ಕನ್ನಡ ಸುದ್ದಿ  /  Karnataka  /  Siddaramaiah Govt Appoints Presidents For Different Corporations And Boards In Karnataka Mrt

ಕರ್ನಾಟಕ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರ ನೇಮಕ: 44 ಕಾರ್ಯಕರ್ತರಿಗೆ ಅವಕಾಶ

ಕೊನೆಗೂ ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರ ನೇಮಕ; 44 ಕಾರ್ಯಕರ್ತರಿಗೆ ಅವಕಾಶ; ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರದೇ ಮೇಲುಗೈ.. (ವರದಿ: ಎಚ್. ಮಾರುತಿ)

ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಪಲ್ಲವಿ ಜಿ.  (ಬಲಗಡೆ ಇರುವವರು)
ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಪಲ್ಲವಿ ಜಿ. (ಬಲಗಡೆ ಇರುವವರು)

ಲೋಕಸಭಾ ಚುನಾವಣೆಗೂ ಮುನ್ನವೇ ಪಕ್ಷದ ಕಾರ್ಯಕರ್ತರನ್ನು ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಇವರು ನೇಮಕಗೊಂಡ ದಿನಾಂಕದಿಂದ ಎರಡು ವರ್ಷಗಳ ಅವಧಿಯವರೆಗೆ ನೇಮಕ ಮಾಡಲಾಗಿದೆ. ಪಕ್ಷದ 44 ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಈ ನೇಮಕಾತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರದೇ ಮೇಲುಗೈ ಎದ್ದು ಕಾಣುತ್ತಿದೆ. ಅಂದರೆ ಅವರ ಆಪ್ತರಿಗೇ ಸ್ಥಾನ ಗಿಟ್ಟಿಸಿರುವುದು ಕಂಡು ಬರುತ್ತಿದೆ. ನೇಮಕವಾದ ಅಧ್ಯಕ್ಷರು, ಉಪಾಧ್ಯಕ್ಷರ ಪಟ್ಟಿ ಈ ಕೆಳಕಂಡಂತಿದೆ..

ಕಾಂತಾ ನಾಯ್ಕ ಅಧ್ಯಕ್ಷರು, (ಕೌಶಲ್ಯಾಭಿವೃದ್ಧಿ ನಿಗಮ)

ಮುಂಡರಗಿ ನಾಗರಾಜು ಅಧ್ಯಕ್ಷರು, (ಬಾಬು ಜಗಜೀವನ್‌ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ)

ವಿನೋದ್ ಕೆ ಅಸೂಟ ಉಪಾಧ್ಯಕ್ಷರು, (ಕರ್ನಾಟಕ ಕ್ರೀಡಾ ಪ್ರಾಧಿಕಾರ)

ಬಿ.ಹೆಚ್. ಹರೀಶ್ , ಅಧ್ಯಕ್ಷರು, (ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ)

ಡಾ. ಅಂಶುಮಂತ್ ಅಧ್ಯಕ್ಷರು,( ಭದ್ರಾ ಕಾಡಾ, ಶಿವಮೊಗ್ಗ,)

ಆಂಜನೇಯಲು ಜೆ.ಎಸ್. ಅಧ್ಯಕ್ಷರು, (ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ)

ಡಾ.ಬಿ.ಯೋಗೇಶ್ ಬಾಬು ಅಧ್ಯಕ್ಷರು, (ಕರ್ನಾಟಕ ದ್ರಾಕ್ಷಾರಸ ಮಂಡಳಿ)

ಮರೀಗೌಡ ಯಾದಗಿರಿ ಅಧ್ಯಕ್ಷರು, (ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ)

ದೇವೇಂದ್ರಪ್ಪ ಮರ್ತೂರು ಅಧ್ಯಕ್ಷರು, (ಕರ್ನಾಟಕ ಕುರಿ ಮತ್ತು ಉಗ್ರ ಅಭಿವೃದ್ಧಿ ನಿಗಮ ನಿಯಮಿತ)

ರಾಜಶೇಖರ್ ರಾಮಸ್ಮರಂ ಅಧ್ಯಕ್ಷರು, (ಕರ್ನಾಟಕ ಜೈವಿಕ ಇಂಧನ ಮಂಡಳಿ)

ಕೆ. ಮರೀಗೌಡ ಅಧ್ಯಕ್ಷರು, (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)

ಎಸ್. ಮನೋಹರ್ ಅಧ್ಯಕ್ಷರು, (ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್)

ಅಯೂಬ್ ಖಾನ್ ಅಧ್ಯಕ್ಷರು, (ಬಣ್ಣ ಮತ್ತು ಅರಗು ಕಾರ್ಖಾನ ಮೈಸೂರು)

ಮಮತಾ ಗಟ್ಟಿ ಅಧ್ಯಕ್ಷರು, (ಗೇರು ಅಭಿವೃದ್ಧಿ ನಿಗಮ)

kar

ಹೆಚ್.ಸಿ. ಸುಧೀಂದ್ರ ಅಧ್ಯಕ್ಷರು, (ತೆಂಗು ಅಭಿವೃದ್ಧಿ ಮಂಡಳಿ)

ಡಾ.ನಾಗಲಕ್ಷ್ಮೀ ಚೌಧರಿ ಅಧ್ಯಕ್ಷರು, (ಕರ್ನಾಟಕ ರಾಜ್ಯ ಮಹಿಳಾ ಆಯೋಗ)

ಹೆಚ್.ಎಸ್. ಸುಂದರೇಶ್ ಅಧ್ಯಕ್ಷರು, (ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ)

ಜಯಣ್ಣ ಅಧ್ಯಕ್ಷರು, (ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ)

ಆರ್. ಸಂಪತ್ ರಾಜ್ ಅಧ್ಯಕ್ಷರು, (ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ)

ಪದ್ಮಾವತಿ ಅಧ್ಯಕ್ಷರು, (ಮಹಿಳಾ ಅಭಿವೃದ್ಧಿ ನಿಗಮ)

ಶ್ರೀನಿವಾಸ್, ಮಾಜಿ ವಿಧಾನ ಪರಿಷತ್ ಸದಸ್ಯರು, ಅಧ್ಯಕ್ಷರು (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ)

ಶಾಕಿರ್ ಸನದಿ ಅಧ್ಯಕ್ಷರು, (ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ)

ಸೋಮಣ್ಣ ಬೇವಿನಮರದ ಅಧ್ಯಕ್ಷರು, (ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ)

ಮಹಬೂಬ್ ಪಾಷಾ ಅಧ್ಯಕ್ಷರು, (ಕಂಠೀರವ ಸ್ಟುಡಿಯೋ)

ಕೀರ್ತಿ ಗಣೇಶ್ ಅಧ್ಯಕ್ಷರು, (ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ)

ಮಜರ್ ಖಾನ್ ಅಧ್ಯಕ್ಷರು, (ದೇವರಾಜು ಅರಸು ಟ್ರಕ್ ಟರ್ಮಿನಲ್)

ಸವಿತಾ ರಘು ಅಧ್ಯಕ್ಷರು, (ಕರ್ನಾಟಕ ಸವಾಯಿ ಕರ್ಮಚಾರಿ ಆಯೋಗ)

ಲಲಿತ್ ರಾಘವ್ ಅಧ್ಯಕ್ಷರು, (ಕರ್ನಾಟಕ ವಿದ್ಯುತ್ ಕಾರ್ಖಾನೆ)

ಜಿ.ಎಸ್. ಮಂಜುನಾಥ್ ಉಪಾಧ್ಯಕ್ಷರು, (ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ)

ಮಾಲಾ ನಾರಾಯಣರಾವ್ ಅಧ್ಯಕ್ಷರು, (ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ)

ರಿಜ್ಞಾನ್, ಜಯನಗರ ಅಧ್ಯಕ್ಷರು,( ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿ.)

ಕೇಶವ ರೆಡ್ಡಿ ಅಧ್ಯಕ್ಷರು, (ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ)

ತಾಜ್ ಪೀರ್ ಅಧ್ಯಕ್ಷರು, (ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ)

ಗಂಗಾಧರ್ ಅಧ್ಯಕ್ಷರು, (ಮೈಸೂರು ಸಕ್ಕರೆ ಕಾರ್ಖಾನೆ)

ಅಲ್ತಾಫ್ ಅಧ್ಯಕ್ಷರು, (ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ)

ಜಯಸಿಂಹ ಅಧ್ಯಕ್ಷರು, (ಬ್ರಾಹ್ಮಣ ಅಭಿವೃದ್ಧಿ ಮಂಡಳಿ)

ವಿಜಯ್ ಕೆ. ಮುಳುಗುಂದ್ ಅಧ್ಯಕ್ಷರು, (ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ)

ಮರಿಸ್ವಾಮಿ ಅಧ್ಯಕ್ಷರು, (ಕಾಡಾ, ಮೈಸೂರು)

ಸದಾಶಿವ ಉಲ್ಕಾಳ್ ಅಧ್ಯಕ್ಷರು, (ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ)

ರಘುನಂದನ್ ರಾಮಣ್ಣ ಅಧ್ಯಕ್ಷರು, (ಮೈಸೂರು ಇನ್ನಾಸೆಕ್ಟರ್ ಕಾರಿಡಾರ್ ಪ್ರದೇಶ ಯೋಜನ ಪ್ರಾಧಿಕಾರ (BMICAPA)

ಬಸವರಾಜ್ ಜಾಬಶೆಟ್ಟಿ ಅಧ್ಯಕ್ಷರು, (ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ)

ಸಾಧು ಕೋಕಿಲ ಅಧ್ಯಕ್ಷರು, (ಕರ್ನಾಟಕ ಚಲನಚಿತ್ರ ಅಕಾಡೆಮಿ)

IPL_Entry_Point