Siddu Nijakanasugalu: ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ; ಮಧ್ಯಂತರ ತಡೆ ನೀಡಿದ ಕೋರ್ಟ್‌
ಕನ್ನಡ ಸುದ್ದಿ  /  ಕರ್ನಾಟಕ  /  Siddu Nijakanasugalu: ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ; ಮಧ್ಯಂತರ ತಡೆ ನೀಡಿದ ಕೋರ್ಟ್‌

Siddu Nijakanasugalu: ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ; ಮಧ್ಯಂತರ ತಡೆ ನೀಡಿದ ಕೋರ್ಟ್‌

Siddu Nijakanasugalu: ವಿವಾದಿತ ಸಿದ್ದು ನಿಜಕನಸುಗಳು ಪುಸ್ತಕದ ಬಿಡುಗಡೆ ಮಾಡದಂತೆ ಕೋರ್ಟ್‌ ಮಧ್ಯಂತರ ತಡೆಯಾಜ್ಞೆ ಪ್ರಕಟಿಸಿದೆ. ಬೆಂಗಳೂರಿನ 60ನೇ ಸಿಸಿಹೆಚ್​ ನ್ಯಾಯಾಲಯ ಈ ತಡೆ ನೀಡಿರುವಂಥದ್ದು.

ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೆ ಕೋರ್ಟ್‌ ತಡೆ
ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೆ ಕೋರ್ಟ್‌ ತಡೆ

ವಿವಾದಾತ್ಮಕ ʻಸಿದ್ದು ನಿಜಕನಸುಗಳುʼ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬೆಂಗಳೂರಿನ 60ನೇ ಸಿಸಿಹೆಚ್​ ನ್ಯಾಯಾಲಯ ಸೋಮವಾರ ಮಧ್ಯಂತರವಾಗಿ ತಡೆ ನೀಡಿದೆ. ಕೆಪಿಸಿಸಿ ಮತ್ತು ಸಿದ್ದರಾಮಯ್ಯ ಈ ಪುಸ್ತಕ ಪ್ರಕಟಣೆ ವಿರುದ್ಧ ಅಸಮಾಧಾನ ಹೊಂದಿದ್ದರು. ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಈ ಪುಸ್ತಕ ಇಂದು ಅಪರಾಹ್ನ 3 ಗಂಟೆಗೆ ಲೋಕಾರ್ಪಣೆ ಆಗಬೇಕಾಗಿತ್ತು. ಕೋರ್ಟ್‌ ತೀರ್ಪಿನ ಕಾರಣ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ಪ್ರಾಯೋಜಕತ್ವದಲ್ಲಿ ರೋಹಿತ್‌ ಚಕ್ರತೀರ್ಥ ಬರೆದ ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೆ ಸಿದ್ಧವಾಗಿತ್ತು.

ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ ಮಾಡದಂತೆ ತಡೆ ಕೋರಿ ಸಿದ್ದರಾಮಯ್ಯ ಅವರ ಪುತ್ರ, ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸಿದ್ದರಾಮಯ್ಯ ಅವರ ಮಾನಹಾನಿ ಮಾಡುವಂತಹ ವಿಚಾರಗಳು ಪುಸ್ತಕದಲ್ಲಿವೆ. ಇದು ಬಿಡುಗಡೆಯಾದರೆ ಅವರ ಘನತೆಗೆ ಹಾನಿಯಾಗುತ್ತದೆ ಎಂದು ಅರ್ಜಿಯಲ್ಲಿ ಅವರು ಪ್ರತಿಪಾದಿಸಿದ್ದರು.

ಕೋರ್ಟ್‌ ಇದನ್ನು ಮಾನ್ಯ ಮಾಡಿದ್ದು, ಪುಸ್ತಕ ಬಿಡುಗಡೆಗೆ ಮಧ್ಯಂತರ ತಡೆ ನೀಡಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಪುಸ್ತಕ ಲೋಕಾರ್ಪಣೆಗೆ ಹೊರಟಿದ್ದ ಸಚಿವ ಡಾ.ಅಶ್ವತ್ಥನಾರಾಯಣ ಮತ್ತು ಇತರರಿಗೆ ಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಈ ಸುದ್ದಿ ಬಹಿರಂಗವಾಗುತ್ತಲೇ ಪ್ರತಿಕ್ರಿಯೆ ನೀಡಿದ್ದ ಕಾರ್ಯಕ್ರಮ ಆಯೋಜಕರು, ಆದೇಶದ ಪ್ರತಿ ಕೈ ಸೇರಿಲ್ಲ ಎಂದು ಹೇಳಿದ್ದರು. ಆದಾಗ್ಯೂ, ಕೊನೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ. ಇದನ್ನು ಮಾಧ್ಯಮಗಳಿಗೂ ತಿಳಿಸಿದ್ದಾಗಿ ವರದಿಯಾಗಿದೆ.

ಬೆಂಗಳೂರಿನ ಟೌನ್​ಹಾಲ್​ನಲ್ಲಿ ಸಿನಾಗ್ ಬುಕ್ಸ್ ಪ್ರಕಾಶಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ ಅಪರಾಹ್ನ 3ಕ್ಕೆ ಆಯೋಜಿತವಾಗಿತ್ತು. ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಪುರಭವನಕ್ಕೆ ಆಗಮಿಸಿದ್ದರು. ಕೊನೆಗೆ, ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಗೊಳಿಸುವಂತೆ ಆಯೋಜಕರಿಗೆ ಸಚಿವ ಡಾ. ಅಶ್ವಥ್ ನಾರಾಯಣ ಸೂಚಿಸಿದ ಕಾರಣ ಕಾರ್ಯಕ್ರಮ ನಡೆಯಲಿಲ್ಲ ಎಂದು ವರದಿಯಾಗಿದೆ.

Siddu Nija Kanasugalu: ಎದುರಾಳಿಗಳು ಬಿಟ್ಟ ಬಾಣವನ್ನೇ ಹೂವಾಗಿಸಿದ ಕಾಂಗ್ರೆಸ್‌, ಸಿದ್ದು ನಿಜ ಕನಸುಗಳ ಚಿತ್ರ ಸಂಪುಟ ಬಿಡುಗಡೆ

ಚುನಾವಣೆ ಹತ್ತಿರವಿರುವ ಕಾರಣ ರಾಜ್ಯದಲ್ಲಿ ಕಾಂಗ್ರೆಸ್‌ ವರ್ಸಸ್‌ ಬಿಜೆಪಿ ಹಣಾಹಣಿಯು ವಿವಿಧ ರೀತಿಯಲ್ಲಿ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಟಿಪ್ಪು ನಿಜ ಕನಸುಗಳು ಸಾಕಷ್ಟು ವಿವಾದ ಉಂಟುಮಾಡಿತ್ತು. ಇದೀಗ ಅದೇ ಶೈಲಿಯಲ್ಲಿ ಸಿದ್ದು ನಿಜ ಕನಸುಗಳು ಎಂಬ ಪುಸ್ತಕ ಗಮನಸೆಳೆದಿದೆ. ಇದರ ವಿರುದ್ಧ ಕಾಂಗ್ರೆಸ್‌ ದೂರು ದಾಖಲಿಸಿದೆ. ಅಲ್ಲದೆ, ಅದಕ್ಕೆ ಕಾಂಗ್ರೆಸ್‌ ಅದೇ ಶೈಲಿಯಲ್ಲಿ ಉತ್ತರ ನೀಡಿದೆ. ಕಾಂಗ್ರೆಸ್‌ ಬಿಡುಗಡೆ ಮಾಡಿದ “ಸಿದ್ದು ನಿಜ ಕನಸುಗಳು" ಚಿತ್ರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

Siddu Nija Kanasugalu: ಇಂದು ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆಯಾಗುತ್ತ? ಸಿದ್ದರಾಮಯ್ಯ ಗರಂ, ಕಾಂಗ್ರೆಸ್‌ ದೂರು, ಪ್ರತಿಭಟನೆ

ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ರಾಜ್ಯ ರಾಜಕೀಯ ದಿನಕ್ಕೊಂದು ರಂಗು ಪಡೆದುಕೊಳ್ಳುತ್ತಿದೆ. ರಾಜಕೀಯ ಎದುರಾಳಿಗಳ ವಿರುದ್ಧ ವೈವಿಧ್ಯಮಯವಾದ ರಾಜಕೀಯ ಮೇಲಾಟಗಳಿಗೆ ಈ ವರ್ಷ ಸಾಕ್ಷಿಯಾಗುವ ಸಾಧ್ಯತೆಯಿದ್ದು, ಸದ್ಯ "ಸಿದ್ದು ನಿಜ ಕನಸುಗಳುʼʼ ಎಂಬ ಪುಸ್ತಕ ಬಿಡುಗಡೆ ವಿವಾದದ ಕಿಡಿ ಹೊತ್ತಿಸಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ.

Whats_app_banner