Chikkamagalur Trip: ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ದಿನದ ಪ್ರವಾಸದ ಯೋಜನೆಯಿದೆಯೇ, ಪರಿಸರ- ದೇಗುಲ ದರ್ಶನಕ್ಕೆ ಉಂಟು ನೆಚ್ಚಿನ ತಾಣಗಳು
ಕನ್ನಡ ಸುದ್ದಿ  /  ಕರ್ನಾಟಕ  /  Chikkamagalur Trip: ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ದಿನದ ಪ್ರವಾಸದ ಯೋಜನೆಯಿದೆಯೇ, ಪರಿಸರ- ದೇಗುಲ ದರ್ಶನಕ್ಕೆ ಉಂಟು ನೆಚ್ಚಿನ ತಾಣಗಳು

Chikkamagalur Trip: ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ದಿನದ ಪ್ರವಾಸದ ಯೋಜನೆಯಿದೆಯೇ, ಪರಿಸರ- ದೇಗುಲ ದರ್ಶನಕ್ಕೆ ಉಂಟು ನೆಚ್ಚಿನ ತಾಣಗಳು

Chikkamagaluru Trip: ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ದಿನ ಪ್ರವಾಸಕ್ಕೆ ಗಿರಿ ಶಿಖಿರಗಳಿವೆ. ಜಲಾಶಯ, ಜಲಪಾತಗಳಿವೆ. ದೇಗುಲಗಳಂತೂ ಯಥೇಚ್ಛವಾಗಿವೆ. ಅವುಗಳ ವಿವರ ಇಲ್ಲಿದೆ.

ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಕ್ಕೆ ವಿಭಿನ್ನ ಪ್ರವಾಸಿ ತಾಣಗಳ ದೊಡ್ಡ ಸಂಖ್ಯೆಯೇ ಇದೆ.
ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಕ್ಕೆ ವಿಭಿನ್ನ ಪ್ರವಾಸಿ ತಾಣಗಳ ದೊಡ್ಡ ಸಂಖ್ಯೆಯೇ ಇದೆ.

Chikkamagalur Trip: ಚಿಕ್ಕಮಗಳೂರು ಅಪ್ಪಟ ಮಲೆನಾಡು, ಅರಮಲೆನಾಡು, ಬಯಲು ಸೀಮೆ ಹೊಂದಿರುವ ಭಿನ್ನ ಪ್ರಾಕೃತಿಕ ಹಿನ್ನೆಲೆಯ ಜಿಲ್ಲೆ, ಇಲ್ಲಿ ಕರ್ನಾಟಕದ ಅತಿ ಎತ್ತರದ ಗಿರಿ ಶಿಖಿರಗಳಿವೆ. ಕರ್ನಾಟದಲ್ಲಿಯೇ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಪ್ರಮುಖ ದೇಗುಲ ತಾಣಗಳಿವೆ. ಪಾರಂಪರಿಕ ಹಿನ್ನೆಲೆಯ ದೇಗುಲ, ವನ್ಯಧಾಮ, ಜಲಪಾತ, ಜಲಾಶಯಗಳೂ ಇವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ದಿನಗಳ ಪ್ರವಾಸಕ್ಕೆಂದು ಹೇಳಿ ಮಾಡಿಸಿದ ತಾಣಗಳಿವೆ. ಎರಡು ದಿನದಲ್ಲಿ ಚಿಕ್ಕಮಗಳೂರಿನ ಭಿನ್ನ ವಾತಾವರಣದ ತಾಣಗಳಿಗೂ ಭೇಟಿ ನೀಡಿ ಪ್ರವಾಸದ ಆನಂದ ಸವಿಯಬಹುದು. ಅದಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಿಕೊಳ್ಳಬೇಕಷ್ಟೇ. ಈಗ ಹೊಸ ವರ್ಷದ ಪ್ರವಾಸ ಒಂದು ಕಡೆಯಾದರೆ, ಶೈಕ್ಷಣಿಕ ಪ್ರವಾಸವೂ ಚುರುಕುಗೊಂಡಿದೆ. ಇಂತಹ ಎಲ್ಲರಿಗೂ ಚಿಕ್ಕಮಗಳೂರಿನ ಪ್ರವಾಸಿ ತಾಣಗಳು ಕೈ ಬೀಸಿ ಕರೆಯುತ್ತಿವೆ.

ಮೊದಲ ದಿನ

ಚಿಕ್ಕಮಗಳೂರು ನಗರದಿಂದ 25 ಕಿ.ಮಿ ದೂರದಲ್ಲಿ ಮುತ್ತೋಡಿ ನಿಸರ್ಗಧಾಮ ಹಾಗೂ ವನ್ಯಜೀವಿ ಸಫಾರಿ ಇದೆ. ಇಲ್ಲಿನ ಭದ್ರಾ ಅಭಯಾರಣ್ಯದ ಈ ಹಸಿರು ಪರಿಸರ ಭಿನ್ನ ಅನುಭವ ನೀಡುತ್ತದೆ. ಸುಮಾರು 20 ಕಿ.ಮಿ ದೂರದಲ್ಲಿದೆ ಬಾಬಾಬುಡನ್‌ಗಿರಿಯ ಇನಾಂ ದತ್ತಾತ್ತೇಯ ಪೀಠ ಇರುವ ಭಾವೈಕ್ಯತಾ ಸಂಗಮ. ಬೆಟ್ಟದಲ್ಲಿ ಹಸಿರು ವಾತಾವರಣವಿರುವುದರಿಂದ ಇಲ್ಲಿನ ಕಳೆಯುವ ಕ್ಷಣ ಬೆಸ್ಟ್‌.

