Karnataka Reservoirs: ಆಲಮಟ್ಟಿ, ತುಂಗಭದ್ರಾ ಜಲಾಶಯದಿಂದ ಭಾರೀ ನೀರು ಹೊರಕ್ಕೆ, ಕೆಆರ್‌ಎಸ್‌, ಕಬಿನಿ ಹೊರ ಹರಿವು ಇಳಿಕೆ-reservoir levels today august 5 alamatti krs kabini harangi bhadra tungabhadra supa hemavati reservoirs levels ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಆಲಮಟ್ಟಿ, ತುಂಗಭದ್ರಾ ಜಲಾಶಯದಿಂದ ಭಾರೀ ನೀರು ಹೊರಕ್ಕೆ, ಕೆಆರ್‌ಎಸ್‌, ಕಬಿನಿ ಹೊರ ಹರಿವು ಇಳಿಕೆ

Karnataka Reservoirs: ಆಲಮಟ್ಟಿ, ತುಂಗಭದ್ರಾ ಜಲಾಶಯದಿಂದ ಭಾರೀ ನೀರು ಹೊರಕ್ಕೆ, ಕೆಆರ್‌ಎಸ್‌, ಕಬಿನಿ ಹೊರ ಹರಿವು ಇಳಿಕೆ

Karnataka Dam Levels ಭಾರೀ ಮಳೆಯಿಂದ ತುಂಬಿ ಹೆಚ್ಚಿನ ನೀರು ಹೊರ ಹೋಗುತ್ತಿದ್ದ ಕರ್ನಾಟಕದ ಜಲಾಶಯಗಳಲ್ಲಿನ ಅಬ್ಬರ ಕೊಂಚ ಕಡಿಮೆಯಾಗಿದ್ದರೂ ಒಳ ಹಾಗೂ ಹೊರ ಹರಿವಿನ ಪ್ರಮಾಣ ಎಲ್ಲಾ ಜಲಾಶಯಗಳಲ್ಲಿ ಉತ್ತಮವಾಗಿಯೇ ಇದೆ.

ಕರ್ನಾಟಕದಲ್ಲಿ ಮಳೆ ಪ್ರಮಾಣ ತಗ್ಗಿದ್ದರೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಯಥೇಚ್ಛವಾಗಿದೆ.
ಕರ್ನಾಟಕದಲ್ಲಿ ಮಳೆ ಪ್ರಮಾಣ ತಗ್ಗಿದ್ದರೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಯಥೇಚ್ಛವಾಗಿದೆ.

ಬೆಂಗಳೂರು: ಕರ್ನಾಟಕದ ಕರಾವಳಿ ಹೊರತುಪಡಿಸಿ ಬಹುತೇಕ ಭಾಗಗಳಲ್ಲಿ ಮಳೆ( Karnataka Rains) ಪ್ರಮಾಣ ಕಡಿಮೆಯಾಗಿರುವುದರಿಂದ ಜಲಾಶಯದ( Dams of Karnataka) ಒಳ ಹರಿವಿನ ಪ್ರಮಾಣದಲ್ಲೂ ಎರಡು ದಿನಗಳಿಂದ ಗಣನೀಯ ಕುಸಿತ ಕಂಡಿದೆ. ಆದರೆ ಕಳೆದ ತಿಂಗಳು ಸುರಿದ ಮಳೆಯಿಂದ ಕರ್ನಾಟಕದ ಬಹುತೇಕ ಪ್ರಮುಖ ಜಲಾಶಯಗಳು ತುಂಬಿವೆ. ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಆಧಾರದ ಮೇಲೆ ಆಯಾಯ ಜಲಾಶಯಗಳಿಂದ ನೀರನ್ನು ನದಿಗಳ ಮೂಲಕ ಹರಿಸಲಾಗುತ್ತಿದೆ. ಕಾವೇರಿ ಕಣಿವೆಯ ಕೆಆರ್‌ಎಸ್‌( KRS Dam), ಕಬಿನಿ( Kabini Dam), ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳ ಒಳ ಹರಿವಿನ ಪ್ರಮಾಣವನ್ನು ತಗ್ಗಿಸಲಾಗಿದೆ. ಉತ್ತರ ಕರ್ನಾಟಕದ ಆಲಮಟ್ಟಿ( Almatti dam), ತುಂಗಭದ್ರಾ ಜಲಾಶಯಕ್ಕೆ( Tungabhadra dam) ಒಳ ಹರಿವು ಕೊಂಚ ಕಡಿಮೆಯಾಗಿದ್ದರೂ ಹೊರ ಹರಿವಿನ ಪ್ರಮಾಣ ಹೆಚ್ಚೇ ಇದೆ. ಅದೇ ರೀತಿ ಮಲೆನಾಡಿನ ಜಲಾಶಯಗಳ ಸುತ್ತಮುತ್ತ ಪ್ರವಾಹದ ಸ್ಥಿತಿ ತಗ್ಗಿದ್ದು ಹೊರ ಹರಿವು ಕೂಡ ಕಡಿಮೆಯಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ತುಂಗಭದ್ರಾ ಜಲಾಶಯ

