Karnataka Reservoirs: ಕೆಆರ್‌ಎಸ್‌ ಜಲಾಶಯಕ್ಕೆ ತಗ್ಗಿದ ಒಳ ಹರಿವು, ತುಂಬಿದ ಆಲಮಟ್ಟಿಗೆ ನಾಳೆ ಸಿಎಂ ಸಿದ್ದರಾಮಯ್ಯ ಬಾಗಿನ-reservoir levels today august 20 alamatti krs harangi bhadra tungabhadra supa kabini hemavati reservoirs levels kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಕೆಆರ್‌ಎಸ್‌ ಜಲಾಶಯಕ್ಕೆ ತಗ್ಗಿದ ಒಳ ಹರಿವು, ತುಂಬಿದ ಆಲಮಟ್ಟಿಗೆ ನಾಳೆ ಸಿಎಂ ಸಿದ್ದರಾಮಯ್ಯ ಬಾಗಿನ

Karnataka Reservoirs: ಕೆಆರ್‌ಎಸ್‌ ಜಲಾಶಯಕ್ಕೆ ತಗ್ಗಿದ ಒಳ ಹರಿವು, ತುಂಬಿದ ಆಲಮಟ್ಟಿಗೆ ನಾಳೆ ಸಿಎಂ ಸಿದ್ದರಾಮಯ್ಯ ಬಾಗಿನ

Almatti Dam ಈಗಾಗಲೇ ತುಂಬಿರುವ ಆಲಮಟ್ಟಿ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಬಾಗಿನ ಅರ್ಪಿಸಲಿದ್ದಾರೆ.

ತುಂಬಿರುವ ಆಲಮಟ್ಟಿಗೆ ಈ ವರ್ಷ ಬಾಗಿನ ಸಲ್ಲಿಸುವ ಸಮಾರಂಭ ಬುಧವಾರ ನಡೆಯಲಿದೆ.
ತುಂಬಿರುವ ಆಲಮಟ್ಟಿಗೆ ಈ ವರ್ಷ ಬಾಗಿನ ಸಲ್ಲಿಸುವ ಸಮಾರಂಭ ಬುಧವಾರ ನಡೆಯಲಿದೆ.

ಬೆಂಗಳೂರು: ಕೊಡಗಿನಲ್ಲಿ ಮಳೆ ಪ್ರಮಾಣ( Kodagu Rains) ಕಡಿಮೆಯಾಗಿದ್ದರಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ( KRS Reservoir) ಬರುತ್ತಿರುವ ಒಳ ಹರಿವಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರು ಜಲಾಶಯ ಬಹುತೇಕ ತುಂಬಿದ್ದು, ಹೊರ ಹರಿವನ್ನೂ ತಗ್ಗಿಸಲಾಗಿದೆ. ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲೂ ಮಳೆ ಕಡಿಮೆಯಾಗಿದ್ದರಿಂದ ಒಳಹರಿವು ಗಣನೀಯವಾಗಿ ಇಳಿಕೆಯಾಗಿದೆ. ಈಗಾಗಲೇ ತುಂಬಿರುವ ಉತ್ತರ ಕರ್ನಾಟಕದ ಅತಿ ದೊಡ್ಡ ಜಲಾಶಯ ವಿಜಯಪುರ ಜಿಲ್ಲೆ ಆಲಮಟ್ಟಿಗೆ( Almatti Reservoir) ಸಿಎಂಸಿದ್ದರಾಮಯ್ಯ ಅವರಿಂದ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವ ಕಾರ್ಯಕ್ರಮ ಬುಧವಾರದಂದು ನಿಗದಿಯಾಗಿದೆ. ಮಲೆನಾಡಿನಲ್ಲೂ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಜಲಾಶಯಗಳಿಗೂ ಒಳ ಹರಿವು ಇಳಿಕೆ ಕಂಡು ಬಂದಿದೆ. ತುಂಗಭದ್ರಾ ಜಲಾಶಯದ( Tunga bhadra Dam) ಹೊರ ಹರಿವು ತಗ್ಗಿದ್ದು, ಉತ್ತಮ ಮಳೆಗಾಗಿ ಬಳ್ಳಾರಿ, ಕೊಪ್ಪಳ, ರಾಯಚೂರು ಭಾಗದ ಜನ ಕಾಯುತ್ತಿದ್ದಾರೆ.

