Karnataka Reservoirs: ಸತತ 3 ತಿಂಗಳಿನಿಂದ ಪೂರ್ಣ ತುಂಬಿವೆ ಕರ್ನಾಟಕದ 6 ಜಲಾಶಯಗಳು; ನೀರು ಸಂಗ್ರಹ ಎಲ್ಲಿ ಎಷ್ಟಿದೆ
ಕರ್ನಾಟಕದಲ್ಲಿ ಜಲಾಶಯಗಳಲ್ಲಿ ಯಥೇಚ್ಚ ನೀರು ಸಂಗ್ರಹವಾಗಿದೆ. ಮಳೆಗಾಲ ಅಕ್ಟೋಬವರೆಗೂ ವಿಸ್ತರಣೆಗೊಂಡು ಜಲಾಶಯಗಳಿಗೆ ಈಗಲೂ ನೀರು ಹರಿದು ಬರುತ್ತಿದೆ. ಆಲಮಟ್ಟಿ, ಲಿಂಗನಮಕ್ಕಿ, ಭದ್ರಾ, ಕೆಆರ್‌ಎಸ್ ಸಹಿತ ಜಲಾಶಯಗಳ ನೀರಿನ ಮಟ್ಟ ಹೀಗಿದೆ.
ಬೆಂಗಳೂರು: ಐ ತಿಂಗಳಿನಿಂದ ಮಳೆಯಾಗಿರುವ ಕಾರಣ ಕರ್ನಾಟಕದ ಜಲಾಶಯಗಳಲ್ಲಿ ನವೆಂಬರ್ ಬಂದರೂ ಜಲ ಕಳೆ ಜೋರಾಗಿದೆ. ಹಿಂದಿನ ವರ್ಷ ಬಹುತೇಕ ಜಲಾಶಯಗಳು ತುಂಬದೇ ಹೊಸ ವರ್ಷದ ಮುಂಚೆಯೇ ಆತಂಕದ ವಾತಾವರಣವಿತ್ತು. ಈ ಬಾರಿ ಪರಿಸ್ಥಿತಿ ಭಿನ್ನ, ಕಾವೇರಿ ಕಣಿವೆ, ಮಲೆನಾಡು, ಉತ್ತರ ಕರ್ನಾಟಕದ ಜಲಾಶಯಗಳೂ ಈ ಬಾರಿ ಬಹುತೇಕ ತುಂಬಿವೆ. ಒಟ್ಟು ಪ್ರಮುಖ ಹದಿನಾಲ್ಕು ಜಲಾಶಯಗಳಲ್ಲಿ ಆರು ಜಲಾಶಯ ತುಂಬಿವೆ. ಕೆಆರ್‌ಎಸ್, ಭದ್ರಾ, ಘಟಪ್ರಭ, ಮಲಪ್ರಭ, ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಪೂರ್ಣ ಭರ್ತಿಯಾಗಿವೆ. ಮೂರು ತಿಂಗಳಿನಿಂದಲೂ ಈ ರೀತಿಯ ಭರ್ತಿಯಾದ ಸ್ಥಿತಿಯಲ್ಲಿ ಈ ಜಲಾಶಯ ಇರುವುದು ವಿಶೇಷ. ಕೊಡಗಿನ ಹಾರಂಗಿ ಜಲಾಶಯ ಹೊರತುಪಡಿಸಿ ಉಳಿದ ಜಲಾಶಯಗಳೂ ಬಹುತೇಕ ತುಂಬಿದಂತೆಯೆ ಇವೆ.
ಎಲ್ಲಿ ಎಷ್ಟಿದೆ
ಈ ವರ್ಷ ಕರ್ನಾಟಕ ಎಲ್ಲಾ ಜಲಾಶಯಗಳಲ್ಲಿ ಸದ್ಯ 867.19 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 479.65 ಟಿಎಂಸಿ ನೀರು ಸಂಗ್ರಹವಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.50 ರಷ್ಟು ನೀರಿನ ಲಭ್ಯತೆ ಕರ್ನಾಟಕದ ಜಲಾಶಯಗಳಲ್ಲಿದೆ.