ವಿಜಯನಗರ ಜಿಲ್ಲೆ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹಾಗೂ ಹೊರ ಹರಿವು ಒಂದು ಲಕ್ಷಕ್ಕೂ ಅಧಿಕವಾಗಿಯೇ ಇದೆ. ಮಲೆನಾಡಿನಲ್ಲಿ ಮಳೆಯಾಗಿ ತುಂಗಾ ಹಾಗೂ ಭದ್ರಾ ಜಲಾಶಯದಿಂದ ನೀರು ಹರಿಸಿದ್ದರಿಂದ ತುಂಗಭದ್ರಾ ನದಿ ಮೂಲಕ ನೀರು ಹರಿದು ಬರುತ್ತಿದೆ. ಸೋಮವಾರ ಬೆಳಿಗ್ಗೆಯೂ ಜಲಾಶಯದ ಒಳ ಹರಿವಿನ ಪ್ರಮಾಣ 124376 ಕ್ಯೂಸಕ್‌ ನಷ್ಟಿದೆ. ಜಲಾಶಯದ ನೀರಿನ ಮಟ್ಟವು 1631.50 ಅಡಿ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟವು 1633 ಅಡಿ. ಜಲಾಶಯದಿಂದ ಸದ್ಯಕ್ಕೆ 113171 ಕ್ಯೂಸೆಕ್‌ ನೀರನ್ನು ಹರಿ ಬಿಡಲಾಗುತ್ತಿದೆ. ಜಲಾಶಯದಲ್ಲಿ 99.820 ಇಎಂಸಿ ನೀರು ಸಂಗ್ರಹಿಸಲಾಗಿದೆ. ಈ ಜಲಾಶಯದಲ್ಲಿ 105.788 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ.

ಮಲೆನಾಡಿನಲ್ಲಿ ಕಳೆದ ತಿಂಗಳು ಉತ್ತಮ ಮಳೆಯಾಯಿತು. ಈಗ ನಿಧಾನವಾಗಿ ಕಡಿಮೆಯಾಗಿದೆ. ಈ ವಾರ ಮಳೆ ಕಡಿಮೆಯಾಗುವ ಸೂಚನೆಯಿದೆ. ಇದರಿಂದ ತುಂಗಭದ್ರಾ ಜಲಾಶಯ ಒಳ ಹರಿವು ಕಡಿಮೆಯಾಗಬಹುದು. ಆದರೂ ಜಲಾಶಯ ಈಗಾಗಲೇ ತುಂಬಿದ್ದು, ಯಥೇಚ್ಛ ನೀರಿನ ಸಂಗ್ರಹ ಹೊಂದಿದೆ. ನೀರಿನ ಒಳ ಹರಿವು ನೋಡಿಕೊಂಡು ಹೊರ ಹರಿವು ನಿರ್ಧರಿಸಲಾಗುತ್ತದೆ ಎನ್ನುವುದು ಅಧಿಕಾರಿಗಳ ವಿವರಣೆ.

