ಇನ್ನು ಪಡಿತರ ಕಾರ್ಡ್‌ನಲ್ಲಿರುವ ಹೆಸರಿನವರ ಕೆವೈಸಿ ಮಾಡಿಸಿಲ್ಲವೇ, ಇಂದೇ ಕಡೆ ದಿನ; ಹೀಗೆ ನೋಂದಣಿ ಮಾಡಿಸಿ
ಕನ್ನಡ ಸುದ್ದಿ  /  ಕರ್ನಾಟಕ  /  ಇನ್ನು ಪಡಿತರ ಕಾರ್ಡ್‌ನಲ್ಲಿರುವ ಹೆಸರಿನವರ ಕೆವೈಸಿ ಮಾಡಿಸಿಲ್ಲವೇ, ಇಂದೇ ಕಡೆ ದಿನ; ಹೀಗೆ ನೋಂದಣಿ ಮಾಡಿಸಿ

ಇನ್ನು ಪಡಿತರ ಕಾರ್ಡ್‌ನಲ್ಲಿರುವ ಹೆಸರಿನವರ ಕೆವೈಸಿ ಮಾಡಿಸಿಲ್ಲವೇ, ಇಂದೇ ಕಡೆ ದಿನ; ಹೀಗೆ ನೋಂದಣಿ ಮಾಡಿಸಿ

ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ನೀಡುವ ಪಡಿತರದ ವಿಚಾರದಲ್ಲಿ ನಿಖರ ಮಾಹಿತಿ ಪಡೆಯಲು ಪಡಿತರ ಕಾರ್ಡ್‌ನ ಕೆವೈಸಿ ಮಾಡಿಸಲು ಸೂಚಿಸುತ್ತದೆ. ಏಪ್ರಿಲ್‌ 30ರ ಒಳಗೆ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ.

ಪಡಿತರ ಕಾರ್ಡ್‌ ದಾರರು ಈವರಗೂ ಕೆವೈಸಿ ಮಾಡಿಸಿಕೊಂಡಿಲ್ಲ ಎಂದರೆ ಏಪ್ರಿಲ್‌ 30 ಕಡೆಯ ದಿನವಾಗಿದೆ.
ಪಡಿತರ ಕಾರ್ಡ್‌ ದಾರರು ಈವರಗೂ ಕೆವೈಸಿ ಮಾಡಿಸಿಕೊಂಡಿಲ್ಲ ಎಂದರೆ ಏಪ್ರಿಲ್‌ 30 ಕಡೆಯ ದಿನವಾಗಿದೆ.

ಬೆಂಗಳೂರು: ನೀವು ಪಡಿತರ ಕಾರ್ಡ್‌ದಾರರಾಗಿದ್ದರೆ ಕೆವೈಸಿ ಪ್ರಕ್ರಿಯೆಯನ್ನು ಈ ತಿಂಗಳ ಅಂತ್ಯದವರೆಗೆ ಮುಗಿಸಿಕೊಳ್ಳಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸೂಚನೆ ನೀಡಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪಡಿತರ ಕಾರ್ಡ್‌ ದಾರರಿಗೆ ಕೆಲ ಸೂಚನೆ ನೀಡಿದೆ.ರೇಷನ್‌ ಕಾರ್ಡ್‌ ಹೊಂದಿದ ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಆಧಾರ್‌ಆಧರಿತ ಹೆಬ್ಬೆಟ್ಟಿನ ದೃಢೀಕರಣ ಇ ಕೆವೈಸಿ(E KYC) ಮಾಡಿಸುವುದು ಕಡ್ಡಾಯ. ಇದಕ್ಕಾಗಿ ಮತ್ತೊಮ್ಮ ಕೆವೈಸಿ ಮಾಡಿಸುವ ಅವಕಾಶವನ್ನು ಏಪ್ರಿಲ್‌ 30 ರವರಗೆ ನೀಡಲಾಗಿದೆ. ಇದು ಕೊನೆಯ ಅವಕಾಶವಾಗಿದೆ. ಪಡಿತರ ಚೀಟಿದಾರರ ಪೈಕಿ ಈ ವರೆಗೂ ಕೆವೈಸಿ ಮಾಡಿಸಿದರ ಕುಟುಂಬದ ಸದಸ್ಯರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ಸೂಕ್ಯದಾಖಲೆಗಳನ್ನು ಸಲ್ಲಿಸಿ ಬಯೋ ದೃಢೀಕರಣ ನೀಡಲು ತಿಳಿಸಲಾಗಿದೆ. ಈ ಆಧಾರ್‌ ದೃಢೀಕರಣ ಮಾಡಿಸುವುದು ಸಂಪೂರ್ಣ ಉಚಿತ

