ಕನ್ನಡ ಸುದ್ದಿ  /  Karnataka  /  Senior Congress Leader Vr Sudarshan Resigns Kpcc Spokesperson

KPSC Spokesperson Resign: ಕಾಂಗ್ರೆಸ್‌ ವಕ್ತಾರ ಸ್ಥಾನಕ್ಕೆ ಹಿರಿಯ ನಾಯಕ ವಿ.ಆರ್‌. ಸುದರ್ಶನ್‌ ರಾಜೀನಾಮೆ

ಎಐಸಿಸಿ ಅಧ್ಯಕ್ಷ ಹುದ್ದೆಗೆ ಮಲ್ಲಿಕಾರ್ಜುನಾ ಖರ್ಗೆ ಸ್ಪರ್ಧಿಸಿದ್ದು, ಅವರ ಬೆಂಬಲಕ್ಕೆ ನಿಲ್ಲುವ ಸಲುವಾಗಿ ರಾಜೀನಾಮೆ ನೀಡಿರುವುದಾಗಿ ವಿ. ಆರ್‌. ಸುದರ್ಶನ್‌ ತಿಳಿಸಿದ್ದಾರೆ. ಖರ್ಗೆ ಪರ ಪ್ರಚಾರ ಕಾರ್ಯದಲ್ಲಿ ತೊಡಗುವ ಸಲುವಾಗಿ ಈ ರಾಜೀನಾಮೆ ನೀಡಿರುವುದಾಗಿ ಅವರು ಹೇಳಿದ್ದಾರೆ.

KPSC Spokesperson Resign: ಕಾಂಗ್ರೆಸ್‌ ವಕ್ತಾರ ಸ್ಥಾನಕ್ಕೆ ಸುದರ್ಶನ್‌ ರಾಜೀನಾಮೆ
KPSC Spokesperson Resign: ಕಾಂಗ್ರೆಸ್‌ ವಕ್ತಾರ ಸ್ಥಾನಕ್ಕೆ ಸುದರ್ಶನ್‌ ರಾಜೀನಾಮೆ

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ ಹಿರಿಯ ನಾಯಕರಾದ ವಿ.ಆರ್‌. ಸುದರ್ಶನ್‌ ಅವರು ಕಾಂಗ್ರೆಸ್‌ ಪಕ್ಷದ ರಾಜ್ಯದ ಮುಕ್ತ ವಕ್ತಾರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ತಮ್ಮ ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರಿಗೆ ಸಲ್ಲಿಸಿದ್ದಾರೆ.

ರಾಜೀನಾಮೆ ಏಕೆ?: ಎಐಸಿಸಿ ಅಧ್ಯಕ್ಷ ಹುದ್ದೆಗೆ ಮಲ್ಲಿಕಾರ್ಜುನಾ ಖರ್ಗೆ ಸ್ಪರ್ಧಿಸಿದ್ದು, ಅವರ ಬೆಂಬಲಕ್ಕೆ ನಿಲ್ಲುವ ಸಲುವಾಗಿ ರಾಜೀನಾಮೆ ನೀಡಿರುವುದಾಗಿ ವಿ. ಆರ್‌. ಸುದರ್ಶನ್‌ ತಿಳಿಸಿದ್ದಾರೆ. ಖರ್ಗೆ ಪರ ಪ್ರಚಾರ ಕಾರ್ಯದಲ್ಲಿ ತೊಡಗುವ ಸಲುವಾಗಿ ಈ ರಾಜೀನಾಮೆ ನೀಡಿರುವುದಾಗಿ ಅವರು ಹೇಳಿದ್ದಾರೆ.