ಕರ್ನಾಟಕದಲ್ಲಿಯೇ ಅತಿ ದೊಡ್ಡ ಜಲಾಶಯಗಳಲ್ಲಿ ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯ ಮೊದಲ ಸ್ಥಾನದಲ್ಲಿದೆ. ಇಲ್ಲಿ ಈಗ 155.24( ಶೇ.95) ಟಿಎಂಸಿ ನೀರು ಸಂಗ್ರಹವಿದೆ. ಹೋದ ವರ್ಷ 64.58 ಟಿಎಂಸಿ ನೀರಿತ್ತು. ಸದ್ಯ 6470 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಸೂಪಾ ಜಲಾಶಯದಲ್ಲಿ ಈಗ 138.01( ಶೇ.95) ಟಿಎಂಸಿ ನೀರು ಸಂಗ್ರಹವಿದೆ. ಹೋದ ವರ್ಷ74.69 ಟಿಎಂಸಿ ನೀರಿತ್ತು. ಸದ್ಯ 1128 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಆಲಮಟ್ಟಿದಲ್ಲಿ ಅಧಿಕ
ಉತ್ತರ ಕರ್ನಾಟದ ಜಲಾಶಯಗಳಲ್ಲಿ ದೊಡ್ಡದಾದ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ ಈಗ 123.08( ಶೇ.100) ಟಿಎಂಸಿ ನೀರು ಸಂಗ್ರಹವಿದೆ. ಹೋದ ವರ್ಷ89.93 ಟಿಎಂಸಿ ನೀರಿತ್ತು. ಸದ್ಯ 18478 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯದಲ್ಲಿ ಈಗ 49.45( ಶೇ.100) ಟಿಎಂಸಿ ನೀರು ಸಂಗ್ರಹವಿದೆ. ಹೋದ ವರ್ಷ 22.38 ಟಿಎಂಸಿ ನೀರಿತ್ತು. ಸದ್ಯ 6286ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯದಲ್ಲಿ ಈಗ 71.33( ಶೇ.100) ಟಿಎಂಸಿ ನೀರು ಸಂಗ್ರಹವಿದೆ. ಹೋದ ವರ್ಷ37.53 ಟಿಎಂಸಿ ನೀರಿತ್ತು. ಸದ್ಯ11237 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ತುಂಗಭದ್ರಾಕ್ಕೆ ಮತ್ತೆ ನೀರು
ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದಲ್ಲಿ ಈಗ 101.77 ( ಶೇ.96) ಟಿಎಂಸಿ ನೀರು ಸಂಗ್ರಹವಿದೆ. ಹೋದ ವರ್ಷ 32.16 ಟಿಎಂಸಿ ನೀರಿತ್ತು. ಸದ್ಯ 11860 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ಗೊರೂರಿನ ಹೇಮಾವತಿ ಜಲಾಶಯದಲ್ಲಿ ಈಗ 34.34( ಶೇ.93)ಟಿಎಂಸಿ ನೀರು ಸಂಗ್ರಹವಿದೆ. ಹೋದ ವರ್ಷ 16.53 ಟಿಎಂಸಿ ನೀರಿತ್ತು. ಸದ್ಯ3699 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಬೆಳಗಾವಿ ಜಿಲ್ಲೆ ಹಿಡಕಲ್ ಘಟಪ್ರಭಾ ಜಲಾಶಯದಲ್ಲಿ ಈಗ 50.87( ಶೇ.100) ಟಿಎಂಸಿ ನೀರು ಸಂಗ್ರಹವಿದೆ. ಹೋದ ವರ್ಷ40.73 ಟಿಎಂಸಿ ನೀರಿತ್ತು. ಸದ್ಯ 1948 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಕಬಿನಿಗೆ ತಗ್ಗಿದ ಪ್ರಮಾಣ
ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆಯ ಕಬಿನಿ ಜಲಾಶಯದಲ್ಲಿ ಈಗ 18.98( ಶೇ.97) ಟಿಎಂಸಿ ನೀರು ಸಂಗ್ರಹವಿದೆ. ಹೋದ ವರ್ಷ13.26 ಟಿಎಂಸಿ ನೀರಿತ್ತು. ಸದ್ಯ 524 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಯಾದಗಿರಿ ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಲ್ಲಿ ಈಗ 33.22( ಶೇ.100) ಟಿಎಂಸಿ ನೀರು ಸಂಗ್ರಹವಿದೆ. ಹೋದ ವರ್ಷ30.21 ಟಿಎಂಸಿ ನೀರಿತ್ತು. ಸದ್ಯ 16972 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಕೊಡಗಿನ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದಲ್ಲಿ ಈಗ 7.25( ಶೇ.85) ಟಿಎಂಸಿ ನೀರು ಸಂಗ್ರಹವಿದೆ. ಹೋದ ವರ್ಷ 5.64 ಟಿಎಂಸಿ ನೀರಿತ್ತು. ಸದ್ಯ 1128 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮಲಪ್ರಭಾ ನವಿಲುತೀರ್ಥ ಜಲಾಶಯದಲ್ಲಿ37.73( ಶೇ.100) ಟಿಎಂಸಿ ನೀರು ಸಂಗ್ರಹವಿದೆ. ಹೋದ ವರ್ಷ 18.22 ಟಿಎಂಸಿ ನೀರಿತ್ತು. ಸದ್ಯ 1194 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ವಾಣಿವಿಲಾಸಕ್ಕೂ ಜಲಕಳೆ
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಲ್ಲಿ ಈಗ 27.99( ಶೇ.92)ಟಿಎಂಸಿ ನೀರು ಸಂಗ್ರಹವಿದೆ. ಹೋದ ವರ್ಷ 22.87 ಟಿಎಂಸಿ ನೀರಿತ್ತು. ಸದ್ಯ 462 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಉಡುಪಿ ಜಿಲ್ಲೆಯ ಕುಂದಾಪುರ ವಾರಾಹಿ ಜಲಾಶಯದಲ್ಲಿ ಈಗ 28.94( ಶೇ.93) ಟಿಎಂಸಿ ನೀರು ಸಂಗ್ರಹವಿದೆ. ಹೋದ ವರ್ಷ 10.93 ಟಿಎಂಸಿ ನೀರಿತ್ತು. ಸದ್ಯ 414 ಕ್ಯೂಸೆಕ್ ನೀರು ಹರಿದು ಬರುತ್ತಿದೆ.