Sadhguru: ಮೆದುಳು ಶಸ್ತ್ರ ಚಿಕಿತ್ಸೆಯ ವಾರದ ಬಳಿಕ ಆಸ್ಪತ್ರೆಯಿಂದಲೇ 2ನೇ ವಿಡಿಯೊ ಹಂಚಿಕೊಂಡ ಸದ್ಗುರು ಜಗ್ಗಿ ವಾಸುದೇವ್
ಕನ್ನಡ ಸುದ್ದಿ  /  ಕರ್ನಾಟಕ  /  Sadhguru: ಮೆದುಳು ಶಸ್ತ್ರ ಚಿಕಿತ್ಸೆಯ ವಾರದ ಬಳಿಕ ಆಸ್ಪತ್ರೆಯಿಂದಲೇ 2ನೇ ವಿಡಿಯೊ ಹಂಚಿಕೊಂಡ ಸದ್ಗುರು ಜಗ್ಗಿ ವಾಸುದೇವ್

Sadhguru: ಮೆದುಳು ಶಸ್ತ್ರ ಚಿಕಿತ್ಸೆಯ ವಾರದ ಬಳಿಕ ಆಸ್ಪತ್ರೆಯಿಂದಲೇ 2ನೇ ವಿಡಿಯೊ ಹಂಚಿಕೊಂಡ ಸದ್ಗುರು ಜಗ್ಗಿ ವಾಸುದೇವ್

ಮೆದುಳು ಶಸ್ತ್ರ ಚಿಕಿತ್ಸೆಯ ಬಳಿಕ ಅಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಅವರು ಆಸ್ಪತ್ರೆಯಿಂದಲೇ 2ನೇ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅವರು ದಿನಪತ್ರಿಕೆಯನ್ನು ಓದುತ್ತಿರುವುದನ್ನು ಕಾಣಬಹುದು.

ಶಸ್ತ್ರ ಚಿಕಿತ್ಸೆಯ ಬಳಿಕ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಸದ್ಗುರು ಜಗ್ಗಿ ವಾಸುದೇವ್ ಅವರು 2ನೇ ವಿಡಿಯೊ ಬಿಡುಗಡೆ ಮಾಡಿದ್ದಾರೆ.
ಶಸ್ತ್ರ ಚಿಕಿತ್ಸೆಯ ಬಳಿಕ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಸದ್ಗುರು ಜಗ್ಗಿ ವಾಸುದೇವ್ ಅವರು 2ನೇ ವಿಡಿಯೊ ಬಿಡುಗಡೆ ಮಾಡಿದ್ದಾರೆ. (Instagram/@sadhguru)

ದೆಹಲಿ: ಅಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ಇತ್ತೀಚೆಗೆ ತಲೆಯಲ್ಲಿ "ಮಾರಣಾಂತಿಕ" ರಕ್ತಸ್ರಾವದಿಂದ ಬಳಲುತ್ತಿರುವುದು ಗೊತ್ತಾದ ನಂತರ ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಈಗ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಬೆಂಬಲಿಗರಿಗೆ ತಮ್ಮ ಆರೋಗ್ಯದಲ್ಲಿನ ಚೇತರಿಕೆಯ ಬಗ್ಗೆ ಅಪ್ಡೇಟ್‌ಗಳನ್ನು ನೀಡುತ್ತಿದ್ದಾರೆ. ಸದ್ಗುರು ಈಗ ಆಸ್ಪತ್ರೆಯ ಕೊಠಡಿಯಲ್ಲಿರುವ ವಿಡಿಯೊವನ್ನು ಜಾಲತಾಣ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ದೆಹಲಿಯಲ್ಲಿ ತ್ವರಿತ ಚೇತರಿಕೆಯ ಹಾದಿಯಲ್ಲಿರುವುದಾಗಿ ಇನ್‌ಸ್ಟಾ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಈ ವೀಡಿಯೊದಲ್ಲಿ ಸದ್ಗುರುಗಳು ಆಸ್ಪತ್ರೆಯ ಹಾಸಿಗೆಯ ಮೇಲೆ ಕುಳಿತು ದಿನಪತ್ರಿಕೆಯನ್ನು ಓದುತ್ತಿರುವುದನ್ನು ಕಾಣಬಹುದು. ಮೆದುಳು ಶಸ್ತ್ರ ಚಿಕಿತ್ಸೆಯ ನಂತರ ತಲೆಗೆ ಬ್ಯಾಂಡೇಜ್ ಹಾಕಿರುವುದನ್ನು ಕಾಣಬಹುದು. ಸದ್ಗುರುಗಳು ಹಂಚಿಕೊಂಡ ಪೋಸ್ಟ್ ಅನ್ನು ಇಲ್ಲಿ ನೋಡಿ.

