Zero Shadow Day: ಆಗಸ್ಟ್‌ 18ರಂದು ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ, ನಿಮ್ಮ ನೆರಳೇ ನಿಮಗೆ ಕಾಣಿಸದ ಅಪರೂಪದ ಖಗೋಳ ವಿದ್ಯಮಾನ
ಕನ್ನಡ ಸುದ್ದಿ  /  ಕರ್ನಾಟಕ  /  Zero Shadow Day: ಆಗಸ್ಟ್‌ 18ರಂದು ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ, ನಿಮ್ಮ ನೆರಳೇ ನಿಮಗೆ ಕಾಣಿಸದ ಅಪರೂಪದ ಖಗೋಳ ವಿದ್ಯಮಾನ

Zero Shadow Day: ಆಗಸ್ಟ್‌ 18ರಂದು ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ, ನಿಮ್ಮ ನೆರಳೇ ನಿಮಗೆ ಕಾಣಿಸದ ಅಪರೂಪದ ಖಗೋಳ ವಿದ್ಯಮಾನ

Zero Shadow Day Bengaluru on August 18: ಬೆಂಗಳೂರಿನಲ್ಲಿ ಆಗಸ್ಟ್‌ 18ರಂದು ಶೂನ್ಯ ನೆರಳು ದಿನ ಎಂಬ ಖಗೋಳ ವಿದ್ಯಮಾನ ನಡೆಯಲಿದೆ. ಏನಿದು ಶೂನ್ಯ ನೆರಳು ದಿನ, ಇದು ಹೇಗೆ ಸಂಭವಿಸುತ್ತದೆ, ವೀಕ್ಷಣೆ ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ.

Zero Shadow Day: ಆಗಸ್ಟ್‌ 18ರಂದು ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ
Zero Shadow Day: ಆಗಸ್ಟ್‌ 18ರಂದು ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ

ಬೆಂಗಳೂರು: ಆಗಸ್ಟ್‌ 18ರಂದು ಬೆಂಗಳೂರಿಗರು ಮತ್ತೊಮ್ಮೆ ಶೂನ್ಯ ನೆರಳು ದಿನ (Zero Shadow Day) ಕಣ್ತುಂಬಿಕೊಳ್ಳಲಿದ್ದಾರೆ. ಈ ವರ್ಷ ಇದೇ ಏಪ್ರಿಲ್‌ ತಿಂಗಳಿನಲ್ಲೂ ಇದೇ ರೀತಿ ಬೆಂಗಳೂರು ಶೂನ್ಯ ನೆರಳು ದಿನಕ್ಕೆ ಸಾಕ್ಷಿಯಾಗಿತ್ತು. ಸಾಮಾನ್ಯವಾಗಿ ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ ಇರುವ ಪ್ರದೇಶಗಳ ನಡುವೆ ಸಂಭವಿಸುತ್ತದೆ. ಈ ಲೇಖನದಲ್ಲಿ ಏನಿದು ಶೂನ್ಯ ನೆರಳು ದಿನ? ಶೂನ್ಯ ನೆರಳು ದಿನ ಏನು ಸಂಭವಿಸುತ್ತದೆ? ಶೂನು ನೆರಳು ದಿನ ನೋಡುವುದು ಹೇಗೆ? ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಳ್ಳೋಣ.

ಬೆಂಗಳೂರಿನಲ್ಲಿ ಆಗಸ್ಟ್‌ 18ರಂದು ಶೂನ್ಯ ನೆರಳು ದಿನ- ಪರಿವಿಡಿ

  • ಏನಿದು ಶೂನ್ಯ ನೆರಳು ದಿನ
  • ಝೀರೋ ಶಾಡೋ ಡೇ ದಿನ ಹೇಗೆ ಸಂಭವಿಸುತ್ತದೆ
  • ಶೂನ್ಯ ನೆರಳು ದಿನದಂದು ಏನಾಗುತ್ತದೆ?
  • ಶೂನ್ಯ ನೆರಳನ್ನು ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು?

ಏನಿದು ಶೂನ್ಯ ನೆರಳು ದಿನ?

