Cauvery Reservoirs: ಕೆಆರ್‌ಎಸ್‌ಗೆ ಒಳ ಹರಿವು ಮತ್ತೆ ಹೆಚ್ಚಳ, 100 ರ ಗಡಿಗೆ ಇನ್ನೊಂದೇ ಅಡಿ ಬಾಕಿ, ತುಂಬುವ ಹಾದಿಯಲ್ಲಿ ಕಬಿನಿ
ಕೊಡಗು ಹಾಗೂ ಕೇರಳದಲ್ಲಿನ ಉತ್ತಮ ಮಳೆಯಿಂದಾಗಿ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್( KRS Dam) ಹಾಗೂ ಕಬಿನಿ ಜಲಾಶಯ( Kabini Dam) ಉತ್ತಮ ಒಳಹರಿವು ಕಂಡಿವೆ.

ಮೈಸೂರು: ಕೇರಳದಲ್ಲಿ ಸುರಿಯುತ್ತಿರುವ ಮಳೆ ಹಾಗೂ ಕೊಡಗಿನ ಬಿರು ಮಳೆಗೆ ಕಾವೇರಿ ಕಣಿವೆಯ ಎರಡು ಜಲಾಶಯಗಳಿಗೆ ಜೀವ ಕಳೆ ಬಂದಿದೆ. ಕಳೆದ ಬಾರಿ ತುಂಬದೇ ಆತಂಕ ಹುಟ್ಟು ಹಾಕಿ ಬೇಸಿಗೆ ವೇಳೆ ಬವಣೆಗೆ ದಾರಿ ಮಾಡಿಕೊಟ್ಟಿದ್ದ ಕೃಷ್ಣರಾಜಸಾಗರ ಜಲಾಶಯ 100 ರ ಗಡಿ ತಲುಪಲು ಇನ್ನೊಂದು ಅಡಿ ಮಾತ್ರ ಬಾಕಿ ಇದೆ. ಬುಧವಾರ 99 ಅಡಿ ತಲುಪಿದ್ದು ಗುರುವಾರ 100 ರ ಗಡಿ ದಾಟಲಿದೆ. ಅದೇ ರೀತಿ ಮೈಸೂರು ಜಿಲ್ಲೆಯ ಕಬಿನಿ ಜಲಾಶಯವೂ ಹಿಂದಿನ ಹಂಗಾಮಿನಲ್ಲಿ ಎರಡು ಮಾತ್ರ ತುಂಬಿತ್ತು. ಇಲ್ಲಿಯೂ ನೀರಿನ ಕೊರತೆ ಉಂಟಾಗಿತ್ತು. ಈ ಬಾರಿ ಜುಲೈ ಮೊದಲ ವಾರಕ್ಕೆ ತುಂಬುವ ಹಂತಕ್ಕೆ ಬಂದಿದ್ದು. ಮುಂದಿನ ಮೂರು ತಿಂಗಳ ಮಳೆಗಾಲದಲ್ಲಿ ಸಮೃದ್ದವಾಗಿರುವ ಸೂಚನೆಯನ್ನಂತೂ ನೀಡಿದೆ.
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ ಕೊಡಗಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಎನ್ನುವಂತೆ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣವೂ ಹೆಚ್ಚುತ್ತಿದೆ. ಬುಧವಾರದಂದು ಕೆಆರ್‌ಎಸ್‌ಗೆ 14135 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟವು 98.10 ಅಡಿಗೆ ತಲುಪಿದೆ. ಬುಧವಾರ ಸಂಜೆ ಹೊತ್ತಿಗೆ ಜಲಾಶಯದ ನೀರಿನ ಮಟ್ಟವು 99 ಅಡಿ ತಲುಪಿ, ಗುರುವಾರದ ಹೊತ್ತಿಗೆ 100 ರ ಗಡಿ ತಲುಪಬಹುದು ಎಂದು ಅಂದಾಜು ಇಟ್ಟುಕೊಳ್ಳಲಾಗಿದೆ. ಜಲಾಶಯ ಗರಿಷ್ಠ ಮಟ್ಟವು 124.80 ಅಡಿ. ಜಲಾಶಯದಲ್ಲಿ 21.357 ಟಿಎಂಸಿ ನೀರನ್ನು ಈವರೆಗೂ ಸಂಗ್ರಹ ಮಾಡಲಾಗಿದೆ. ಗರಿಷ್ಠ 49.452 ಟಿಎಂಸಿ ನೀರನ್ನು ಕೆಆರ್ ಎಸ್ ಜಲಾಶಯದಲ್ಲಿ ಸಂಗ್ರಹಿಸಲು ಅವಕಾಶವಿದೆ. ಜಲಾಶಯದಿಂದ 532 ಕ್ಯೂಸೆಕ್ ನೀರನ್ನು ಮಾತ್ರ ಹೊರ ಬಿಡಲಾಗುತ್ತದೆ.