ಕೆಆರ್‌ಎಸ್‌ ಜಲಾಶಯ

ಕೊಡಗಿನಲ್ಲೂ ಎಡಬಿಡದೇ ಸುರಿದು ಈಗ ಮಳೆ ಪ್ರಮಾಣ ತಗ್ಗಿದೆ. ಈ ಕಾರಣದಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ ಬರುತ್ತಿರುವ ಒಳ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ ಹೊರ ಹರಿವನ್ನೂ ಬಹುತೇಕ ಕಡಿಮೆ ಮಾಡಲಾಗಿದೆ. ಸೋಮವಾರ ಬೆಳಿಗ್ಗೆ ಹೊತ್ತಿಗೆ ಕೆಆರ್‌ಎಸ್‌ ಜಲಾಶಯಕ್ಕೆ 34029 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದಲ್ಲಿ ಅಂದರೆ 34773 ಕ್ಯೂಸೆಕ್‌ ನೀರನ್ನು ಕಾವೇರಿ ನದಿ ಮೂಲಕ ಹರಿ ಬಿಡಲಾಗುತ್ತಿದೆ. ಜಲಾಶಯದಲ್ಲಿ 123.14 ಅಡಿ ನೀರು ಸಂಗ್ರಹವಾಗಿದೆ. ಗರಿಷ್ಠ ಮಟ್ಟವು 124.80 ಅಡಿ. ಜಲಾಶಯದಲ್ಲಿ ಈಗ 47.160 ಟಿಎಂಸಿ ನೀರಿದೆ. ಜಲಾಶಯದಲ್ಲಿ 49.452 ಟಿಎಂಸಿ ನೀರು ಸಂಗ್ರಹಿಸಬಹುದು.

ಕಬಿನಿ ಜಲಾಶಯ

ಕೇರಳದಲ್ಲೂ ಮಳೆ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಬರುತ್ತಿರುವ ಒಳ ಹರಿವು ತಗ್ಗಿದೆ. ಜಲಾಶಯಕ್ಕೆ 12225 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದ ಹೊರ ಹರಿವು ಬಹುತೇಕ ತಗ್ಗಿಸಲಾಗಿದೆ. 3542 ಕ್ಯೂಸೆಕ್‌ ನದಿ ಮೂಲಕ ಬಿಡಲಾಗುತ್ತಿದ್ದು, ನಾಲೆ ಮೂಲಕವೂ ಹರಿಸಲಾಗುತ್ತಿದೆ. ಜಲಾಶಯದಲ್ಲಿ ಈಗ 18.45 ಟಿಎಂಸಿ ನೀರು ಸಂಗ್ರಹವಿದೆ.

ಹೇಮಾವತಿ ಜಲಾಶಯ

ಹಾಸನ ಜಿಲ್ಲೆಯ ಗೋರೂರಿನ ಹೇಮಾವತಿ ಆಣೆಕಟ್ಟೆಗೆ ಸದ್ಯ 12889 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು. ಹೊರ ಹರಿವಿನ ಪ್ರಮಾಣವು ನಾಲೆಗಳಿಗೂ ಹರಿಸುವುದು ಸೇರಿ 5575 ಕ್ಯೂಸೆಕ್‌ ಇದೆ. ಜಲಾಶಯದ ನೀರಿನ ಮಟ್ಟವು 2921.25 ಅಡಿ ಇದೆ. ಜಲಾಶಯದ ಗರಿಷ್ಠ ಮಟ್ಟವು 2922 ಅಡಿ. ಜಲಾಶಯದಲ್ಲಿ 36.378 ಟಿಎಂಸಿ ನೀರು ಸಂಗ್ರಹವಿದೆ.