ಸರಳವಾಗಿ ಹೇಳಬೇಕೆಂದರೆ ಅಂದು ನಮ್ಮ ನೆರಳು ನಮಗೆ ಕಾಣಿಸದು. ಅಂದು ಸೂರ್ಯ ಸರಿಯಾಗಿ ನಮ್ಮ ತಲೆಯ ಮೇಲೆ ಇರುತ್ತಾನೆ. ಹೀಗಾಗಿ, ನಮ್ಮ ನೆರಳು ನಿರ್ದಿಷ್ಟ ಸಮಯದಲ್ಲಿ ನಮಗೆ ಕಾಣಿಸದು. ಶೂನ್ಯ ನೆರಳು ದಿನವು +23.5 ಮತ್ತು -23.5 ಡಿಗ್ರಿ ಅಕ್ಷಾಂಶದ ನಡುವಿನ ಸ್ಥಳಗಳಲ್ಲಿ ವರ್ಷಕ್ಕೆ ಎರಡು ಬಾರಿ ಸಂಭವಿಸುವ ಖಗೋಳ ವಿದ್ಯಮಾನವಾಗಿದೆ. ಈ ಬಾರಿ ಈಗಾಗಲೇ ಏಪ್ರಿಲ್‌ ತಿಂಗಳಲ್ಲಿ ಈ ವಿದ್ಯಮಾನಕ್ಕೆ ಬೆಂಗಳೂರಿನ ಜನರು ಸಾಕ್ಷಿಯಾಗಿದ್ದರು. ಈ ವರ್ಷದ ಎರಡನೇ ಬಾರಿಯ ಈ ವಿದ್ಯಮಾನ ಆಗಸ್ಟ್‌ 18ರಂದು ಸಂಭವಿಸಲಿದೆ. ಈ ಸಮಯದಲ್ಲಿ ಸೂರ್ಯನು ಆಕಾಶದಲ್ಲಿ ಮೇಲ್ಮಟ್ಟದಲ್ಲಿ ಇರುತ್ತಾನೆ. ಯಾವುದೇ ವಸ್ತು ಮತ್ತು ವ್ಯಕ್ತಿಯ ತಲೆಯ ಮೇಲೆ ನೇರವಾಗಿ ಸೂರ್ಯನ ಬೆಳಕು ಬೀಳುವುದರಿಂದ ನೆರಳು ಕಾಣಿಸದು.

ಶೂನ್ಯ ನೆರಳು ದಿನದಂದು ಏನಾಗುತ್ತದೆ? ಹೇಗೆ ಸಂಭವಿಸುತ್ತದೆ?

ಝೀರೋ ಶ್ಯಾಡೋ ದಿನದಂದು ಸೂರ್ಯ ನೇರವಾಗಿ ನಮ್ಮ ತಲೆಯ ಮೇಲೆ ಇರುತ್ತಾನೆ. ಈ ಸಮಯದಲ್ಲಿ ಭೂಮಿಯ ಮೇಲ್ಮೈಯಲ್ಲಿ ಯಾವುದೇ ನೆರಳು ಕಾಣಿಸದು. ಸೂರ್ಯನು ಆಕಾಶದಲ್ಲಿ ತನ್ನ ಅತ್ಯಧಿಕ ಎತ್ತರಕ್ಕೆ ತಲುಪುವಾಗ ಮತ್ತು ನಮ್ಮ ಮೇಲೆ ನೇರವಾಗಿ ಇರುವಾಗ ಈ ವಿದ್ಯಮಾನ ಸಂಭವಿಸುತ್ತದೆ.

ದಕ್ಷಿಣಾಯನ ಹಾಗೂ ಉತ್ತರಾಯಣದಲ್ಲಿ ತಲಾ 1 ಬಾರಿ ಶೂನ್ಯ ನೆರಳಿನ ದಿನ ಬರುತ್ತದೆ. ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಜನರು ಈ ಶೂನ್ಯ ನೆರಳಿನ ದಿನಕ್ಕೆ ವರ್ಷಕ್ಕೆರಡು ಬಾರಿ ಸಾಕ್ಷಿಯಾಗುತ್ತಾರೆ ಎಂದು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಿಸಿಕ್ಸ್‌ ಮಾಹಿತಿ ನೀಡಿದೆ.