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಕೂಡ ಅತಿ ಎತ್ತರದ ಬೆಟ್ಟ. ಬೆಟ್ಟ ಏರುವ ಖುಷಿ. ಅಲ್ಲಿನ ದೇಗುಲ, ಕೂಲ್‌ ಕೂಲ್‌ ಹವಾಮಾನ ನಿಜಕ್ಕೂ ಖುಷಿ ಕೊಡುತ್ತದೆ.ಮೇಲಿನಿಂದ ಬೆಟ್ಟಗಳ ಸಾಲುಗಳನ್ನು ನೋಡಲು ಸಂತಸವಾಗುತ್ತದೆ.

ಅಲ್ಲಿಂದ ಮುಂದೆ ಕೆಮ್ಮಣ್ಣುಗುಂಡಿ ಇದೆ. ಇದು ಕರ್ನಾಟಕ ತೋಟಗಾರಿಕೆ ಇಲಾಖೆಯ ಸುಪರ್ದಿಯಲ್ಲಿದ್ದು ಇಡೀ ವಾತಾವರಣ ಊಟಿಯನ್ನು ನೆನಪಿಸುತ್ತದೆ. ಕೆಮ್ಮಣ್ಣುಗುಂಡಿಯಲ್ಲಿನ ಸಸ್ಯೋದ್ಯಾನ ಕೂಡ ಸಸ್ಯಗಳ ಜ್ಞಾನವನ್ನು ಹೆಚ್ಚಿಸುತ್ತದೆ. ಕೆಮ್ಮಣ್ಣುಗುಂಡಿಯಿಂದ ಕಲ್ಹತ್ತಗಿರಿ ಜಲಪಾತ ಕೂಡ ಆಕರ್ಷಕ. ಇಲ್ಲಿ ಸೃಷ್ಟಿಯಾಗಿರುವ ಜಲಪಾತ ಆಟಕ್ಕೆ ಹೇಳಿ ಮಾಡಿಸಿದಂತಿದೆ.

ಅಲ್ಲಿಂದ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯಕ್ಕೂ ಭೇಟಿ ನೀಡಬಹುದು.

ಎರಡನೇ ದಿನ

ಎರಡನೇ ದಿನಕ್ಕೆ ಹೊರನಾಡಿನ ಅನ್ನಪೂರ್ಣೇಶ್ವರಿ ದೇಗುಲಕ್ಕೆ ಹೋಗಬಹುದು. ಅಲ್ಲಿಂದ ಬಾಳೆಹೊನ್ನೂರಿಗೆ ಹೋದರೆ ರಂಭಾಪುರಿ ಮಠವಿದೆ. ಬಾಳೆ ಹೊನ್ನೂರಿನಲ್ಲಿ ಸಾಂಬಾರ ಮಂಡಳಿ ಕಚೇರಿಯಿದ್ದು ಸಾಂಬಾರ ಪದಾರ್ಥಗಳ ಕುರಿತು ವಿವರ ಪಡೆದುಕೊಳ್ಳಬಹುದು.

ಬಳಿಕ ಶೃಂಗೇರಿಯ ತುಂಗಾ ತೀರದ ಶಾರದಾಂಬ ದೇಗುಲ, ಅಲ್ಲಿನ ವಾತಾವರಣ ಮುದ ನೀಡುತ್ತದೆ. ಈ ಎರಡು ದೇಗುಲದ ನಂತರ ಹರಿಹರಪುರದಲ್ಲಿ ಹರಿಯುವ ತುಂಗಾ ನದಿ ತೀರ, ಶಾರದಾಂಬ ದೇಗುಲವಿದೆ. ಅದನ್ನು ನೋಡಬಹುದು.

ಶೃಂಗೇರಿ ಸಮೀಪದ ಸಿರಿಮನೆ ಜಲಪಾತಕ್ಕೂ ಹೋಗಿ ಬರಬಹುದು. ಅಲ್ಲಿಂದ ಮುಂದೆ ಕುದುರೆಮುಖಕ್ಕೆ ಹೋದರೆ ಅದು ಸುಂದರ ತಾಣ. ಕಳಸಕ್ಕೂ ಹೋಗಬಹುದು. ಅಲ್ಲೂ ದೇಗುಲವಿದೆ. ಮೂಡಿಗೆರೆ ಬಂದರೆ ಪೂರ್ಣಚಂದ್ರ ತೇಜಸ್ವಿಯ ಅವರ ನಿವಾಸಕ್ಕೂ ಭೇಟಿ ನೀಡಹುದು.

ಇದಲ್ಲದೇ ಕಡೂರು, ತರೀಕೆರೆ ತಾಲ್ಲೂಕಿನ ಕೆಲವು ಹಳೆಯ ದೇಗುಲಗಳೂ ಇವೆ. ತರೀಕೆರೆ ತಾಲ್ಲೂಕಿನ ಅಮೃತೇಶ್ವರ ದೇಗುಲ ಅದರಲ್ಲಿ ಒಂದು. ಚಿಕ್ಕಮಗಳೂರು ನಗರದಲ್ಲಿಯೇ ಹಿರೇಮಗಳೂರು ಕೋದಂಡರಾಮ ದೇಗುಲವೂ ಇದೆ.

Whats_app_banner