ತುಂಗಾ ಜಲಾಶಯ

ಶಿವಮೊಗ್ಗ ಸಮೀಪದ ಗಾಜನೂರಿನ ತುಂಗಾ ಜಲಾಶಯಕ್ಕೂ ಒಳ ಹರಿವು ಕಡಿಮೆಯಾಗಿದೆ. ಜಲಾಶಯಕ್ಕೆ ಸೋಮವಾರ ಬೆಳಿಗ್ಗೆ 33870 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ಮೂಲಕ ತುಂಗಾ ನದಿಗೆ 33870 ಕ್ಯೂಸೆಕ್‌ ನೀರನ್ನ ಹರಿಸಲಾಗುತ್ತಿದೆ. ನಾಲೆಗಳಿಗೂ ನೀರು ಬಿಡಲಾಗಿದೆ. ಜಲಾಶಯದ ನೀರಿನ ಮಟ್ಟವು 588.24 ಮೀಟರ್‌ ಇದ್ದು, ಗರಿಷ್ಠ ಮಟ್ಟ ತಲುಪಿದೆ.

ಭದ್ರಾ ಜಲಾಶಯ

ಚಿಕ್ಕಮಗಳೂರಿನ ಲಕ್ಕವಳ್ಳಿ ಬಳಿ ಇರುವ ಭದ್ರಾ ಜಲಾಶಯಕ್ಕೂ ಒಳ ಹರಿವು ಕಡಿಮೆಯಾಗಿದೆ. ಸೋಮವಾರದಂದು ಜಲಾಶಯಕ್ಕೆ 16071 ಕ್ಯೂಸೆಕ್‌ ನೀರು ಬರುತ್ತಿದ್ದು. ಹೊರ ಹರಿವು 15551 ಇದೆ. ಜಲಾಶಯದ ನೀರಿನ ಮಟ್ಟವು 186 ಅಡಿ ಇದ್ದು. ಜಲಾಶಯ ತುಂಬಿದೆ. ಜಲಾಶಯದಲ್ಲಿ 71.535 ಟಿಎಂಸಿ ನೀರು ಸಂಗ್ರಹವಾಗಿದೆ.

ಹಾರಂಗಿ ಜಲಾಶಯ

ಕೊಡಗಿನ ಹಾರಂಗಿ ಜಲಾಶಯಕ್ಕೂ 5171 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಹೊರ ಹರಿವನ್ನು 6000 ಕ್ಯೂಸೆಕ್‌ಗೆ ಇಳಿಕೆ ಮಾಡಲಾಗಿದೆ. ಜಲಾಶಯದ ನೀರಿನ ಮಟ್ಟವು 2854.55 ಅಡಿಯಿದೆ. ಗರಿಷ್ಠ ಪ್ರಮಾಣ 2859 ಅಡಿ.ಜಲಾಶಯದಲ್ಲಿ ಈಗ 6.99 ಟಿಎಂಸಿ ನೀರು ಸಂಗ್ರಹವಾಗಿದೆ.

ಆಲಮಟ್ಟಿ ಜಲಾಶಯ

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ನೀರಿನ ಮಟ್ಟವು ಸೋಮವಾರದಂದು 516.46 ಮೀಟರ್‌ ಇದೆ. ಗರಿಷ್ಠ ಮಟ್ಟವು 519.60 ಮೀಟರ್‌. ಜಲಾಶಯದ ಒಳ ಹರಿವು 3,03,608 ಕ್ಯೂಸೆಕ್ ಇದ್ದು, ಹೊರ ಹರಿವು 2,52,555 ಕ್ಯೂಸೆಕ್ ಇದೆ. ಜಲಾಶಯದಲ್ಲಿ ಸದ್ಯ 78.036 ಟಿಎಂಸಿ ನೀರು ಸಂಗ್ರಹವಿದೆ.