ಕೆಆರ್‌ಎಸ್‌ಗೆ ನೂರರ ಗಡಿ

ಕೆಆರ್‌ಎಸ್ ಜಲಾಶಯ ಕಳೆದ ವರ್ಷ ತುಂಬಲೇ ಇಲ್ಲ. ಈ ಬಾರಿಯೂ ಹೇಗಾಗಲಿದೆಯೋ ಎನ್ನುವ ಆತಂಕವಂತೂ ಇದೆ. ಆದರೂ ಈವರೆಗಿನ ಮಳೆಯ ವರದಿಗಳು ಹಾಗೂ ಕೊಡಗಿನಲ್ಲಿ ಜೂನ್ ತಿಂಗಳಲ್ಲಿ ಬಿದ್ದ ಮಳೆ, ಒಳಹರಿವಿನ ಪ್ರಮಾಣ ನೋಡಿದರೆ ಕೆಆರ್‌ಎಸ್ ಜಲಾಶಯ ಬೇಗನೇ ತುಂಬಬಹುದು. ಈಗಾಗಲೇ ನೂರು ಅಡಿ ಸಮೀಪದಲ್ಲಿಯೇ ಇದೆ. ಇನ್ನೂ ಹದಿನೈದು ದಿನ ಮಳೆಯಾದರೆ ಜಲಾಶಯದ ಮಟ್ಟದಲ್ಲಿ ಏರಿಕೆಯಾಗಲಿದೆ. ಮಳೆಗಾಲದ ಹಂಗಾಮಿನಲ್ಲಿ ಉತ್ತಮ ಮಳೆಯಾದರೆ ಜಲಾಶಯ ತುಂಬಿ ಹಿಂದಿನ ವರ್ಷಗಳಂತೆ ಹೊರ ಬಿಡಬೇಕಾಗುತ್ತದೆ ಎನ್ನುವುದು ಅಧಿಕಾರಿಗಳ ವಿವರಣೆ.
ಕಬಿನಿಗೂ ನೀರು
ಕೇರಳದಲ್ಲಿ ಮಳೆಯ ಪ್ರಮಾಣ ಏರುತ್ತಲೇ ಇದೆ. ವಯನಾಡು ಭಾಗದಲ್ಲಿ ಒಂದೇ ಸಮನೇ ಮಳೆಯಾಗುತ್ತಿದೆ. ಇದರಿಂದ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದು ಜಲಾಶಯ ತುಂಬುವ ಹಂತಕ್ಕೂ ಬಂದಿದೆ. ಕಬಿನಿ ಜಲಾಶಯಕ್ಕೆ ಬುಧವಾರ 9807 ಕ್ಯೂಸೆಕ್ ನೀರಿನ ಒಳ ಹರಿವು ಇದೆ. ಕಳೆದ ವಾರಕ್ಕೆ ಹೋಲಿಸಿದರೆ ಕೊಂಚ ಕಡಿಮೆ ಎನ್ನಿಸಿದರೂ ಈಗ ಆಗುತ್ತಿರುವ ಮಳೆಯಿಂದ ಎರಡು ದಿನದಲ್ಲಿ ಒಳ ಹರಿವು ಅಧಿಕವಾಗಬಹುದು. ಸದ್ಯ ಜಲಾಶಯದ ನೀರಿನ ಮಟ್ಟವು 2279.54 ಅಡಿಯಷ್ಟಿದೆ. ಜಲಾಶಯದ ಗರಿಷ್ಠ ಮಟ್ಟವು 2284 ಅಡಿ. ಜಲಾಶಯದಲ್ಲಿ 16.78 ಟಿಎಂಸಿ ನೀರು ಸಂಗ್ರಹವಾಗಿದೆ. 19.52 ಟಿಎಂಸಿ ನೀರನ್ನು ಇಲ್ಲಿ ಸಂಗ್ರಹಿಸಲು ಅವಕಾಶವಿದೆ. ಆದರೆ ಜಲಾಶಯ ತುಂಬುವ ಹಂತಕ್ಕೆ ಬಂದಿರುವುದರಿಂದ ಹೊರ ಹರಿವಿನ ಪ್ರಮಾಣವನ್ನೂ ಕಬಿನಿಯಲ್ಲಿ ಹೆಚ್ಚಿಸಲಾಗಿದೆ. ಜಲಾಶಯದಿಂದ ಬುಧವಾರದಂದು 2917 ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ. ಇದು ಈ ಹಂಗಾಮಿಯಲ್ಲಿ ಹೆಚ್ಚಿನ ಹೊರಹರಿವು.
ಕಬಿನಿ ಜಲಾಶಯ ಬಹುತೇಕ ತುಂಬುವ ಹಂತಕ್ಕೆ ಬಂದಿದೆ. 2282 ಅಡಿ ಆಸುಪಾಸಿನಲ್ಲಿಯೇ ಜಲಾಶಯದ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಲಾಗುತ್ತದೆ. ಅದಕ್ಕಿಂತ ಜಾಸ್ತಿ ಸಂಗ್ರಹಿಸಿದರೆ ಜಲಾಶಯಕ್ಕೂ ಅಪಾಯವಾಗಲಿದೆ. ಈ ಕಾರಣದಿಂದ ಹೊರ ಹರಿವು ನಿಧಾನವಾಗಿ ಏರಿಸಲಾಗುತ್ತಿದೆ. ಒಂದೆರಡು ದಿನದಲ್ಲಿ ಜಲಾಶಯ ಭರ್ತಿಯಾಗುವ ವಿಶ್ವಾಸವಿದೆ. ಅತೀ ಬೇಗನೇ ಜಲಾಶಯ ತುಂಬುತ್ತಿದೆ ಎನ್ನುವುದು ಅಧಿಕಾರಿಗಳ ನುಡಿ.