ಕನ್ನಡ ಸುದ್ದಿ  /  Karnataka  /  Shiradi Ghat Road:maximum Priority For Shiradi Ghat Road; Next Week Travelling To Delhi For Meeting Minister Gadkari Said Cm Basavaraja Bommai In Mangalore

Shiradi Ghat road: ಘಟ್ಟದ ರಸ್ತೆಗೆ ಆದ್ಯತೆ; ಮುಂದಿನವಾರವೇ ದೆಹಲಿಗೆ ಎಂದ ಮುಖ್ಯಮಂತ್ರಿ ಬೊಮ್ಮಾಯಿ; ಯಾಕೆ? ಏನ್ಮಾಡ್ತಾರೆ? ವಿವರ ಇಲ್ಲಿದೆ

Shiradi Ghat road: ಮಂಗಳೂರಿನ ಬಾವುಟಗುಡ್ಡದಲ್ಲಿ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿಗೆ ಆಗಮಿಸಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ, ಶಿರಾಡಿ ಘಾಟ್‌ ರಸ್ತೆ ವಿಚಾರಕ್ಕೆ ಉತ್ತರಿಸಿದ್ದು ಹೀಗೆ.

ಮಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮಂಗಳೂರು: ನಿರಂತರ ಮಳೆ ಇದ್ದ ಕಾರಣ ಶಿರಾಡಿ ಘಾಟ್‌ ರಸ್ತೆ ಸರಿಪಡಿಸುವುದು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿದರು.

ಅವರು, ಮಂಗಳೂರಿನ ಬಾವುಟಗುಡ್ಡದಲ್ಲಿ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಲು ಮಂಗಳೂರಿಗೆ ಆಗಮಿಸಿದ ವೇಳೆ ಸುದ್ದಿಗಾರರ ಜತೆಗೆ ಮಾತನಾಡಿದರು.

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಬಹಳ ಮುಖ್ಯವಾದುದು. ಅದು ಹದಗೆಟ್ಟಿರುವ ಕಾರಣ ಮಂಗಳೂರು- ಬೆಂಗಳೂರು ಸಂಪರ್ಕದ ಕೊಂಡಿಯೇ ತಪ್ಪಿಹೋಗುವಂತಿದೆ. ದೋಣಿಗಾಲ್‌ ಸಮೀಪ 12 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮೂರು ತಿಂಗಳ ಒಳಗೆ ಸರಿಪಡಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಭರವಸೆ ಯಾಕೆ ಇನ್ನೂ ಈಡೇರಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಉತ್ತರಿಸಿದ್ದು ಹೀಗೆ.

ಆ ಭಾಗದಲ್ಲಿ ನಿರಂತರ ಮಳೆ ಬಂದ ಕಾರಣ ಕೆಲಸ ಆಗಿಲ್ಲ. ನಾನು ಈ ವಾರದಲ್ಲಿ ಇಡೀ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ ಬಗ್ಗೆ ಒಂದು ಸಮೀಕ್ಷೆಯನ್ನು ನಡೆಸಿ, ವರದಿ ತಯಾರಿಸಲು ಸೂಚಿಸುತ್ತೇನೆ. ಅದರ ಜತೆಗೆ ಮುಂದಿನವಾರ ದೆಹಲಿಗೆ ಹೋಗುತ್ತೇನೆ. ಆಗ ಕೇಂದ್ರ ರಸ್ತೆ ಮತ್ತು ಸಾರಿಗೆ ಗಡ್ಕರಿ ಅವರನ್ನು ಭೇಟಿ ಆಗಲಿದ್ದೇನೆ. ಅವರ ಜತೆಗೆ ಈ ವಿಚಾರ ಪ್ರಸ್ತಾಪಿಸಿ ಸಾಧ್ಯವಾದಷ್ಟು ಬೇಗ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಒತ್ತಡ ಹೇರುತ್ತೇನೆ.

ಈ ದೆಹಲಿ ಭೇಟೆಗೆ ಪೂರಕವಾಗಿ ಒಂದು ಸಭೆಯನ್ನು ಕೂಡ ನಡೆಸುವವನಿದ್ದೇನೆ. ಅದರಲ್ಲಿ ಹೈಯೆಸ್ಟ್‌ ಪ್ರಿಯಾರಿಟಿ ಇರುವಂತದ್ದು ಈ ನಮ್ಮ ಘಟ್ಟದ ರಸ್ತೆಗೆ. ಶಿರಾಡಿ ಘಾಟ್‌ ರಸ್ತೆಯ ಟನಲ್‌ ಮೇಕಿಂಗ್‌, ವೈಟ್‌ ಟಾಪಿಂಗ್‌ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮುಖ್ಯವಾಗಿ ಶಾರ್ಟ್‌ ಟರ್ಮ್‌ ಮತ್ತು ಲಾಂಗ್‌ ಟರ್ಮ್‌ ಯೋಜನೆಗಳನ್ನು ರೂಪಿಸಿಕೊಂಡು ಬೇಗನೆ ಕೆಲಸ ಪೂರ್ಣಗೊಳಿಸಲು ಕ್ರಮ ತೆಗೆದುಕೊ‍ಳ್ಳುತ್ತೇವೆ.

