Karnataka Reservoirs: ಕಾವೇರಿ ಕೊಳ್ಳ, ಮಲೆನಾಡಿನ ಜಲಾಶಯಗಳಲ್ಲಿ ಯಥಾಸ್ಥಿತಿ, ಆಲಮಟ್ಟಿಗೆ ಭಾರೀ ನೀರು, ಉತ್ತರ ಕರ್ನಾಟಕದಲ್ಲಿ ಅಲರ್ಟ್‌-reservoir levels today august 7 almatti krs harangi kabini bhadra tungabhadra supa tunga hemavati reservoirs levels ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಕಾವೇರಿ ಕೊಳ್ಳ, ಮಲೆನಾಡಿನ ಜಲಾಶಯಗಳಲ್ಲಿ ಯಥಾಸ್ಥಿತಿ, ಆಲಮಟ್ಟಿಗೆ ಭಾರೀ ನೀರು, ಉತ್ತರ ಕರ್ನಾಟಕದಲ್ಲಿ ಅಲರ್ಟ್‌

Karnataka Reservoirs: ಕಾವೇರಿ ಕೊಳ್ಳ, ಮಲೆನಾಡಿನ ಜಲಾಶಯಗಳಲ್ಲಿ ಯಥಾಸ್ಥಿತಿ, ಆಲಮಟ್ಟಿಗೆ ಭಾರೀ ನೀರು, ಉತ್ತರ ಕರ್ನಾಟಕದಲ್ಲಿ ಅಲರ್ಟ್‌

Karnataka Dam level ಉತ್ತರ ಕರ್ನಾಟಕದ ಆಲಮಟ್ಟಿ ಹೊರತುಪಡಿಸಿ ಕರ್ನಾಟಕದ ಬಹುತೇಕ ಜಲಾಶಯಗಳ ನೀರಿನ ಒಳಹರಿವು ಪ್ರಮಾಣ ಕಡಿಮೆಯಾಗಿದೆ.

ಆಲಮಟ್ಟಿ ಜಲಾಶಯದ ಹೊರ ಹರಿವು ಪ್ರಮಾಣ ಈಗಲೂ ಎರಡು ಲಕ್ಷ ಕ್ಯೂಸೆಕ್‌ ಇದೆ.
ಆಲಮಟ್ಟಿ ಜಲಾಶಯದ ಹೊರ ಹರಿವು ಪ್ರಮಾಣ ಈಗಲೂ ಎರಡು ಲಕ್ಷ ಕ್ಯೂಸೆಕ್‌ ಇದೆ. (Hemanth)

ಬೆಂಗಳೂರು: ಕರ್ನಾಟಕದಲ್ಲಿ ಮಳೆ ಪ್ರಮಾಣ ಮೂರು ದಿನದಿಂದ ಕಡಿಮೆಯಾಗಿರುವುದರಿಂದ ಜಲಾಶಯಗಳ ನೀರಿನ ಮಟ್ಟದಲ್ಲೂ ಬುಧವಾರ ಗಣನೀಯ ಏರಿಕೆ ಏನು ಕಂಡು ಬಂದಿಲ್ಲ. ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ನಿಧಾನವಾಗಿ ಕಡಿಮೆಯಾಗಿದೆ. ಕಾವೇರಿ ಕಣಿವೆಯ ನಾಲ್ಕು ಪ್ರಮುಖ ಜಲಾಶಯಗಳು, ಮಲೆನಾಡು ಭಾಗದ ಜಲಾಶಯಗಳಿಗೆ ನೀರಿನ ಒಳಹರಿವು ಕಡಿಮೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಸೂಪಾದಿಂದ ನೀರು ಹೊರ ಬಿಡಲಾಗುತ್ತಿದೆ. ಆದರೆ ಉತ್ತರ ಕರ್ನಾಟಕದ ದೊಡ್ಡ ಜಲಾಶಯವಾದ ಆಲಮಟ್ಟಿಗೆ ಒಳ ಹರಿವುದು ಯಥೇಚ್ಛವಾಗಿ ಬರುತ್ತಿದ್ದು. ಹೊರ ಹರಿವು ಎರಡು ಲಕ್ಷ ಕ್ಯೂಸೆಕ್‌ ಗೂ ಅಧಿಕವಿದೆ. ಬೆಳಗಾವಿ, ಬಾಗಲಕೋಟೆಯ ಕೃಷ್ಣ ಜಲಾನಯನ ಪ್ರದೇಶದ ನದಿಗಳಲ್ಲಿ ಘಟಪ್ರಭಾ ನದಿಯು ಬಾಗಲಕೋಟೆ ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಹಾಗೂ ಪಶ್ಚಿಮಕ್ಕೆ ಹರಿಯುವ ನದಿಗಳಲ್ಲಿ ಅಘನಾಶಿನಿ ನದಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿರುವದರಿಂದ ನದಿ ಪಾತ್ರದ ಜನರು ಎಚ್ಚರದಿಂದಿರಲು ಸೂಚಿಸಲಾಗಿದೆ.