ನೀವು ಪಡಿತರ ಕಾರ್ಡ್‌ ಹೊಂದಿದ್ದೀರಾ, ಅದರಲ್ಲೂ ಬಿಪಿಎಲ್‌ ಕಾರ್ಡ್‌ದಾರರಾಗಿದ್ದೀರಾ, ಹಾಗಾದರೆ ನೀವು ಕೆವೈಸಿ ಮಾಹಿತಿಯನ್ನು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ನೀಡಲೇಬೇಕು. ಅದು ಈ ತಿಂಗಳ 30 ರೊಳಗೆ ಅಂದರೆ ಇಂದು ರಾತ್ರಿ ಒಳಗೆ ಸಲ್ಲಿಸಬೇಕು.. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪಡಿತರ ಚೀಟಿದಾರರು ಒಂದು ಬಾರಿ ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ‘ಇಕೆವೈಸಿ’ (ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ) ಮಾಡಿಸುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಕಡ್ಡಾಯವಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದ್ದಾರೆ.

ಪಡಿತರ ಚೀಟಿಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಸಬ್ಸಿಡಿ ಆಹಾರ ಧಾನ್ಯವನ್ನು ಖರೀದಿಸಲು ಅರ್ಹರಾಗಿರುವ ಕುಟುಂಬಗಳಿಗೆ ಭಾರತದಲ್ಲಿ ರಾಜ್ಯ ಸರ್ಕಾರಗಳು ನೀಡುವ ಅಧಿಕೃತ ದಾಖಲೆಯಾಗಿದೆ. ಈಗಂತೂ ಸರ್ಕಾರದ ಹಲವು ಯೋಜನೆಗಳನ್ನು ಬಳಸಿಕೊಳ್ಳಲು ಬಿಪಿಎಲ್‌ ಕಾರ್ಡ್‌ ಬೇಕೇ ಬೇಕು. ಈ ಕಾರಣದಿಂದ ಕಾರ್ಡ್‌ದಾರರ ಮಾಹಿತಿ ಉನ್ನತೀಕರಿಸುವ ನಿಟ್ಟಿನಲ್ಲಿ ಕೆವೈಸಿ ಮಾಡಿಸುವ ಪ್ರಕ್ರಿಯೆ ನಡೆದಿದೆ.

ಯಾರು ಕಳೆದ ಹಲವು ವರ್ಷಗಳಿಂದ ತಮ್ಮ ಬಿಪಿಎಲ್ ಸೇರಿದಂತೆ ಯಾವುದೇ ಪಡಿತರ ಚೀಟಿಗೆ ಈವರೆಗೆ ಇಕೆವೈಸಿ ನೋಂದಣಿಯಾಗಿಲ್ಲ ಅಂತಹ ಕುಟುಂಬದವರು ಏಪ್ರಿಲ್‌ 30 ರೊಳಗೆ ತಪ್ಪದೇ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಇಕೆವೈಸಿ (ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ) ಮಾಡಿಸಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ. ಕೂಡಲೇ ಸೂಚನೆಗಳನ್ನು ಪಾಲಿಸಿ ಮುಂದೆ ಆಗುವ ತೊಂದರೆ ತಪ್ಪಿಸಿಕೊಳ್ಳುವಂತೆ ಸೂಚಿಸಲಾಗಿದೆ. ಇಕೆವೈಸಿ ಕಾರ್ಯ ಕರ್ನಾಟಕದ ಬಹುತೇಕ ಭಾಗಗಳಲ್ಲಿ ನಡೆದಿದೆ. ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಗ್ರಾಹಕರು ಕೆವೈಸಿ ಮಾಡಿಸಿದ್ದರೆ, ಇನ್ನೂ ಕೆಲವರು ಮಾಡಿಸಿಕೊಂಡಿಲ್ಲ. ಈ ಕಾರಣದಿಂದಲೇ ಸೂಚನೆಯನ್ನು ನೀಡಲಾಗಿದೆ.

