ವಿಜಯದಶಮಿಗೆ ವಿಶೇಷ ರೈಲು; ಬೆಂಗಳೂರಿನಿಂದ ಬೆಳಗಾವಿಗೆ ರೈಲುಗಳ ಸಂಚಾರದ ದಿನಾಂಕ, ಸಮಯ, ಟಿಕೆಟ್ ದರದ ವಿವರ ಹೀಗಿದೆ-special train for vijayadashami bangalore to belagavi train service date time details rmy ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ವಿಜಯದಶಮಿಗೆ ವಿಶೇಷ ರೈಲು; ಬೆಂಗಳೂರಿನಿಂದ ಬೆಳಗಾವಿಗೆ ರೈಲುಗಳ ಸಂಚಾರದ ದಿನಾಂಕ, ಸಮಯ, ಟಿಕೆಟ್ ದರದ ವಿವರ ಹೀಗಿದೆ

ವಿಜಯದಶಮಿಗೆ ವಿಶೇಷ ರೈಲು; ಬೆಂಗಳೂರಿನಿಂದ ಬೆಳಗಾವಿಗೆ ರೈಲುಗಳ ಸಂಚಾರದ ದಿನಾಂಕ, ಸಮಯ, ಟಿಕೆಟ್ ದರದ ವಿವರ ಹೀಗಿದೆ

ಹಬ್ಬಗಳ ಸಂದರ್ಭದಲ್ಲಿ ರೈಲುಗಳಲ್ಲಿ ಜನದಟ್ಟಣೆ ಹೆಚ್ಚಿರುತ್ತೆ. ಈ ವೇಳೆ ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಿರಲು ನೈರುತ್ಯ ರೈಲ್ವೆ ಕ್ರಮ ಕೈಗೊಂಡಿದೆ. ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ. ದಿನಾಂಕ, ಸಮಯ ಮತ್ತು ಟಿಕೆಟ್ ದರ ತಿಳಿಯಿರಿ.

ಬೆಂಗಳೂರಿನಿಂದ ಬೆಳಗಾವಿ ವಿಜಯದಶಮಿ ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗಿದೆ. ದಿನಾಂಕ, ಸಮಯ ಟಿಕೆಟ್ ಮಾಹಿತಿ ಇಲ್ಲಿದೆ.
ಬೆಂಗಳೂರಿನಿಂದ ಬೆಳಗಾವಿ ವಿಜಯದಶಮಿ ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗಿದೆ. ದಿನಾಂಕ, ಸಮಯ ಟಿಕೆಟ್ ಮಾಹಿತಿ ಇಲ್ಲಿದೆ.

ವಿಜಯದಶಮಿಗೆ ಕೆಲವೇ ದಿನಗಳು ಬಾಕಿ ಇದ್ದು, ರಾಜಧಾನಿ ಬೆಂಗಳೂರಿನಿಂದ ತಮ್ಮ ಊರುಗಳತ್ತ ಪ್ರಮಾಣ ಬೆಳಸಲು ಜನರು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ಉಂಟಾಗುವ ಜನದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ರೈಲು ಸಂಚಾರವನ್ನು ಆರಂಭಿಸಿದೆ. ಈ ರೈಲು ಸೇವೆ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಆರಂಭವಾಗುತ್ತೆ. ವಿಜಯದಶಮಿ ವಿಶೇಷ ರೈಲುಗಳ ಸಂಚಾರದ ದಿನಾಂಕ, ಸಮಯ ಹಾಗೂ ಟಿಕೆಟ್ ದರಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

ರೈಲು ಸಂಖ್ಯೆ 06505 ಯಶವಂತಪುರ-ಬೆಳಗಾವಿ ಸ್ಪೆಷಲ್ ಎಕ್ಸ್‌ಪ್ರೆಸ್ 09-10-2024 (ಬುಧವಾರ) ರಂದು ಸಂಜೆ 6.15ಕ್ಕೆ ಹೊರಟು ಮರುದಿನ ಬೆಳಗ್ಗೆ 5 ಗಂಟೆಗೆ ಬೆಳಗಾವಿ ತಲುಪಲಿದೆ. ರೈಲು ಸಂಖ್ಯೆ 06507 ಯಶವಂತಪುರ-ಬೆಳಗಾವಿ ಸ್ಪೆಷಲ್ ಎಕ್ಸ್‌ಪ್ರೆಸ್ 12-10-2024 (ಶನಿವಾರ) ರಂದು ಸಂಜೆ 6.15ಕ್ಕೆ ಹೊರಟು ಮರುದಿನ ಬೆಳಗ್ಗೆ 5 ಗಂಟೆಗೆ ಬೆಳಗಾವಿ ತಲುಪಲಿದೆ.

