ಕನ್ನಡ ಸುದ್ದಿ  /  Karnataka  /  Railway News 8 Major Trains Will Halt At Chikkajajur Railway Station In Chitradurga District Connects Many Area Kub

Railway News: ಚಿತ್ರದುರ್ಗದ ಚಿಕ್ಕಜಾಜೂರಿನಲ್ಲಿ ಹಲವು ರೈಲುಗಳ ಪ್ರಾಯೋಗಿಕ ನಿಲುಗಡೆ, ಯಾವ ರೈಲಿಗೆ ಅವಕಾಶ

Chitradurga ಭಾರತೀಯ ರೈಲ್ವೆ ನೈರುತ್ಯ ವಲಯವು ಚಿಕ್ಕಜಾಜೂರಿನಲ್ಲಿ ಹಲವು ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಗೆ ಅವಕಾಶ ನೀಡಿದೆ.

ಚಿಕ್ಕಜಾಜೂರಿನಲ್ಲಿ ಹಲವು ರೈಲುಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ
ಚಿಕ್ಕಜಾಜೂರಿನಲ್ಲಿ ಹಲವು ರೈಲುಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ

ಬೆಂಗಳೂರು: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಪ್ರಮುಖ ವಹಿವಾಟು ಕೇಂದ್ರವಾಗಿರುವ ಚಿಕ್ಕಜಾಜೂರು ಜಂಕ್ಷನ್‌ ರೈಲ್ವೆ ನಿಲ್ದಾಣವನ್ನು ಈಗಾಗಲೇ ಅಭಿವೃದ್ದಿಪಡಿಸಲಾಗಿದ್ದು, ಇಲ್ಲಿ ಹಲವು ರೈಲುಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ.

ಈ ರೈಲ್ವೆ ನಿಲ್ದಾಣ ಚಿತ್ರದುರ್ಗ, ಹೊಳಲ್ಕೆರೆ, ಚನ್ನಗಿರಿ ಭಾಗಕ್ಕೆ ಹೋಗುವ ಪ್ರಯಾಣಿಕರಗೆ ಸಂಪರ್ಕ ಕಲ್ಪಿಸಲಿದೆ. ಈ ಕಾರಣದಿಂದ ಕೆಳಗಿನ ರೈಲುಗಳಿಗೆ ಚಿಕ್ಕಜಾಜೂರು ನಿಲ್ದಾಣದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಗೆ ಅವಕಾಶ ಒದಗಿಸಲಾಗುತ್ತಿದೆ. ಈ ರೈಲುಗಳ ಪ್ರಾರಂಭದ ದಿನಾಂಕದಿಂದ (ಜೆಸಿಒ) ಮುಂದಿನ ಆದೇಶ ಬರುವವರೆಗೂ ಜಾರಿಯಲ್ಲಿರಲಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.

1. ಮಾರ್ಚ್ 5, 2024 ರಿಂದ ರೈಲು ಸಂಖ್ಯೆ 11006 ಪುದುಚೇರಿ-ದಾದರ್ ಚಾಲುಕ್ಯ ಟ್ರೈ ವೀಕ್ಲಿ ಎಕ್ಸ್ ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಬೆಳಿಗ್ಗೆ 10:39/10:40 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.

2. ಮಾರ್ಚ್ 8, 2024 ರಿಂದ ರೈಲು ಸಂಖ್ಯೆ 11005 ದಾದರ್-ಪುದುಚೇರಿ ಚಾಲುಕ್ಯ ಟ್ರೈ ವೀಕ್ಲಿ ಎಕ್ಸ್ ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಸಂಜೆ 04:04/04:05 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.

3. ಮಾರ್ಚ್ 7, 2024 ರಿಂದ ರೈಲು ಸಂಖ್ಯೆ 11022 ತಿರುನೆಲ್ವೇಲಿ-ದಾದರ್ ಟ್ರೈ ವೀಕ್ಲಿ ಎಕ್ಸ್ ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಬೆಳಿಗ್ಗೆ 10:39/10:40 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.

4. ಮಾರ್ಚ್ 5, 2024 ರಿಂದ ರೈಲು ಸಂಖ್ಯೆ 11021 ದಾದರ್-ತಿರುನೆಲ್ವೇಲಿ ಟ್ರೈ ವೀಕ್ಲಿ ಎಕ್ಸ್ ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಸಂಜೆ 04:04/04:05 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.

5. ಮಾರ್ಚ್ 10, 2024 ರಿಂದ ರೈಲು ಸಂಖ್ಯೆ 11036 ಮೈಸೂರು-ದಾದರ್ ಶರಾವತಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಬೆಳಿಗ್ಗೆ 10:39/10:40 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.

6. ಮಾರ್ಚ್ 7, 2024 ರಿಂದ ರೈಲು ಸಂಖ್ಯೆ 11035 ದಾದರ್-ಮೈಸೂರು ಶರಾವತಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಸಂಜೆ 04:04/04:05 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.

7. ಮಾರ್ಚ್ 6, 2024 ರಿಂದ ರೈಲು ಸಂಖ್ಯೆ 17309 ಯಶವಂತಪುರ-ವಾಸ್ಕೋ ಡ ಗಾಮಾ ಡೈಲಿ ಎಕ್ಸ್ ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಸಂಜೆ 06:33/06:34 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.

8. ಮಾರ್ಚ್ 6, 2024 ರಿಂದ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ-ಯಶವಂತಪುರ ಡೈಲಿ ಎಕ್ಸ್ ಪ್ರೆಸ್ ರೈಲು ಚಿಕ್ಕಜಾಜೂರು ನಿಲ್ದಾಣಕ್ಕೆ ಬೆಳಿಗ್ಗೆ 08:02/08:03 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.

IPL_Entry_Point