ಸುದರ್ಶನ್‌ ಅವರು ಹಿಂದೊಮ್ಮೆ ಕೋಲಾರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಟಿಕೆಟ್‌ ಕೈತಪ್ಪುವ ಶಂಕೆಯಿಂದ ತಮ್ಮ ರಾಜೀನಾಮೆಯನ್ನು ವಾಟ್ಸ್‌ಆಪ್‌ ಮೂಲಕ ಅಂದಿನ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ. ಪರಮೇಶ್ವರ ಅವರಿಗೆ ಸಲ್ಲಿಸಿದ್ದರು. 2013ರಲ್ಲಿ ವಿಧಾನಸಭೆ ಚುನಾವಣೆ ಸಮಯದಲ್ಲಿ ವಿ.ಆರ್‌. ಸುದರ್ಶನ್‌ ಅವರಿಗೆ ಜಯನಗರ ಕ್ಷೇತ್ರದಿಂದ ಟಿಕೆಟ್‌ ನೀಡಲಾಗುತ್ತದೆ ಎಂದು ಸುದ್ದಿಯಾಗಿತ್ತು. ಆದರೆ, ಅವರಿಗೆ ಟಿಕೆಟ್‌ ದೊರಕಿರಲಿಲ್ಲ.

ಅಕ್ಟೋಬರ್‌ 6ರಂದು ಸೋನಿಯಾ ಗಾಂಧಿ ಜೋಡೋ ಯಾತ್ರೆ

ಸೋನಿಯಾ ಗಾಂಧಿ ಅವರು 6 ರಂದು ಬೆಳಗ್ಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಿಕೆ ಶಿವಕುಮಾರ್‌ ಮಾಹಿತಿ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು 5 ರಂದು ರಾತ್ರಿ ಹಾಗೂ 6 ರಂದು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಇದು ಅಧಿಕೃತ ಕಾರ್ಯಕ್ರಮ. ಯಾರೊಬ್ಬರಿಗೂ ಹೂವಿನ ಹಾರ ಹಾಕುವ ಅವಕಾಶ ನೀಡುವುದಿಲ್ಲ. ಎಲ್ಲ ಕಾರ್ಯಕರ್ತರು ಹಾಗೂ ನಾಯಕರು ಸಹಕಾರ ನೀಡಬೇಕು ಎಂದು ಅವರು ಹೇಳಿದ್ದಾರೆ.

ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲ ಪಕ್ಷಭೇದ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಯಾತ್ರೆಯಲ್ಲಿ ಭಾಗವಹಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸಿಕ್ಕಿದ್ದು ನಮಗೆ ಸಂತೋಷವಾಗಿದೆ. ಇದರ ಜತೆಗೆ ಸುತ್ತೂರು ಮಠಕ್ಕೆ ಹೋಗಿದ್ದು, ಶ್ರೀಗಳು ತುಂಬು ಹೃದಯದ ಆಶೀರ್ವಾದ ಮಾಡಿದ್ದಾರೆ. ಇಂದು ಚರ್ಚ್ ಹಾಗೂ ದರ್ಗಾಕ್ಕೂ ಭೇಟಿ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಮಡಿಕೇರಿಯಲ್ಲಿ ಕಾರ್ಯಕ್ರಮ ಇದೆಯೇ ಎಂಬ ಪ್ರಶ್ನೆಗೆ, ‘ದಸರಾ ಹಬ್ಬದ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ಎರಡು ದಿನಗಳ ವಿಶ್ರಾಂತಿ ಇದೆ. , ಅವರು ದೆಹಲಿಗೆ ಹೋಗುವ ಬದಲು ಇಲ್ಲೇ ಕುಟುಂಬದ ಜತೆ ಸಮಯ ಕಳೆಯಲು ಮಡಿಕೇರಿಯಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ರಾಜ್ಯದ ಯಾತ್ರೆ ಎರಡು ಜಿಲ್ಲೆ ಪೂರ್ಣಗೊಳಿಸಿ ಮೂರನೇ ಜಿಲ್ಲೆಗೆ ಸಾಗುತ್ತಿದ್ದು, ಜನರ ಪ್ರತಿಕ್ರಿಯೆ ಬಗ್ಗೆ ಕೇಳಿದಾಗ, ‘ಯುವಕರು ಹಾಗೂ ರೈತರು ರಾಜ್ಯ ಹಾಗೂ ರಾಷ್ಟ್ರದಲ್ಲಿ ಬದಲಾವಣೆ ಬಯಸುತ್ತಿದ್ದು, ಅವರಲ್ಲಿನ ಉತ್ಸಾಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯುವಕರು ಹಾಗೂ ರೈತರು ತಮಗಾಗುತ್ತಿರುವ ನೋವು, ತೊಂದರೆಯಿಂದ ರೊಚ್ಚಿಗೆದ್ದು ಈ ಯಾತ್ರೆಯಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದಾರೆ. ನಿತ್ಯ ಬೆಲೆ ಏರಿಕೆಯಿಂದ ಆಗುತ್ತಿರುವ ತೊಂದರೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಪಕ್ಷಕ್ಕೆ ಅನುಕೂಲವಾಗುತ್ತಿದೆಯಾ ಎಂದು ಕೇಳಿದ ಪ್ರಶ್ನೆಗೆ, ‘ಯೋಗಕ್ಕಿಂತ ಯೋಗಕ್ಷೇಮ ದೊಡ್ಡದು. ಆಪರೇಷನ್ ಕಮಲದಿಂದ ಅಧಿಕಾರಕ್ಕೆ ಬಂದ ಅವರು ಜನರಿಗೆ ಸಹಾಯ ಮಾಡುವ ಅವಕಾಶ ಇತ್ತು. ಕೋವಿಡ್ ಸಮಯದಲ್ಲಿ 20 ಲಕ್ಷ ಕೋಟಿ ಕೊಡುತ್ತೇವೆ ಎಂದು ಕೇಂದ್ರ ಹಾಗೂ 1900 ಕೋಟಿ ನೀಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದರು. ಅವಕಾಶ ಇದ್ದಾಗ ಅವರಿಂದ ಏನೂ ಮಾಡಲು ಆಗಲಿಲ್ಲ. ಈಗ ಅವರು ಹತಾಶರಾಗಿದ್ದಾರೆ. ಇನ್ನು ಆರುತಿಂಗಳು ಅವರು ನೆಮ್ಮದಿಯಾಗಿ ಇರಲಿ, ನಂತರ ನಾವು ಹಾಗೂ ಮಾಧ್ಯಮಗಳು ಜನ ರಾಜ್ಯದ ಹಿತ ಕಾಯೋಣ’ ಎಂದು ಅವರು ಹೇಳಿದ್ದಾರೆ.

ಯಾತ್ರೆ ಬಗ್ಗೆ ಬಿಜೆಪಿ ಟೀಕೆ ಕುರಿತು ಕೇಳಿದ ಪ್ರಶ್ನೆಗೆ, ‘ಸೂರ್ಯ ಮುಳುಗುತ್ತಾನೆ, ಮತ್ತೆ ಹುಟ್ಟುತ್ತಾನೆ. ನಿನ್ನೆ ಅಷ್ಟು ದೊಡ್ಡ ಮಳೆ ಮಳೆ ಬಂದರೂ ರಾಹುಲ್ ಗಾಂಧಿ ಕಾರ್ಯಕ್ರಮ ನಿಲ್ಲಿಸಿದರಾ? ಎಷ್ಟೇ, ಮಳೆ ಗಾಳಿ, ಚಳಿ ಬಂದರೂ ಆ ವೇಗವನ್ನು ತಡೆಯಲು ಆಗುವುದಿಲ್ಲ. ನಾವು ದೇಶದ ಐಕ್ಯತೆಯಾಗಿ ಎಷ್ಟೇ ಕಷ್ಟ ಬಂದರೂ ಹೆಜ್ಜೆ ಹಾಕುತ್ತೇವೆ’ ಎಂದು ಅವರು ಹೇಳಿದ್ದಾರೆ.

IPL_Entry_Point