ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 27; ವಿವಿಧ ಡ್ಯಾಮ್‌ಗಳಿಗೆ ಒಳಹರಿವು ಹೆಚ್ಚಳ, ನೀರಿನ ಮಟ್ಟದ ವಿವರ ಹೀಗಿದೆ-rain news reservoir water level today on august 27 almatti dam krs tungabhadra kabini bhadra hidkal jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 27; ವಿವಿಧ ಡ್ಯಾಮ್‌ಗಳಿಗೆ ಒಳಹರಿವು ಹೆಚ್ಚಳ, ನೀರಿನ ಮಟ್ಟದ ವಿವರ ಹೀಗಿದೆ

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 27; ವಿವಿಧ ಡ್ಯಾಮ್‌ಗಳಿಗೆ ಒಳಹರಿವು ಹೆಚ್ಚಳ, ನೀರಿನ ಮಟ್ಟದ ವಿವರ ಹೀಗಿದೆ

Reservoir Water Level: ಕರ್ನಾಟಕ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಸೋಮವಾರ ಸಂಪೂರ್ಣ ಭರ್ತಿಯಾಗಿದ್ದ ಆಲಮಟ್ಟಿ ಜಲಾಶಯದಿಂದ ಅಲ್ಪ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಇದೇ ವೇಳೆ ಕೆಲವು ಜಲಾಶಯಗಳಿಗೆ ಒಳಹರಿವು ಹೆಚ್ಚಾದ ಕಾರಣದಿಂದ, ಹೆಚ್ಚುವರಿ ನೀರನ್ನು ನದಿಗೆ ಹೊರಬಿಡಲಾಗಿದೆ.

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 27; ವಿವಿಧ ಡ್ಯಾಮ್‌ಗಳಿಗೆ ಒಳಹರಿವು ಹೆಚ್ಚಳ
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 27; ವಿವಿಧ ಡ್ಯಾಮ್‌ಗಳಿಗೆ ಒಳಹರಿವು ಹೆಚ್ಚಳ (PTI)

ಕರ್ನಾಟಕ ರಾಜ್ಯದ ಹಲವು ಭಾಗಗಳಲ್ಲಿ ಆಗಸ್ಟ್‌ 26ರ ಸೋಮವಾರ ಮಳೆಯಾಗಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ಒಳನಾಡಿನ ಕೆಲವು ಸ್ಥಳಗಳಲ್ಲಿ ಮಳೆಯಾಗಿದೆ. ನೆೈರುತ್ಯ ಮುಂಗಾರು ತುಸು ಚುರುಕಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಕ್ಯಾಸೆಲ್‌ರಾಕ್‌ನಲ್ಲಿ 16 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಹಲವು ಭಾಗಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಮುಂದಿನ 5 ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯ ಒಂದೆರಡು ಸ್ಥಳಗಳಲ್ಲಿ ಇಂದು ಕೂಡಾ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಬೀದರ್‌, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು ಸೇರಿದಂತೆ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಳೆಯಿಂದಾಗಿ ಕರ್ನಾಟಕ ರಾಜ್ಯದಲ್ಲಿರುವ ಹಲವು ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ರಾಜ್ಯದ ಪ್ರಮುಖ 22 ಜಲಾಶಯಗಳ ಒಟ್ಟು ಸಾಮರ್ಥ್ಯದ 81.12 ಪ್ರತಿಶತ ನೀರು ಭರ್ತಿಯಾಗಿದೆ. ನಿನ್ನೆ (ಆಗಸ್ಟ್‌ 26) ಸಂಪೂರ್ಣ ಭರ್ತಿಯಾಗಿದ್ದ ಆಲಮಟ್ಟಿ ಜಲಾಶಯದಿಂದ ಅಲ್ಪ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಕೆಲವು ಜಲಾಶಯಗಳಿಗೆ ಒಳಹರಿವು ಹೆಚ್ಚಾದ ಕಾರಣದಿಂದ, ಹೆಚ್ಚುವರಿ ನೀರನ್ನು ನದಿಗೆ ಹೊರಬಿಡಲಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರಗಳು ಈ ಕೆಳಗಿನಂತಿದೆ.