ಈ ವಿಡಿಯೋವನ್ನು ಕೆಲವು ನಿಮಿಷಗಳ ಹಿಂದಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಬರೋಬ್ಬರಿ 1.7 ಮಿಲಿಯನ್ ವೀವ್ಸ್ ಪಡೆದಿದೆ. ಅನೇಕ ನೆಟ್ಟಿಗರರು ಇವರ ಪೋಸ್ಟ್‌ಗೆ ಕಾಮೆಂಟ್ ಕೂಡ ಮಾಡಿದ್ದು, ಅಧ್ಯಾತ್ಮಿಕ ನಾಯಕ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ."ಬೇಗನೆ ಗುಣಮುಖರಾಗಿ" ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಈ ವಿಡಿಯೊ ನೋಡಿ ತುಂಬಾ ಸಂತೋಷವಾಗಿದೆ. ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

"ನಿಮ್ಮನ್ನು ನೋಡಿದ ನಂತರ ಸಂತೋಷವಾಯಿತು" ಎಂದು ಮೂರನೆ ವ್ಯಕ್ತಿ ಸಂತಸ ಹಂಚಿಕೊಂಡರು. ಮತ್ತೊರ್ವ ನೆಟ್ಟಿಗರು, "ಇದಕ್ಕಿಂತ ಸಂತೋಷವಾಗಿರಲು ಸಾಧ್ಯವಿಲ್ಲ; ಶೀಘ್ರ ಗುಣಮುಖರಾಗುತ್ತಿರುವುದನ್ನು ನೋಡುತ್ತಿದ್ದೇನೆ ಎಂದು ಬರೆದಿದ್ದಾರೆ.

ಏನಿದು ಅಧ್ಯಾತ್ಮಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಆರೋಗ್ಯ ಸಮಸ್ಯೆ?

"ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಕಳೆದ ನಾಲ್ಕು ವಾರಗಳಿಂದ ತಲೆನೋವು ಇತ್ತು. ತಲೆನೋವು ತುಂಬಾ ತೀವ್ರವಾಗಿತ್ತು. ಆದರೆ ಇದನ್ನು ಅವರು ನಿರ್ಲಕ್ಷಿಸಿದ್ದರು ಎಂದು ದೆಹಲಿಯ ಅಪೊಲೊ ಆಸ್ಪತ್ರೆಯ ಹಿರಿಯ ಸಲಹೆಗಾರ ನರವಿಜ್ಞಾನಿ ಡಾ.ವಿನೀತ್ ಸೂರಿ ಈಶಾ ಫೌಂಡೇಶನ್ ಬಿಡುಗಡೆ ಮಾಡಿದ ವಿಡಿಯೊದಲ್ಲಿ ತಿಳಿಸಿದ್ದಾರೆ.

"2024ರ ಮಾರ್ಚ್ 15 ರ ಮಧ್ಯಾಹ್ನದ ವೇಳೆಗೆ ಅವರು ದೆಹಲಿಗೆ ಬಂದಾಗ ತಲೆನೋವು ತುಂಬಾ ತೀವ್ರವಾಯಿತು. ಅದೇ ದಿನ ಸಂಜೆ 4:30 ಕ್ಕೆ ಸದ್ಗುರುಗಳನ್ನು ತುರ್ತು ಎಂಆರ್‌ಐ ಸ್ಕ್ಯಾನ್ ಮಾಡಿಸಲಾಯಿತು. ಮೆದುಳಿನಲ್ಲಿ ಭಾರಿ ರಕ್ತಸ್ರಾವ ಆಗಿರುವುದು ಕಂಡು ಬಂದಿತ್ತು. ದೀರ್ಘಕಾಲದ ರಕ್ತಸ್ರಾವ ಕಳೆದ 3-4 ವಾರಗಳಿಂದ ತೀವ್ರವಾಗಿತ್ತು. ಸಿಟಿ ಸ್ಕ್ಯಾನ್ ವರದಿಯ ನಂತರ ಜಗ್ಗಿ ವಾಸುದೇವ್ ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯ ಈಗ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮ ಆರೋಗ್ಯದಲ್ಲಿನ ಚೇತರಿಕೆ ಬಗ್ಗೆ ಅನುಯಾಯಿಗಳಿಗೆ ಅಪ್ಡೇಟ್ ನೀಡಿದ್ದಾರೆ.

Whats_app_banner