ಕನ್ನಡ ಸುದ್ದಿ  /  ಕರ್ನಾಟಕ  /  Karnataka Dams: ಜಲಾಶಯಗಳಲ್ಲಿ ಹೆಚ್ಚಿದ ನೀರಿನ ಮಟ್ಟ, ತುಂಗಾ ಭರ್ತಿ, ಕೆಆರ್‌ಎಸ್‌ನಲ್ಲೂ ಏರಿಕೆ

Karnataka Dams: ಜಲಾಶಯಗಳಲ್ಲಿ ಹೆಚ್ಚಿದ ನೀರಿನ ಮಟ್ಟ, ತುಂಗಾ ಭರ್ತಿ, ಕೆಆರ್‌ಎಸ್‌ನಲ್ಲೂ ಏರಿಕೆ

Water Level in Dams ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗುತ್ತಿರುವುದರಿಂದ( Karnataka Rains) ಜಲಾಶಯಗಳಿಗೆ ನೀರು ಹರಿದು ಬರುತ್ತದೆ

ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯಲ್ಲಿ ಸಿಗುವ ಗಾಜನೂರಿನ ತುಂಗಾ ಜಲಾಶಯ ತುಂಬುವ ಹಂತಕ್ಕೆ ಬಂದಿದೆ.
ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯಲ್ಲಿ ಸಿಗುವ ಗಾಜನೂರಿನ ತುಂಗಾ ಜಲಾಶಯ ತುಂಬುವ ಹಂತಕ್ಕೆ ಬಂದಿದೆ.

ಬೆಂಗಳೂರು: ಕರ್ನಾಟಕದ ಹಲವು ಭಾಗಗಳಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿದೆ. ಮಲೆನಾಡು ಹಾಗು ಉತ್ತರ ಕರ್ನಾಟಕ ಭಾಗದಲ್ಲಂತೂ ಭಾರೀ ಮಳೆಯೇ ಸುರಿಯುತ್ತಿದೆ. ಈ ಕಾರಣದಿಂದಾಗಿ ಆ ಭಾಗದ ಜಲಾಶಯಗಳಲ್ಲಿ ಜೀವ ಕಳೆ ತುಂಬುತ್ತಿದೆ. ಕಳೆದ ವರ್ಷ ಮಳೆ ಕೊರತೆಯಿಂದ ಕೆಲವು ಜಲಾಶಯಗಳು ತುಂಬಲೇ ಇಲ್ಲ. ಈ ಬಾರಿ ಮುಂಗಾರು ಮಳೆಗಾಲದ ಆರಂಭದಲ್ಲೇ ಒಳಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಜಲಾಶಯಗಳು ಆಗಸ್ಟ್‌ ಹೊತ್ತಿಗೆ ತುಂಬುವ ಸೂಚನೆಯಿದೆ. ಆದರೆ ಶಿವಮೊಗ್ಗ ಭಾಗದಲ್ಲಿ ಮಳೆಯಾಗಿದ್ದರಿಂದ ತುಂಗಾ ಜಲಾಶಯವು ಈಗಾಗಲೇ ತುಂಬುವ ಹಂತಕ್ಕೆ ಬಂದಿದೆ. ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ಗೂ ಒಳಹರಿವಿನ ಪ್ರಮಾಣ ತಗ್ಗದರಿರುವುದರಿಂದ ನೀರಿನ ಪ್ರಮಾಣ ನಿಧಾನವಾಗಿ ಏರುತ್ತಲೇ ಇದೆ.

ಬೇಗ ತುಂಗುವ ತುಂಗೆ

ಕರ್ನಾಟಕದ ಸಣ್ಣ ಜಲಾಶಯಗಳಲ್ಲಿ ಒಂದಾಗಿರುವ ತುಂಗಾ ಜಲಾಶಯ ಅತಿ ಬೇಗನೇ ತುಂಬಲಿದೆ. ಅದರಲ್ಲೂ ಮಲೆನಾಡಿನ ಆಗುಂಬೆ, ತೀರ್ಥಹಳ್ಳಿ ಭಾಗದಲ್ಲಿ ವಾರ ಕಾಲ ಉತ್ತಮ ಮಳೆಯಾದರೆ ತುಂಗಾ ನದಿ ಮೂಲಕ ನೀರು ಹರಿದ ಬರಲಿದೆ. ಈ ಬಾರಿಯೂ ಮಲೆನಾಡು ಭಾಗದಲ್ಲಿನ ಮಳೆ ಕಾರಣಕ್ಕೆ ತುಂಗಾ ಜಲಾಶಯ ಹಿಂದಿನ ವರ್ಷಗಳಂತೆಯೇ ಜೂನ್‌ ಮೂರನೇ ವಾರಕ್ಕೆ ತುಂಬುವ ಹಂತಕ್ಕೆ ಬಂದಿದೆ. ಬೇಗನೇ ಮಳೆಯೂ ಆಗಿರುವ ಕಾರಣಕ್ಕೆ ತಿಂಗಳ ಮೊದಲ ತುಂಬುವ ಸಂತಸ ಕಂಡು ಬಂದಿದೆ. 3.25 ಟಿಎಂಸಿ ಸಾಮರ್ಥ್ಯದ ತುಂಗಾ ಜಲಾಶಯದ ಗರಿಷ್ಠ ನೀರಿನ ಮಟ್ಟ 588.24 ಮೀಟರ್. ಜಲಾಶಯದಲ್ಲಿ ಸದ್ಯು ನೀರಿನಮಟ್ಟ 588.11 ಮೀಟರ್ ನೀರು ಸಂಗ್ರಹವಾಗಿದೆ. ಒಳಹರಿವು 1,765 ಕ್ಯುಸೆಕ್ ಇದೆ. ತುಂಬುವ ಹಂತದಲ್ಲಿರುವದಿಂದ ಜಲಾಶಯದಿಂದ ನದಿಗೆ 1,700 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.

