ಶಿವಮೊಗ್ಗದಲ್ಲೊಂದು ಝೀರೋ ವೇಸ್ಟ್‌ ವಿವಾಹ; ಡಾ.ಪೂರ್ವಿ ಭಟ್‌ ಮತ್ತು ಶಮಂತ್‌ ಅವರ ಪರಿಸರ ಸ್ನೇಹಿ ಮದುವೆ
ಕನ್ನಡ ಸುದ್ದಿ  /  ಕರ್ನಾಟಕ  /  ಶಿವಮೊಗ್ಗದಲ್ಲೊಂದು ಝೀರೋ ವೇಸ್ಟ್‌ ವಿವಾಹ; ಡಾ.ಪೂರ್ವಿ ಭಟ್‌ ಮತ್ತು ಶಮಂತ್‌ ಅವರ ಪರಿಸರ ಸ್ನೇಹಿ ಮದುವೆ

ಶಿವಮೊಗ್ಗದಲ್ಲೊಂದು ಝೀರೋ ವೇಸ್ಟ್‌ ವಿವಾಹ; ಡಾ.ಪೂರ್ವಿ ಭಟ್‌ ಮತ್ತು ಶಮಂತ್‌ ಅವರ ಪರಿಸರ ಸ್ನೇಹಿ ಮದುವೆ

ಶಿವಮೊಗ್ಗದಲ್ಲೊಂದು ಝೀರೋ ವೇಸ್ಟ್‌ ವಿವಾಹ ನಡೆದಿರುವುದು ಈಗ ಗಮನಸೆಳೆದಿದೆ. ಡಾ.ಪೂರ್ವಿ ಭಟ್‌ ಮತ್ತು ಶಮಂತ್‌ ಅವರ ಪರಿಸರ ಸ್ನೇಹಿ ಮದುವೆ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ವಿವಾಹದ ರೀಲ್ಸ್‌ ಗೆ ಲಕ್ಷಾಂತರ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಇದು ವೈರಲ್ ಆಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಶಿವಮೊಗ್ಗದಲ್ಲೊಂದು ಝೀರೋ ವೇಸ್ಟ್‌ ವಿವಾಹ; ಡಾ.ಪೂರ್ವಿ ಭಟ್‌ ಮತ್ತು ಶಮಂತ್‌ ಅವರ ಪರಿಸರ ಸ್ನೇಹಿ ಮದುವೆ
ಶಿವಮೊಗ್ಗದಲ್ಲೊಂದು ಝೀರೋ ವೇಸ್ಟ್‌ ವಿವಾಹ; ಡಾ.ಪೂರ್ವಿ ಭಟ್‌ ಮತ್ತು ಶಮಂತ್‌ ಅವರ ಪರಿಸರ ಸ್ನೇಹಿ ಮದುವೆ

ಶಿವಮೊಗ್ಗ: ಬೆಂಗಳೂರು ಮೂಲದ ವಧುವೊಬ್ಬರು ತಮ್ಮ ಝೀರೋ ವೇಸ್ಟ್‌ ವಿವಾಹ ಕುರಿತು ಇನ್‌ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದ ರೀಲ್ಸ್‌ ಅನ್ನು 7.5 ಲಕ್ಷ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಈ ಶೂನ್ಯ ತ್ಯಾಜ್ಯ ವಿವಾಹ ಹೇಗಿತ್ತು ಏನೆಲ್ಲಾ ವಸ್ತುಗಳನ್ನು ಬಳಸಿದ್ದರು ನೋಡೋಣ.

ಶಿವಮೊಗ್ಗ ಮೂಲದ ಆಹಾರ ತಜ್ಞೆ ವೈದ್ಯೆ ಡಾ.ಪೂರ್ವಿ ಭಟ್‌ ಮತ್ತು ಸಾವಯವ ಕೃಷಿಕ ಶಮಂತ್‌ ಅವರ ವಿವಾಹ ಇತ್ತೀಚೆಗೆ ಶಿವಮೊಗ್ಗದ ತೋಟದ ಮನೆಯಲ್ಲಿ ನಡೆಯಿತು.

ಪರಿಸರ ಸ್ನೇಹಿ ವಿವಾಹಕ್ಕೆ ವ್ಯಾಪಕ ಮೆಚ್ಚುಗೆ

ಶೇಕಡ ನೂರರಷ್ಟು ಪರಿಸರ ಸ್ನೇಹಿ ವಿವಾಹ ಇವರದ್ದು. ನಿಜ ಅರ್ಥದಲ್ಲಿ 1960ರ ದಶಕದಲ್ಲಿ ನಡೆಯುತ್ತಿದ್ದ ವಿವಾಹವನ್ನು ನೆನಪಿಸುವಂತಿತ್ತು. ಒಂದು ವಿವಾಹಕ್ಕೆ ಏನಿರಬೇಕು? ಪ್ರೀತಿಸುವ ಎರಡು ಮನಸ್ಸುಗಳು, ಸಂತೋಷ ಪಡುವ ಕುಟುಂಬಗಳು ಮತ್ತು ಊಟ ಇಷ್ಟಿದ್ದರೆ ಅದು ಪರಿಪೂರ್ಣ ಮದುವೆ ಎನಿಸಿಕೊಳ್ಳುತ್ತದೆ.

ಪ್ಲಾಸ್ಟಿಕ್‌, ವೈಭವೋಪೇತ ಅಲಂಕಾರಿಕ ತ್ಯಾಜ್ಯ ವಸ್ತುಗಳಿಗೆ ಅಲ್ಲಿ ಏನು ಕೆಲಸ ಇರುತ್ತದೆ? ಪೂರ್ವಿ ಭಟ್‌ ಅಂದುಕೊಂಡಂತೆಯೇ ಅವರ ವಿವಾಹ ನೆರವೇರಿದೆ. ಕಬ್ಬಿನ ಜೊಲ್ಲೆಗಳಿಂದ ಮಾಡಿದ ಮಂಟಪ ಮದುವೆ ನಂತರ ಗೋವುಗಳಿಗೆ ಆಹಾರವಾಗಿತ್ತು.

ಸುಸ್ಥಿರ ಪರಿಸರಸ್ನೇಹಿ ಮದುವೆಯ ವಿಡಿಯೋ ತುಣುಕು

ಲೆಕ್ಕ ಪರಿಶೋಧಕರಾಗಬೇಕೆಂಬ ಆಕಾಂಕ್ಷೆಯುಳ್ಳ ರವಿರಾಜ್ ಎಂಬುವವರು ಈ ಪರಿಸರಸ್ನೇಹಿ ಮದುವೆಯ ವಿಡಿಯೋ ತುಣುಕನ್ನು ಶೇರ್ ಮಾಡಿದ್ದಾರೆ.

(ವರದಿ- ಎಚ್.ಮಾರುತಿ, ಬೆಂಗಳೂರು)

Whats_app_banner