Karnataka Reservoirs: ಆಲಮಟ್ಟಿ ಒಳ ಹರಿವು ಇಳಿಕೆ, ತಗ್ಗಿದ ಹೊರ ಹರಿವು; ಕೆಆರ್‌ಎಸ್‌ನಲ್ಲಿ ಹೆಚ್ಚಾಯ್ತು ನೀರು, ಜಲಾಶಯಗಳ ಮಟ್ಟ ಹೇಗಿದೆ-reservoir levels today september 3 alamatti krs harangi bhadra tungabhadra supa hemavati kabini reservoirs levels kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಆಲಮಟ್ಟಿ ಒಳ ಹರಿವು ಇಳಿಕೆ, ತಗ್ಗಿದ ಹೊರ ಹರಿವು; ಕೆಆರ್‌ಎಸ್‌ನಲ್ಲಿ ಹೆಚ್ಚಾಯ್ತು ನೀರು, ಜಲಾಶಯಗಳ ಮಟ್ಟ ಹೇಗಿದೆ

Karnataka Reservoirs: ಆಲಮಟ್ಟಿ ಒಳ ಹರಿವು ಇಳಿಕೆ, ತಗ್ಗಿದ ಹೊರ ಹರಿವು; ಕೆಆರ್‌ಎಸ್‌ನಲ್ಲಿ ಹೆಚ್ಚಾಯ್ತು ನೀರು, ಜಲಾಶಯಗಳ ಮಟ್ಟ ಹೇಗಿದೆ

Karnataka Dam Level ಕರ್ನಾಟಕದಲ್ಲಿ ಮಳೆ ಪ್ರಮಾಣ ತಗ್ಗಿದ್ದರೂ ಜಲಾಶಯಗಳಿಗೆ ಬರುತ್ತರುವ ಒಳ ಹರಿವು ಚೆನ್ನಾಗಿದೆ. ಮಂಗಳವಾರದ ಜಲಾಶಯಗಳ ನೀರಿನ ಮಟ್ಟ ಹೀಗಿದೆ.

ವಿಜಯಪುರ ಜಿಲ್ಲೆ ಆಲಮಟ್ಟಿ ಜಲಾಶಯದ ಒಳ ಹರಿವು ತಗ್ಗಿದ್ದರೂ ಜಲಾಶಯ ಬಹುತೇಕ ಭರ್ತಿಯಾಗಿದೆ.
ವಿಜಯಪುರ ಜಿಲ್ಲೆ ಆಲಮಟ್ಟಿ ಜಲಾಶಯದ ಒಳ ಹರಿವು ತಗ್ಗಿದ್ದರೂ ಜಲಾಶಯ ಬಹುತೇಕ ಭರ್ತಿಯಾಗಿದೆ.

ಬೆಂಗಳೂರು: ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ( Maharashtra Rains) ಕಳೆದ ವಾರ ಎಡಬಿಡದೇ ಸುರಿದ ಭಾರೀ ಮಳೆಯಿಂದ ಹೆಚ್ಚಿನ ಒಳ ಹರಿವು ಪಡೆಯುತ್ತಿದ್ದ ವಿಜಯಪುರ ಜಿಲ್ಲೆಯ ಅಲಮಟ್ಟಿ ಜಲಾಶಯದ( Almatti Reservoir) ಒಳಹರಿವಿನ ಪ್ರಮಾಣ ಬಹುತೇಕ ತಗ್ಗಿದೆ. ಇದರಿಂದಾಗಿ ಹೊರ ಹರಿವನ್ನೂ ಗಣನೀನವಾಗಿಯೇ ತಗ್ಗಿಸಲಾಗಿದೆ. ಸುಮಾರು ಎರಡು ಲಕ್ಷ ಕ್ಯೂಸೆಕ್‌ ನಷ್ಟಿದ್ದ ನೀರಿನ ಒಳ ಹಾಗೂ ಹೊರ ಹರಿವಿನ ಪ್ರಮಾಣವೂ ಅರವತ್ತು ಸಾವಿರ ಕ್ಯೂಸೆಕ್‌ಗೆ ಇಳಿದಿದೆ. ಆದರೆ ಕಾವೇರಿ ಕಣಿವೆಯ ಕೊಡಗು ಭಾಗದಲ್ಲಿ(Kodagu Rains) ಉತ್ತಮ ಮಳೆಯಾಗಿರುವುದು, ಕೇರಳದ ವಯನಾಡು ಭಾಗದಲ್ಲೂ( Kerala Rains) ಮಳೆಯಾಗಿದ್ದರಿಂದ ಕೆಆರ್‌ಎಸ್‌( KRS Dam) ಹಾಗೂ ಕಬಿನಿ ಜಲಾಶಯದ ನೀರಿನ ಒಳ ಹರಿವಿನಲ್ಲಿ ಕೊಂಚ ಏರಿಕೆಯನ್ನು ತಂದಿದೆ.

