ಕನ್ನಡ ಸುದ್ದಿ  /  ಕರ್ನಾಟಕ  /  ಜಿಪ್ ಲೈನ್ ತುಂಡಾಗಿ ಬಿದ್ದು 35 ವರ್ಷದ ನರ್ಸ್ ಸಾವು; ರಾಮನಗರದ ರೆಸಾರ್ಟ್ ಮಾಲೀಕ, ಸಿಬ್ಬಂದಿ ವಿರುದ್ದ ಪ್ರಕರಣ ದಾಖಲು

ಜಿಪ್ ಲೈನ್ ತುಂಡಾಗಿ ಬಿದ್ದು 35 ವರ್ಷದ ನರ್ಸ್ ಸಾವು; ರಾಮನಗರದ ರೆಸಾರ್ಟ್ ಮಾಲೀಕ, ಸಿಬ್ಬಂದಿ ವಿರುದ್ದ ಪ್ರಕರಣ ದಾಖಲು

ರಾಮನಗರದ ಜಂಗಲ್ ಟ್ರಯಲ್ಸ್ ರೆಸಾರ್ಟ್‌ನಲ್ಲಿ ಜಿಪ್ ಲೈನ್ ತುಂಡಾಗಿ ಬಿದ್ದ ಪರಿಣಾಮ 35 ವರ್ಷದ ನರ್ಸ್ ಸಾವನ್ನಪ್ಪಿದ್ದು, ರೆಸಾರ್ಟ್ ಮಾಲೀಕರು ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜಿಪ್ ಲೈನ್ ತುಂಡಾಗಿ ಬಿದ್ದು 35 ವರ್ಷದ ನರ್ಸ್ ಸಾವನ್ನಪ್ಪಿರುವ ಘಟನೆ ರಾಮನಗರದ ಜಂಗಲ್ ಟ್ರಯಲ್ಸ್ ರೆಸಾರ್ಟ್‌ನಲ್ಲಿ ನಡೆದಿದೆ. ಈ ಸಂಬಂಧ ರೆಸಾರ್ಟ್ ಮಾಲೀಕ ಮತ್ತು ಸಿಬ್ಬಂದಿ ವಿರುದ್ದ ಪ್ರಕರಣ ದಾಖಲಾಗಿದೆ.
ಜಿಪ್ ಲೈನ್ ತುಂಡಾಗಿ ಬಿದ್ದು 35 ವರ್ಷದ ನರ್ಸ್ ಸಾವನ್ನಪ್ಪಿರುವ ಘಟನೆ ರಾಮನಗರದ ಜಂಗಲ್ ಟ್ರಯಲ್ಸ್ ರೆಸಾರ್ಟ್‌ನಲ್ಲಿ ನಡೆದಿದೆ. ಈ ಸಂಬಂಧ ರೆಸಾರ್ಟ್ ಮಾಲೀಕ ಮತ್ತು ಸಿಬ್ಬಂದಿ ವಿರುದ್ದ ಪ್ರಕರಣ ದಾಖಲಾಗಿದೆ.

ರಾಮನಗರ: ಹಾರೋಹಳ್ಳಿ ಬಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್‌ನಲ್ಲಿ (Jungle Resort Trials) ಇದ್ದಕ್ಕಿದ್ದಂತೆ ಜಿಪ್‌ ಲೈನ್ (Jip line) ಕೇಬಲ್ ತುಂಡಾದ ಪರಿಣಾಮ 35 ವರ್ಷದ ನರ್ಸ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾಹಸಮಯ ಆಟಗಳ ಸ್ಥಳದಲ್ಲಿ ಮೂಲಭೂತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಪ್ರಥಮ ಚಿಕಿತ್ಸಾ ಕೇಂದ್ರದ ಕೊರತೆ ಇತ್ತು ಎಂದು ಆರೋಪಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ರೆಸಾರ್ಟ್‌ನಲ್ಲಿ ತೀವ್ರ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಅತ್ತಿಬೆಲೆ ಮೂಲಕದ ರಂಜಿತಾ (35) ಮೃತ ದುರ್ದೈವಿ. ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಳೆದ ಭಾನುವಾರ (ಮೇ 19) ಬೆಳಿಗ್ಗೆ 11:15 ರ ಸುಮಾರಿಗೆ ಈ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ರೆಸಾರ್ಟ್ ಮ್ಯಾನೇಜರ್ ಪುಟ್ಟ ಮಾದು ಎಂಬುವರನ್ನು ಬಂಧಿಸಿದ್ದಾರೆ. ರೆಸಾರ್ಟ್ ಮಾಲೀಕರು ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೃತ ರಂಜಿತಾ ಎನ್ ಅವರು ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಯ 18 ಸಹೋದ್ಯೋಗಿಗಳೊಂದಿಗೆ ರೆಸಾರ್ಟ್‌ಗೆ ಬಂದಿದ್ದರು. ಪೊಲೀಸರ ಮಾಹಿತಿ ಪ್ರಕಾರ, ಜಿಪ್ ಲೈನ್ ಮೇಲೆ ನಡೆಯುತ್ತಿದ್ದ ಸಮಯದಲ್ಲಿ ಲೈನ್ ತುಂಡಾಗಿ ಬಿದ್ದಿದೆ. ಈ ವೇಳೆ ಲೈನ್ ಮೇಲೆ ಇದ್ದ ರಂಜಿತಾ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಈಕೆಯನ್ನು ಸಮೀಪದ ದಯಾನಂದ ಸಾಗರ್ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ರೆಸಾರ್ಟ್‌ನಲ್ಲಿ ಸುರಕ್ಷತಾ ಕ್ರಮಗಳು ಮತ್ತು ಹೆಲ್ಮೆಟ್‌ಗಳಂತಹ ಮೂಲಭೂತ ಉಪಕರಣಗಳ ಕೊರತೆಯನ್ನು ಇತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024