ಶೂನ್ಯ ನೆರಳನ್ನು ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು?

ಶೂನ್ಯ ನೆರಳು ದಿನದ ಸಮಯದಲ್ಲಿ ನಮ್ಮ ನೆರಳು ನಮಗೆ ಕಾಣಿಸದು. ವಿದ್ಯಾರ್ಥಿಗಳು, ವಿಜ್ಞಾನಾಸಕ್ತರು ಸೇರಿದಂತೆ ಸಮಸ್ತರು ಈ ಖಗೋಳ ವಿದ್ಯಮಾನವನ್ನು ಕಣ್ತುಂಬಿಕೊಳ್ಳಬಹುದು. ಬೆಂಗಳೂರಿನ ವಿಜ್ಞಾನ, ಖಗೋಳ ಕೇಂದ್ರಗಳಲ್ಲಿ ಈ ರೀತಿಯ ವಿದ್ಯಮಾನ ನೋಡಲು ವಿಶೇಷ ವ್ಯವಸ್ಥೆ ಮಾಡುತ್ತಾರೆ. ನೀವು ಸುಮ್ಮನೆ ನಿಗದಿತ ಸಮಯದಂದು ಮನೆಯ ಹೊರಕ್ಕೆ ಬಂದು ಬಿಸಿಲಲ್ಲಿ ನಿಂತು ನೆರಳು ಕಾಣದ ಅಚ್ಚರಿಯನ್ನು ಪರಿಶೀಲಿಸಬಹುದು. ಯಾವುದಾದರೂ ವಸ್ತುವನ್ನು ಇಟ್ಟು ಅದರ ನೆರಳು ಕಾಣಿಸುತ್ತದೆಯೇ ಎಂದು ಪರಿಶೀಲಿಸಬಹುದು.

ಇತ್ತೀಚೆಗೆ ಅಂದರೆ ಆಗಸ್ಟ್‌ 4ರಂದು ಶೂನ್ಯ ನೆರಳು ದಿನಕ್ಕೆ ಹೈದರಾಬಾದ್‌ ಸಾಕ್ಷಿಯಾಗಿತ್ತು. ಅಂದು ಮಧ್ಯಾಹ್ನ 12. 23 ಗಂಟೆಗೆ ಶೂನ್ಯ ನೆರಳು ದಿನ ಸಂಭವಿಸಿತ್ತು. ಆಗಸ್ಟ್‌ 18ರಂದು ಬೆಂಗಳೂರಿನಲ್ಲಿ ಮಧ್ಯಾಹ್ನ ಶೂನ್ಯ ನೆರಳು ದಿನ ಸಂಭವಿಸಲಿದೆ ಎಂದು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಿಸಿಕ್ಸ್‌ ಮಾಹಿತಿ ನೀಡಿದೆ. ಸೂರ್ಯನು ಮಧ್ಯಾಹ್ನದ ಸಮಯದಲ್ಲಿ ನಿಖರವಾಗಿ ತಲೆಯ ಮೇಲೆ ಇರುವುದಿಲ್ಲ ಆದರೆ ಸಾಮಾನ್ಯವಾಗಿ ಎತ್ತರದಲ್ಲಿ ಸ್ವಲ್ಪ ಕಡಿಮೆ, ಸ್ವಲ್ಪ ಉತ್ತರಕ್ಕೆ ಅಥವಾ ಸ್ವಲ್ಪ ದಕ್ಷಿಣಕ್ಕೆ ಸಾಗುತ್ತಾನೆ. ಇದೊಂದು ಅಪರೂಪದ ಖಗೋಳ ವಿದ್ಯಮಾನ. ಆದರೆ, ಶೂನ್ಯ ನೆರಳು ದಿನದ ಸಮಯದಲ್ಲಿ ಸರಿಯಾಗಿ ತಲೆಯ ಮೇಲೆ ಇದ್ದು, ನೆರಳಿಗೆ ಅವಕಾಶವಿಲ್ಲದಂತೆ ಇರುತ್ತದೆ. ಇಂತಹ ಕೌತುಕ ಆಗಸ್ಟ್‌ 18ರಂದು ನಡೆಯಲಿದೆ.