Karnataka Reservoirs: ಆಲಮಟ್ಟಿಗೆ ಒಳ ಹರಿವು ಮತ್ತಷ್ಟು ಏರಿಕೆ, ಕೆಆರ್‌ ಎಸ್‌, ಕಬಿನಿ ಜಲಾಶಯಗಳಿಗೆ ತಗ್ಗಿದ ಪ್ರಮಾಣ-reservoir levels today september 8 alamatti krs harangi bhadra kabini tungabhadra supa hemavati reservoirs levels kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಆಲಮಟ್ಟಿಗೆ ಒಳ ಹರಿವು ಮತ್ತಷ್ಟು ಏರಿಕೆ, ಕೆಆರ್‌ ಎಸ್‌, ಕಬಿನಿ ಜಲಾಶಯಗಳಿಗೆ ತಗ್ಗಿದ ಪ್ರಮಾಣ

Karnataka Reservoirs: ಆಲಮಟ್ಟಿಗೆ ಒಳ ಹರಿವು ಮತ್ತಷ್ಟು ಏರಿಕೆ, ಕೆಆರ್‌ ಎಸ್‌, ಕಬಿನಿ ಜಲಾಶಯಗಳಿಗೆ ತಗ್ಗಿದ ಪ್ರಮಾಣ

Karnataka Dams level ಕರ್ನಾಟಕದಲ್ಲಿ ಮಳೆ ಪ್ರಮಾಣ ಹೆಚ್ಚು ಇಲ್ಲದೇ ಇರುವುದರಿಂದ ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ ಸಾಮಾನ್ಯವಾಗಿದೆ.

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ

ಬೆಂಗಳೂರು: ಕರ್ನಾಟಕದಲ್ಲಿ ಮಳೆ( Karnataka Rains) ಪ್ರಮಾಣ ಕಡಿಮೆಯಾಗಿ ಜಲಾಶಯಗಳ ಒಳ ಹರಿವಿನ ಪ್ರಮಾಣದಲ್ಲೂ ಇಳಿಕೆ ಕಂಡು ಬಂದಿವೆ. ಕಾವೇರಿ ಕಣಿವೆಯ ಕೃಷ್ಣರಾಜಸಾಗರ( KRS Dam), ಕಬಿನಿ ಜಲಾಶಯಗಳಿಗೆ( Kabini Dam) ಒಳ ಹರಿವು ಕಡಿಮೆಯಾಗಿದೆ. ಮಲೆನಾಡು ಭಾಗದಲ್ಲಿ ಮಳೆಯಾಗಿದ್ದರೂ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ಏನೂ ನೀರು ಬಂದಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಮಳೆಯಾದ ಪರಿಣಾಮವಾಗಿ ಆಲಮಟ್ಟಿ ಜಲಾಶಯಕ್ಕೆ( Almatti Reservoir) ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಕಂಡಿದೆ. ವಾರದ ನಂತರ ಒಳಹರಿವಿನ ಪ್ರಮಾಣ ಒಂದು ಲಕ್ಷ ಕ್ಯೂಸೆಕ್‌ ತಲುಪುತ್ತಿದೆ. ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೂ( Tunga Bharad Reservoir) ಹೆಚ್ಚಿನ ನೀರು ಹರಿದು ಬಾರದೇ ಇದ್ದರೂ ಜಲಾಶಯ ನಿಧಾನವಾಗಿ ಮತ್ತೊಮ್ಮೆ ತುಂಬಿದೆ. ಇದರಿಂದ ಹೊರ ಹರಿವನ್ನು ಏರಿಕೆ ಮಾಡಲಾಗಿದೆ.

ಆಲಮಟ್ಟಿ ಜಲಾಶಯ

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಮತ್ತಷ್ಟು ಏರಿಕೆ ಕಂಡಿದೆ. ಮಹಾರಾಷ್ಟ್ರದ ಜತೆಗೆ ಬೆಳಗಾವಿಯಲ್ಲಿನ ಮಳೆಯು ಕೃಷ್ಣಾ ನದಿ ಮೂಲಕ ಆಲಮಟ್ಟಿಗೆ ಉತ್ತಮ ಪ್ರಮಾಣದಲ್ಲಿ ನೀರನ್ನು ತರುತ್ತಿದೆ.