ಆಲಮಟ್ಟಿಗೆ ಬಾಗಿನ

ಈಗಾಗಲೇ ತುಂಬಿರುವ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಗೆ ಸಿಎಂ ಸಿದ್ದರಾಮಯ್ಯ ಬಾಗಿನವನ್ನು ಅರ್ಪಿಸಿದ್ದಾರೆ. ವಿಜಯಪುರ ಜಿಲ್ಲೆಯ ಆಲಮಟ್ಟಿಯ ಲಾಲ್‌ ಬಹದ್ದೂರು ಶಾಸ್ತ್ರಿ ಜಲಾಶಯಕ್ಕೆ ಆಗಸ್ಟ್‌ 21ರ ಬುಧವಾರ ಬಾಗಿನವನ್ನು ಸಿಎಂ ಸಿದ್ದರಾಮಯ್ಯ ಅರ್ಪಿಸುವರು. ಇದಕ್ಕಾಗಿ ಆಲಮಟ್ಟಿ ಜಲಾಶಯದಲ್ಲಿ ಸಿದ್ದತೆಗಳೂ ನಡೆದಿವೆ. ಕಳೆದ ವರ್ಷ ಜಲಾಶಯ ತುಂಬದೇ ಪೂಜೆ ಸಲ್ಲಿಸಿರಲಿಲ್ಲ.

ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿ ಕೃಷ್ಣಾ ನದಿ ಮೂಲಕ ಆಲಮಟ್ಟಿ ಜಲಾಶಯಕ್ಕೆ ಕಡಿಮೆ ನೀರು ಹರಿದು ಬರುತ್ತಿದೆ. ಮಂಗಳವಾರದಂದುಜಲಾಶಯದ ನೀರಿನ ಮಟ್ಟವು ಗರಿಷ್ಠ 519.60 ಮೀಟರ್‌ ನಷ್ಟಿತ್ತು. ಜಲಾಶಯದಲ್ಲಿ 123.081 ಟಿಎಂಸಿ ನೀರು ಸಂಗ್ರಹವಾಗಿದೆ. ಒಳ ಹರಿವು 19,968 ಕ್ಯೂಸೆಕ್‌ ನಷ್ಟಿದೆ.

ಕೆಆರ್‌ಎಸ್‌ ಜಲಾಶಯ

ಕೊಡಗಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯಕ್ಕೆ ಬರುತ್ತಿರುವ ಒಳ ಹರಿವು ತಗ್ಗಿದೆ. ಜಲಾಶಯಕ್ಕೆ ಮಂಗಳವಾರ ಬೆಳಿಗ್ಗೆ 10393 ಕ್ಯೂಸೆಕ್‌ ಹರಿದು ಬರುತ್ತಿದ್ದು, ಹೊರ ಹರಿವು 8622 ಕ್ಯೂಸೆಕ್‌ನಷ್ಟಿದೆ. ಜಲಾಶಯದ ನೀರಿನ ಮಟ್ಟವು 123.56 ಅಡಿಯಿದೆ. ಗರಿಷ್ಠ ಮಟ್ಟವು 124.80 ಅಡಿ.ಜಲಾಶಯದಲ್ಲಿ ಈವರೆಗೂ 47.734 ಟಿಎಂಸಿ ನೀರು ಸಂಗ್ರಹ ಮಾಡಲಾಗಿದೆ. ಜಲಾಶಯದಲ್ಲಿ 49.452 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ.

