ಕನ್ನಡ ಸುದ್ದಿ  /  ಕರ್ನಾಟಕ  /  Ks Eshwarappa Assets: ಕೆಎಸ್‌ ಈಶ್ವರಪ್ಪ 33.50 ಕೋಟಿ ರೂ. ಆಸ್ತಿವಂತ, ಆದರೂ ಸ್ವಂತ ವಾಹನವಿಲ್ಲ

KS Eshwarappa Assets: ಕೆಎಸ್‌ ಈಶ್ವರಪ್ಪ 33.50 ಕೋಟಿ ರೂ. ಆಸ್ತಿವಂತ, ಆದರೂ ಸ್ವಂತ ವಾಹನವಿಲ್ಲ

ಶಿವಮೊಗ್ಗದಿಂದ ಬಂಡಾಯವೆದ್ದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಆಸ್ತಿ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ.

ಕೆಎಸ್‌ ಈಶ್ವರಪ್ಪ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಕೆಎಸ್‌ ಈಶ್ವರಪ್ಪ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.

ಶಿವಮೊಗ್ಗ: ಬಿಜೆಪಿಯಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ತಮ್ಮ ಪುತ್ರನಿಗೆ ಅವಕಾಶ ಸಿಗಲಿಲ್ಲ ಎಂದು ಬಂಡಾಯವೆದ್ದು ತಾವೇ ಶಿವಮೊಗಗ ಕ್ಷೇತ್ರದಿಂದ ಕಣಕ್ಕಿಳಿದಿರುವ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರ ಘೋಷಿತ ಆಸ್ತಿ ಪ್ರಮಾಣ 33.50 ಕೋಟಿ ರೂ. ಆರು ವರ್ಷದ ಹಿಂದೆ ವಿಧಾನಸಭೆ ಚುನಾವಣೆ ಘೋಷಿಸಿದ ಆಸ್ತಿಗೂ ಈಗಿನ ಆಸ್ತಿಗೂ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಸಾಲದ ಪ್ರಮಾಣದಲ್ಲೂ ಏರಿಕೆ ಕಂಡು ಬಂದಿದೆ. ಬೆಂಗಳೂರು, ಶಿವಮೊಗ್ಗದಲ್ಲಿ ಆಸ್ತಿ ಹೊಂದಿರುವ ಈಶ್ವರಪ್ಪ ಅವರ ಹೆಸರಿನಲ್ಲಿ ಯಾವುದೇ ವಾಹನವಿಲ್ಲ. ಶಿವಮೊಗ್ಗದಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿದ ಕೆ.ಎಸ್.ಈಶ್ವರಪ್ಪ ಅವರು ಅಫಿಡವಿಟ್‌ ಮೂಲಕ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪಕ್ಷೇತರರರಾಗಿ ಸ್ಪರ್ಧಿಸಿರುವ ಕೆ.ಎಸ್.ಈಶ್ವರಪ್ಪ ಅವರು ತೋರಿಸಿರುವ ಒಟ್ಟು ಆಸ್ತಿಯ ಮೌಲ್ಯ 33.50 ಕೋಟಿ ರೂ.ಗಳು. ಅವರ ವಿವಿಧ ಖಾತೆಗಳಲ್ಲಿ ನಗದು 25 ಲಕ್ಷ ರೂ.ಗಳಿವೆ.

ಒಟ್ಟು ಚರಾಸ್ತಿ ಮೌಲ್ಯ 4,28,61,110 ಕೋಟಿ ರೂ.ಗಳದ್ದು. ಇದರಲ್ಲಿ ಬಂಗಾರ. ಬೆಳ್ಳಿ ಆಭರಣಗಳು ಸೇರಿವೆ. ಚಿನ್ನ 300 ಗ್ರಾಂ ಇದ್ದರೆ. ಬೆಳ್ಳಿ 2 ಕೆ.ಜಿ ಇದೆ.

ಒಟ್ಟು ಸ್ಥಿರಾಸ್ತಿ ಮೌಲ್ಯ 22,35 ಕೋಟಿ ಕೋಟಿ ರೂ. ಶಿವಮೊಗ್ಗದಲ್ಲಿ ಆಸ್ತಿಗಳು, ಬೆಂಗಳೂರಿನ ಜಯನಗರದಲ್ಲಿರುವ ಆಸ್ತಿ ಹಾಗೂ ಪುತ್ರನೊಂದಿಗೆ ಜಂಟಿಯಾಗಿ ಹೊಂದಿರುವ ಬೆಂಗಳೂರಿನ ಆಸ್ತಿಗಳು ಸೇರಿವೆ. ಇವೆಲ್ಲವೂ ಆರು ವರ್ಷದಲ್ಲಿ ಖರೀದಿಸಿರುವಂತವು. ಈ ಕಾರಣದಿಂದಲೇ ಅವರ ಆಸ್ತಿ ಮೌಲ್ಯ ನಾಲ್ಕು ಪಟ್ಟು ಎರಿಕೆಯಾಗಿದೆ. ಆರು ವರ್ಷದ ಹಿಂದೆ ಈಶ್ವರಪ್ಪ ಅವರ ಆಸ್ತಿ ಪ್ರಮಾಣ 6.41 ಕೋಟಿ ರೂ.ಗಳಿಷ್ಟಿತ್ತು.

ಈಶ್ವರಪ್ಪ ಅವರ ಒಟ್ಟು ಸಾಲದ ಪ್ರಮಾಣ 5.87 ಕೋಟಿ ರೂ.ಗಳು. ಈಶ್ವರಪ್ಪ ವಿರುದ್ದ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ.

ಇನ್ನು ಈಶ್ವರಪ್ಪ ಅವರ ಪತ್ನಿ ಜಯಲಕ್ಷ್ಮಿ ಬಳಿ ನಗದು 2 ಲಕ್ಷ ರೂ.ಗಳಿವೆ.

ಒಟ್ಟು ಚರಾಸ್ತಿ ಮೌಲ್ಯ 3.77 ಕೋಟಿ ರೂ.ಗಳು. ಇದರಲ್ಲಿ 500 ಗ್ರಾಂ ಚಿನ್ನ, 5 ಕೆ.ಜಿ ಬೆಳ್ಳಿ ಇದೆ. ಸ್ಥಿರಾಸ್ತಿ ಪ್ರಮಾಣವೇ 3.10 ಕೋಟಿ ರೂ. ಪತ್ನಿ ಬಳಿಯೂ ವಾಹನ ಇಲ್ಲ. ಜಯಲಕ್ಷ್ಮಿ ಅವರ ಸಾಲದ ಪ್ರಮಾಣ 70.80 ಲಕ್ಷ ರೂ.ಗಳು.

IPL_Entry_Point