ಆಲಮಟ್ಟಿ ಜಲಾಶಯ

ಮಹಾರಾಷ್ಟ್ರ ಭಾಗದಲ್ಲಿ ಮಳೆ ಕಡಿಮೆಯಾಗಿರುವ ಜತೆಗೆ ಬೆಳಗಾವಿ ಜಿಲ್ಲೆಯಲ್ಲೂ ಮಳೆಯ ಅಬ್ಬರ ತಗ್ಗಿರುವುದರಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಆಲಮಟ್ಟಿ ಜಲಾಶಯ ಮಟ್ಟವು ಮಂಗಳವಾರ ಬೆಳಿಗ್ಗೆಯ ಹೊತ್ತಿಗೆ 519.43 ಮೀಟರ್‌ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್‌. ಜಲಾಶಯಕ್ಕೆ 64,908 ಕ್ಯುಸೆಕ್ ಇದ್ದರೆ, ಹೊರ ಹರಿವು 29,712 ಕ್ಯುಸೆಕ್ ಕ್ಯೂಸೆಕ್‌ ಇದೆ. ಜಲಾಶಯದಲ್ಲಿ ಸದ್ಯ :120.079 ಟಿಎಂಸಿ ನೀರು ಸಂಗ್ರಹವಾಗಿದ್ದು, ಗರಿಷ್ಠ ಟಿಎಂಸಿ 123.081 ಸಂಗ್ರಹಿಸಬಹುದು.

ಭದ್ರಾ ಜಲಾಶಯ

ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಭಾಗದಲ್ಲಿ ಮಳೆ ಪ್ರಮಾಣ ಕೊಂಚ ಕಡಿಮೆಯಾಗಿದೆ. ಇದರಿಂದ ಭದ್ರಾ ಜಲಾಶಯಕ್ಕೂ ನೀರಿನ ಒಳ ಹರಿವು ಕಡಿಮೆಯಾಗಿದೆ.

ಮಂಗಳವಾರದ ಅಂಕಿ ಅಂಶದ ಪ್ರಕಾರ, 7248 ಕ್ಯೂಸೆಕ್ ನೀರು ಡ್ಯಾಮ್‌ಗೆ ಹರಿದು ಬರುತ್ತಿದೆ. ಈ ಪೈಕಿ 6948 ಕ್ಯೂಸೆಕ್ ನೀರನ್ನು ಭದ್ರಾ ನದಿಗೆ ಬಿಡಲಾಗುತ್ತಿದೆ. ಜಲಾಶಯದಲ್ಲಿ 71.5 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು, ಸದ್ಯ 67.82 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ನೀರಿನ ಮಟ್ಟವು183.00ಅಡಿ ಇದೆ. ಗರಿಷ್ಠ ಪ್ರಮಾಣ 186 ಅಡಿ.

ಕೆಆರ್‌ಎಸ್‌ ಜಲಾಶಯ

ಕೊಡಗಿನಲ್ಲಿ ಮಳೆ ಬಂದಿದ್ದರಿಂದ ಮಂಡ್ಯ ಜಿಲ್ಲೆ ಕೆಆರ್‌ ಎಸ್‌ ಜಲಾಶಯಕ್ಕೆ ಈಗಲೂ ನೀರು ಹರಿದು ಬರುತ್ತಿದೆ. ಜಲಾಶಯದ 124.40 ಅಡಿಯಷ್ಟಿದೆ. ಜಲಾಶಯಕ್ಕೆ ಮಂಗಳವಾರ 11248 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದ 10715 ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಸದ್ಯ 48.894 ಟಿಎಂಸಿ ನೀರು ಸಂಗ್ರಹವಿದೆ.

ತುಂಗಾ ಜಲಾಶಯ

ಶಿವಮೊಗ್ಗ ಭಾಗದಲ್ಲಿ ಮಳೆ ಕೊಂಚ ಬಿಡುವು ನೀಡಿದೆಯಾದರೂ ತುಂಗಾ ನದಿ ಜಲಾನಯನ ಭಾಗದಿಂದ ನೀರು ಹರಿದು ಬರುತ್ತಿದೆ. ಇದಕ್ಕೆ ಪೂರಕವಾಗಿ ಗಾಜನೂರು ಬಳಿ ಇರುವ ತುಂಗಾ ಜಲಾಶಯಕ್ಕೆ ಮಂಗಳವಾರದಂದು‌ 26997 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸೋವಾರ ದಾಖಲಾಗಿರುವ ಅಂಕಿ ಅಂಶಕ್ಕೆ ಹೋಲಿಸಿದತೆ ಒಳಹರಿವಿನ ಪ್ರಮಾಣ ಇವತ್ತು ಹೆಚ್ಚಿದೆ. ಇಷ್ಟೆ ಪ್ರಮಾಣದ ಅಂದರೆ 26997 ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ ಗರಿಷ್ಠ 588.24 ಮೀ ತಲುಪಿದ್ದು, 3.24 ಟಿಎಂಸಿ ನೀರು ಸಂಗ್ರಹವಾಗಿದೆ.

ಕಬಿನಿ ಜಲಾಶಯ

ಕೇರಳದಲ್ಲಿ ಮಳೆಯಾಗಿದ್ದರಿಂದ ಮೈಸೂರು ಜಿಲ್ಲೆ ಕಬಿನಿ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಮಂಗಳವಾರ ಜಲಾಶಯಕ್ಕೆ 8,702 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, 8,350 ಕ್ಯೂಸೆಕ್‌ ನೀರು ನಾಲೆಗಳು ಹಾಗೂ ಕಪಿಲಾ ನದಿ ಮೂಲಕ ಹೊರ ಹೋಗುತ್ತಿದೆ. ಜಲಾಶಯದ ನೀರಿನ ಮಟ್ಟವು 2283.66 ಅಡಿ ಇದೆ. ಜಲಾಶಯದಲ್ಲಿ 19.29 ಟಿಎಂಸಿ ನೀರು ಸಂಗ್ರಹವಾಗಿದೆ.