ಕನ್ನಡ ಸುದ್ದಿ  /  ಕರ್ನಾಟಕ  /  Memu Train: ರೈಲು ಕೇಬಲ್ ವಾರ್ಷಿಕ ದುರಸ್ತಿ; ಇಂದು ಬಂಗಾರಪೇಟೆ, ಚಿಕ್ಕಬಳ್ಳಾಪುರ ಮಾರ್ಗದ ಮೆಮು ರೈಲು ಸಂಚಾರ ರದ್ದು

MEMU Train: ರೈಲು ಕೇಬಲ್ ವಾರ್ಷಿಕ ದುರಸ್ತಿ; ಇಂದು ಬಂಗಾರಪೇಟೆ, ಚಿಕ್ಕಬಳ್ಳಾಪುರ ಮಾರ್ಗದ ಮೆಮು ರೈಲು ಸಂಚಾರ ರದ್ದು

ರೈಲು ಕೇಬಲ್ ವಾರ್ಷಿಕ ದುರಸ್ತಿ ಹಿನ್ನೆಲೆಯಲ್ಲಿ ಹಲವು ಮೆಮು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಯಾವೆಲ್ಲ ಮಾರ್ಗದ ರೈಲುಗಳ ಸೇವೆ ಸ್ಥಗಿತವಾಗಿದೆ ಅನ್ನೋದರ ವಿವರ ತಿಳಿಯಿರಿ.

ರೈಲು ಕೇಬಲ್ ವಾರ್ಷಿಕ ದುರಸ್ತಿ ಕಾರ್ಯ ಹಿನ್ನೆಲೆಯಲ್ಲಿ ಮೇ 23ರ ಗುರುವಾರ ಬಂಗಾರಪೇಟೆ, ಚಿಕ್ಕಬಳ್ಳಾಪುರ ಮಾರ್ಗದ ಮೆಮು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.
ರೈಲು ಕೇಬಲ್ ವಾರ್ಷಿಕ ದುರಸ್ತಿ ಕಾರ್ಯ ಹಿನ್ನೆಲೆಯಲ್ಲಿ ಮೇ 23ರ ಗುರುವಾರ ಬಂಗಾರಪೇಟೆ, ಚಿಕ್ಕಬಳ್ಳಾಪುರ ಮಾರ್ಗದ ಮೆಮು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.

ಬೆಂಗಳೂರು: ಬೈಯ್ಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ (Baiyappanahalli Railway Station) ಕ್ಯಾಬಿನ್‌ನಲ್ಲಿ ವಾರ್ಷಿಕ ಕೇಬಲ್ ಮೆಗರಿಂಗ್ ಕೆಲಸ ( Train Cable Meggering Work) ನಡೆಯುತ್ತಿರುವುದರಿಂದ ಇಂದು (ಮೇ 23, ಗುರುವಾರ) ವಿವಿಧ ಮಾರ್ಗಗಳ ಮೆಮು ವಿಶೇಷ ರೈಲುಗಳ (MEMU Special Train) ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಯಾವ ಮಾರ್ಗದ, ಯಾವೆಲ್ಲಾ ರೈಲುಗಳನ್ನು ರದ್ದು ಮಾಡಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಮೇ 23ರ ಗುರುವಾರ ರದ್ದಾಗಿರುವ ರೈಲುಗಳ ಮಾಹಿತಿ