ಆಲಮಟ್ಟಿ ಜಲಾಶಯ‌ (99 ಪ್ರತಿಶತ ಭರ್ತಿ)

  • ಇಂದಿನ ನೀರಿನ ಮಟ್ಟ: 121.95 ಟಿಎಂಸಿ
  • ಒಳಹರಿವು: 66211 ಕ್ಯೂಸೆಕ್ಸ್
  • ಹೊರಹರಿವು: 78630 ಕ್ಯೂಸೆಕ್ಸ್‌

ತುಂಗಭದ್ರಾ ಜಲಾಶಯ (82 ಪ್ರತಿಶತ ಭರ್ತಿ)

  • ಇಂದಿನ ನೀರಿನ ಮಟ್ಟ: 86.87 ಟಿಎಂಸಿ
  • ಒಳಹರಿವು: 17311 ಕ್ಯೂಸೆಕ್ಸ್
  • ಹೊರಹರಿವು: 270 ಕ್ಯೂಸೆಕ್ಸ್‌

ಭದ್ರಾ ಜಲಾಶಯ (90 ಪ್ರತಿಶತ ಭರ್ತಿ)

  • ಇಂದಿನ ನೀರಿನ ಮಟ್ಟ: 64.87 ಟಿಎಂಸಿ
  • ಒಳಹರಿವು: 5614 ಕ್ಯೂಸೆಕ್ಸ್
  • ಹೊರಹರಿವು: 211 ಕ್ಯೂಸೆಕ್ಸ್‌

ಕೆಆರ್‌ಎಸ್ (ಕೃಷ್ಣರಾಜಸಾಗರ)‌ -96 ಪ್ರತಿಶತ ಭರ್ತಿ

  • ಇಂದಿನ ನೀರಿನ ಮಟ್ಟ: 47.953 ಟಿಎಂಸಿ
  • ಒಳಹರಿವು: 4379 ಕ್ಯೂಸೆಕ್ಸ್
  • ಹೊರಹರಿವು: 3183 ಕ್ಯೂಸೆಕ್ಸ್‌

ಹೇಮಾವತಿ ಜಲಾಶಯ (98 ಪ್ರತಿಶತ ಭರ್ತಿ)

  • ಇಂದಿನ ನೀರಿನ ಮಟ್ಟ: 36.639 ಟಿಎಂಸಿ
  • ಒಳಹರಿವು: 9485 ಕ್ಯೂಸೆಕ್ಸ್
  • ಹೊರಹರಿವು: 800 ಕ್ಯೂಸೆಕ್ಸ್

ಹಾರಂಗಿ ಜಲಾಶಯ (96 ಪ್ರತಿಶತ ಭರ್ತಿ)

  • ಇಂದಿನ ನೀರಿನ ಮಟ್ಟ: 8.209 ಟಿಎಂಸಿ
  • ಒಳಹರಿವು: 2156 ಕ್ಯೂಸೆಕ್ಸ್
  • ಹೊರಹರಿವು: 250 ಕ್ಯೂಸೆಕ್ಸ್

ಇದನ್ನೂ ಓದಿ | ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 26; ಆಲಮಟ್ಟಿ ಡ್ಯಾಮ್ ಸಂಪೂರ್ಣ ಭರ್ತಿ, ವಿವಿಧ ಜಲಾಶಯಗಳ ವಿವರ ಇಲ್ಲಿದೆ

ಹಿಡ್ಕಲ್‌ ಜಲಾಶಯ (98 ಪ್ರತಿಶತ ಭರ್ತಿ)

  • ಇಂದಿನ ನೀರಿನ ಮಟ್ಟ: 50.2 ಟಿಎಂಸಿ
  • ಒಳಹರಿವು: 14588 ಕ್ಯೂಸೆಕ್ಸ್
  • ಹೊರಹರಿವು: 11323 ಕ್ಯೂಸೆಕ್ಸ್

ಮಲಪ್ರಭಾ (94 ಪ್ರತಿಶತ ಭರ್ತಿ)

  • ಇಂದಿನ ನೀರಿನ ಮಟ್ಟ: 35.65 ಟಿಎಂಸಿ
  • ಒಳಹರಿವು: 11615 ಕ್ಯೂಸೆಕ್ಸ್
  • ಹೊರಹರಿವು: 7152 ಕ್ಯೂಸೆಕ್ಸ್

ನಾರಾಯಣಪುರ ಜಲಾಶಯ (92 ಪ್ರತಿಶತ ಭರ್ತಿ)

  • ಇಂದಿನ ನೀರಿನ ಮಟ್ಟ: 30.83 ಟಿಎಂಸಿ
  • ಒಳಹರಿವು: 79040 ಕ್ಯೂಸೆಕ್ಸ್
  • ಹೊರಹರಿವು: 82971 ಕ್ಯೂಸೆಕ್ಸ್

ಕಬಿನಿ ಜಲಾಶಯ (94 ಪ್ರತಿಶತ ಭರ್ತಿ)

  • ಇಂದಿನ ನೀರಿನ ಮಟ್ಟ: 18.428 ಟಿಎಂಸಿ
  • ಒಳಹರಿವು: 2611 ಕ್ಯೂಸೆಕ್ಸ್
  • ಹೊರಹರಿವು: 1000 ಕ್ಯೂಸೆಕ್ಸ್

ಹವಾಮಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | Karnataka Weather: ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇನ್ನೂ 5 ದಿನ ಮಳೆ; ರಾಜ್ಯದ ಹವಾಮಾನ ವರದಿ