ರೈಲು ಸಂಖ್ಯೆ 06506 (ಒನ್ ವೇ) ಬೆಳಗಾವಿ-ಯಶವಂತಪುರ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಬೆಳಗಾವಿ ರೈಲು ನಿಲ್ದಾಣದಿಂದ 10-10-2024 (ಗುರುವಾರ) ರ ಸಂಜೆ 5.30ಕ್ಕೆ ಹೊರಟು ಮರು ದಿನ ಬೆಳಗ್ಗೆ 4.30ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣ ತಲುಪಲಿದೆ.

ರೈಲು ಸಂಖ್ಯೆ 06508 (ಒನ್ ವೇ) ಬೆಳಗಾವಿ-ಯಶವಂತಪುರ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಬೆಳಗಾವಿ ರೈಲು ನಿಲ್ದಾಣದಿಂದ 13-10-2024 (ಭಾನುವಾರ) ರ ಸಂಜೆ 5.30ಕ್ಕೆ ಹೊರಟು ಮರು ದಿನ ಬೆಳಗ್ಗೆ 4.30ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣ ತಲುಪಲಿದೆ.

ವಿಜಯಪುರಕ್ಕೂ ವಿಜಯ ದಶಮಿ ವಿಶೇಷ ರೈಲು

ದಸರಾ ಸಂದರ್ಭದಲ್ಲಿ ವಿಜಯಪುರಕ್ಕೂ ಬೆಂಗಳೂರಿನಿಂದ ವಿಶೇಷ ರೈಲು ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಅಕ್ಟೋಬರ್ 9ರ ಬುಧವಾರ ಮತ್ತು ಅಕ್ಟೋಬರ್ 12ರ ಶನಿವಾರ ಈ ವಿಶೇಷ ರೈಲು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಸಂಚಾರ ಆರಂಭಿಸಲಿದೆ. ಅಕ್ಟೋಬರ್ 9ರ ಸಂಜೆ 7 ಗಂಟೆಗೆ ಎಸ್‌ಎಂವಿಟಿ ನಿಲ್ದಾಣದಿಂದ ಹೊರಡಲಿರುವ ದಸರಾ ವಿಶೇಷ ರೈಲು (06501) ಮರು ದಿನ ಬೆಳಗ್ಗೆ 10.30ಕ್ಕೆ ವಿಜಯಪುರ ರೈಲ್ವೆ ನಿಲ್ದಾಣವನ್ನು ತಲುಪಲಿದೆ. ಅಕ್ಟೋಬರ್ 12ರ ಶನಿವಾರ ಸಂಜೆ 7 ಗಂಟೆಗೆ ವಿಶೇಷ ರೈಲು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ ನಿಲ್ದಾಣದಿಂದ ಹೊರಟು ಮರು ದಿನ ಬೆಳಗ್ಗೆ 10.30ಕ್ಕೆ ವಿಜಯಪುರ ರೈಲ್ವೆ ನಿಲ್ದಾಣವನ್ನು ತಲುಪಲಿದೆ.

ಎಸ್‌ಎಂವಿಟಿಯಿಂದ ವಿಜಯಪುರದವರಿಗೆ ಮಾರ್ಗದಲ್ಲಿ ಒಟ್ಟು 20 ನಿಲುಗಡೆ ಇರಲಿದೆ. ಚಿಕ್ಕ ಬಣಾವರ ಜಂಕ್ಷನ್, ತುಮಕೂರು, ಅರಸೀಕೆರೆ ಜಂಕ್ಷನ್, ಬೀರೂರು ಜಂಕ್ಷನ್, ಚಿಕ್‌ಜಾಜೂರು ಜಂಕ್ಷನ್, ಚಿತ್ರದುರ್ಗ, ರಾಯದುರ್ಗ ಜಂಕ್ಷನ್, ಬಳ್ಳಾರಿ, ತೋರಗಲ್ಲು ಜಂಕ್ಷನ್, ಹೊಸಪೇಟೆ ಜಂಕ್ಷನ್, ಕೊಪ್ಪಳ, ಗದಗ್ ಜಂಕ್ಷನ್, ಹೊಳೆ ಆಲೂರು, ಬದಾಮಿ, ಬಾಗಲಕೋಟೆ, ಅಲಮಟ್ಟಿ, ಬವನ ಬಾಗೇವಾಡಿ, ಇಬ್ರಾಹಿಂಪುರ ನಿಲುಗಡೆ ನಂತರ ವಿಜಯಪುರ ತಲುಪಲಿದೆ.

mysore-dasara_Entry_Point