 1. ರೈಲು ಸಂಖ್ಯೆ 01766 ವೈಟ್‌ಫೀಲ್ಡ್-ಕೆಎಸ್‌ಆರ್ ಬೆಂಗಳೂರು ವಿಶೇಷ ಮೆಮು ರೈಲು ಭಾಗಶಃ ರದ್ದಾಗಿದೆ
 2. ರೈಲು ಸಂಖ್ಯೆ 06389 ಕೆಎಸ್ಆರ್ ಬೆಂಗಳೂರು-ಬಂಗಾರಪೇಟೆ ಮೆಮು ವಿಶೇಷ ರೈಲು, ಕೆಎಸ್ಆರ್ ಬೆಂಗಳೂರು-ವೈಟ್‌ಫೀಲ್ಡ್ ನಡುವಿನ ರೈಲು ಭಾಗಶಃ ರದ್ದಾಗಿದೆ.
 3. ರೈಲು ಸಂಖ್ಯೆ 06535 ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ಮೆಮು ವಿಶೇಷ ರೈಲು ಯಲಹಂಕ-ಬೆಂಗಳೂರು ಕಂಟೋನ್ಮೆಂಟ್ (ಕ್ಯಾಂಟ್) ನಡುವೆ ಭಾಗಶಃ ರದ್ದಾಗಿದೆ
 4. ರೈಲು ಸಂಖ್ಯೆ 06536 ಬೆಂಗಳೂರು ಕ್ಯಾಂಟ್-ಚಿಕ್ಕಬಳ್ಳಾಪುರ ಮೆಮು ವಿಶೇಷ ರೈಲು. ಬೆಂಗಳೂರು ಕ್ಯಾಂಟ್-ಯಲಹಂಕ ನಡುವೆ ಭಾಗಶಃ ರದ್ದಾಗಿದೆ.
 5. ರೈಲು ಸಂಖ್ಯೆ 01773 ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು. ಕೃಷ್ಣರಾಜಪುರಂ-ಕೆಎಸ್‌ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದೆ.
 6. ರೈಲು ಸಂಖ್ಯೆ. 01774 ಕೆಎಸ್‌ಆರ್ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ) ಬೆಂಗಳೂರು-ಮಾರಿಕುಪ್ಪಂ ವಿಶೇಷ ಮೆಮು ರೈಲು.ಕೆಎಸ್‌ಆರ್ ಬೆಂಗಳೂರು-ಕೃಷ್ಣರಾಜಪುರಂ ನಡುವಿನ ರದ್ದು ಕ್ಯಾನ್ಸಲ್
 7. ರೈಲು ಸಂಖ್ಯೆ 01776 ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು. ಕೃಷ್ಣರಾಜಪುರಂ-ಕೆಎಸ್‌ಆರ್ ಬೆಂಗಳೂರು ನಡುವೆ ಭಾಗಶಃ ರದ್ದು
 8. ರೈಲು ಸಂಖ್ಯೆ 01775 ಕೆಎಸ್‌ಆರ್ ಬೆಂಗಳೂರು-ಮಾರಿಕುಪ್ಪಂ ವಿಶೇಷ ಮೆಮು ರೈಲು. ಕೆಎಸ್‌ಆರ್ ಬೆಂಗಳೂರು-ಕೃಷ್ಣರಾಜಪುರಂ ನಡುವಿನ ರೈಲು ರದ್ದು
 9. ರೈಲು ಸಂಖ್ಯೆ 01793 ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು. ಬಂಗಾರಪೇಟೆ-ಕೃಷ್ಣರಾಜಪುರಂ ನಡುವೆ ಭಾಗಶಃ ರದ್ದಾಗಿದೆ
 10. ರೈಲು ಸಂಖ್ಯೆ 01794 ಕೃಷ್ಣರಾಜಪುರಂ-ಮಾರಿಕುಪ್ಪಂ ವಿಶೇಷ ರೈಲು. ಕೃಷ್ಣರಾಜಪುರಂ-ಬಂಗಾರಪೇಟೆ ನಡುವೆ ಭಾಗಶಃ ರದ್ದು
 11. ರೈಲು ಸಂಖ್ಯೆ 06529 ಕೆಎಸ್‌ಆರ್ ಬೆಂಗಳೂರು-ಕುಪ್ಪಂ ವಿಶೇಷ ರೈಲು. ಕೆಎಸ್‌ಆರ್ ಕೆಎಸ್‌ಆರ್ ಬೆಂಗಳೂರು-ಕೃಷ್ಣರಾಜಪುರಂ ನಡುವೆ ಭಾಗಶಃ ರದ್ದುಗೊಳ್ಳುತ್ತದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024