ಇಕೆವೈಸಿ ಆಗದೇ ಇರುವವರ ಪಟ್ಟಿಯನ್ನು ಆಯಾಯ ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ ಮಾಹಿತಿಯನ್ನು ಆಯಾ ನ್ಯಾಯ ಬೆಲೆ ಅಂಗಡಿಯಲ್ಲಿಯೇ ಮಾಡಿಸಿಕೊಳ್ಳಬೇಕು. ಈಗಾಗಲೇ ನಿಗದಿಪಡಿಸಿದ ಏಪ್ರಿಲ್‌ 30 ರ ಕೊನೆಯ ದಿನಾಂಕದೊಳಗೆ ಇಕೆವೈಸಿ ಮಾಡಿಸದಿದ್ದಲ್ಲಿ ಮಾಡಿಸದ ಸದಸ್ಯರನ್ನು ಅನರ್ಹರೆಂದು ಪರಿಗಣಿಸಿ ಅಂತಹವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಹಾಕಲಾಗುವುದು ಎಂದು ಇಲಾಖೆ ತಿಳಿಸಿದೆ.

ಇ ಕೆವೈಸಿ ಮಾಡಿಸುವುದು ಸಂಪೂರ್ಣವಾಗಿ ಉಚಿತ ದು ಪಡಿತರ ಚೀಟಿದಾರರ ಗಮನಕ್ಕೆ ತರಲಾಗಿದೆ. ಸರ್ಕಾರದ ಮಾನದಂಡಗಳನ್ವಯ ಒಂದೇ ಕುಟುಂಬದಲ್ಲಿ ಒಂದಂಕ್ಕಿಂತ ಹೆಚ್ಚು ಪಡಿತರ ಚೀಟಿ ಇರುವುದು ಹಾಗೂ ಅನರ್ಹ ಪಡಿತರ ಚೀಟಿ ಪಡೆದುಕೊಂಡಿರುವವರು ಮತ್ತು ಆರ್ಥಿಕವಾಗಿ ಸಬಲರಾಗಿದ್ದು, ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚಿಟಿ ಪಡೆದುಕೊಂಡಿರುವವರು ಕೂಡಲೇ ತಾಲ್ಲೂಕು ಕಚೇರಿ/ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ತಮ್ಮ ಪಡಿತರ ಚೀಟಿಯನ್ನು ಹಿಂದಿರುಗಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆವೈಸಿ ಮಾಹಿತಿ ನೀಡುವುದು ಹೀಗೆ

  • ನಿಮ್ಮ ಹೆಸರು ಇರುವ ನ್ಯಾಯ ಬೆಲೆ ಅಂಗಡಿಗೆ ತೆರಳಿ
  • ಅಲ್ಲಿ ಪ್ರಕಟಿಸಿರುವ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ನೋಡಿಕೊಳ್ಳಿ
  • ಈಗಾಗಲೇ ಕೆವೈಸಿಯನ್ನು ಮಾಡಿಸಿದ್ದರೆ ಖಚಿತಪಡಿಸಿಕೊಳ್ಳಿ
  • ಮಾಡಿಸದೇ ಇದ್ದರೆ ನ್ಯಾಯ ಬೆಲೆ ಅಂಗಡಿಗೆ ಮಾಹಿತಿ ನೀಡಿ
  • ಇದಕ್ಕಾಗಿ ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ( ಎಸ್ಸಿ ಎಸ್ಟಿಗೆ ಮಾತ್ರ), ಗ್ಯಾಸ್‌ ಸಂಪರ್ಕ ಪುಸ್ತಕ ಹಾಗೂ ಆಧಾರ್‌ ಕಾರ್ಡ್‌ತೆಗೆದುಕೊಂಡು ಹೋಗಿ
  • ನಿಮ್ಮ ಬೆರಳಚ್ಚಿನ ದೃಢೀಕರಣವನ್ನು ಒದಗಿಸಬೇಕು.
  • ಅದನ್ನು ನೀಡಿದ್ದು ಖಚಿತ ಮಾಡಿಕೊಳ್ಳಿರಿ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.