ಹಿಂದಿನ ವರ್ಷ ಜುಲೈ ಮೊದಲ ವಾರದಲ್ಲಿ ತುಂಗಾ ಜಲಾಶಯ ತುಂಬಿತ್ತು. ಸುಮಾರು ಎರಡು ತಿಂಗಳ ಕಾಲ ನೀರನ್ನು ನದಿ ಮೂಲಕ ಹರಿಸಲಾಗಿತ್ತು. ಈ ಬಾರಿ ಬೇಗನೇ ನೀರು ಹೊರ ಬಿಡಲಾಗುತ್ತಿದ್ದು. ತುಂಗಭದ್ರಾ ಜಲಾಶಯಕ್ಕೂ ಒಳಹರಿವಿನ ಪ್ರಮಾಣ ಏರಿಕೆ ಕಂಡು ಬರಲಿದೆ.

ಟ್ರೆಂಡಿಂಗ್​ ಸುದ್ದಿ

ಭದ್ರಾದಲ್ಲೂ ಒಳಹರಿವು

ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆ ನಡುವೆ ಇರುವ ಭದ್ರಾ ಜಲಾಶಯಕ್ಕೂ ನೀರು ಹರಿದು ಬರುತಿದ್ದು, ಈಗ ಕೊಂಚ ಕಡಿಮೆಯಾಗಿದೆ. ಸದ್ಯ ಒಳಹರಿವು ಪ್ರಮಾಣ 1,395 ಕ್ಯುಸೆಕ್‌ ನಷ್ಟಿದೆ. ಮಂಗಳವಾರ ಒಳಹರಿವು 2,911 ಕ್ಯುಸೆಕ್‌ಗೆ ಏರಿಕೆಯಾಗಿದ್ದು ಎರಡು ದಿನದಲ್ಲಿ ಕೊಂಚ ತಗ್ಗಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ. ಸದ್ಯ 117.11 ಅಡಿಯಷ್ಟು ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 137.4 ಅಡಿಯಷ್ಟು ನೀರು ಜಲಾಶಯದಲ್ಲಿ ಸಂಗ್ರಹವಾಗಿತ್ತು. ಜಲಾಶಯದಿಂದ ಸದ್ಯ 342 ಕ್ಯುಸೆಕ್ ನೀರನ್ನು ಕುಡಿಯುವ ನೀರು ಉದ್ದೇಶಕ್ಕೆ ಭದ್ರಾ ನದಿಗೆ ಹರಿಬಿಡಲಾಗುತ್ತಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ಲಿಂಗನಮಕ್ಕಿಯಲ್ಲೂ ಏರಿಕೆ

ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದಲ್ಲಿ 1,745.40 ಅಡಿ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 1,743.70 ಅಡಿ ಸಂಗ್ರಹವಿತ್ತು. ಜಲಾಶಯಕ್ಕೆ 3,450 ಕ್ಯುಸೆಕ್ ಒಳಹರಿವು ಬರುತ್ತಿದ್ದು, 1,924.21 ಕ್ಯುಸೆಕ್ ನೀರನ್ನು ಶರಾವತಿ ನದಿ ಮೂಲಕ ಹರಿ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ ಗರಿಷ್ಠ ಮಟ್ಟ 1,819 ಅಡಿ ಇದೆ.

ಕೆಆರ್‌ಎಸ್‌ ಮಟ್ಟ ಹೆಚ್ಚಳ

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಲ್ಲೂ ನೀರಿನ ಮಟ್ಟ ಏರಿಕೆ ಕಂಡಿದೆ, ಕೊಡಗು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟ ಗುರುವಾರ ಬೆಳಿಗ್ಗೆ 85.90 ಅಡಿಯಿತ್ತು. ಒಟ್ಟು 2365 ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ124.80 ಅಡಿ. ಸದ್ಯ 13.63 ಟಿಎಂಸಿ ನೀರು ಸಂಗ್ರಹವಿದೆ ಎನ್ನುವುದು ಅಧಿಕಾರಿಗಳು ನೀಡುವ ವಿವರಣೆ.

ಕಬಿನಿಗೆ ಕಡಿಮೆ

ಕೇರಳದಲ್ಲಿ ಇನ್ನೂ ಮುಂಗಾರು ಚುರುಕಾಗಿಲ್ಲ. ಈ ಕಾರಣದಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ ನೀರಿನ ಒಳಹರಿವಿನ ಪ್ರಮಾಣವೂ ಕಡಿಮೆಯಿದೆ. ಜಲಾಶಯಕ್ಕೆ 1835 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ2263.09 ಅಡಿಯಷ್ಟಿದೆ. ಇಲ್ಲಿನ ಗರಿಷ್ಠ ಮಟ್ಟ 2284 ಅಡಿ. ಜಲಾಶಯದಲ್ಲಿ 8.54 ಟಿಎಂಸಿ ನೀರು ಸಂಗ್ರಹವಾಗಿದೆ