Indian Railway: ಹುಬ್ಬಳ್ಳಿ ಗುಂತಕಲ್ ರೈಲು ಮಾರ್ಗದಲ್ಲಿ ಸಂಚಾರ ವ್ಯತ್ಯಯ, ಮೇ ನಲ್ಲಿ ಕೆಲ ರೈಲು ನಿಯಂತ್ರಣ
ರೈಲ್ವೆ ನಿಲ್ದಾಣಗಳಲ್ಲಿ ಕಾಮಗಾರಿ ನಡೆಯುತ್ತಿರುವ ಕರ್ನಾಟಕದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಬೇಸಿಗೆ ವಿಶೇಷ ರೈಲು ಕೂಡ ಸಂಚರಿಸಲಿವೆ. ಅವುಗಳ ವಿವರ ಇಲ್ಲಿದೆ.
ಹುಬ್ಬಳ್ಳಿ: ಭಾರತೀಯ ರೈಲ್ವೆಯ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯವು ಹಲವು ರೈಲು ಮಾರ್ಗಗಳು, ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗುವ ಮಾಹಿತಿಯನ್ನು ನೀಡಲಿದೆ. ಹುಬ್ಬಳ್ಳಿ ಹಾಗೂ ಗುಂಕತಲ್ ನಡುವೆ ಕಾರಿಡಾರ್ ಕಾಮಗಾರಿ ನಡೆಯುತ್ತಿರುವುದರಿಂದ ಪ್ಯಾಸೆಂಜರ್ ರೈಲಿನ ಸಂಚಾರ ಭಾಗಶಃ ರದ್ದಾಗಲಿದೆ. ಇದಲ್ಲದೇ ಮೇ ತಿಂಗಳಿನಲ್ಲಿ ಕರ್ನಾಟಕದ ನಾನಾ ಕಡೆಗಳಲ್ಲಿ ಹಮ್ಮಿಕೊಂಡಿರುವ ರೈಲ್ವೆ ಕಾರಿಡಾರ್ ಬ್ಲಾಕ್‌ನಿಂದಾಗಿ ರೈಲುಗಳ ನಿಯಂತ್ರಣ ಕೂಡ ಆಗಲಿದೆ ಎಂದು ಮಾಹಿತಿ ನೀಡಲಾಗಿದೆ. ಬೇಸಿಗೆ ರಜೆ ಹೊರಡುವ ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ ಹಾಗೂ ರಿಷಿಕೇಶ ನಗರದ ನಡುವೆ ವಿಶೇಷ ರೈಲು ಸಂಚಾರವೂ ಇರಲಿದೆ.
ಗುಂತಕಲ್ ಮಾರ್ಗದ ರೈಲು
ಏಪ್ರಿಲ್ 30 ರಿಂದ ಗುಂತಕಲ್ ವಿಭಾಗದಲ್ಲಿನ ರೋಲಿಂಗ್ ಕಾರಿಡಾರ್ ಕಾಮಗಾರಿಯ ಕಾರಣದಿಂದ ಈ ಕೆಳಗಿನ ಕೆಲವು ರೈಲುಗಳನ್ನು ಭಾಗಶಃ ರದ್ದು ಮಾಡಲು ದಕ್ಷಿಣ ಮಧ್ಯ ರೈಲ್ವೆಯು ಸೂಚನೆ ನೀಡಿದೆ,
1. ಹುಬ್ಬಳ್ಳಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07337 ಎಸ್.ಎಸ್.ಎಸ್ ಹುಬ್ಬಳ್ಳಿ - ಗುಂತಕಲ್ ಪ್ಯಾಸೆಂಜರ್ ರೈಲನ್ನು ಏಪ್ರಿಲ್ 30 ರಿಂದ ಮುಂದಿನ ಆದೇಶದವರೆಗೆ ತೋರಣಗಲ್ಲು ಮತ್ತು ಗುಂತಕಲ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
2. ಗುಂತಕಲ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07338 ಗುಂತಕಲ್ - ಎಸ್.ಎಸ್.ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ರೈಲನ್ನು ಏಪ್ರಿಲ್ 30 ರಿಂದ ಮುಂದಿನ ಆದೇಶದವರೆಗೆ ಗುಂತಕಲ್ ಮತ್ತು ತೋರಣಗಲ್ಲು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
ಕಾರಿಡಾರ್ ಬ್ಲಾಕ್ ನಿಂದ ಸಂಚಾರದಲ್ಲಿ ವ್ಯತ್ಯಯ