ಆಲಮಟ್ಟಿ ಜಲಾಶಯ

ಮಹಾರಾಷ್ಟ್ರ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗದೇ ಇರುವುದರಿಂದ ಕೃಷ್ಣಾ ನದಿ ಉತ್ತರ ಕರ್ನಾಟಕ ಭಾಗದಲ್ಲಿ ಉಕ್ಕಿ ಹರಿಯುತ್ತಿದೆ. ಇದರಿಂದ ವಿಜಯಪುರ ಜಿಲ್ಲೆ ಆಲಮಟ್ಟಿ ಜಲಾಶಯಕ್ಕೂ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಬುಧವಾರ ಬೆಳಿಗ್ಗೆ ಜಲಾಶಯಕ್ಕೆ 2,95,580 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವು 2,02,641ಕ್ಯೂಸ್‌ಕ್‌ ನಷ್ಟಿದೆ. ಮೂರು ವಾರದಿಂದಲೂ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಜಲಾಶಯದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಒಳ ಹರಿವಿನ ಆಧಾರದ ಮೇಲೆ ಹೊರ ಹರಿವು ನಿಗದಿಪಡಿಸಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 517.76 ಮೀಟರ್‌ ಇದೆ. ಜಲಾಶಯದಲ್ಲಿ 94.365 ಟಿಎಂಸಿ ನೀರು ಸಂಗ್ರಹವಾಗಿದೆ.

ತುಂಗಭದ್ರಾ ಜಲಾಶಯ

ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೂ ಬುಧವಾರ ಹೆಚ್ಚಿನ ನೀರು ಹರಿದು ಬರುತ್ತಿದೆ.ಮಲೆನಾಡಿನಲ್ಲಿ ಮೂರು ದಿನದಿಂದ ಮಳೆ ಕಡಿಮೆಯಾಗಿದ್ದರೂ ಜಲಾಶಯಕ್ಕೆ 50671ಕ್ಯೂಸೆಕ್‌ ಒಳ ಹರಿವು ಇದೆ. ಹೊರ ಹರಿವಿನ ಪ್ರಮಾಣವು 50302 ಕ್ಯೂಸೆಕ್‌ ನಷ್ಟಿದೆ. ಜಲಾಶಯದ ನೀರಿನ ಮಟ್ಟವು 1632.50 ಅಡಿ ಇದೆ. ಗರಿಷ್ಠ ಮಟ್ಟವು 1633 ಅಡಿ. ಜಲಾಶಯದಲ್ಲಿ ಈಗ 103.780 ಟಿಎಂಸಿ ನೀರು ಸಂಗ್ರಹವಿದ್ದು,. ಬಹುತೇಕ ಜಲಾಶಯ ತುಂಬಿದೆ.

ಕೆಆರ್‌ಎಸ್‌ ಜಲಾಶಯ

ಮಂಡ್ಯದ ಕೃಷ್ಣರಾಜಸಾಗರ ಜಲಾಶಯಕ್ಕೆ 13734ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು. ಹೊರ ಹರಿವನ್ನು 6665 ಕ್ಕೆ ಇಳಿಸಲಾಗಿದೆ. ಕೊಡಗಿನಲ್ಲಿ ಮಳೆ ಕಡಿಮೆಯಾಗಿದ್ದಿಂದ ಒಳ ಹರಿವಿನ ಪ್ರಮಾಣ ನಾಲ್ಕು ದಿನದಲ್ಲಿ ತಗ್ಗಿದ್ದು. ಹೊರ ಹರಿವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಜಲಾಶಯದ ನೀರಿನ ಮಟ್ಟವು 124.18 ಅಡಿ ಇದೆ. ಜಲಾಶಯದಲ್ಲಿ ಈಗ 48.587 ಟಿಎಂಸಿ ನೀರು ಸಂಗ್ರಹವಾಗಿದೆ

ಕಬಿನಿ ಜಲಾಶಯ

ಕೇರಳದಲ್ಲಿ ಮಳೆ ಕಡಿಮೆಯಾಗಿದ್ದರಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೂ ಮಳೆ ಕಡಿಮೆಯಾಗಿದೆ. ಜಲಾಶಯಕ್ಕೆ 7359 ಕ್ಯೂಸೆಕ್‌ ನೀರು ಒಳ ಹರಿವು ಇದೆ. ಹೊರ ಹರಿವಿನ ಪ್ರಮಾಣವು ನಾಲೆಗಳಿಗೂ ಸೇರಿ 4079 ಮಾತ್ರ. ಜಲಾಶಯದ ನೀರಿನ ಮಟ್ಟವು 2283.46 ಅಡಿ. ಸದ್ಯ 19.16 ಟಿಎಂಸಿ ನೀರಿನ ಸಂಗ್ರಹ ಜಲಾಶಯದಲ್ಲಿದೆ.