ಜಲಾಶಯಕ್ಕೆ ಭಾನುವಾರ ಬೆಳಿಗ್ಗೆ 92,204 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದಲೂ 90,179 ಕ್ಯೂಸೆಕ್‌ ನೀರನ್ನು ನದಿ ಹಾಗೂ ನಾಲೆಗಳ ಮೂಲಲ ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ ಸದ್ಯ 519.52 ಮೀಟರ್‌ ನೀರಿದೆ. ಜಲಾಶಯದಲ್ಲಿ ಈಗ 121.606 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟವು 519.60 ಮೀಟರ್‌ ಹಾಗೂ ಸಂಗ್ರಹ ಸಾಮರ್ಥ್ಯ 123.081 ಟಿಎಂಸಿ.

ಕೆಆರ್‌ಎಸ್‌ ಜಲಾಶಯ

ಕೊಡಗಿನಲ್ಲಿ ಈಗ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯಕ್ಕೂ ಒಳ ಹರಿವು ಕಡಿಎಯಾಗಿದೆ. ಜಲಾಶಯಕ್ಕೆ ಭಾನುವಾರ ಬೆಳಿಗ್ಗೆ ಹೊತ್ತಿಗೆ 9118 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದ 9069 ಕ್ಯೂಸೆಕ್‌ ನೀರನ್ನು ಹರಿಸಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 124.45 ಅಡಿ ತಲುಪಿದೆ. ಜಲಾಶಯದಲ್ಲಿ 48.963 ಟಿಎಂಸಿ ನೀರು ಸಂಗ್ರಹವಿದೆ. ಕೆಆರ್‌ಎಸ್‌ನಲ್ಲಿ 49.452 ಟಿಎಂಸಿ ನೀರು ಸಂಗ್ರಹಿಸಬಹುದು. ಗರಿಷ್ಠ ಮಟ್ಟವು 124.80 ಅಡಿ.

ತುಂಗಭದ್ರಾ ಜಲಾಶಯ

ಮಲೆನಾಡಿನಲ್ಲಿ ಸಾಧಾರಣ ಮಳೆ ಇರುವುದರಿಂದ ವಿಜಯನಗರ ಜಿಲ್ಲೆ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಕಡಿಮೆಯಾಗಿದೆ. ಜಲಾಶಯಕ್ಕೆ ಭಾನುವಾರದಂದು 34,983 ಕ್ಯೂಸೆಕ್‌ ಒಳ ಹರಿವು ಇದೆ. 34,743 ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 1632 ಅಡಿ ಇದೆ. ಜಲಾಶಯದಲ್ಲಿ 101.773 ಟಿಎಂಸಿ ನೀರನ್ನು ಸಂಗ್ರಹಿಸಲಾಗಿದೆ.

ಕಬಿನಿ ಜಲಾಶಯ

ಕೇರಳದಲ್ಲೂ ಮಳೆ ಪ್ರಮಾಣ ತಗ್ಗಿರುವ ಕಾರಣದಿಂದಾಗಿ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೂ ಒಳ ಹರಿವು ಕಡಿಮೆಯಾಗಿದೆ. ಜಲಾಶಯಕ್ಕೆ ಭಾನುವಾರ 4050 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದ 3,850 ಕ್ಯೂಸೆಕ್‌ ನೀರನ್ನು ಹರಿ ಬಿಡಲಾಗುತ್ತಿದೆ. ಜಲಾಶಯದಲ್ಲಿ 2283.46 ಅಡಿ ನೀರಿದ್ದು, ಜಲಾಶಯದಲ್ಲಿ 19.16 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟವು 2284 ಅಡಿ ಹಾಗೂ ಗರಿಷ್ಠ ಸಂಗ್ರಹ ಪ್ರಮಾಣ 19.52 ಟಿಎಂಸಿ.

mysore-dasara_Entry_Point