Ramanagara: ಜ್ಯೂಸ್ ಎಂದು ಕೀಟನಾಶಕ ಸೇವಿಸಿ 2 ವರ್ಷದ ಮಗು ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  Ramanagara: ಜ್ಯೂಸ್ ಎಂದು ಕೀಟನಾಶಕ ಸೇವಿಸಿ 2 ವರ್ಷದ ಮಗು ಸಾವು

Ramanagara: ಜ್ಯೂಸ್ ಎಂದು ಕೀಟನಾಶಕ ಸೇವಿಸಿ 2 ವರ್ಷದ ಮಗು ಸಾವು

Ramanagara news: ರೇಷ್ಮೆ ಹುಳುವಿನ ಗೂಡಿಗೆ ಸಿಂಪಡಿಸಿಲು ಮನೆಯಲ್ಲಿ ಇರಿಸಿದ್ದ ದ್ರಾವಕವನ್ನು ಜ್ಯೂಸ್ ಕುಡಿದು 2 ವರ್ಷದ ಮಗು ಸಾವನ್ನಪ್ಪಿದೆ.

ಮೃತಪಟ್ಟ ಮಗು
ಮೃತಪಟ್ಟ ಮಗು

ರಾಮನಗರ: ಜ್ಯೂಸ್ ಎಂದು ಕೀಟನಾಶಕ ಸೇವಿಸಿ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.

ಮೃತ ಮಗುವನ್ನು ಯಶಾಂಕ್.ಕೆ.ಗೌಡ (2) ಎಂದು ಗುರುತಿಸಲಾಗಿದೆ. ರೇಷ್ಮೆ ಹುಳುವಿನ ಗೂಡಿಗೆ ಸಿಂಪಡಿಸಿಲು ಮನೆಯಲ್ಲಿ ಇರಿಸಿದ್ದ ದ್ರಾವಕವನ್ನು ಜ್ಯೂಸ್ ಎಂದು ಯಶಾಂಕ್ ಕುಡಿದಿದ್ದಾನೆ.

ಅಸ್ವಸ್ಥಗೊಂಡ ಮಗುವನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ವಿಷಕಾರಿ ವಸ್ತುಗಳನ್ನು ಮಕ್ಕಳಿಗೆ ಕಾಣುವಂತೆ, ಮಕ್ಕಳ ಕೈಗೆ ಸಿಗುವಂತೆ ಎಂದಿಗೂ ಇಡಬಾರದು ಎಂಬ ಅರಿವು ನಮ್ಮ-ನಿಮ್ಮೆಲ್ಲರಲ್ಲಿ ಇರಬೇಕು. ಇದೀಗ ಪೋಷಕರದೋ ಅಥವಾ ಮನೆಯ ಇತರ ಸದಸ್ಯರದ್ದೋ ನಿರ್ಲಕ್ಷ್ಯದಿಂದಾಗಿ ಪ್ರಪಂಚ ಜ್ಞಾನವೇ ಇಲ್ಲದ ಮಗು ಇಹಲೋಕ ತ್ಯಜಿಸಿರುವುದು ನೋವಿನ ಸಂಗತಿ.

ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮಲ್ಲಾಪುರ ಬಳಿ ನಡೆದಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್​ ಮಾಡಿ

Whats_app_banner