⦁ ರೈಲು ಗಾಡಿ ಸಂಖ್ಯೆ 16526 ಬೆಂಗಳೂರು-ಕನ್ಯಾಕುಮಾರಿ ಎಕ್ಸ್‌ಪ್ರೆಸ್ ಏ. 30ರಂದು 75 ನಿಮಿಷಗಳು ವಿಳಂಬ
⦁ ರೈಲು ಗಾಡಿ ಸಂಖ್ಯೆ 12684 ಬೆಂಗಳೂರು-ಎರ್ನಾಕುಲಂ 145 ರೈಲು ನಿಮಿಷ
⦁ ರೈಲು ಗಾಡಿ ಸಂಖ್ಯೆ 12257 ಯಶವಂತಪುರ - ಕೊಚುವೇಲಿ ರೈಲು 30 ನಿಮಿಷ ತಡ
⦁ ರೈಲು ಗಾಡಿ ಸಂಖ್ಯೆ 16315 ಮೈಸೂರು-ಕೊಚುವೇಲಿ ರೈಲು 190 ನಿಮಿಷ ತಡ
ಹುಬ್ಬಳ್ಳಿ ರಿಷಿಕೇಷಕ್ಕೆ ರೈಲು
ಬೇಸಿಗೆ ಕಾಲದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಗೆ ಅನುಗುಣವಾಗಿ ವಿಶೇಷ ರೈಲುಗಳನ್ನು ನಿರ್ವಹಿಸಲಾಗುತ್ತದೆ. ವಿವರಗಳು ಈ ಕೆಳಗಿನಂತಿವೆ:
ರೈಲು ಸಂಖ್ಯೆ.06225/06226 ಹುಬ್ಬಳ್ಳಿ - ಯೋಗ ನಗರಿ ರಿಷಿಕೇಶ್-ಹುಬ್ಬಳ್ಳಿ ಎಕ್ಸ್‌ಪ್ರೆಸ್ ವಿಶೇಷ ರೈಲು ಮೇ ತಿಂಗಳಲ್ಲಿ ಸಂಚರಿಸಲಿದೆ. ಪ್ರತಿ ಸೋಮವಾರ ಅಂದರೆ ಸೋಮವಾರ ಮೇ 06,13,20 ಮತ್ತು 27ರಂದು ಸಂಚಾರ ಇರಲಿದೆ.
ರೈಲು ಸಂಖ್ಯೆ 06225 ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ರಾತ್ರಿ 9:45 ಗಂಟೆಗೆ ಹೊರಟು ಮೂರನೇ ದಿನ ಯೋಗ ನಗರಿ ರಿಷಿಕೇಶಕ್ಕೆಸಂಜೆ 6:45 ಗಂಟೆಗೆ ತಲುಪುತ್ತದೆ.
ರೈಲು ಗಾಡಿ 06226- ಯೋಗ ನಗರಿ ರಿಷಿಕೇಶ್- ಹುಬ್ಬಳ್ಳಿ ವಿಶೇಷ ರೈಲು ಪ್ರತಿ ಗುರುವಾರ ಸಂಚರಿಸಲಿದೆ. ಮೇ. 02,09,16,23 ಮತ್ತು 30ರಂದು ಸಂಚಾರ ಇರಲಿದೆ. ಈ ರೈಲು ರಿಷಿಕೇಶದಿಂದ ಸಂಜೆ5:55 ಗಂಟೆಗೆ ಹೊರಟು ಮೂರನೇ ದಿನ ಯೋಗ ನಗರಿ ಋಷಿಕೇಶಕ್ಕೆ ಸಂಜೆ 5:30 ಗಂಟೆಗೆ ಹುಬ್ಬಳ್ಳಿ ತಲುಪುತ್ತದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06226 ಯೋಗ ನಗರಿ ಋಷಿಕೇಶದಿಂದ 17:55 ಗಂಟೆಗೆ ಹೊರಟು, ಮೂರನೇ ದಿನ 17:30 ಗಂಟೆಗೆ SSS ಹುಬ್ಬಳ್ಳಿ ತಲುಪುತ್ತದೆ.
ರೈಲು ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್‌ನಗರ, ಕೋಪರ್‌ಗಾಂವ್, ಮನ್ಮಾಡ್, ಭೂಸಾವಲ್, ಭೋಪಾಲ್, ಬಿನಾ, ವಿರಂಗನ ಲಕ್ಷ್ಮೀಬಾಯಿ ಝಾನ್ಸಿ, ಮಥುರಾ, ಹಜರತ್ ನಿಜಾಮುದ್ದೀನ್, ಘಾಜಿಯಾಬಾದ್, ಮೇರಟ್‌ನಲ್ಲಿ ನಿಲುಗಡೆ ಮಾಡಲಿದೆ. ನಗರ, ಖತೌಲಿ, ಮುಜಾಫರ್‌ನಗರ, ದಿಯೋಬಂದ್, ತಾಪ್ರಿ, ರೂರ್ಕಿ, ಹರಿದ್ವಾರ ನಿಲ್ದಾಣಗಳಲ್ಲೂ ನಿಲ್ದಾಣ ಇರಲಿದೆ. ವಿಶೇಷ ರೈಲುಗಳು 2 ಎಸಿ-2 ಟೈರ್, 2 ಎಸಿ-3 ಟೈರ್, 12 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್/ಡಿ ಸೇರಿದಂತೆ ಒಟ್ಟು 22 ಕೋಚ್‌ಗಳನ್ನು ಒಳಗೊಂಡಿರಲಿದೆ.