಕ್ಕಿದ್ದು ಇದೇ ಮೊದಲು.

ರಾಯಚೂರು: ಸಿಂಧನೂರು ತಾಲೂಕಿನ ಪರಿಹಾರ ಶಿಬಿರಗಳಲ್ಲಿ ನೆಲೆಸಿರುವ ಐವರು ಬಾಂಗ್ಲಾದೇಶದ ನಿರಾಶ್ರಿತರಿಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯ ಅನುಸಾರವಾಗಿ ಭಾರತೀಯ ಪೌರತ್ವವನ್ನು ನೀಡಲಾಗಿದೆ. ಈ ಶಾಸನದ ನಿಬಂಧನೆಗಳಂತೆ ಕರ್ನಾಟಕದಲ್ಲಿ ಆಶ್ರಯ ಪಡೆದಿರುವ ವಿದೇಶಿಯರಿಗೆ ಇದೇ ಮೊದಲ ಬಾರಿಗೆ ಭಾರತದ ಪೌರತ್ವ ಲಭಿಸಿದೆ.

ಬಾಂಗ್ಲಾದೇಶದಿಂದ 20,000 ಮತ್ತು ಮ್ಯಾನ್ಮಾರ್‌ನಿಂದ 5,000 ಸೇರಿದಂತೆ ಸರಿಸುಮಾರು 25,000 ಜನರು 1971 ರಿಂದ ಈ ಶಿಬಿರಗಳಲ್ಲಿ ನೆಲೆಸಿದ್ದಾರೆ. ನಾಲ್ಕು ದಶಕಗಳ ಅವಧಿಯಲ್ಲಿ ಇದೇ ಮೊದಲ ಸಲ ಐವರು ವಿದೇಶಿಯರಿಗೆ ಭಾರತದ ಪೌರತ್ವ ಲಭಿಸಿರುವಂಥದ್ದು.

ರಾಯಚೂರು ಕ್ಯಾಂಪ್‌ನಿಂದ ಪೌರತ್ವಕ್ಕೆ ಅರ್ಜಿ ಸಲ್ಲಿಕೆ

ಭಾರತೀಯ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪ್ರಕಾರ ಆನ್‌ಲೈನ್ ಮೂಲಕ ಪೌರತ್ವಕ್ಕೆ ರಾಯಚೂರು ಕ್ಯಾಂಪ್‌ನಿಂದ ಇದುವರೆಗೆ 146 ಬಾಂಗ್ಲಾದೇಶಿ ನಿರಾಶ್ರಿತರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಈಗ ಐವರಿಗೆ ಪೌರತ್ವ ಲಭಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.

ಕರ್ನಾಟಕದ ರಾಯಚೂರು ನಿರಾಶ್ರಿತರ ಶಿಬಿರದಲ್ಲಿರುವ ರಾಮಕೃಷ್ಣನ್ ಅಧಿಕಾರಿ, ಅದ್ವಿತ್‌, ಸುಕುಮಾರ್, ವಿಪ್ರದಾಸ್‌ ಗೋಲ್ಡರ್‌, ಜಯಂತ್ ಮಂಡಲ್‌ ಎಂಬುವವರಿಗೆ ಪೌರತ್ವ ಲಭಿಸಿರುವಂಥದ್ದು. ಕ್ಯಾಂಪ್‌ನಲ್ಲಿರುವ ವಕೀಲ ಪ್ರಣಬ್ ಬಾಲ ಈ ಮಾಹಿತಿ ನೀಡಿದ್ದಾಗಿ ವರದಿ ವಿವರಿಸಿದೆ.

ನಾಲ್ಕು ದಶಕ ಹಳೆಯ ಕ್ಯಾಂಪ್‌

ಕಳೆದ 40 ವರ್ಷಗಳಿಂದ ರಾಯಚೂರು ಕ್ಯಾಂಪ್‌ನಲ್ಲಿ 20000 ಬಾಂಗ್ಲಾದೇಶಿ ನಿರಾಶ್ರಿತರು, 5,000 ಬರ್ಮಾ (ಈಗ ಮ್ಯಾನ್ಮಾರ್‌) ನಿರಾಶ್ರಿತರಿದ್ದಾರೆ. ಈ ಶಿಬಿರ 1971ರ ಯುದ್ಧ ಸಂದರ್ಭದಲ್ಲಿ ಶುರುವಾದದ್ದು. ಪೂರ್ವ ಪಾಕಿಸ್ತಾನ ಪ್ರತ್ಯೇಕವಾದ ಯುದ್ಧದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಇವರೆಲ್ಲ ಆಶ್ರಯ ಪಡೆದವರು. ಆ ಸಮರದಲ್ಲೇ ಬಾಂಗ್ಲಾದೇಶ ಹೊಸ ದೇಶವಾಗಿ ಉದಯಿಸಿತು.

ಈ 25,000 ನಿರಾಶ್ರಿತರು 932 ಕುಟುಂಬಗಳದ್ದಾಗಿದೆ. ಒಟ್ಟು 5 ಶಿಬಿರಗಳಲ್ಲಿ ಇವರು ನೆಲೆಸಿದ್ದಾರೆ. ಈ ಪೈಕಿ 727 ಕುಟುಂಬ ಬಾಂಗ್ಲಾದೇಶದವರದ್ದು, 205 ಕುಟುಂಬ ಬರ್ಮಾದವರದ್ದು.

ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಸಿಂಧನೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿಯ ಮಾಜಿ ಸಂಸದ ಕೆ ವಿರೂಪಾಕ್ಷಪ್ಪ ಅವರು ವಲಸಿಗರಿಗೆ ಪೌರತ್ವ ನೀಡುವಂತೆ ಮನವಿ ಸಲ್ಲಿಸಿದ್ದರು. ಅಲ್ಲದೆ, ನಿರಾಶ್ರಿತರ ಶಿಬಿರಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದೂ ಆಗ್ರಹಿಸಿದ್ದರು. ಇದಾದ ಬಳಿಕ, ಜಿಲ್ಲಾಡಳಿತ ಒಂದು ಪರಾಮರ್ಶೆ ಸಮಿತಿ ರಚಿಸಿ ಕೆಲವು ನಿರಾಶ್ರಿತರಿಗೆ ಪೌರತ್ವ ನೀಡುವಂತೆ ಶಿಫಾರಸು ಮಾಡಿತು.

Whats_app_banner