ಟನಲ್‌ ಮೇಕಿಂಗ್‌ ಲಾಂಗ್‌ ಟರ್ಮ್‌ ಯೋಜನೆ ವ್ಯಾಪ್ತಿಗೆ ಬರುತ್ತದೆ. ಉಳಿದ ಕೆಲಸಗಳನ್ನು ಆದಷ್ಟು ಬೇಗ, ಶಾರ್ಟ್‌ ಟರ್ಮ್‌ ಯೋಜನೆಗಳ ರೂಪದಲ್ಲಿ ಮುಗಿಸಲಾಗುವುದು. ಮುಂದಿನ ವಾರದ ಒಳಗೆ ಎಲ್ಲ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವರಿಸಿದರು.

ಗಮನಿಸಬಹುದಾದ ವಿಚಾರಗಳಿವು

ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣ ಇಂದು; ಅವರು ಯಾರು? ಇತಿಹಾಸ ಏನು?

Kedambadi Ramaiah Gowda history: ದೇಶದ ಮೊದಲ ಸ್ವಾತಂತ್ರ್ಯ ಹೋರಾಟಕ್ಕೆ ಬುನಾದಿ ಎಂಬಂತೆ ಎರಡು ದಶಕ ಮೊದಲು ನಡೆದ ರೈತ ಹೋರಾಟದ ಸಂಘಟನಾ ಶಕ್ತಿ ಸಮರವೀರ ಕೆದಂಬಾಡಿ ರಾಮಯ್ಯ ಗೌಡರು. ಇತಿಹಾಸದ ಪುಟಗಳಲ್ಲಿ ಅವರ ಚಿತ್ರಣಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

ಮಾರುತಿ ಆಲ್ಟೋ ಕೆ10 ಎಸ್‌-ಸಿಎನ್‌ಜಿ ಬಂದಿದೆ; ದರ ಮತ್ತುಇತರೆ ವಿವರ ಇಲ್ಲಿದೆ

Alto K10 S-CNG: ಹೊಸ ಆಲ್ಟೊ K10 VXi S-CNG ಲೀಕ್ ಪ್ರೂಫ್ ವಿನ್ಯಾಸದೊಂದಿಗೆ ಫ್ಯಾಕ್ಟರಿ-ಅಳವಡಿಕೆಯ S-CNG ಕಿಟ್ ಅನ್ನು ಹೊಂದಿದೆ. ಕಂಪನಿಯು ಹ್ಯಾಚ್‌ಬ್ಯಾಕ್‌ನ ಹೊರಭಾಗವನ್ನು ಮುಂಭಾಗದಲ್ಲಿ ಮರುಹೊಂದಿಸಿದ ಗ್ರಿಲ್‌ನೊಂದಿಗೆ ಮರುವಿನ್ಯಾಸಗೊಳಿಸಿದೆ. 13-ಇಂಚಿನ ಚಕ್ರಗಳಲ್ಲಿ ಹೊಸ ಕ್ಯಾಪ್ ವಿನ್ಯಾಸ ಮತ್ತು ಪರಿಷ್ಕರಿಸಿದ ಸೈಡ್ ಲುಕ್ ಇದೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.

ಶನಿದೇವರ ಅನುಗ್ರಹ ನಿಮಗಿದೆಯೇ? ಹೇಗೆ ಅರ್ಥ ಮಾಡಿಕೊಳ್ಳುವುದು? ಈ 5 ಶಕುನ ಲಕ್ಷಣಗಳನ್ನು ಗಮನಿಸಿ

Lucky Signs of Shani Dev Blessings: ಶನಿದೇವರು ಕೋಪಗೊಂಡರೆ ಜೀವನದಲ್ಲಿ ಅನೇಕ ಬಿಕ್ಕಟ್ಟುಗಳು ಎದುರಾಗುತ್ತವೆ. ಸಂತೋಷಪಟ್ಟರೆ, ಅನೇಕ ಸಮಸ್ಯೆ ಪರಿಹಾರವಾಗುತ್ತದೆ. ಮನೆಯ ಹೊರಗೆ ಬಂದಾಗ ನಿಮಗೆ ಕಣ್ಣಿಗೆ ಬೀಳುವ ದೃಶ್ಯಗಳನ್ನು ಗಮನಿಸಿ. ಇದು ಎಲ್ಲ ರಾಶಿಯವರಿಗೂ ಅನ್ವಯವಾಗುವ ವಿಚಾರ. ಈ 5 ಶಕುನ ಲಕ್ಷಣಗಳನ್ನು ಮನನಸ್ಸಿನಲ್ಲಿಟ್ಟುಕೊಳ್ಳಿ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.

IPL_Entry_Point