ಕಬಿನಿ ಜಲಾಶಯ

ಕೇರಳದಲ್ಲೂ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಒಳ ಹರಿವು ಬಹುಪಾಲು ತಗ್ಗಿದೆ. ಜಲಾಶಯಕ್ಕೆ ಮಂಗಳವಾರ 3,474 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವು ನಾಲೆಗಳನ್ನೂ ಸೇರಿ 2,850 ಕ್ಯೂಸೆಕ್‌ಗೆ ತಗ್ಗಿಸಲಾಗಿದೆ. ಜಲಾಶಯದ ನೀರಿನ ಮಟ್ಟವು 2282.32 ಅಡಿಯಿದೆ. ಜಲಾಶಯದಲ್ಲಿ 18.44 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟವು 2284 ಅಡಿ. ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹಿಸಬಹುದು.

ಮಲೆನಾಡು ಜಲಾಶಯಗಳು

ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲೂ ಮಳೆ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಮೂರು ಜಲಾಶಯಗಳಲ್ಲೂ ಒಳ ಹರಿವು ತಗ್ಗಿದೆ.

ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯಲ್ಲಿರುವ ಗಾಜನೂರು ತುಂಗಾ ಜಲಾಶಯಕ್ಕೂ ಮಂಗಳವಾರ ಒಳ ಹರಿವು7207 ಕ್ಯೂಸೆಕ್ ಇದ್ದು. ಹೊರ ಹರಿವು ಅಷ್ಟೇ ಪ್ರಮಾಣದಲ್ಲಿದೆ. ಜಲಾಶಯದ ಗರಿಷ್ಠ ಮಟ್ಟವು 588.24 ಮೀಟರ್‌ ನಷ್ಟಿದೆ. ಈಗಾಗಲೇ ಜಲಾಶಯವು ಭರ್ತಿಯಾಗಿದೆ. ಜಲಾಶಯದಲ್ಲಿ 3.24 ಟಿಎಂಸಿ ನೀರನ್ನು ಸಂಗ್ರಹಿಸಲಾಗಿದೆ. ಕರ್ನಾಟಕ ಸಣ್ಣ ಹಾಗೂ ಬೇಗನೇ ತುಂಬುವ ಜಲಾಶಯ ತುಂಗಾದಿಂದ ಹೆಚ್ಚಿನ ನೀರು ತುಂಗಭದ್ರಾ ಜಲಾಶಯಕ್ಕೆ ಈ ಬಾರಿ ಹರಿದು ಹೋಗಿದೆ.

ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯಕ್ಕೆ 7811 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ಹೊರ ಹರಿವು 7651 ಕ್ಯೂಸೆಕ್‌ ಇದೆ. ಜಲಾಶಯದ ನೀರಿನ ಮಟ್ಟವು 1816.80 ಅಡಿ ಇದೆ. ಜಲಾಶಯದಲ್ಲಿ ಈಗ 144.28 ಟಿಎಂಸಿ ನೀರು ಸಂಗ್ರಹವಾಗಿದೆ. ಇಲ್ಲಿ 151.64 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಜಲಾಶಯದ ಗರಿಷ್ಠ ಮಟ್ಟವು 1819 ಅಡಿ.

ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲ್ಲೂಕಿನ ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯಕ್ಕೆ ಮಂಗಳವಾರ 6855 ಕ್ಯೂಸೆಕ್‌ ಇದ್ದು. ಅಷ್ಟೇ ಪ್ರಮಾಣದಲ್ಲಿ ನದಿ ಹಾಗೂ ನಾಲೆ ಮೂಲಕ ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ 180.1 ಅಡಿ ನೀರಿದ್ದು. 64.30 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟವು 186 ಅಡಿ ಹಾಗೂ ಇಲ್ಲಿ 71.5 ಟಿಎಂಸಿ ನೀರು ಸಂಗ್ರಹಿಬಹುದು.

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ.
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ.