Sindhanur Accident: ಸಿಂಧನೂರು ಸಮೀಪ ಅರಗಿನಮರ ಕ್ಯಾಂಪ್‌ ಬಳಿ ಕ್ರೂಸರ್ ವ್ಯಾನ್ ಪಲ್ಟಿಯಾಗಿ ಚಾಲಕ ಮತ್ತು ಮೂವರು ವಿದ್ಯಾರ್ಥಿಗಳ ದುರ್ಮರಣ
ಕನ್ನಡ ಸುದ್ದಿ  /  ಕರ್ನಾಟಕ  /  Sindhanur Accident: ಸಿಂಧನೂರು ಸಮೀಪ ಅರಗಿನಮರ ಕ್ಯಾಂಪ್‌ ಬಳಿ ಕ್ರೂಸರ್ ವ್ಯಾನ್ ಪಲ್ಟಿಯಾಗಿ ಚಾಲಕ ಮತ್ತು ಮೂವರು ವಿದ್ಯಾರ್ಥಿಗಳ ದುರ್ಮರಣ

Sindhanur Accident: ಸಿಂಧನೂರು ಸಮೀಪ ಅರಗಿನಮರ ಕ್ಯಾಂಪ್‌ ಬಳಿ ಕ್ರೂಸರ್ ವ್ಯಾನ್ ಪಲ್ಟಿಯಾಗಿ ಚಾಲಕ ಮತ್ತು ಮೂವರು ವಿದ್ಯಾರ್ಥಿಗಳ ದುರ್ಮರಣ

Sindhanur Accident: ರಾಯಚೂರು ಜಿಲ್ಲೆಯ ಸಿಂಧನೂರು ಸಮೀಪ ಭೀಕರ ರಸ್ತೆ ದುರಂತ ಸಂಭವಿಸಿದೆ. ಅರಗಿನಮನೆ ಕ್ಯಾಂಪ್ ಸಮೀಪ ಈ ರಸ್ತೆ ದುರಂತ ಸಂಭವಿಸಿದ್ದು, ಕ್ರೂಸರ್ ವ್ಯಾನ್ ಪಲ್ಟಿಯಾಗಿ ಚಾಲಕ ಮತ್ತು ಮೂವರು ವಿದ್ಯಾರ್ಥಿಗಳ ದುರ್ಮರಣಕ್ಕೀಡಾದರು.

ಸಿಂಧನೂರು ಸಮೀಪ ಅರಗಿನಮರ ಕ್ಯಾಂಪ್‌ ಬಳಿ ಕ್ರೂಸರ್ ವ್ಯಾನ್ ಪಲ್ಟಿಯಾಗಿ ಚಾಲಕ ಮತ್ತು ಮೂವರು ವಿದ್ಯಾರ್ಥಿಗಳ ದುರ್ಮರಣಕ್ಕೀಡಾದರು.
ಸಿಂಧನೂರು ಸಮೀಪ ಅರಗಿನಮರ ಕ್ಯಾಂಪ್‌ ಬಳಿ ಕ್ರೂಸರ್ ವ್ಯಾನ್ ಪಲ್ಟಿಯಾಗಿ ಚಾಲಕ ಮತ್ತು ಮೂವರು ವಿದ್ಯಾರ್ಥಿಗಳ ದುರ್ಮರಣಕ್ಕೀಡಾದರು.

Sindhanur Accident: ರಾಯಚೂರು ಜಿಲ್ಲೆ ಸಿಂಧನೂರು ಸಮೀಪ ಅರಗಿನಮರ ಕ್ಯಾಂಪ್ ಬಳಿ ಮಂಗಳವಾರ (ಜನವರಿ 21) ತಡರಾತ್ರಿ ಕ್ರೂಸರ್ ವ್ಯಾನ್‌ ಪಲ್ಪಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಚಾಲಕ ಮತ್ತು ಮೂವರು ವಿದ್ಯಾರ್ಥಿಗಳು ದುರ್ಮರಣಕ್ಕೀಡಾದರು. 10 ಯಾತ್ರಿಕರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಕ್ರೂಸರ್ ಚಾಲಕ ಕಂಸಾಲಿ ಶಿವ (24), ಮಂತ್ರಾಲಯದ ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳಾದ ಹಯವದನ (18), ಸುಜಯೇಂದ್ರ (22) ಹಾಗೂ ಅಭಿಲಾಷ್​(20) ಎಂದು ಗುರುತಿಸಲಾಗಿದೆ.

ಸಿಂಧನೂರು ಅಪಘಾತ: ಅರಗಿನಮರ ಕ್ಯಾಂಪ್‌ ಬಳಿ ಕ್ರೂಸರ್ ವ್ಯಾನ್ ಪಲ್ಟಿ

ಮಂತ್ರಾಲಯದಿಂದ ಕೊಪ್ಪಳದ ಆನೆಗುಂದಿಯ ನರಹರಿ ತೀರ್ಥರ ವೃಂದಾವನಕ್ಕೆ ತೆರಳುತ್ತಿದ್ದ ಸಂಸ್ಕೃತ ಪಾಠಶಾಲೆ ಮಕ್ಕಳಿದ್ದ ಕ್ರೂಸರ್ ವ್ಯಾನ್ ಅಪಘಾತಕ್ಕೀಡಾಗಿರುವಂಥದ್ದು. ಕ್ರೂಸರ್ ವ್ಯಾನ್‌ನಲ್ಲಿ 14 ಜನ ಪ್ರಯಾಣಿಸುತ್ತಿದ್ದರು. ನರಹರಿ ತೀರ್ಥರ ವೃಂದಾವನದಲ್ಲಿ ಆರಾಧನಾ ಮಹೋತ್ಸವ ಇದ್ದ ಕಾರಣ ಅದರಲ್ಲಿ ಪಾಲ್ಗೊಳ್ಳುವುದಕ್ಕೆ ಹೋಗುತ್ತಿದ್ದರು.

ನಸುಕಿನ ವೇಳೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಅರಗಿನಮನೆ ಕ್ಯಾಂಪ್ ಸಮೀಪ ಬಂದಾಗ ಕ್ರೂಸರ್ ವ್ಯಾನ್‌ನ ಟೈರ್ ಸ್ಪೋಟಗೊಂಡಿದೆ. ವೇಗವಾಗಿ ಹೋಗುತ್ತಿದ್ದ ವ್ಯಾನ್ ನಿಯಂತ್ರಣ ಕಳೆದುಕೊಂಡು ಮೂರು ಪಲ್ಟಿ ಹೊಡೆದು ರಸ್ತೆಯಲ್ಲಿ ಬಿದ್ದಿದೆ. ಅತಿ ವೇಗದ ಚಾಲನೆ ಕಾರಣ ವಾಹನವನ್ನು ನಿಯಂತ್ರಿಸುವಲ್ಲಿ ಚಾಲಕ ವಿಫಲನಾಗಿದ್ದ ಎಂದು ಹೇಳಲಾಗಿತ್ತು.

ಅಪಘಾತ ನಡೆದ ಕೂಡಲೇ ಚಾಲಕ ಮತ್ತು ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡವರನ್ನು ಸಿಂಧನೂರು ತಾಲೂಕು ಆಸ್ಪತ್ರೆಯಿಂದ ರಾಯಚೂರಿನಲ್ಲಿರುವ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಾತ್ರಿಯೇ ಮೃತದೇಹ ಪೋಸ್ಟ್ ಮಾರ್ಟಮ್ ಮುಗಿಸಿ ಶವಗಳನ್ನ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. 14 ಜನ ಪ್ರಯಾಣಿಸುತ್ತಿದ್ದ ಕ್ರೂಶರ್ ವಾಹನದ ಆಕ್ಸಲ್ ಕಟ್ ಆಗಿ ಮೂರು ಬಾರಿ ಪಲ್ಟಿ ಹೊಡೆದಿದೆ. ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಂಧನೂರಿಗೆ ಆಗಮಿಸಿದ ಮಂತ್ರಾಲಯ ಶ್ರೀಗಳು

ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಅಪಘಾತಕ್ಕೆ ಕಾರಣವೇನು ಎಂಬುದ ತನಿಖೆ ನಡೆದಿದೆ. ಈ ದುರಂತದ ಮಾಹಿತಿ ಸಿಗುತ್ತಿದ್ದಂತೆ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಕೂಡಲೇ ಸಿಂಧನೂರಿಗೆ ಪ್ರಯಾಣಿಸಿದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಂತ್ರಾಲಯದ ಸಂಸ್ಕೃತ ಪಾಠಶಾಲೆಯ ಮಕ್ಕಳ ಆರೋಗ್ಯ ವಿಚಾರಿಸಿದರು.

Whats_app_banner